Sania Mirza: ವಿಚ್ಛೇದನದ ನಂತರ ದುಬೈನಲ್ಲಿ ಪಾಕಿಸ್ತಾನಿ ಸಿಂಗರ್ ಜೊತೆ ಸಾನಿಯಾ ಮಿರ್ಜಾ, ಫೋಟೋ ವೈರಲ್
ದುಬೈ, ಮಾರ್ಚ್ 08: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ನಂತರ ಮಾಜಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಜೀವನದಲ್ಲಿ ಪಾಸಿಟಿವಿಟಿಯನ್ನು ಹೆಚ್ಚಾಗಿ ತುಂಬಿಕೊಂಡಿದ್ದಾರೆ. ವೈಯಕ್ತಿಕ ಜೀವನದ ಸವಾಲುಗಳನ್ನು ಮೆಟ್ಟಿ ನಿಂತು ಸಂತೋಷ ಮತ್ತು ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ದುಬೈಗೆ ಭೇಟಿ ನೀಡಿದ್ದಾರೆ. ಮಾಜಿ ಪತಿ ಶೋಯೆಬ್ ಮಲಿಕ್‌ನಿಂದ ವಿಚ್ಛೇದನದ ನಂತರ, 37 ವರ್ಷದ ಸಾನಿಯಾ ಮಿರ್ಜಾ ತನ್ನ ಪ್ರೀತಿಪಾತ್ರರ ಜೊತೆಗೆ ವಿಶೇಷವಾಗಿ ತನ್ನ ಮಗ ಇಜಾನ್ ಮಿರ್ಜಾ ಮಲಿಕ್ ಜೊತೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ದುಬೈನಲ್ಲಿ ನಡೆದ ಪಾಕಿಸ್ತಾನಿ ಗಾಯಕ ಅತಿಫ್ ಅಸ್ಲಾಂ ಅವರ ಲೈವ್ ಕನ್ಸರ್ಟ್‌ನಲ್ಲಿ ಸಾನಿಯಾ ತಮ್ಮ ಸಹೋದರಿ ಅನಮ್ ಮಿರ್ಜಾ ಅವರೊಂದಿಗೆ ಭಾಗವಹಿಸಿದ್ದರು.

ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಗಾಯಕ ಅತಿಫ್ ಅಸ್ಲಾಮ್ ಮತ್ತು ಅವರ ಪತ್ನಿ ಸಾರಾ ಭರ್ವಾನಾ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿವೆ. ಇಬ್ಬರ ಜೊತೆಗೆ ಊಟಕ್ಕೆ ಹೋಗಿದ್ದಾರೆ. ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಸಾನಿಯಾ ಮಿರ್ಜಾ ಮತ್ತು ಅತೀಫ್ ಅಸ್ಲಾಮ್ ಪತ್ನಿ ಸಾರ ಹಂಚಿಕೊಂಡಿದ್ದಾರೆ.
ಈ ಫೋಟೋಗಳು ಇನ್‌ಸ್ಟಾಗ್ರಾಮ್ ಬಳಕೆದಾರರನ್ನು ತಮ್ಮತ್ತ ಸೆಳೆದಿದ್ದು, ಸಾನಿಯಾ ಮಿರ್ಜಾ ಅವರ ಜೀವನಕ್ಕೆ ಶುಭ ಹಾರೈಸಿದ್ದಾರೆ. ವಿಚ್ಛೇಧನದ ಬಳಿಕ ಖುಷಿಯಿಂದ ಇರುವಂತೆ ಅವರಿಗೆ ಹಾರೈಸಿದ್ದಾರೆ. ಮತ್ತೆ ಕರಲವರು ಈ ಪೋಟೊಗಳಿಗೆ ಬೇರೆ ರೀತಿಯ ಅರ್ಥ ಕಲ್ಪಿಸಿದ್ದಾರೆ. ಆದರೆ, ಇವುಗಳಿಗೆ ಸಾನಿಯಾ ಮಿರ್ಜಾ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ದುಬೈನಲ್ಲಿ ತಾವು ಕಳೆದ ಉತ್ತಮ ಸಮಯದ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಮೊಹಮ್ಮದ್ ಶಮಿ, ಸಾನಿಯಾ ಮಿರ್ಜಾ ವಿವಾಹದ ವದಂತಿ
ಈ ಹಿಂದೆ ಸಾನಿಯಾ ಮಿರ್ಜಾ ಅವರ ವಿಚ್ಛೇದನ ವಿಷಯ ಸುದ್ದಿಯಾದ ಬೆನ್ನಲ್ಲೇ ಸಾನಿಯಾ ಮಿರ್ಜಾ ಅವರು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಫೋಟೋ ಎಂದು ನಕಲಿ ಪೋಟೋವೊಂದು ವೈರಲ್ ಆಗಿತ್ತು.
"ಬ್ರೇಕಿಂಗ್ ನ್ಯೂಸ್... ಸಾನಿಯಾ ಮಿರ್ಜಾ ಮೊಹಮ್ಮದ್ ಶಮಿ ಅವರನ್ನು ವಿವಾಹವಾಗಲಿದ್ದಾರೆ. ಮಾರ್ಚ್‌ನಲ್ಲಿ ನಡೆಯಲಿರುವ ಐಪಿಎಲ್‌ಗೂ ಮುನ್ನ ಮದುವೆಯಾಗಲಿದ್ದಾರೆ" ಎಂದು ಪೋಸ್ಟ್‌ಗಳು ವೈರಲ್ ಆಗಿದ್ದವು. ಆದರೆ, ಈ ವದಂತಿಗೆ ಸಾನಿಯಾ ಮಿರ್ಜಾ ಪ್ರತಿಕ್ರಿಯೆ ನೀಡಿರಲಿಲ್ಲ. ವೈಯಕ್ತಿಕ ವಿಷಯಗಳನ್ನು ಸಾಋ್ವಜನಿಕವಾಗಿ ಹಂಚಿಕೊಳ್ಳದ ಸಾನಿಯಾ ಮಿರ್ಜಾ ಅವರು ಇಂತಹ ವದಂತಿ, ಸುಳ್ಳು ಸುದ್ದಿಗೆ ಪ್ರಾಮುಖ್ಯತೆ ನೀಡುವುದಿಲ್ಲ.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇಧನ
2010 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರು 2023 ರಲ್ಲಿ ಅಧಿಕೃತವಾಗಿ ಬೇರ್ಪಟ್ಟರು. ಶೋಯೆಬ್ ಮಲಿಕ್ ಈ ವರ್ಷದ ಜನವರಿಯಲ್ಲಿ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರೊಂದಿಗೆ ಮೂರನೇ ಮದುವೆಯಾಗಿದ್ದಾರೆ.












Click it and Unblock the Notifications