ಡಂ.. ಡಂ.. ಡಮಾರ್: ದಿಢೀರ್ ಸ್ಫೋಟಗೊಂಡ ಸಿಲಿಂಡರ್!
ಭಾರತದಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ದೀಪಾವಳಿ ಬರುತ್ತೆ, ಆದರೆ ಪಾಪಿ ಪಾಕಿಸ್ತಾನ ಮಾತ್ರ ತಿಂಗಳಿಗೋ ಅಥವಾ ವಾರಕ್ಕೋ ಒಂದು ಬಾರಿ ದೀಪಾವಳಿ ಆಚರಿಸುತ್ತೆ. ಇದಕ್ಕೆಲ್ಲಾ ಕಾರಣ ಪಾಕಿಸ್ತಾನದ ಉಗ್ರರು, ಅರೆರೆ ಪಾಕಿಸ್ತಾನಿ ಉಗ್ರರಿಗೂ ಮತ್ತು ದೀಪಾವಳಿ ಹಬ್ಬಕ್ಕೂ ಇರುವ ಸಂಬಂಧ ಏನು ಅಂದ್ರಾ? ಆ ಬಗ್ಗೆ ತಿಳಿಯಲು ಮುಂದೆ ಓದಿ.
ಸದಾ ಭಾರತದ ಜತೆ ಕಿತ್ತಾಡುವ & ಉಗ್ರರನ್ನ ಭಾರತಕ್ಕೆ ಕಳುಹಿಸಿ ಹಿಂಸೆಗೆ ಪ್ರಚೋದನೆ ನೀಡುವ ಪಾಕಿಸ್ತಾನ ಬದಲಾಗಿಲ್ಲ. ಹೀಗಾಗಿ ಸ್ವತಃ ಪಾಕಿಸ್ತಾನವೇ ಬೆಳೆಸಿದ್ದ ಉಗ್ರರ ಗ್ಯಾಂಗ್ ಪಾಕ್ ಜನರ ರಕ್ತವನ್ನೇ ಹರಿಸುತ್ತಿದೆ. ಕೆಲ ತಿಂಗಳ ಹಿಂದೆ ಭೀಕರ ಸ್ಫೋಟದಲ್ಲಿ ನೂರಾರು ಜನರನ್ನು ಈ ಪಾಕಿಸ್ತಾನ ಕಳೆದುಕೊಂಡಿತ್ತು. ಅದು ಸಾಲದು ಎನ್ನುವಂತೆ ಪಾಕಿಸ್ತಾನ ಗಡಿಯಲ್ಲಿ ಕೂಡ, ಭೀಕರ ಸ್ಫೋಟಗಳು ಮತ್ತು ದಾಳಿ ಸಂಭವಿಸುತ್ತಲೇ ಇದೆ. ಪರಿಸ್ಥಿತಿ ಹೀಗಿದ್ದಾಗಲೇ, ಇದೀಗ ಪಾಕಿಸ್ತಾನದಲ್ಲಿ ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಹಾಗಾದರೆ ಈ ಘಟನೆಯಲ್ಲೀಗ, ಮೃತಪಟ್ಟಿರುವ ಜನರ ಸಂಖ್ಯೆ ಎಷ್ಟು? ಮುಂದೆ ಓದಿ.

ಡೆಡ್ಲಿ ಬ್ಲಾಸ್ಟ್ ಆಗಿದ್ದು ಎಲ್ಲಿ?
ಹೌದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸಿಲಿಂಡರ್ ಸ್ಫೋಟಗೊಂಡು ಒಟ್ಟಾರೆ 3 ಫ್ಲೋರ್ ಇದ್ದ ಕಟ್ಟಡ ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ 9 ಜನರು ಸಜೀವ ದಹನವಾಗಿ, ಹಾಗೇ ಹಲವರು ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ. ಈ ಮೂಲಕ ಪಾಕಿಸ್ತಾನದ ಜನರು ಮತ್ತೊಮ್ಮೆ ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಈಗ ಸಿಲಿಂಡರ್ ಬ್ಲಾಸ್ಟ್ ಆಗಿರುವ ಜಾಗ, ಲಾಹೋರ್‌ನಿಂದ 350 ಕಿ.ಮೀ ದೂರದಲ್ಲಿ ಇದೆ ಎನ್ನಲಾಗಿದೆ. ಹರಾಮ್ ಗೇಟ್ ಮುಲ್ತಾನ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ. ಹಾಗಾದರೆ ಘಟನೆಗೆ ಕಾರಣ ಏನು?
11 ಜನರಲ್ಲಿ 9 ಮಂದಿ...
ಪಾಕಿಸ್ತಾನದಲ್ಲಿ ಸಾಮಾನ್ಯವಾಗಿ ಸ್ಫೋಟ ಸಂಭವಿಸಿದರೆ ಅದು ಉಗ್ರರ ಕೃತ್ಯ ಎಂದೇ ಅಲ್ಲಿ ಸರ್ಕಾರ ಮತ್ತು ತನಿಖಾ ಅಧಿಕಾರಿಗಳು ಭಾವಿಸುತ್ತಾರೆ. ಆದರೆ ಇದೀಗ ಸಂಭವಿಸಿರುವ ಈ ಸ್ಫೋಟಕ್ಕೆ ಕಾರಣ ಸಿಲಿಂಡರ್ ಅಂತಾ ಹೇಳಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಸಿಲಿಂಡರ್ ಸ್ಫೋಟ ಪರಿಣಾಮ ಕಟ್ಟಡ ಕುಸಿದು ಬಿದ್ದಿದೆ ಎನ್ನಲಾಗಿದೆ. ಆದರೂ ಸ್ಫೋಟದ ತೀವ್ರತೆಯ ಕಾರಣಕ್ಕೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಈಗ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾದ ಕಟ್ಟಡದ ಒಳಗೆ 11 ಜನರು ಸಿಲುಕಿದ್ರು, ಆದರೆ ದುರಾದೃಷ್ಟ ಎನ್ನುವಂತೆ ಈ 11 ಜನರಲ್ಲಿ 9 ಮಂದಿ ಮೃತಪಟ್ಟರೆ ಇನ್ನಿಬರು ಕೂಡ ಸಾವು & ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ತುರ್ತು ಸೇವಾ ರಕ್ಷಣಾ ತಂಡದ ಸಿಬ್ಬಂದಿ ಕಾರ್ಯಾಚರಣೆ ಮುಗಿಸಿದ್ದು, ಗಾಯಗೊಂಡ ಜನರನ್ನೂ ಈಗ ಆಸ್ಪತ್ರೆಗೆ ಸೇರಿಸಿದ್ದಾರೆ. ಗಾಯಾಳು ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ಗಾಯಾಳು ಪರಿಸ್ಥಿತಿ ನೋಡುತ್ತಿದ್ದರೆ, ಅವರು ಬದುಕಿ ಉಳಿಯುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ, ಇದೀಗ ಪಾಕಿಸ್ತಾನದಲ್ಲಿ ಭಾರಿ ಆತಂಕ ಮೂಡಿದೆ.












Click it and Unblock the Notifications