ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ಅಮೆರಿಕ: ಯಾವ ಕಾರಣಕ್ಕೆ?
ಗೆದ್ದ ಎತ್ತಿನ ಬಾಲ ಹಿಡಿಯೋದನ್ನ ಅಮೆರಿಕ ನೋಡಿ ಕಲಿಯಬೇಕು ಅನ್ನೋ ಆರೋಪವು ಈ ಮೊದಲಿನಿಂದ ಕೂಡ ಇದೆ. ಈ ಮಾತಿಗೆ ಮತ್ತೊಮ್ಮೆ ಅಮೆರಿಕ ಸಾಕ್ಷಿಯನ್ನು ಒದಗಿಸಿ ತಾನು ಡಬಲ್ ಗೇಮ್ ಆಡೋದು ಹೇಗೆ? ಅನ್ನೋದನ್ನ ಮತ್ತೊಮ್ಮೆ ಜಗತ್ತಿನ ಎದುರು ಈಗ ತೆರೆದಿಟ್ಟಿದೆ. ಭಾರತದ ಜೊತೆಗೆ ಚೆನ್ನಾಗಿ ಇದ್ದುಕೊಂಡೇ ಪಾಕಿಸ್ತಾನ ಪರ ಮಾತನಾಡಿದ್ದಾನೆ ಜಗತ್ತಿನ ದಡ್ಡಣ್ಣ.. ಅಲ್ಲಲ್ಲ ದೊಡ್ಡಣ್ಣ!
ಭಾರತದ ಆಜನ್ಮ ವೈರಿ ಅಂತಾನೆ ಪಾಕಿಸ್ತಾನ ಗುರುತಿಸಿಕೊಂಡಿದ್ದು, ಇದೇ ಕಾರಣಕ್ಕೆ ಈಗ ಅಮೆರಿಕದ ನಾಯಕರು ಡಬಲ್ ಗೇಮ್ ಆಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಕಾರಣ ಏನು ಎಂದರೆ, ಇಷ್ಟು ದಿನ ಪಾಕಿಸ್ತಾನದ ಪ್ರಧಾನಿ ಜೊತೆ ಮಾತುಕತೆ ನಡೆಸದ ಅಮೆರಿಕ ಅಧ್ಯಕ್ಷ ಜೋ ಬೈಡನ್, ದಿಢೀರ್ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಇದೇ ವೇಳೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಬೆಂಬಲ ಕೂಡ ಸೂಚಿಸಿದ್ದಾರೆ ಬೈಡನ್.

ಅಮೆರಿಕದ ತಂತ್ರ ಏನು?
ಅಷ್ಟಕ್ಕೂ ಬೈಡನ್ ಅವರು 2021ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆ ನಂತರ ಪಾಕಿಸ್ತಾನದ ಯಾವುದೇ ಪ್ರಧಾನಿ ಜೊತೆಗೂ ಬೈಡನ್ ಕರೆ ಮಾಡಿ ಮಾತುಕತೆ ನಡೆಸಿರಲಿಲ್ಲ. ಆದರೆ ಇದೀಗ ದಿಢೀರ್ ಅಂತಾ ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಕರೆ ಮಾಡಿ ಬೈಡನ್ ಮಾತುಕತೆ ನಡೆಸಿರುವುದು ಭಾರಿ ಗೊಂದಲ ಸೃಷ್ಟಿಮಾಡಿದೆ.
ಅಲ್ಲದೆ ಹೀಗೆ ದಿಢೀರ್ ಇಂತಹ ಬದಲಾವಣೆ ಯಾಕೆ? ಅನ್ನೋ ಅನುಮಾನ ಕೂಡ ಇದೀಗ ಸಹಜವಾಗಿ ಸೃಷ್ಟಿಯಾಗಿದೆ. ಇದೇ ಫೆಬ್ರವರಿ ತಿಂಗಳಲ್ಲಿ ಪಾಕಿಸ್ತಾನದ ಸಂಸತ್ ಚುನಾವಣೆ ನಡೆದಿತ್ತು. ಆದರೆ ಯಾರಿಗೂ ಬಹುಮತ ಬರದ ಕಾರಣ ಚಿತ್ರಾನ್ನಾ ಸರ್ಕಾರ ರಚಿಸಿರುವ ಪಾಕಿಸ್ತಾನ, ಆಡಳಿತ ನಡೆಸಲು ಕೈಯಲ್ಲಿ ಕಾಸು ಇಲ್ಲದೆ ಪರದಾಡುತ್ತಿದೆ. ಹೀಗೆ ಆರ್ಥಿಕ ಸಂಕಷ್ಟ ಎದುರಾದ ಸಮಯದಲ್ಲೇ ಅಮೆರಕ ಕೂಡ ಪಾಕ್‌ಗೆ ಬೆಂಬಲ ಸೂಚಿಸಿದೆ.
ಸಮ್ಮಿಶ್ರ ಸರ್ಕಾರದ ಗೋಳು
ಪಾಕಿಸ್ತಾನ ಸಂಸತ್‌ನಲ್ಲಿ ಇರುವ ಒಟ್ಟಾರೆ 336 ಸದಸ್ಯರಲ್ಲಿ ಶೆಹಬಾಜ್ 201 ಮತಗಳ ಬೆಂಬಲ ಪಡೆದು ಸರ್ಕಾರ ರಚಿಸಿದ್ದಾರೆ. ಈ ಮೂಲಕ ಅಗತ್ಯ ಇರುವ ಮತಗಳಿಗಿಂತ, ಒಟ್ಟು 32 ಮತ ಹೆಚ್ಚಾಗಿ ಸಿಕ್ಕಿದ್ದವು. ಹೀಗೆ ಇಮ್ರಾನ್ ಖಾನ್ ಅವ್ರ ಪಾಕಿಸ್ತಾನ ತೆಹ್ರೀಕ್ ಇ ಇನ್‌ಸಾಫ್ (ಪಿಟಿಐ) ಪಕ್ಷ ಹೀನಾಯವಾಗಿ ಸೋತು ಸುಣ್ಣವಾಗಿತ್ತು.
ಈ ಮೂಲಕ ಮತ್ತೆ ಪಾಕಿಸ್ತಾನ ಪ್ರಧಾನಿಯಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ತಮ್ಮ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದರು. ಇದೀಗ ಖುದ್ದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಪಾಕಿಸ್ತಾನಕ್ಕೆ ಕರೆ ಮಾಡಿ ಮಾತನಾಡುವ ಮೂಲಕ, ಅಮೆರಿಕ ತಾನು ಪಾಕಿಸ್ತಾನದ ಪರ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದೆ.












Click it and Unblock the Notifications