ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
ಲೋಕಸಭೆ ಚುನಾವಣೆ 2024ರ ಮತದಾನ ಹಿನ್ನೆಲೆಯಲ್ಲಿ ಬಾರ್ & ಎಂಆರ್‌ಪಿ ಶಾಪ್‌ಗಳು ಇಂದಿನಿಂದ ಬಂದ್ ಆಗಿವೆ. ಇಂದು ಸಂಜೆ 5 ಗಂಟೆಗೆ ಬಾರ್‌ಗಳ ಬಾಗಿಲು ಬಂದ್ ಮಾಡಿ, ಸೀಲ್ ಹಾಕಿದ್ದಾರೆ ಅಧಿಕಾರಿಗಳು. ಹೀಗಿದ್ದಾಗ ಕುಡುಕರು ಮಾತ್ರ ಎಣ್ಣೆ ಇಲ್ಲ ಅಯ್ಯಯ್ಯೋ ಎಣ್ಣೆ ಸಿಗುತ್ತಿಲ್ಲ ಅಂತಾ ಒದ್ದಾಡಿ ಹೋಗಿದ್ದಾರೆ! ಹಾಗಾದ್ರೆ ಇನ್ನೂ ಎಷ್ಟು ದಿನಗಳ ಕಾಲ ಎಣ್ಣೆ ಸಿಗೋದಿಲ್ಲ ಗೊತ್ತಾ? ಮುಂದೆ ಓದಿ.
ಎಣ್ಣೆ ಹೊಡಿಯದೆ ಕೆಲವರಿಗೆ ನಿದ್ದೆ ಬರಲ್ಲ. ಇನ್ನೂ ಕೆಲವರಿಗೆ ಕೈಕಾಲು ಕೂಡ ಆಡೋದಿಲ್ಲ. ಎಣ್ಣೆ ಅಂದ್ರೆ ಲಿಕ್ಕರ್ ಆರೋಗ್ಯಕ್ಕೆ ಹಾನಿಕರ ಅಂತಾ ವೈದ್ಯರು ಹೇಳಿದರೆ, ಇಲ್ಲ ಎಣ್ಣೆ ತುಂಬಾ ಒಳ್ಳೆಯದು. ಕಷ್ಟ, ನೋವನ್ನು ಮರೆ ಮಾಚುವ ಔಷಧ ಅಂತಾ ಮದ್ಯ ಪ್ರಿಯರು ಎಂಜಾಯ್ ಮಾಡುತ್ತಾರೆ. ಹೀಗಿದ್ದಾಗ ಇಂದು ಕುಡುಕರ ಪಾಲಿನ ಸಾಂತ್ವನ ಕೇಂದ್ರ, ಬಂದ್ ಆಗಿಬಿಟ್ಟಿವೆ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2024ರ ಮೊದಲ ಹಂತದ ಮತದಾನ ಏಪ್ರಿಲ್ 26ಕ್ಕೆ ನಡೆಯಲಿರುವ ಹಿನ್ನೆಲೆಯಲ್ಲಿ 3 ದಿನಗಳ ಕಾಲ ಬಾರ್ ಮತ್ತು ಎಂಆರ್‌ಪಿ ಶಾಪ್‌ನ ಬಂದ್ ಮಾಡಲಾಗಿದೆ.

ಬಾರ್ ಓಪನ್ ಮಾಡಿದ್ರೆ ಮುಗೀತು ಕಥೆ!
ಮತದಾನ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಯಲು & ಶಾಂತಿ ಸುವ್ಯವಸ್ಥೆಯ ಕಾಪಾಡುವ ಸಲುವಾಗಿ ಕರ್ನಾಟಕ ಅಬಕಾರಿ ನಿಯಮದ ಪ್ರಕಾರವೆ ದಿನಾಂಕ 24.04.2024ರ ಸಂಜೆ 5.00 ಗಂಟೆಯಿಂದ, ದಿನಾಂಕ 26.04.2024ರ ಮಧ್ಯರಾತ್ರಿ 12 ಗಂಟೆಯ ತನಕ ಬೆಂಗಳೂರು ನಗರ ಸೇರಿ ಚುನಾವಣೆ ನಡೆಯಲಿರುವ ಪ್ರದೇಶಗಳಲ್ಲಿ ಎಣ್ಣೆ ಅಂಗಡಿ ಬಂದ್ ಮಾಡಲಾಗಿದೆ. ಇಂದು ಸಂಜೆ 5 ಗಂಟೆಗೆ ಅಧಿಕಾರಿಗಳು ಎಣ್ಣೆ ಅಂಗಡಿಗಳಿಗೆ ಬೀಗ ಜಡಿದ್ದು ಸೀಲ್ ಮಾಡಿದ್ದಾರೆ. ಅಲ್ಲದೆ ಚುನಾವಣೆ ಮುಗಿಯುವ ತನಕ ಬಾರ್ & ಎಂಆರ್‌ಪಿ ಶಾಪ್‌ಗಳನ್ನ ಓಪನ್ ಮಾಡದಂತೆ ಖಡಕ್ ಆದೇಶ ನೀಡಿದ್ದಾರೆ.
ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ
2024ರ ಲೋಕಸಭೆ ಚುನಾವಣೆ ಅಖಾಡದ ಕಾವು ಈಗ ಏರಿದ್ದು, ಅಭ್ಯರ್ಥಿಗಳಿಗೆ ನಿದ್ದೆ ಹಾರಿ ಹೋಗಿದೆ. ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಿ, ರಣಕಹಳೆ ಮೊಗಳಗಿಸಿದೆ. ಈಗಾಗಲೇ 2024ರ ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಮುಗಿದಿದೆ. ಹೀಗೆ ಇದೀಗ 2ನೇ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ನೇ ತಾರೀಖು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಹಾಗೇ ಚುನಾವಣೆ ಫಲಿತಾಂಶ ಜೂನ್ 4 ರಂದು ಹೊರಬೀಳಲಿದೆ.
ಕರ್ನಾಟಕದಲ್ಲಿ ಎಣ್ಣೆ ರೇಟ್ ಜಾಸ್ತಿ ಅಂತ ಕೊರಗುತ್ತಿದ್ದ ಮದ್ಯ ಪ್ರಿಯರಿಗೆ ಶಾಕ್ ಸಿಕ್ಕಿದ್ದು, ಈಗ ಬಜೆಟ್‌ನಲ್ಲಿ ಮತ್ತೆ ಎಣ್ಣೆ ರೇಟ್ ರೈಸ್ ಮಾಡಲಾಗಿದೆ. 'ಮದ್ಯ' ಪ್ರಿಯರಿಗೆ ಈ ಆಘಾತವು ಇನ್ನೂ ಮರೆಯಾಗಿಲ್ಲ. ಹೀಗಿದ್ದಾಗಲೇ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ಭಾಗಶಃ ದಕ್ಷಿಣ ಕರ್ನಾಟಕದಲ್ಲಿ ಬಾರ್‌ಗಳು ಬಂದ್ ಆಗಿವೆ. ಹೀಗಾಗಿ ಕುಡುಕರಿಗೆ ಭಾರಿ ಆತಂಕ ಶುರುವಾಗಿದೆ. ಎಣ್ಣೆ ಅಂಗಡಿ ಬಾಗಿಲು ಹಾಕಿಕೊಳ್ಳಲು ಕಾರಣ ಏನು? ಅಂತಾ ಬಹುತೇಕರಿಗೆ ಗೊತ್ತೇ ಇದ್ದು, ಈಗ ಮತದಾನದ ಹಿನ್ನೆಲೆಯಲ್ಲಿ ಕ್ಲೋಸ್ ಆಗಿರುವ ಎಣ್ಣೆ ಅಂಗಡಿಗಳು ಮತ್ತೆ ಶನಿವಾರವೇ ಬಾಗಿಲು ಓಪನ್ ಮಾಡುವುದು. ಹಾಗೇ ಫಲಿತಾಂಶದ ದಿನ ಕೂಡ ಎಣ್ಣೆ ಅಂಗಡಿ ಕ್ಲೋಸ್ ಆಗಲಿವೆ.












Click it and Unblock the Notifications