'ಗ್ಯಾರಂಟಿ'ಗಳ ನೆಪದಲ್ಲಿ 2028ರ ಚುನಾವಣೆ ಡೇಟಾ ಸಂಗ್ರಹ? ಸರ್ಕಾರದ ವಿರುದ್ಧ HD ಕುಮಾರಸ್ವಾಮಿ ಆರೋಪ
ಬೆಂಗಳೂರು: ಕರ್ನಾಟಕದ ಜನತೆಗಾಗಿ ಉಚಿತ ಪಂಚ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಒಂದೊಂದೆ ಯೋಜನೆಗೆ ಪುನರ್ ಪರಿಶೀಲನೆ, ಪರಿಷ್ಕರಣೆಗೆ ಮುಂದಾಗಿದೆ. ಅನರ್ಹರನ್ನು ಪಟ್ಟಿಯಿಂದ ಕೈ ಬಿಡಲು ನಿರ್ಧರಿಸಿರುವ ಸರ್ಕಾರ ನಡೆಯನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಖಂಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನು 2028ರ ಚುನಾವಣಾ ದೃಷ್ಟಿಯಿಂದ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ರಾಜ್ಯ ಸರ್ಕಾರ ಗೃಹ ಲಕ್ಷ್ಮೀ ಯೋಜನೆ 2000 ರೂಪಾಯಿ ಮಾಸಿಕ ಹಣ ಪಡೆಯಲು ಪುನರ್ ಅರ್ಜಿ ಸಲ್ಲಿಸಬೇಕೆಂದು ತಿಳಿಸಿತ್ತು. ಇದರಲ್ಲಿ ಅನರ್ಹರನ್ನು ಕೈ ಬಿಡುವುದಾಗಿ ಹೇಳಿತ್ತು. ನಂತರ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ದಾಖಲಾತಿ ಪುನರ್ ಪರಿಶೀಲನೆಗೆ ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿಯವರು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ, ಮನೆ ಮನೆ ಭೇಟಿಗಳು ನಡೆಯುತ್ತಿವೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ. ಮುಂದಿನ 2028ರ ವಿಧಾನಸಭಾ ಚುನಾವಣೆ ಜನರ ದತ್ತಾಂಶಗಳನ್ನು ಸಂಗ್ರಹಿಸಲು ಸರ್ಕಾರ ಇದೆಲ್ಲ ಮಾಡುತ್ತಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ನಿಂದ ಸರ್ಕಾರಿ ಅಧಿಕಾರಿಗಳ ದುರ್ಬಳಕೆ
ಬೆಂಗಳೂರಿನಲ್ಲಿ ಕಾಂಗ್ರೆಸ್ ಚುನಾವಣೆ ರಣತಂತ್ರ ರೂಪಿಸುತ್ತಿದೆ. ಚುನಾವಣೆಗೂ ಮುನ್ನ ದತ್ತಾಂಶ ಸಂಗ್ರಹಣೆಗೆ ಮಾಹಿತಿ ಬೇಕು. ಅದಕ್ಕಾಗಿ ಹಣ ಖರ್ಚು ಮಾಡದೇ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಈ ರೀತಿಯಾಗಿ ಬಳಕೆ ಮಾಡಿಕೊಳ್ಳುತ್ತದೆ ಎಂದು ದೂರಿದರು.
ಗೃಹ ಲಕ್ಷ್ಮೀ, ಗೃಹ ಜ್ಯೋತಿ ಸೇರಿ ಇನ್ನಿತರ ಯೋಜನೆಗಳಿಗೆ ಜನರ ಪ್ರತ್ಯೇಕ ಫೋಟೋಗಳನ್ನು, ಮಾಹಿತಿ ಕೇಳಲಾಗುತ್ತಿದೆ. ಗ್ಯಾರಂಟಿ ಯೋಜನೆಯಿಂದ ಅನರ್ಹರನ್ನು ಕೈ ಬಿಡುವುದಾಗಿ ಸರ್ಕಾರ ನಿರ್ಧರಿಸಿದ್ದಾರೆ. ಮೂರು ವರ್ಷಗಳಿಂದ ಏನ ಮಾಡುತ್ತಿದ್ದರು. ನಿಜವಾದ ಫಲಾನುಭವಿಗಳಿಗೆ ಮಾತ್ರವೇ ಯೋಜನೆ ಲಾಭ ನೀಡಲಾಗುವುದು, ಅನರ್ಹರನ್ನು ಪಟ್ಟಿಯಿಂದ ಕೈ ಬಿಡಲಾಗುವುದು ಎಂದು ಈಗ ಏಕೆ ಸರ್ಕಾರ ಹೇಳುತ್ತಿದೆ ಎಂದು ಪ್ರಶ್ನಿಸಿದರು.
ಬೆಂಗಳೂರಿನ ಸಮಸ್ಯೆಗಳತ್ತ ಗಮನ ಕೊಡಿ
ರಾಜ್ಯದಲ್ಲಿ ಇದೆಲ್ಲ ಪ್ರಕ್ರಿಯೆಗಳನ್ನು ರಾಜಧಾನಿ ಬೆಂಗಳೂರಿನಲ್ಲಿ ಮೂಲ ಸಮಸ್ಯೆಗಳನ್ನು ಬಗೆಹರಿಸಬೇಕು. ರಸ್ತೆ, ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆಯಂತ ಸಮಸ್ಯೆಗಳ ಬಗ್ಗೆ ಮಾಧ್ಯಮದಲ್ಲಿ ಸುದ್ದಿಯಾಗುತ್ತಿವೆ. ಅದನ್ನು ನೋಡಿಯಾದರೂ ಸರ್ಕಾರ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಸಲಹೆ ನೀಡಿದರು.













Click it and Unblock the Notifications