Namma Metro 3rd Phase: ಕೇಂದ್ರದಿಂದ ಡಬಲ್ ಡೆಕ್ಕರ್ ಅನುಮತಿ ಬಾಕಿ, ಅಂದಾಜು ವೆಚ್ಚ ಹೆಚ್ಚಳ? ಶೀಘ್ರವೇ ವರದಿ ಸಲ್ಲಿಕೆ

ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆ ನಿಯಂತ್ರಣಕ್ಕೆ ಕೊಡುಗೆ ನೀಡುವ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯ ಮೊದಲ ಭಾಗದ ಕಾಮಗಾರಿಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈ ಹಿಂದೆ ಡಿಪಿಆರ್ ಪರಿಷ್ಕರಣೆ, ಅನುಮೋದನೆಗೆ ಸಾಕಷ್ಟು ಸಮಯ ಹಿಡಿದಿತ್ತು. ಬಳಿಕ ಮೆಟ್ರೋ ಮಾರ್ಗದ ಜೊತೆಗೆ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣವು ಸೇರಿದ್ದರಿಂದ ಅದನ್ನು ಡಿಪಿಆರ್, ಅಂದಾಜು ವೆಚ್ಚದಲ್ಲಿ ಸೇರಿ ಅನುಮೋದನೆ ಪಡೆಯುವುದು ತಡವಾಗಿದೆ. ಇದೀಗ ಟೆಂಡರ್ ಕರೆ ತಿಂಗಳಗಳಾದರೂ ಸಹಿತ ಕೇಂದ್ರ ಸರ್ಕಾರ ಡಬಲ್ ಡೆಕ್ಕರ್ ಮೇಲ್ಸೇತುವೆಗೆ ಒಪ್ಪಿಗೆ ನೀಡಿಲ್ಲ. ಸಮಾಧಾನಕರ ಸಂಗತಿಯೆಂದರೆ ಶೀಘ್ರವೇ ಡಬಲ್ ಡೆಕ್ಕರ್ ಕುರಿತ ಅಧ್ಯಯನ ವರದಿ ಸಲ್ಲಿಕೆ ಆಲಿದೆ ಎಂಬ ಅಪ್ಡೇಟ್ ಲಭ್ಯವಾಗಿದೆ.

ಹೌದು, ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆ 'ರೈಟ್ಸ್' ಡಬಲ್ ಡೆಕ್ಕರ್ ಸಾಧ್ಯತಾ ಅಧ್ಯಕ್ಷ ಕುರಿತು ತಾಂತ್ರಿಕ ಮತ್ತು ಆರ್ಥಿಕ ವರದಿ ಸಲ್ಲಿಸಲಿದೆ. ಮುಂದಿನ ಕೆಲವೇ ವಾರಗಳಲ್ಲಿ ಅದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳ ಕೈಸೇರಲಿದೆ. ಅದನ್ನು ಕೇಂದ್ರ ಕಳುಹಿಸಲಿದ್ದು, ಕೇಂದ್ರ ಪರಿಶೀಲಿಸಿ ಅನುಮತಿ ನೀಡಿದ ಬಳಿಕ ಇನ್ನಿತ ಕೆಲಸಗಳು ಮುಂದುವರಿಯಲಿವೆ. ಅದಕ್ಕಾಗಿ ಇನ್ನಷ್ಟು ಸಮಯ ಕಾಯಬೇಕಿದ್ದು, ಇದು ಯೋಜನೆ ಅಂದಾಜು ವೆಚ್ಚ ಹೆಚ್ಚಳಕ್ಕೂ ಕಾರಣವಾಗಲಿದೆ.

Bengaluru Metro Phase 3

ಮೆಟ್ರೋ ಮೂರನೇ ಹಂತದಲ್ಲಿ ಮೂರು ಕಾರಿಡಾರ್

* ಮೊದಲ ಕಾರಿಡಾರ್: ಜೆಪಿನಗರ 4ನೇ ಹಂತದಿಂದ ಕೆಂಪಾಪುರ (32 ಕಿಮೀ)
* ಎರಡನೇ ಕಾರಿಡಾರ್: ಹೊಸಹಳ್ಳಿಯಿಂದ ಕಡಬಗೆರೆವರೆಗೆ (12.15 ಕಿಮೀ)
* ಮೂರನೇ ಕಾರಿಡಾರ್: ಹೆಬ್ಬಾಳದಿಂದ ಸರ್ಜಾರಪುರವರೆಗೆ (37 ಕಿಮೀ)

ವಿವಿಧ ಹಂತಗಳಲ್ಲಿ 'ಕಿತ್ತಳೆ ಮಾರ್ಗ'ದ ಟೆಂಡರ್

ಇದರಲ್ಲಿ ಒಂದು ಮತ್ತು ಎರಡನೇ ಕಾರಿಡಾರ್ ಒಳಗೊಂಡು ಮೂರನೇ ಹಂತದ ಮೆಟ್ರೋ ಯೋಜನೆಯು ಒಟ್ಟು 44 ಕಿಲೋ ಮೀಟರ್ ಒಳಗೊಂಡಿದೆ. ಜೆಪಿನಗರ 4ನೇ ಹಂತದಿಂದ ಕೆಂಪಾಪುರವರೆಗಿನ ಮಾರ್ಗವನ್ನು 'ಕಿತ್ತಳೆ ಮಾರ್ಗ' ವೆಂದು ಕರೆಯಲಾಗಿದೆ. ಇದಕ್ಕಾಗಿ ಮೂರು ಹಂತಗಳಲ್ಲಿ ಟೆಂಡರ್ ಕರೆಯಲಾಗಿದೆ. ಡಬಲ್‌ ಡೆಕ್ಕರ್ ಮೇಲ್ಸೇತುವೆಯು ಜೆಪಿ ನಗರ 4ನೇ ಹಂತದಿಂದ ಕಾಮಾಕ್ಷ ಜಂಕ್ಷನ್, ಹೊಸಕೆರೆಹಳ್ಳಿಯಿಂದ ನಾಗರಬಾವಿ ವೃತ್ತ, ವಿನಾಯಕ ಲೇಔಟ್‌ನಿಂದ ನಾಗರಬಾವಿವರೆಗೂ ಬರಲಿದೆ.

Namma Metro: ಮೆಟ್ರೋ ಸೇವೆಯಲ್ಲಿ 20ಕ್ಕೂ ಹೆಚ್ಚು ಬಾರಿ ತಾಂತ್ರಿಕ ದೋಷ; ಅಂತಾರಾಷ್ಟ್ರೀಯ ಮಾನದಂಡ ಪಾಲಿಸಿ: ತೇಜಸ್ವಿ ಸೂರ್ಯ
Namma Metro: ಮೆಟ್ರೋ ಸೇವೆಯಲ್ಲಿ 20ಕ್ಕೂ ಹೆಚ್ಚು ಬಾರಿ ತಾಂತ್ರಿಕ ದೋಷ; ಅಂತಾರಾಷ್ಟ್ರೀಯ ಮಾನದಂಡ ಪಾಲಿಸಿ: ತೇಜಸ್ವಿ ಸೂರ್ಯ

ಈ ಹಿಂದೆ ಆರು ತಿಂಗಳು ಯೋಜನೆಯ ಗಡುವು ಮುಂದೂಡಲಾಗಿತ್ತು. ಡಿಪಿಆರ್ ಪರಿಷ್ಕರಣೆ ಬಳಿಕ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ 2030ರ ಡೆಡ್‌ಲೈನ್ ನೀಡಲಾಗಿತ್ತು. ಸದ್ಯ ಡಬಲ್ ಡೆಕ್ಕರ್ ಮೇಲ್ಸೇತುವೆ ಒಪ್ಪಿಗೆ ದೊರೆತು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಕಾರ್ಯಾದೇಶ ನೀಡುವ ಹೊತ್ತಿಗೆ ಇನ್ನಷ್ಟು ಸಮಯ ಹಿಡಿಯಬಹುದು. ಇದರಿಂದಾಗಿ ಯೋಜನೆಯ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.

ಅಂದಾಜು ವೆಚ್ಚದಲ್ಲಿ ಭಾರೀ ಏರಿಕೆ ಸಂಭವ

ಮೂರನೇ ಹಂತದ ಮೆಟ್ರೋ ಯೋಜನೆಗೆ ಅಂದಾಜು ವೆಚ್ಚ 15,600 ಕೋಟಿ ರೂಪಾಯಿ ಎನ್ನಲಾಗಿತ್ತು. ನಂತರ ರಾಜ್ಯ ಸರ್ಕಾರವು ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣ ಅಗತ್ಯವೆಂದು ಸದರ ಯೋಜನೆಯಲ್ಲಿ ಅದನ್ನು ಸೇರಿದ್ದರಿಂದ 9,700 ಕೋಟಿ ರೂ. ಹೆಚ್ಚಿಸಲಾಗಿದೆ. ಡಬಲ್ ಡೆಕ್ಕರ್‍‌ಗೆ ತಗುಲುವ ಒಟ್ಟು (9,700 ರೂ.) ವೆಚ್ಚವನ್ನು ತಾನೇ ಕೊಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇನ್ನು ಹೆಬ್ಬಾಳ-ಸರ್ಜಾಪುರ (ಕೆಂಪು ಲೈನ್) ಮಾರ್ಗದ ಯೋಜನೆಗೆ 28,000 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೆಗಳ ಆರಂಭ ವಿಳಂಬವಾಗುತ್ತಿದ್ದಂತೆ ಯೋಜನೆಯ ಅಂದಾಜು ವೆಚ್ಚವು ಸಹ ಶೇ. 5ರಷ್ಟು ಏರಿಕೆ ಆಗಲಿದೆ. ಸಾರ್ವಜನಿಕರ ತೆರಿಗೆ ಹಣ ಹೀಗೆ ದುಂದು ವೆಚ್ಚ ಆಗುತ್ತದೆ. ಇನ್ನೊಂದೆಡೆ ಸಾರ್ವಜನಿಕರು ಮೆಟ್ರೋ ಇಲ್ಲದೇ ಟ್ರಾಫಿಕ್‌ನಲ್ಲಿ ಪರದಾಡಬೇಕಾಗುತ್ತದೆ.

BMTC: ಬಸ್‌ನಲ್ಲಿ ಹಣ ಕಡಿತವಾಗಿ ಟಿಕೆಟ್ ಬರಲಿಲ್ಲವೇ?: ಹೀಗಾದ್ರೂ ಹಣ ವಾಪಸ್ ಗ್ಯಾರಂಟಿ ಎಂದ ಬಿಎಂಟಿಸಿ
BMTC: ಬಸ್‌ನಲ್ಲಿ ಹಣ ಕಡಿತವಾಗಿ ಟಿಕೆಟ್ ಬರಲಿಲ್ಲವೇ?: ಹೀಗಾದ್ರೂ ಹಣ ವಾಪಸ್ ಗ್ಯಾರಂಟಿ ಎಂದ ಬಿಎಂಟಿಸಿ

ಈಗಾಗಲೇ ರಾಜ್ಯ ಸರ್ಕಾರಗಳು ಹಾಗೂ BMRCL ವಿಳಂಬ ಧೋರಣೆಯಿಂದ ಹೊರ ಮೆಟ್ರೋ ಯೋಜನೆಗಳು ತಡವಾಗಿ ಆರಂಭವಾಗುತ್ತಿವೆ. ತಡವಾಗಿ ರೈಲು ಪೂರೈಕೆ, ನಿಧಾನಗತಿಯ ಕಾಮಗಾರಿಗಳಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗದಂತೆ ಮೆಟ್ರೋ ಮೂರನೇ ಹಂತದಲ್ಲಿ ಇನ್ನುಮುಂದೆಯಾದರೆ ಸರ್ಕಾರ ಎಚ್ಚರ ವಹಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+