Adani Group: ಒಡಿಶಾದಲ್ಲಿ ಅದಾನಿ ಗ್ರೂಪ್‌ನಿಂದ ಭಾರೀ ಬಂಡವಾಳ ಹೂಡಿಕೆ! ವಿಶ್ವದ ಅತಿದೊಡ್ಡ ಯೋಜನೆ
ಅದಾನಿ ಗ್ರೂಪ್ ಒಡಿಶಾದಲ್ಲಿ ಭಾರೀ ಹೂಡಿಕೆಗೆ ಮುಂದಾಗಿದೆ. ಯುಎಇ ಮೂಲದ ಕೇಂದ್ರ ಇಂಟರ್ ನ್ಯಾಷನಲ್ ಹೋಲ್ಡಿಂಗ್ ಕಂಪನಿ (ಐಎಚ್‌ಸಿ) ಹಾಗೂ ಒಡಿಶಾ ಸರ್ಕಾರ ರಾಜ್ಯ ಸರ್ಕಾರದ ಜೊತೆಗೆ ಅದಾನಿ ಗ್ರೂಪ್ ಕೈ ಜೋಡಿಸಿದ್ದು, ಮಹತ್ವದ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಅಲ್ಯೂಮಿನಿಯಂ ವಲಯಕ್ಕೆ ದೊಡ್ಡ ಬೂಸ್ ನೀಡಲಿದೆ. ಈ ಒಪ್ಪದಂದಡಿ ಸುಮಾರು 1.08 ಲಕ್ಷ ಕೋಟಿ ಮೌಲ್ಯದ (11.5 ಬಿಲಿಯನ್ ಡಾಲರ್) ಪ್ರಸ್ತಾವಿತ ಹೂಡಿಕೆ ಯೋಜನೆ ಸಾಕಾಗೊಳಿಸಲು ಕಂಪನಿಗಳು ಮುಂದಾಗಿವೆ. ದೇಶದ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಇದು ಒಂದೆಂದು ಅದಾನಿ ಗ್ರೂಪ್ ತಿಳಿಸಿದೆ.
ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ರಾಜ್ಯ ಕೈಗಾರಿಕಾ ಸಚಿವ ಸಂಪದ್ ಚರಣ್ ಸ್ವೈನ್, 'ಅದಾನಿ ಬಂದರುಗಳು ಮತ್ತು ಎಸ್‌ಇಜೆಡ್' ಸಿಇಒ ಕರಣ್ ಅದಾನಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ಒಡಿಶಾ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಐಎಚ್‌ಸಿ ಅಬುಧಾಬಿ ಎಂಡಿ ಮತ್ತು ಸಿಇಓ ಸೈಯದ್ ಬಸಾರ್ ಶುಯೆಬ್ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ 'ಅದಾನಿ ಬಂದರುಗಳು ಮತ್ತು ಎಸ್‌ಇಜೆಡ್' ಸಿಇಒ ಕರಣ್ ಅದಾನಿ ಅವರು, ಈ ಯೋಜನೆಯು "ಒಡಿಶಾಗೆ ಹೊಸ ಆರ್ಥಿಕ ಅಧ್ಯಾಯ"ದ ಆರಂಭವಾಗಿದೆ. ಇಡೀ ರಾಜ್ಯದ ಬೆಳವಣಿಗೆ ಪಥ ವಿಸ್ತರಣೆ ಆಗಲಿದೆ. ದೇಶದ ಅಮೂಲಾಗ್ರ ಬೆಳವಣಿಗೆಗೆ ಒಡಿಶಾ ಭವಿಷ್ಯದಲ್ಲಿ ಕೊಡುಗೆ ನೀಡಲಿದೆ ಎಂದು ಅವರು ಹೇಳಿದರು.
ಪ್ರಸ್ತುತ ಯೋಜನೆಯು ಸಂಪೂರ್ಣ ಅಲ್ಯೂಮಿನಿಯಂ ಮೌಲ್ಯ ಸರಪಳಿಯನ್ನು ಒಂದೇ ಸ್ಥಳದಲ್ಲಿ ಸಂಯೋಜಿಸುತ್ತದೆ. ವಾರ್ಷಿಕ ಸುಮಾರು 4 ಮಿಲಿಯನ್ ಟನ್ ಸಾಮರ್ಥ್ಯದ ಅಲ್ಯೂಮಿನಾ ಸಂಸ್ಕರಣಾಗಾರ, ವರ್ಷಕ್ಕೆ ಸುಮಾರು 2 ಮಿಲಿಯನ್ ಟನ್ ಸಾಮರ್ಥ್ಯದ ಅಲ್ಯೂಮಿನಿಯಂ ಕರಗಿಸುವ ಘಟಕ ಮತ್ತು ವರ್ಷಕ್ಕೆ ಸುಮಾರು 1 ಮಿಲಿಯನ್ ಟನ್ ಸಾಮರ್ಥ್ಯದ ಡೌನ್‌ಸ್ಟ್ರೀಮ್ ಅಲ್ಯೂಮಿನಿಯಂ ಪಾರ್ಕ್ ಸ್ಥಾಫನೆಗಳು ಸೇರಿವೆ ಎಂದು ಕರಣ್ ಅದಾನಿ ವಿವರಿಸಿದರು.
35,000 ಉದ್ಯೋಗ ಸೃಷ್ಟಿ
ಈ ಕೈಗಾರಿಕಾ ಸೌಲಭ್ಯದಿಂದ ಒಟ್ಟು ಸುಮಾರು 4,000 ಮೆಗಾವ್ಯಾಟ್‌ಗಳ ಕ್ಯಾಪ್ಟಿವ್ ಪವರ್ ಪ್ಲಾಂಟ್ ಜೊತೆಗೆ ಸರಿಸುಮಾರು 400 ಮೆಗಾವ್ಯಾಟ್‌ಗಳ ಹಸಿರು ಇಂಧನ ಘಟಕಕ್ಕೆ ಅನುಕೂಲವಾಗಲಿದೆ. ನಿರ್ಮಾಣ ಹಂತದಲ್ಲಿ ಸುಮಾರು 35,000 ಉದ್ಯೋಗಗಳು ಸೃಷ್ಟಿಯಾಗು ನಿರೀಕ್ಷೆಯಿದೆ. ಎಲ್ಲವು ಅಂದುಕೊಂಡಂತಾದರೆ ಭವಿಷ್ಯದಲ್ಲಿ ಒಟ್ಟಾರೆಯಾಗಿ ಸುಮಾರು 18,500 ಉದ್ಯೋಗಗಳು ಲಭ್ಯವಾಗಲಿವೆ. ಮಾತ್ರವಲ್ಲದೇ ಸ್ಥಳೀಯವಾಗಿ ಉದ್ಯಮಿಗಳ ಸೃಜನೆಯಾಗಲಿದೆ. ರಾಜ್ಯಾದ್ಯಂತ ಸಣ್ಣ ವ್ಯವಹಾರಗಳಿಗೆ ಪುಷ್ಟಿ ಸಿಕ್ಕಂತಾಗುತ್ತದೆ ಎಂದು ಅವರು ತಿಳಿಸಿದರು.
ಒಡಿಶಾದ ರಾಜ್ಯದಲ್ಲಿರುವ ಖನಿಜ ಸಂಪತ್ತನ್ನು ದೇಶದ ಕೈಗಾರಿಕಾ ಭವಿಷ್ಯಕ್ಕೆ ಪ್ರಮುಖ ಉತ್ಪನ್ನವಾಗಿದ್ದು, ಇದರಿಂದ ಸಾಕಷ್ಟು ಪ್ರಯೋಜನ ಸಿಗಲಿದೆ. ರಾಜ್ಯದಲ್ಲಿ ದೇಶದ ಅತಿದೊಡ್ಡ ಬಾಕ್ಸೈಟ್ ನಿಕ್ಷೇಪಗಳು, ಭಾರತದ ಅರ್ಧಕ್ಕಿಂತ ಹೆಚ್ಚು ಕಬ್ಬಿಣದ ಅದಿರು ನಿಕ್ಷೇಪಗಳು, ಗಣನೀಯ ಕಲ್ಲಿದ್ದಲು ನಿಕ್ಷೇಪಗಳು ಮತ್ತು ಕ್ರೋಮೈಟ್, ಮ್ಯಾಂಗನೀಸ್, ಸುಣ್ಣದ ಕಲ್ಲು ಮತ್ತು ಡಾಲಮೈಟ್‌ನ ಗಮನಾರ್ಹ ನಿಕ್ಷೇಪಗಳನ್ನು ಹೊಂದಿದೆ ಎಂಬುದನ್ನು ಕರಣ್ ಅದಾನಿ ಹೈಲೈಟ್ ಮಾಡಿದರು. ಇದೆಲ್ಲ ಸಂಪನ್ಮೂಲಗಳ ಬಳಕೆಗೆ ರಾಜ್ಯ ಸರ್ಕಾರದ ಪೂರ್ವಭಾವಿ ನೀತಿಗಳು ಪೂರಕವಾಗಿವೆ. ಒಡಿಶಾ ಕಚ್ಚಾ ವಸ್ತುಗಳ ಪೂರೈಕೆಯು ಮೌಲ್ಯವರ್ಧಿತ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಗೊಳ್ಳಲು ನೆರವಾಗುತ್ತವೆ ಎಂದರು.
ವಿಕ್ಷಿತ್ ಭಾರತ್ ವಿಷನ್‌ನೊಂದಿಗೆ ಹೊಂದಾಣಿಕೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ವಿಕ್ಷಿತ್ ಭಾರತ್ 2047' ಮಿಷನ್‌ಗೆ ಯೋಜನೆ ಸಹಕಾರಿಯಾಗಲಿದೆ. ಅಭಿವೃದ್ಧಿ ಹೊಂದಿದ ಒಡಿಶಾ ರಾಜ್ಯದಲ್ಲಿ ಹೇರಳ ನೈಸರ್ಗಿಕ ಸಂಪನ್ಮೂಲಗಳಿದ್ದು, ಕೈಗಾರಿಕೆಗಳಿಗೆ ನಿರಂತರವಾಗಿ ಬಳಸಿಕೊಳ್ಳಬಹುದು. ಇದರಿಂದ ವಿಶ್ವ ದರ್ಜೆಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬಹುದು. ಯುವ ಸಮೂಹಕ್ಕೆ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಕೈಗಾರಿಕೆ ದೃಷ್ಟಿಯಿಮದ ಒಡಿಶಾ ರಾಜ್ಯವು ಭಾರತದ ಆರ್ಥಿಕ ಬೆಳವಣಿಗೆ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. ದೇಶದ ಕೈಗಾರಿಕೆಗಳು ಹೆಚ್ಚಾಗಿ ಒಡಿಶಾದಲ್ಲಿ ವಿಸ್ತರಣೆಗೆ ಇಲ್ಲಿನ ಪರಿಸರ ಪೂರಕವಾಗಿದೆ ಎಂದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಹೇಳಿದ್ದನ್ನು ಸ್ಮರಿಸಿದರು.












Click it and Unblock the Notifications