ಅಪಘಾತದಲ್ಲಿ ಸತ್ತ ಅಮ್ಮನ ಅಪ್ಪಿ ಮಲಗಿದ ಮರಿ ಕೋತಿ, ಎಂಥವರ ಹೃದಯವನ್ನೂ ಕರಗಿಸೋ ದೃಶ್ಯ

ರಾಜನ್ನ ಸಿರಿಸಿಲ್ಲಾ (ತೆಲಂಗಾಣ): ಇಲ್ಲಿ ನಡೆದ ಅತ್ಯಂತ ಕರುಣಾಜನಕ ಘಟನೆಯೊಂದರ ವೀಡಿಯೋ ವೈರಲ್ ಆಗುತ್ತಿದ್ದು, ಸ್ಥಳೀಯರ ಕಣ್ಣಲ್ಲಿ ನೀರು ತರಿಸುತ್ತಿದೆ. ತಾಯಿಯ ನಿಷ್ಕಲ್ಮಶ ಪ್ರೀತಿ ಮತ್ತು ಮೂಕ, ಮುಗ್ಧ ಪ್ರಾಣಿಯ ಒಡನಾಟಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ನೋಡಿದವರ ಮನ ಕಲಕುತ್ತಿದೆ.

ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ತಂಗಲ್ಲಪಲ್ಲಿ ಮಂಡಲದ ಗಂಡಿ ಲಚ್ಚಪೇಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ಕೋತಿ, ತನ್ನ ಪುಟ್ಟು ಮರಿಯೊಂದಿಗೆ ರಸ್ತೆ ತಾಟಲು ಯತ್ನಿಸುತ್ತಿತ್ತು. ಕ್ಷಣ ಮಾತ್ರದಲ್ಲಿ ಅತಿ ವೇಗವಾಗಿ ಬಂದ ವಾಹನವೊಂದು ಅಮ್ಮ ಕೋತಿಗೆ ಡಿಕ್ಕಿ ಹೊಡೆದಿದೆ. ಕ್ಷಣ ಮಾತ್ರದಲ್ಲಿ ಅಮ್ಮ ಕೋತಿಯ ಜೀವವೇ ಹಾರಿ ಹೋಗಿದೆ.

Baby Monkey Sleeps

ಸಾವಿನ ಅರಿವಿಲ್ಲದ ಮುಗ್ಧ ಮಗು

ಇದಾದ ನಂತರ ಅಲ್ಲಿ ನೆರೆದಿದ್ದವರ ಹೃದಯ ಹಿಂಡುವಂತಹ ದೃಶ್ಯವೊಂದು ಎಂಥವರ ಮನವನ್ನಾದರೂ ಕಲಕುವಂತಿದೆ. ಸಾವಿನ ಕ್ರೂರ ವಾಸ್ತವದ ಅರಿವಿಲ್ಲದ ಆ ಪುಟ್ಟ ಮರಿ ಕೋತಿಗೆ, ತನ್ನ ತಾಯಿ ಏಕೆ ಇದ್ದಕ್ಕಿದ್ದಂತೆ ನಿಶ್ಚಲಳಾಗಿದ್ದಾಳೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ತನಗೆ ಗೊತ್ತಿದ್ದ ಏಕೈಕ ಸುರಕ್ಷತೆ, ಸಮಾಧಾನ ಮತ್ತು ಪ್ರೀತಿಯ ಬೆಚ್ಚನೆಯ ಆಸರೆಯನ್ನು ಹುಡುಕುತ್ತಾ, ಆ ಮುಗ್ಧ ಮರಿ ಕೋತಿ ಮೃತಪಟ್ಟ ತನ್ನ ತಾಯಿಯ ಮಡಿಲಿಗೆ ನಿಧಾನವಾಗಿ ತೆರಳಿ, ಆಕೆಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಮಲಗಿಬಿಟ್ಟಿತು.

ಮನುಷ್ಯರು ತಿಂದೇ ಅಳಿಸಿ ಹೋದ ಪ್ರಾಣಿ ಸಂಕುಲವಿದು!ಈಗ ಬರೀ ಚಿತ್ರಗಳಲ್ಲಿ ಮಾತ್ರ ಲಭ್ಯ
ಮನುಷ್ಯರು ತಿಂದೇ ಅಳಿಸಿ ಹೋದ ಪ್ರಾಣಿ ಸಂಕುಲವಿದು!ಈಗ ಬರೀ ಚಿತ್ರಗಳಲ್ಲಿ ಮಾತ್ರ ಲಭ್ಯ

ಕಣ್ಣೀರು ಹಾಕಿದ ಜನಸಮೂಹ

ಜೀವವಿಲ್ಲದ ತಾಯಿಯ ದೇಹದ ಮೇಲೆ ಮರಿ ಕೋತಿ ಪ್ರಶಾಂತವಾಗಿ ಮಲಗಿದ್ದ ಆ ದೃಶ್ಯ, ತಾಯಿ-ಮಗುವಿನ ನಡುವಿನ ಶಾಶ್ವತ ಬಂಧಕ್ಕೆ ಹಿಡಿದ ಕನ್ನಡಿಯಂತಿತ್ತು. ಈ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳೀಯರು ಮತ್ತು ದಾರಿಹೋಕರು ಆ ಕ್ಷಣ ಭಾವುಕರಾದರು. ಮರಿ ಕೋತಿಯ ಆ ನಿಷ್ಕಲ್ಮಶ ಪ್ರೀತಿಯನ್ನು ಕಂಡು ನೆರೆದಿದ್ದವರಲ್ಲಿ ಹಲವರು ಕಣ್ಣೀರು ಹಾಕಿದರು.

ರಕ್ಷಣೆಗೆ ಧಾವಿಸಿದ ಕರುಣಾಮಯಿ ಹಸ್ತಗಳು

ಆ ರಸ್ತೆಯು ಮರಿ ಕೋತಿಗೆ ಸುರಕ್ಷಿತವಲ್ಲ ಎಂಬುದನ್ನು ಅರಿತ ಕೆಲವು ಕರುಣಾಮಯಿ ಗ್ರಾಮಸ್ಥರು ಮುಂದಾಗಿ, ಭಾರವಾದ ಹೃದಯದಿಂದ ಮರಿ ಕೋತಿಯನ್ನು ಮೃತ ಅಮ್ಮನಿಂದ ಬೇರ್ಪಡಿಸಿ, ರಸ್ತೆಯಿಂದ ದೂರವಿರುವ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಇದೇ ವೇಳೆ ಗ್ರಾಮಸ್ಥರೆಲ್ಲರೂ ಸೇರಿ ಆ ತಾಯಿ ಕೋತಿ ಅಂತ್ಯ ಸಂಸ್ಕಾರವನ್ನೂ ಮಾಡಿದರು.

ಭಾವಜೀವಿಗಳಿವು!ಸಂತೋಷವಾದಾಗ ಮನುಷ್ಯರಂತೆಯೇ ಬಾಯಿ ಬಿಟ್ಟು ನಗುತ್ತವೆ
ಭಾವಜೀವಿಗಳಿವು!ಸಂತೋಷವಾದಾಗ ಮನುಷ್ಯರಂತೆಯೇ ಬಾಯಿ ಬಿಟ್ಟು ನಗುತ್ತವೆ

ಪ್ರೀತಿಯ ಶ್ರೇಷ್ಠ ಪಾಠ

ನೋವಿನಿಂದ ಕೂಡಿದ ಈ ಘಟನೆಯು ಅಲ್ಲಿ ನೆರೆದವರು ಮನ ಕಲಕಿದೆ. ಪ್ರೀತಿ, ದುಃಖ ಮತ್ತು ತಾಯ್ತನದ ಬಂಧ ಕೇವಲ ಮನುಷ್ಯರಿಗಷ್ಟೇ ಸೀಮಿತವಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ. ಮೂಕ ಪ್ರಾಣಿಗಳಲ್ಲಿರುವ ಪ್ರೀತಿ ಮತ್ತು ಬಾಂಧವ್ಯವು ಮನುಷ್ಯರಷ್ಟೇ ಪವಿತ್ರ ಮತ್ತು ಮುರಿಯಲಾಗದ್ದು ಎಂಬುದನ್ನು ನೆನಪಿಸಿದ ಈ ಘಟನೆ, ಇದನ್ನು ಕೇಳಿದ ಪ್ರತಿಯೊಬ್ಬರ ಹೃದಯದಲ್ಲೂ ಅಳಿಸಲಾಗದ ಕಲೆ ಮೂಡಿಸಿದೆ.

ಕೆಲವೇ ಕೆಲವು ನಿಮಿಷಗಳ ಈ ವೀಡಿಯೋ ಸಹ ವೈರಲ್ ಆಗಿದ್ದು, ಮರಿ ಕೋತಿಯ ನೋವಿಗೆ ಎಲ್ಲರೂ ಸ್ಪಂದಿಸುತ್ತಿದ್ದಾರೆ. ಅಮ್ಮನ ಮಡಿಲ ಬೆಚ್ಚಿಗಿನ ಸ್ಪರ್ಶವನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಅದರಲ್ಲಿಯೂ ಮಗು ಹಾಗೂ ಎಲ್ಲ ಪ್ರಾಣಿಗಳ ಮರಿಗಳಿಗಂತೂ ಕೆಲ ತಿಂಗಳಾದರೂ ಆ ಬೆಚ್ಚಗಿನ ಅನುಭೂತಿಯ ಅಗತ್ಯವಿದೆ. ಅದರಲ್ಲೂ ಮೂಕ ಪ್ರಾಣಿಗಳಿಗೆ ಹೀಗಾದರಂತೂ ಆ ದುಃಖವನ್ನು ತಡೆಯುವುದು ಕಷ್ಟ. ನೋಡಿದವರ ಹೃದಯವೂ ಭಾರ ಭಾರ.

ಈ ಘಟನೆ ಮತ್ತೊಮ್ಮೆ ಒಂದು ಮಹತ್ವದ ಸಂದೇಶವನ್ನು ನೆನಪಿಸುತ್ತದೆ. ರಸ್ತೆ ಮನುಷ್ಯರಿಗಷ್ಟೇ ಅಲ್ಲ, ಮೂಕ ಪ್ರಾಣಿಗಳಿಗೂ ಸೇರಿದೆ. ವಾಹನ ಚಲಾಯಿಸುವಾಗ ಸ್ವಲ್ಪ ಎಚ್ಚರಿಕೆ ಮತ್ತು ವೇಗ ನಿಯಂತ್ರಣದಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು. "ಪ್ರಾಣಿಗಳ ಮೇಲೆ ದಯೆ ಇರಲಿ" ಎಂಬ ಕೆಎಸ್‌ಆರ್‌ಟಿಸಿ (KSRTC)ಯ ಜಾಗೃತಿ ಸಂದೇಶ ಇಂತಹ ಘಟನೆಗಳನ್ನು ನೋಡಿದಾಗ ಇನ್ನಷ್ಟು ಅರ್ಥಪೂರ್ಣವಾಗಿ ಕಾಣಿಸುತ್ತದೆ. ಮಾನವೀಯತೆ ಎಂದರೆ ಕೇವಲ ಮನುಷ್ಯರ ಮೇಲಿನ ಕಾಳಜಿಯಲ್ಲ, ನಮ್ಮೊಂದಿಗೆ ಬದುಕುವ ಪ್ರತಿಯೊಂದು ಜೀವಿಯ ಮೇಲಿನ ಕರುಣೆಯೂ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+