30 ದಿನಗಳ ಕಾಲ ಟೀ ಕುಡಿಯದೇ ಇದ್ದರೆ ನಿಮ್ಮ ದೇಹದಲ್ಲಿ ಈ ಬದಲಾವಣೆಗಳಾಗುವುದು ಗ್ಯಾರಂಟಿ!

ಭಾರತೀಯರ ಪಾಲಿಗೆ ಟೀ ಕೇವಲ ಒಂದು ಪಾನೀಯವಲ್ಲ, ಅದೊಂದು ಇಮೋಶನ್‌. ನಮ್ಮಲ್ಲಿ ಬಹುತೇಕರಿಗೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಟೀ ಅಥವಾ ಕಾಫಿ ಬೇಕು. ಇನ್ನು ಕೆಲವರಿಗೆ ಟೀ ಕುಡಿಯುವುದಕ್ಕೆ ಒಂದು ನೆಪ ಬೇಕು ಅಷ್ಟೇ. ಚಹಾವನ್ನು ಎಷ್ಟು ಸಾರಿ ಕೊಟ್ಟರೂ ಬೇಡ ಎನ್ನದೆ ಕುಡಿಯುವವರು ನಮ್ಮ ಮಧ್ಯೆ ಬಹಳ ಮಂದಿ ಇರುತ್ತಾರೆ. ಕೆಲಸದ ಒತ್ತಡವಿರಲಿ, ತಲೆನೋವಿರಲಿ, ಬೇಜಾರಾಗಿರಲಿ, ಖುಷಿಯಾಗಿರಲಿ, ಮಳೆ ಸುರಿಯುತ್ತಿರಲಿ ಹೀಗೆ ಚಹಾ ಕುಡಿಯುವುದಕ್ಕೆ ಒಂದಿ ಸಣ್ಣ ಕಾರಣ ಇದ್ದರೆ ಸಾಕು. ಆದರೆ, ದಿನಕ್ಕೆ 3-4 ಕಪ್‌ಗಳಿಗೂ ಹೆಚ್ಚು ಸಕ್ಕರೆ ಮತ್ತು ಹಾಲು ಬೆರೆಸಿದ ಟೀ ಸೇವಿಸುವುದು ನಮ್ಮ ಅರಿವಿಲ್ಲದೆಯೇ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಒಂದು ವೇಳೆ ನೀವು 30 ದಿನಗಳ ಕಾಲ ಚಹಾ ಸೇವಿಸುವುದನ್ನೇ ನಿಲ್ಲಿಸಿ ಬಿಟ್ಟರೆ ನಿಮ್ಮ ದೇಹದಲ್ಲಿ ಎಂತಹ ಅದ್ಭುತ ಬದಲಾವಣೆಗಳಾಗುತ್ತವೆ ಎನ್ನುವ ಅರಿವು ನಿಮಗಿದೆಯೇ? ಅದಕ್ಕೆ ಉತ್ತರ ಇಲ್ಲಿದೆ.

30 Day No Tea Challenge

ಮೊದಲ ವಾರ: ಆರಂಭಿಕ ಸವಾಲುಗಳು

ಯಾವುದೇ ಇರಲಿ ಹಳೆಯ ಅಭ್ಯಾಸವನ್ನು ಬಿಡುವುದು ಅಂದುಕೊಂಡಷ್ಟು ಸುಲಭವಲ್ಲ. ಟೀಯಲ್ಲಿರುವ 'ಕೆಫೀನ್' ವ್ಯಸನಕಾರಿಯಾಗಿರುವುದರಿಂದ, ಮೊದಲ ಕೆಲವು ದಿನಗಳು ಕಠಿಣವೆನಿಸಬಹುದು.

ಮೊದಲ 3-4 ದಿನಗಳು: ತಲೆಭಾರ, ಸುಸ್ತು, ಕಿರಿಕಿರಿ ಮತ್ತು ಬೆಳಿಗ್ಗೆ ಎದ್ದಾಗ ಏನೋ ಕಳೆದುಕೊಂಡ ಭಾವನೆ ಉಂಟಾಗಬಹುದು. ಇವು ದೇಹದಿಂದ ಕೆಫೀನ್ ಹೊರಹೋಗುತ್ತಿರುವ ಲಕ್ಷಣಗಳಷ್ಟೇ, ಗಾಬರಿಯಾಗಬೇಕಿಲ್ಲ.

ವಾರದ ಅಂತ್ಯಕ್ಕೆ: ಮೊದಲ ವಾರದ ವೇಳೆಗೆ ತಲೆನೋವು ಮಾಯವಾಗಿ, ದೇಹವು ಟೀ ಇಲ್ಲದ ದಿನಚರಿಗೆ ಹೊಂದಿಕೊಳ್ಳಲು ಪ್ರಾರಂಭಿಸುತ್ತದೆ.

International Tea Day : ಮನಸ್ಥಿತಿಗೆ ಅನುಸಾರವಾಗಿ ಚಹಾ ಸೇವಿಸಿ, ಯಾವ ಹೊತ್ತಿಗೆ ಯಾವ ಟೀ ಬೆಸ್ಟ್‌ ಇಲ್ಲಿದೆ ಆಯ್ಕೆ
International Tea Day : ಮನಸ್ಥಿತಿಗೆ ಅನುಸಾರವಾಗಿ ಚಹಾ ಸೇವಿಸಿ, ಯಾವ ಹೊತ್ತಿಗೆ ಯಾವ ಟೀ ಬೆಸ್ಟ್‌ ಇಲ್ಲಿದೆ ಆಯ್ಕೆ

30 ದಿನಗಳಲ್ಲಿ ದೇಹದಲ್ಲಿ ಆಗುವ ಪ್ರಮುಖ ಬದಲಾವಣೆಗಳು :

1. ಉತ್ತಮ ನಿದ್ದೆ: ಟೀಯಲ್ಲಿನ ಕೆಫೀನ್ ಮೆದುಳನ್ನು ಸದಾ ಜಾಗರೂಕವಾಗಿರಿಸುತ್ತದೆ. ಟೀ ಬಿಟ್ಟ ನಂತರ ನರಗಳು ಶಾಂತಗೊಂಡು, ರಾತ್ರಿ ಗಾಢವಾದ ನಿದ್ದೆ ಬರುತ್ತದೆ. ಬೆಳಿಗ್ಗೆ ಎದ್ದಾಗ ದೇಹ ಲವಲವಿಕೆಯಿಂದ ಕೂಡಿರುತ್ತದೆ.

2. ಗ್ಯಾಸ್ಟ್ರಿಕ್ ಮತ್ತು ಎದೆಯುರಿ ನಿವಾರಣೆ: ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಆಸಿಡಿಟಿ (Acidity) ಹೆಚ್ಚಾಗುತ್ತದೆ. 30 ದಿನ ಟೀ ಬಿಟ್ಟು ಬಿಟ್ಟರೆ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ತಾವಾಗಿಯೇ ಕಡಿಮೆಯಾಗುತ್ತವೆ.

3. ತೂಕ ಇಳಿಕೆಗೆ ಸಹಕಾರಿ: ಟೀಗೆ ಸೇರಿಸುವ ಸಕ್ಕರೆ ಮತ್ತು ಹಾಲಿನಿಂದ ಅನಗತ್ಯ ಕ್ಯಾಲೋರಿಗಳು ದೇಹ ಸೇರುತ್ತವೆ. ಟೀ ಬಿಡುವುದರಿಂದ ಸಕ್ಕರೆಯ ಸೇವನೆ ಕಡಿಮೆಯಾಗಿ, ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಲು ಸಹಾಯವಾಗುತ್ತದೆ.

ಅಂತಾರಾಷ್ಟ್ರೀಯ ಚಹಾ ದಿನ: ಇತಿಹಾಸ, ಮಹತ್ವ ಮತ್ತು ಭಾರತದ ಚಹಾ ಸಂಸ್ಕೃತಿಯ ವಿಶೇಷತೆ ಇಲ್ಲಿದೆ
ಅಂತಾರಾಷ್ಟ್ರೀಯ ಚಹಾ ದಿನ: ಇತಿಹಾಸ, ಮಹತ್ವ ಮತ್ತು ಭಾರತದ ಚಹಾ ಸಂಸ್ಕೃತಿಯ ವಿಶೇಷತೆ ಇಲ್ಲಿದೆ

4. ಹಲ್ಲುಗಳ ಆರೋಗ್ಯ: ಟೀಯಲ್ಲಿರುವ 'ಟ್ಯಾನಿನ್' ಹಲ್ಲುಗಳನ್ನು ಹಳದಿ ಬಣ್ಣಕ್ಕೆ ತಿರುಗಿಸುತ್ತದೆ. ಟೀ ತ್ಯಜಿಸಿ ಹೆಚ್ಚು ನೀರು ಕುಡಿಯುವುದರಿಂದ ಹಲ್ಲುಗಳು ಬಿಳಿಯಾಗಿ, ಆರೋಗ್ಯಕರವಾಗಿ ಕಾಣುತ್ತವೆ. ಬಾಯಿಯ ದುರ್ವಾಸನೆಯೂ ಕಡಿಮೆಯಾಗುತ್ತದೆ.

5. ಮನಸ್ಸಿನ ಶಾಂತತೆ: ಕೆಫೀನ್‌ನಿಂದ ಉಂಟಾಗುವ ಮೂಡ್ ಸ್ವಿಂಗ್‌ಗಳು ಕಡಿಮೆಯಾಗುತ್ತವೆ. ಇದರಿಂದ ಸಿಟ್ಟು, ಆತಂಕ ಮತ್ತು ಒತ್ತಡ ಕಡಿಮೆಯಾಗಿ ಮನಸ್ಸು ಪ್ರಶಾಂತವಾಗಿರುತ್ತದೆ.

6. ಚರ್ಮದ ಕಾಂತಿ (Glowing Skin): ಕೆಫೀನ್ ದೇಹದ ನೀರಿನಂಶವನ್ನು ಕಡಿಮೆ ಮಾಡುತ್ತದೆ. ಟೀ ಬಿಟ್ಟು ನೀರು ಅಥವಾ ಮಜ್ಜಿಗೆಯಂತಹ ಪಾನೀಯಗಳನ್ನು ಸೇವಿಸಿದರೆ, ಚರ್ಮಕ್ಕೆ ತೇವಾಂಶ ಸಿಗುತ್ತದೆ ಮತ್ತು ಮುಖದಲ್ಲಿ ನೈಸರ್ಗಿಕ ಹೊಳಪು ಕಾಣಿಸುತ್ತದೆ.

ಟೀಗೆ ಬದಲಾಗಿ ಏನು ಕುಡಿಯಬಹುದು?:

ಟೀ ಬಿಡುವುದೆಂದರೆ ಬೆಳಿಗ್ಗೆ ಏನೂ ಕುಡಿಯಬಾರದು ಎಂದರ್ಥವಲ್ಲ. ಬದಲಾಗಿ ಈ ಆರೋಗ್ಯಕರ ಆಯ್ಕೆಗಳನ್ನು ಅಳವಡಿಸಿಕೊಳ್ಳಿ:

ಉಗುರು ಬೆಚ್ಚಗಿನ ನೀರು: ಬೆಳಿಗ್ಗೆ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸ ಅಥವಾ ಜೇನುತುಪ್ಪ ಬೆರೆಸಿ ಕುಡಿಯಿರಿ.

ಜೀರಿಗೆ ಅಥವಾ ಸೋಂಪು ನೀರು: ಜೀರ್ಣಕ್ರಿಯೆಗೆ ಇದು ಅತ್ಯುತ್ತಮ ಪಾನೀಯ.

ಮಜ್ಜಿಗೆ ಅಥವಾ ಎಳನೀರು: ಆಫೀಸ್ ಬ್ರೇಕ್ ಸಮಯದಲ್ಲಿ ಟೀ ಬದಲಿಗೆ ಒಂದು ಲೋಟ ಮಜ್ಜಿಗೆ ಅಥವಾ ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಮೊದಲ 3-4 ದಿನಗಳ ಕಠಿಣತೆಯನ್ನು ಮೀರಿ ನಿಂತರೆ, ನಂತರದ ದಿನಗಳಲ್ಲಿ ಸಿಗುವ ಆರೋಗ್ಯ ಲಾಭಗಳು ನಿಜಕ್ಕೂ ಅದ್ಭುತವಾಗಿರುತ್ತವೆ. ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ನಿದ್ರಾಹೀನತೆಯಿದ್ದರೆ, ಇಂದೇ ಈ '30-ದಿನಗಳ ಟೀ ತ್ಯಜಿಸುವ ಸವಾಲನ್ನು' ಸ್ವೀಕರಿಸಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+