ಸ್ಮಾರ್ಟ್‌ಫೋನ್ ಸ್ಟೋರೇಜ್ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸರಳ ದಾರಿ: ಫೋಟೋ ಡಿಲೀಟ್ ಮಾಡದೆಯೇ ಸ್ಪೇಸ್‌ ಹೆಚ್ಚಿಸಿಕೊಳ್ಳಿ

ಈಗ ಮಕ್ಕಳಿಂದ ಮುದುಕರವರೆಗೂ ಎಲ್ಲರೂ ಸ್ಮಾರ್ಟ್‌ ಫೋನ್‌ ಬಳಸುತ್ತಾರೆ. ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರೂ ಒಮ್ಮೆಯಾದರೂ ಎದುರಿಸಿರುವ ಸಾಮಾನ್ಯ ಸಮಸ್ಯೆ ಎಂದರೆ 'ಸ್ಟೋರೇಜ್ ಫುಲ್' ಎನ್ನುವ ಅಲರ್ಟ್‌ ಮೆಸೇಜ್.‌ ಆಗ ನಿಮಗೆ ಅಗತ್ಯವಾಗಿ ಬೇಕಾಗಿರುವ ಫೋಟೋಗಳು ಮತ್ತು ವಿಡಿಯೋಗಳನ್ನು ಡಿಲೀಟ್‌ ಮಾಡುವ ಅನಿವಾರ್ಯತೆ ಅನೇಕರಿಗೆ ಎದುರಾಗುತ್ತದೆ.

ಆದರೆ, ಈಗ ಫೋನಿನ ಸ್ಟೋರೇಜ್‌ ಸ್ಪೇಸ್‌ ಜಾಸ್ತಿ ಮಾಡಲು ಫೋಟೋ, ವಿಡಿಯೋ ರೂಪದಲ್ಲಿರುವ ನಿಮ್ಮ ಅತ್ಯಮೂಲ್ಯವಾದ ನೆನಪುಗಳನ್ನು ಡಿಲೀಟ್ ಮಾಡಬೇಕಿಲ್ಲ. ಯಾವುದನ್ನೂ ಡಿಲೀಟ್‌ ಮಾಡದೆಯೇ ಫೋನ್‌ನಲ್ಲಿ ಗಿಗಾಬೈಟ್ (GB)ಗಟ್ಟಲೆ ಸ್ಪೇಸ್‌ ಅನ್ನು ಉಳಿಸಿಕೊಳ್ಳಬಹುದು. ಇದಕ್ಕಾಗಿ ಕೆಲವೊಂದು ಟ್ರಿಕ್‌ಗಳನ್ನು ಅನುಸರಿಸಬೇಕು.

Smartphone Storage Tips

ಫೋನಿನ ಸ್ಟೋರೇಜ್‌ ಸ್ಪೇಸ್‌ ಜಾಸ್ತಿ ಮಾಡಲು ಇರುವ ಮೂರು ಸರಳ ಹಂತಗಳು:

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನ್‌ಇನ್‌ಸ್ಟಾಲ್ ಮಾಡಿದ ಆ್ಯಪ್‌ಗಳ ಹಿಸ್ಟರಿ ಡಿಲೀಟ್ ಮಾಡಿ:
ನಮಗೆ ಅಗತ್ಯ ಇದೆಯೋ ಇಲ್ಲವೋ ಕೆಲವೊಂದು ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿರುತ್ತೇವೆ. ನಂತರ ಅದರ ಅಗತ್ಯ ನಮಗೆ ಅಷ್ಟಾಗಿ ಇಲ್ಲ ಎನ್ನುವಾಗ ಅನ್‌ಇನ್‌ಸ್ಟಾಲ್ ಮಾಡುತ್ತೇವೆ. ಆದರೆ ಅವುಗಳ ಹಿಸ್ಟರಿ ಡೇಟಾ ಫೋನ್‌ನಲ್ಲಿ ಉಳಿದುಕೊಂಡು ಮೆಮೊರಿ ವ್ಯರ್ಥ ಮಾಡುತ್ತಿರುತ್ತದೆ. ಹಾಗಾಗಿ ಈ ಹಿಸ್ಟರಿಯನ್ನು ಮೊದಲು ಡಿಲೀಟ್‌ ಮಾಡಿಕೊಳ್ಳಿ. ಇದನ್ನು ತೆಗೆದುಹಾಕಲು:

* ಗೂಗಲ್ ಪ್ಲೇ ಸ್ಟೋರ್ ಓಪನ್‌ ಮಾಡಿ ಬಲ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.

* 'Manage apps & device' ಆಯ್ಕೆಯನ್ನು ಆರಿಸಿ.

* ಅಲ್ಲಿರುವ 'Manage' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

* 'This device' ಫಿಲ್ಟರ್ ಬದಲಾಯಿಸಿ 'Not installed' ಆಯ್ಕೆ ಮಾಡಿ.

* ಈಗ ಹಿಂದೆ ಡಿಲೀಟ್ ಮಾಡಿದ ಆ್ಯಪ್‌ಗಳ ಪಟ್ಟಿ ಕಾಣಿಸುತ್ತದೆ. ಅವುಗಳನ್ನು ಸೆಲೆಕ್ಟ್ ಮಾಡಿ ಡಿಲೀಟ್ ಮಾಡುವುದರಿಂದ ಹೆಚ್ಚಿನ ಸ್ಟೋರೇಜ್ ಲಭ್ಯವಾಗುತ್ತದೆ.

ವಾರದಲ್ಲಿ ಎರಡು ದಿನ ಸ್ಮಾರ್ಟ್‌ ಫೋನ್‌ನಿಂದ ಸಂಪೂರ್ಣ ದೂರ : ಹೊಸ ಪ್ರಯೋಗದಿಂದ ವ್ಯಕ್ತಿಯ ಜೀವನದಲ್ಲಾದ ಬದಲಾವಣೆ ?
ವಾರದಲ್ಲಿ ಎರಡು ದಿನ ಸ್ಮಾರ್ಟ್‌ ಫೋನ್‌ನಿಂದ ಸಂಪೂರ್ಣ ದೂರ : ಹೊಸ ಪ್ರಯೋಗದಿಂದ ವ್ಯಕ್ತಿಯ ಜೀವನದಲ್ಲಾದ ಬದಲಾವಣೆ ?

ವಾಟ್ಸಾಪ್ ಸ್ಟೋರೇಜ್ ನಿರ್ವಹಣೆ:

ಗುಡ್‌ ಮಾರ್ನಿಂಗ್‌ ಗುಡ್‌ ನೈಟ್‌ ಇಮೇಜ್‌ಗಳಿಂದ ಹಿಡಿದು ಅನಗತ್ಯವಾಗಿರುವ ಅನೇಕ ಫೋಟೋಗಳು, ವಿಡಿಯೋಗಳು ವಾಟ್ಸಾಪ್‌ನಲ್ಲಿ ತುಂಬಿ ಹೋಗಿರುತ್ತವೆ. ಇದು ಫೋನ್‌ನ ಹೆಚ್ಚಿನ ಮೆಮೊರಿಯನ್ನು ತಿಂದು ಬಿಡುತ್ತದೆ. ಈ ಸಮಯದಲ್ಲಿ ಇಡೀ ಚಾಟ್ ಡಿಲೀಟ್ ಮಾಡದೆಯೇ ದೊಡ್ಡ ಫೈಲ್‌ಗಳನ್ನು ಅಳಿಸುವ ಮೂಲಕ ಸ್ಪೇಸ್‌ ಉಳಿಸಬಹುದು. ಅದು ಹೇಗೆಂದರೆ :

* ವಾಟ್ಸಾಪ್ ಸೆಟ್ಟಿಂಗ್ಸ್ ತೆರೆದು 'Storage and data' ಕ್ಲಿಕ್ ಮಾಡಿ.

* 'Manage storage' ಆರಿಸಿ. ಇಲ್ಲಿ 5MB ಗಿಂತ ಹೆಚ್ಚು ಗಾತ್ರದ ಫೈಲ್‌ಗಳು ಪ್ರತ್ಯೇಕವಾಗಿ ಕಾಣಿಸುತ್ತವೆ. ನಿಮಗೆ ಬೇಡವಾದ ಫೈಲ್‌ಗಳನ್ನು ಮಾತ್ರ ಆರಿಸಿ ಡಿಲೀಟ್ ಮಾಡಿ.

ಪ್ಲೇ ಸ್ಟೋರ್‌ನ 'ಆಟೋ-ಆರ್ಕೈವ್' ಫೀಚರ್ ಬಳಸಿ:

ನೀವು ಅಪರೂಪಕ್ಕೆ ಬಳಸುವ ಆ್ಯಪ್‌ಗಳನ್ನು ಸಂಪೂರ್ಣ ಡಿಲೀಟ್ ಮಾಡುವ ಬದಲು 'ಆಟೋ-ಆರ್ಕೈವ್' ಮಾಡಬಹುದು. ಇದು Google Play Store ನಿಂದ ಬಂದಿರುವ ಅತ್ಯುತ್ತಮ ಹೊಸ ವೈಶಿಷ್ಟ್ಯವಾಗಿದೆ. ಇದು ತಿಂಗಳುಗಳಿಂದ ಬಳಕೆಯಾಗದೆ ಉಳಿದಿರುವ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ಡಿಲೀಟ್‌ ಮಾಡುವ ಬದಲು ಸ್ಟೋರೇಜ್‌ ಸ್ಪೇಸ್‌ ಉಳಿಸಲು ಅವುಗಳ ಗಾತ್ರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

CM Office: ಸಿಎಂ ಕಚೇರಿಯಿಂದ ಮೊಬೈಲ್ ನಂಬರ ದುರ್ಬಳಕೆ ಆರೋಪ: ಪತ್ರಕರ್ತನ ಹಾಸ್ಯಭರಿತ ಬಹಿರಂಗ ಮನವಿ ವೈರಲ್
CM Office: ಸಿಎಂ ಕಚೇರಿಯಿಂದ ಮೊಬೈಲ್ ನಂಬರ ದುರ್ಬಳಕೆ ಆರೋಪ: ಪತ್ರಕರ್ತನ ಹಾಸ್ಯಭರಿತ ಬಹಿರಂಗ ಮನವಿ ವೈರಲ್

ಇದನ್ನು ಅಕ್ಟಿವ್‌ ಮಾಡಲು

* ಪ್ಲೇ ಸ್ಟೋರ್ ಸೆಟ್ಟಿಂಗ್ಸ್ ತೆರೆದು 'General' ಆಯ್ಕೆಗೆ ಹೋಗಿ.

* 'Automatically archive apps' ಆಪ್ಶನ್ ಅನ್ನು ಆನ್ ಮಾಡಿ. ಇದು ಬಳಕೆಯಾಗದ ಆ್ಯಪ್‌ಗಳ ಗಾತ್ರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಈ ಮೂರು ಸರಳ ಹಂತಗಳನ್ನು ಅನುಸರಿಸುವುದರಿಂದ ನಿಮ್ಮ ಅಮೂಲ್ಯ ಫೋಟೋ ಅಥವಾ ವಿಡಿಯೋಗಳನ್ನು ಡಿಲೀಟ್‌ ಮಾಡದೆಯೇ ಫೋನ್ ಸ್ಟೋರೇಜ್ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ, ಇದರಿಂದ ಫೋನ್ ಕಾರ್ಯಕ್ಷಮತೆ (Performance) ಕೂಡಾಡ ಸುಧಾರಿಸುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+