Bengaluru Rent: ಬೆಂಗಳೂರಲ್ಲಿ ಬಾಡಿಗೆದಾರರಿಗೆ ಹೊಸ ಶಾಕ್: ಮನೆ ಅಗ್ರಿಮೆಂಟ್ ಮಾಡಿಕೊಳ್ಳುವಾಗ ಎಚ್ಚರ, 22,000 ಕಟ್

ಬೆಂಗಳೂರಿನಲ್ಲಿ ಬಾಡಿಗೆದಾರರು ಸಮಸ್ಯೆ ಎದುರಿಸುವುದು ಮುಂದುವರಿದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾಡಿಗೆದಾರರೊಬ್ಬರು ಹೆಚ್ಚುವರಿ ಮುಂಗಡ ಹಣ(Deposit amount) ಡಿಮ್ಯಾಂಡ್ ಮಾಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 2024 ರಲ್ಲಿ ಕೋರಮಂಗಲದಲ್ಲಿ ಅಪಾರ್ಟ್ಮೆಂಟ್‌ವೊಂದನ್ನು ಬಾಡಿಗೆಗೆ ಪಡೆದ ಬಾಡಿಗೆದಾರರು ಅವಸರದಲ್ಲಿ ಮಾಡಿಕೊಂಡ ಎಡವಟ್ಟಿನ ಬಗ್ಗೆ ಮಾತನಾಡಿದ್ದಾರೆ. ಅಪಾರ್ಟ್‌ಮೆಂಟ್ ರೆಂಟಲ್ ಅಗ್ರಿಮೆಂಟ್‌ನಲ್ಲಿ ಆಗಿರುವ ತಪ್ಪಿನ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಅವಸರದಲ್ಲಿ ರೆಂಟಲ್‌ ಅಗ್ರಿಮೆಂಟ್‌ಗೆ ಸಹಿ ಮಾಡಿದೆ ಇದರಿಂದ ಈಗ ಸಂಕಷ್ಟ ಅನುಭವಿಸುವಂತೆ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕೆಲವು ಬಾಡಿಗೆದಾರರು ಆಸ್ತಿ ಮಾಲೀಕರಿಂದ ನಿರಂತರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಬೆಂಗಳೂರಲ್ಲಿ ಕೆಲವು ಆಸ್ತಿದಾರರು ಬಾಡಿಗೆದಾರರಿಗೆ ಕಿರುಕುಳ ಕೊಡುವುದು ಚರ್ಚೆ ಆಗುತ್ತಿದೆ. ಮನೆ ಖಾಲಿ ಮಾಡಿದಾಗ ಪೇಂಟಿಂಗ್ ಶುಲ್ಕಕ್ಕಾಗಿ ಒಂದು ತಿಂಗಳ ಬಾಡಿಗೆಯನ್ನು ಕಡಿತಗೊಳಿಸಲು ಭೂಮಾಲೀಕರಿಗೆ ಅವಕಾಶ ನೀಡುವ ಷರತ್ತಿಗೆ ಒಪ್ಪಿಕೊಂಡಿದ್ದೇನೆ. 15 ತಿಂಗಳು ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೆ. ಆದರೆ 2026ರಲ್ಲಿ ಬಾಡಿಗೆ ಹೆಚ್ಚಳ ಮಾಡಲಾಗಿದ್ದು, ಇದಾದ ನಂತರ ಅಪಾರ್ಟ್‌ಮೆಂಟ್ ಖಾಲಿ ಮಾಡುವುದಕ್ಕೆ ನಿರ್ಧಿರಿಸಿದ್ದು, ಅದು ಒಪ್ಪಂದದಲ್ಲಿ ನಿಗದಿಪಡಿಸಿದ ಮೊತ್ತಕ್ಕಿಂತಲೂ ಭಾರೀ ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

Bengaluru Rent

ಅರ್ಜೆಂಟ್ ಆಗಿ ಮನೆ ಬೇಕಾಗಿದ್ದ ಕಾರಣ, ನಾನು ಮನೆ ಖಾಲಿ ಮಾಡುವಾಗ ಒಂದು ತಿಂಗಳ ಬಾಡಿಗೆಯನ್ನು ಪೇಂಟಿಂಗ್ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ ಎಂಬ ಷರತ್ತಿನ ಒಪ್ಪಂದಕ್ಕೆ ಮನೆ ಮಾಲೀಕರು ನನ್ನಿಂದ ಸಹಿ ಮಾಡಿಸಿಕೊಂಡರು. ಆ ಸಮಯದಲ್ಲಿ ನನಗೆ ತುರ್ತಾಗಿ ಮನೆ ಬೇಕಿದ್ದರಿಂದ ನಾನು ಅದಕ್ಕೆ ಒಪ್ಪಿಕೊಂಡೆ ಎಂದು ಬಾಡಿಗೆದಾರರು ರೆಡ್ಡಿಟ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 15 ತಿಂಗಳು ಕಳೆದರೂ ಬಾಡಿಗೆ ಒಪ್ಪಂದವನ್ನು ನವೀಕರಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿರಲಿಲ್ಲ. ನಂತರ 2026ರ ಜನವರಿಯಲ್ಲಿ, ಒಪ್ಪಂದದಲ್ಲಿ ಬಾಡಿಗೆಯನ್ನು ಗರಿಷ್ಠ 5% ಮಾತ್ರ ಹೆಚ್ಚಿಸಬಹುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ಮನೆ ಮಾಲೀಕರು ಏಕಾಏಕಿ ಬಾಡಿಗೆಯನ್ನು 10% ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ನಾನು ಈಗಾಗಲೇ ಕೆಲಸ ಬದಲಾಯಿಸುವ ಹಂತದಲ್ಲಿದ್ದೇನೆ. ಆ ಸಮಯದಲ್ಲಿ ಅಪಾರ್ಟ್ಮೆಂಟ್ ನನ್ನ ಕಚೇರಿಗೆ ಹತ್ತಿರದಲ್ಲಿದ್ದರಿಂದ, ನಾನು ತಾತ್ಕಾಲಿಕವಾಗಿ ಉಳಿದು ನಂತರ ಮನೆ ಬದಲಾವಣೆ ಮಾಡುವ ಯೋಚನೆಯಲ್ಲಿದ್ದೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

Bengaluru Rent: ದೆಹಲಿಗಿಂತ ಬೆಂಗಳೂರಿನಲ್ಲಿ 4 ಪಟ್ಟು ಮನೆ ಬಾಡಿಗೆ ಹೆಚ್ಚು, ಕಲ್ಚರಲ್ ಶಾಕ್ ಬಗ್ಗೆ Google ಎಂಜಿನಿಯರ್ ಮಾತು
Bengaluru Rent: ದೆಹಲಿಗಿಂತ ಬೆಂಗಳೂರಿನಲ್ಲಿ 4 ಪಟ್ಟು ಮನೆ ಬಾಡಿಗೆ ಹೆಚ್ಚು, ಕಲ್ಚರಲ್ ಶಾಕ್ ಬಗ್ಗೆ Google ಎಂಜಿನಿಯರ್ ಮಾತು

ಬೆಂಗಳೂರಿನಲ್ಲಿ ಬಾಡಿಗೆ ಮನೆಯ ಮಾಲೀಕರು ಕೆಲವೊಂದು ನಿರ್ದಿಷ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮನೆ ಮಾಲೀಕರು ಈಗಾಗಲೇ ಎರಡು ತಿಂಗಳ ಬಾಡಿಗೆಗೆ ಸಮಾನವಾದ ಅಡ್ವಾನ್ಸ್‌ ಮೊತ್ತವನ್ನು ಹೆಚ್ಚುವರಿ ಮೊತ್ತದೊಂದಿಗೆ ಹಿಡಿದುಕೊಂಡಿದ್ದರು. ಇದೀಗ ಅಪಾರ್ಟ್‌ಮೆಂಟ್ ಪೇಂಟಿಂಗ್ ಮತ್ತು ಇತರ ಶುಲ್ಕಗಳಿಗಾಗಿ ಮನೆಯ ಮಾಲೀಕರು 20,000 ರೂ. ಕಡಿತ ಮಾಡಿದ್ದಾರೆ. ಆದಾಗ್ಯೂ, ಮನೆ ಮಾಲೀಕರು ಅರ್ಧ ತಿಂಗಳ ಬಾಡಿಗೆಯನ್ನು ನೋಟಿಸ್ ಮತ್ತು ಇತರ ಖರ್ಚುಗಳು ಎಂದು 22,000 ರೂ. ಮೊತ್ತವನ್ನು ಹೆಚ್ಚುವರಿಯಾಗಿ ನೀಡುವಂತೆ ಒತ್ತಾಯಿಸಿದರು ಎಂದು ಬಾಡಿಗೆದಾರರು ಆರೋಪ ಮಾಡಿದ್ದಾರೆ.

 Bengaluru Rent: ಬೆಂಗಳೂರು ದುಬಾರಿಯಲ್ಲ; ಹಣ - ಖರ್ಚು ಮ್ಯಾನೇಜ್ ಮಾಡಬೇಕಷ್ಟೇ ಎಂದ ಯುವತಿ, ಪೋಸ್ಟ್‌ ವೈರಲ್
Bengaluru Rent: ಬೆಂಗಳೂರು ದುಬಾರಿಯಲ್ಲ; ಹಣ - ಖರ್ಚು ಮ್ಯಾನೇಜ್ ಮಾಡಬೇಕಷ್ಟೇ ಎಂದ ಯುವತಿ, ಪೋಸ್ಟ್‌ ವೈರಲ್

ಈಗಾಗಲೇ 2 ತಿಂಗಳ ಬಾಡಿಗೆ + ಹೆಚ್ಚುವರಿ ಮೊತ್ತಕ್ಕೆ ಸಮಾನವಾದ ಅಡ್ವಾನ್ಸ್‌ ಮೊತ್ತವನ್ನು ಹಿಡಿದಿದ್ದರೂ ಮತ್ತು ಪೇಟಿಂಗ್ ಮತ್ತು ಇತರ ಶುಲ್ಕಗಳಿಗಾಗಿ 20,000 ಅನ್ನು ಈಗಾಗಲೇ ಕಡಿತ ಮಾಡಿದ್ದಾರೆ. ಇದರ ಹೊರತಾಗಿಯೂ, ಬರೋಬ್ಬರಿ 22,000 ರೂ. ಹೆಚ್ಚುವರಿ ಹಣ ಕಡಿತ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+