5 ವರ್ಷ ಕೆಲಸ ಮಾಡಿದ ಕಂಪನಿಯಿಂದ ಏಕಾಏಕಿ ಉದ್ಯೋಗ ಕಳೆದುಕೊಂಡೆ; 'ಬಹುಶಃ ದೇವರ ಇಚ್ಛೆ' ಎಂದ ಉದ್ಯೋಗಿ, ವೈರಲ್ ವಿಡಿಯೋ
ವಿಶ್ವದ ಪ್ರತಿಷ್ಠಿತ ಕಂಪನಿಗಳಲ್ಲಿಯೇ ಉದ್ಯೋಗ ಕಡಿತ (Layoff) ಆಗುತ್ತಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲಿಯೇ ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಆದರೆ, ದೆಹಲಿ ಮೂಲದ ವಿಪ್ರೋ ಉದ್ಯೋಗಿಯೊಬ್ಬರು ಕೆಲಸ ಕಳೆದುಕೊಂಡಿದ್ದು, ಭಾವನಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಐಟಿ ಕಂಪನಿಯಲ್ಲಿ ಐದುವರೆ ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ನಂತರ ಕೆಲಸದಿಂದ ವಜಾಗೊಂಡೊಂಡಿರುವ ಬಗ್ಗೆ ಮಾತನಾಡಿದ್ದಾರೆ. ಈ ಭಾವನಾತ್ಮಕ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗ ಎಷ್ಟೇ ಪ್ರತಿಷ್ಠಿತ ಕಂಪನಿ ಇದ್ದರೂ ಉದ್ಯೋಗದಲ್ಲಿ ಅನಿಶ್ವಿತತೆ ಇದೆ. ಬಹುಶಃ ಈಗ ನಾನು ಉದ್ಯೋಗ ಕಳೆದುಕೊಂಡಿರುವುದು "ದೇವರಿಂದ ಬಂದ ಸಂಕೇತ"ವಾಗಿರಬಹುದು ಎಂದು ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ವಿಪ್ರೋ ಎಐ ಸೊಲ್ಯೂಷನ್ಸ್‌ನ ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಶನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅನುಕೃತಿ ವಿದ್ಯಾರ್ಥಿ ಎನ್ನುವವರು ಜೂನ್ 29 ರಂದು ತಮ್ಮ ಮ್ಯಾನೇಜರ್ ಮತ್ತು ಎಚ್‌ಆರ್ ತಂಡದ ಪ್ರತಿನಿಧಿಯೊಂದಿಗೆ ದಿನವೂ ನಡೆಯುವ ಸಭೆಯ ನಂತರ ತಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಕೆಲಸದಲ್ಲಿ ಮುಂದುವರಿಯುವ ಅವಶ್ಯಕತೆ ಇಲ್ಲ ಅಂತ ಹೇಳಿದರು ಎಂದು ಅವರು ಹೇಳಿಕೊಂಡಿದ್ದಾರೆ. ನಾನು ನಿರುದ್ಯೋಗಿ, ಇಂದು ನನಗೆ ನನ್ನ ಎಚ್‌ಆರ್ ಮತ್ತು ಮ್ಯಾನೇಜರ್‌ನಿಂದ ಕರೆ ಬಂತು. ಅವರು ನಾನು ಕೆಲಸದಲ್ಲಿ ಮುಂದುವರಿಯುವ ಅವಶ್ಯಕತೆ ಇಲ್ಲ. ನನ್ನನ್ನು ಕಂಪನಿ ತೊರೆಯುವಂತೆ ಕೇಳಿದ್ದಾರೆ ಎಂದು ಹೇಳಿದ್ದಾರೆ. ನಾನು ಐದೂವರೆ ವರ್ಷಗಳ ಕಾಲ ಇದ್ದ ಕಂಪನಿಯು ಏಕಾಏಕಿ ಶಾಕ್ ಕೊಟ್ಟಿದೆ.

ಇದು ಆಘಾತಕಾರಿಯಾಗಿತ್ತು, ವಿಶೇಷವಾಗಿ ಒಂದೇ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೆ. ಕಂಪನಿಯು ನನ್ನ ಜೀವನದ ಪರಿಚಿತ ಭಾಗವಾಗಿದೆ. ಇದರಿಂದಾಗಿ ನನ್ನ ಜೀವನದಲ್ಲಿಯೇ ದೊಡ್ಡ ಬದಲಾವಣೆ ಆಗಿದಂತೆ ಆಗಿದೆ.
ಉದ್ಯೋಗದ ಅನಿಶ್ವಿತತೆಯ ನಡುವೆಯೂ ಈ ವಿಷಯವನ್ನು ಪಾಸಿಟಿವ್ ಆಗಿಯೇ ಅವರು ತೆಗೆದುಕೊಂಡಿದ್ದಾರೆ. ನನ್ನನ್ನು ಕೆಲಸದಿಂದ ಒಳ್ಳೆಯ ಕಾರಣಕ್ಕಾಗಿಯೇ ತೆಗೆದಿರಬಹುದು. ಬಹುಶಃ ನಾನು ಅಲ್ಲಿಯೇ ಕೆಲಸದಲ್ಲಿ ಮುಂದುವರಿದಿದ್ದರೆ, ಮುಂದೆ ಎಂದೂ ನಾನು ಆ ಕೆಲಸಕ್ಕೆ ರಾಜೀನಾಮೆ ನೀಡುತ್ತಿರಲಿಲ್ಲವೇನೋ ಎಂದು ಅವರು ಹೇಳಿಕೊಂಡಿದ್ದಾರೆ. ನಾನು ನಾನಾಗಿಯೇ ಎಂದಿಗೂ ರಾಜೀನಾಮೆ ನೀಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ನೆಟ್ಟಿಗರು ಹೇಳಿದ್ದೇನು
ಇನ್ನು ಈ ವೈರಲ್ ವಿಡಿಯೋಗೆ ನೆಟ್ಟಿಗರು ಸಹ ಭಾವನಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋಗೆ ಪ್ರೀತಿ ಮತ್ತು ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ❤️ ಇದಕ್ಕೆ ಇಷ್ಟು ದೊಡ್ಡ ಪ್ರತಿಕ್ರಿಯೆ ಸಿಗುತ್ತದೆ ಎಂದು ನಾನು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ. ನಿಮ್ಮ ಪ್ರೋತ್ಸಾಹ ನನಗೆ ತುಂಬಾ ಧೈರ್ಯ ನೀಡಿದೆ. ಈ ವಿಶೇಷ ಕ್ಷಣವನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಮತ್ತು ಮುಂದಿನ ಬೆಳವಣಿಗೆಗೆ ಪ್ರೇರಣೆಯಾಗಿ ಬಳಸಿಕೊಳ್ಳಲು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದೇನೆ.
ಈಗ ಇದೇ ರೀತಿಯ ಕಷ್ಟದ ಸಮಯವನ್ನು ಎದುರಿಸುತ್ತಿರುವ ಎಲ್ಲರಿಗೂ ಒಂದೇ ಮಾತು-ಈ ಸಮಯವೂ ಕಳೆದುಹೋಗುತ್ತದೆ. ನಮ್ಮ ಬದುಕಿನಲ್ಲಿ ಇನ್ನೂ ಉತ್ತಮವಾದದ್ದನ್ನು ನೀಡಲು ದೇವರು ನಮ್ಮನ್ನು ಈ ದಾರಿಯಲ್ಲಿ ನಡೆಸುತ್ತಿದ್ದಾರೆ ಎಂಬ ನಂಬಿಕೆ ನನಗಿದೆ. ಮುಂದೆ ಸಾಗುತ್ತಿರಿ... ಉತ್ತಮ ದಿನಗಳು ನಿಮ್ಮನ್ನು ಎದುರು ನೋಡುತ್ತಿವೆ ಎಂದೂ ಅವರು ಹೇಳಿಕೊಂಡಿದ್ದಾರೆ.












Click it and Unblock the Notifications