IND vs PAK: ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸಿದ ಪಾಕ್‌; ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೆ ಮಾಸ್ಟರ್‌ ಪ್ಲ್ಯಾನ್‌

ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಖಾಡ ಪ್ರವೇಶಿಸುವ ಕ್ಷಣಕ್ಕೆ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಈ ಪಂದ್ಯ ವಿಶ್ವದ ಕ್ರಿಕೆಟ್ ಪ್ರೀಯರ ಚಿತ್ತ ಕದ್ದಿದೆ. ಉಭಯ ತಂಡಗಳು ಮತ್ತೊಮ್ಮೆ ಕ್ರಿಕೆಟ್‌ ಅಂಗಳದಲ್ಲಿ ಜಿದ್ದಾಜಿದ್ದಿನ ಫೈಟ್‌ ನಡೆಸಲು ಸಿದ್ಧವಾಗಿವೆ. ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ, ಪಾಕ್‌ ವಿರುದ್ಧ ಮೇಲುಗೈ ಸಾಧಿಸಿದೆ. ಆದರೆ, ದುಬೈನಲ್ಲಿ ಕಂಡ ಸೋಲನ್ನು ಮರೆಯುವಂತಿಲ್ಲ.

ಆಸ್ಟ್ರೇಲಿಯಾದಲ್ಲಿ 2022ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕ್‌ ಗೆಲ್ಲಬಹುದಾದ ಪಂದ್ಯವನ್ನು ಕೈ ಚೆಲ್ಲಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕ್ಲಾಸಿಕ್ ಆಟದ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಈಗ ಟೀಮ್ ಇಂಡಿಯಾದ ಸವಾಲನ್ನು ಮೀರಿ ನಿಲ್ಲಲು ಪಾಕ್ ಪ್ಲ್ಯಾನ್ ಮಾಡಿಕೊಂಡಿದೆ.

Pakistan Prepares Well for T20 World Cup Master Plan Unveiled for Match Against Team India

ನಾಯಕನ ಬದಲಾವಣೆ

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಬಳಿಕ ಪಾಕಿಸ್ತಾನ ತಂಡದಲ್ಲಿ ಬದಲಾಣೆ ಕಂಡು ಬಂದಿತ್ತು. ಪಾಕ್‌ ಕಳಪೆ ಪ್ರದರ್ಶನದಿಂದ ಬಾಬಾರ್‌ ಅಜಂ ಕ್ಯಾಪ್ಟನ್ಸಿ ಕಸಿದುಕೊಂಡಿತ್ತು. ಅಲ್ಲದೆ ಮೂರು ಫಾರ್ಮೆಟ್‌ಗಳಿಗೆ ಮೂವರು ನಾಯಕರನ್ನು ನೇಮಕ ಮಾಡಿತ್ತು. ಆದರೆ ಈ ಹೊಸ ನಾಯಕರು ಸಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇದ್ದಾಗ, ಆಯ್ಕೆ ಸಮಿತಿ ಮತ್ತೆ ಹಳೆಯ ನಾಯಕನಿಗೆ ಮಣೆ ಹಾಕಿತು.

ಏನದು ಮಾಸ್ಟರ್‌ ಪ್ಲ್ಯಾನ್?

ಇದೀಗ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿದೆ. ಈ ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತಂಡ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ. ಆದರೆ ಟೀಮ್ ಇಂಡಿಯಾ ಆಟಗಾರರು ಐಪಿಎಲ್ ಆಡುವುದರಲ್ಲಿ ಫುಲ್ ಬ್ಯೂಸಿ ಆಗಿದ್ದಾರೆ. ಅಲ್ಲದೆ ಈ ಲೀಗ್‌ ಮೇಲೆ ಟೀಮ್ ಇಂಡಿಯಾ ಆಟಗಾರರು ಅವಲಂಬಿತರಾಗಿದ್ದಾರೆ. ಟೀಂ ಇಂಡಿಯಾ ವಿಶ್ವಕಪ್‌ಗೆ ಮೊದಲು ಯಾವುದೇ ತಂಡದೊಂದಿಗೆ ಸರಣಿಯನ್ನು ಆಡುವುದಿಲ್ಲ.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ 5 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಯು ಏಪ್ರಿಲ್ 18 ರಿಂದ ಪ್ರಾರಂಭವಾಗಲಿದೆ. ಪಾಕಿಸ್ತಾನ-ನ್ಯೂಜಿಲೆಂಡ್ ನಡುವಿನ ಪಂದ್ಯಗಳು ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ನಡೆಯಲಿವೆ. ಇದಾದ ಬಳಿಕ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಐರ್ಲೆಂಡ್ ಪ್ರವಾಸಕ್ಕೆ ತೆರಳಲಿದೆ.

Pakistan Prepares Well for T20 World Cup Master Plan Unveiled for Match Against Team India

ಪಾಕಿಸ್ತಾನ ಮತ್ತು ಐರ್ಲೆಂಡ್ ನಡುವೆ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಐರ್ಲೆಂಡ್ ಬಳಿಕ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ 4 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಈ 3 ಸರಣಿಗಳ ನಂತರ ಬಾಬರ್ ಅಜಮ್ ತಂಡ ಟಿ20 ವಿಶ್ವಕಪ್ ಟೂರ್ನಿಗೆ ಪ್ರವೇಶಿಸಲಿದೆ. ಈ ಮೂಲಕ ಸಾಲು ಸಾಲು ಪಂದ್ಯಗಳನ್ನು ಆಡಿ ಪಾಕ್‌ ಆಟಗಾರರು ಅದೇ ಫಾರ್ಮ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕೆ ಇಳಿಯಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಟಿ20 ವಿಶ್ವಕಪ್ ಜೂನ್ 2 ರಿಂದ ಪ್ರಾರಂಭವಾಗಲಿದೆ. ಟಿ 20 ವಿಶ್ವಕಪ್‌ಗಿಂತ ಮೊದಲು ಭಾರತ ಯಾವುದೇ ಸರಣಿಯನ್ನು ಆಡುತ್ತಿಲ್ಲ. ಆದರೆ, ಭಾರತೀಯ ಆಟಗಾರರು ಖಂಡಿತಾ ಐಪಿಎಲ್‌ನಲ್ಲಿ ಆಡುತ್ತಾರೆ. ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಭಾರತ ತಂಡದ ಎರಡನೇ ಪಂದ್ಯ ಇದಾಗಿದೆ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+