ಕೈಯಲ್ಲಿ ಕಾಸು ಇಲ್ಲದೆ ಪಾಕಿಸ್ತಾನ ಸರ್ಕಾರ ಏನ್ ಮಾಡಿದೆ ನೋಡಿ!
ಪಾಕಿಸ್ತಾನಿ ರಾಜಕಾರಣಿಗಳ ಪಾಡು ಹೇಗಾಗಿದೆ ಅಂದ್ರೆ, ಸರಿಯಾಗಿ ದೇಶ ನಡೆಸಲು ಆಗದೆ ಇಡೀ ದೇಶವನ್ನೇ ಅವರು ಬೀದಿಗೆ ತಂದಿದ್ದಾರೆ. ಹೀಗೆ ಪಾಕಿಸ್ತಾನದ ಆರ್ಥಿಕತೆ ಈಗ ಪೂರ್ತಿ ಬೀದಿಗೆ ಬಿದ್ದಂತಾಗಿದೆ. ಅಲ್ಲಿ ಜನ ತುತ್ತು ಅನ್ನಕ್ಕೂ ಕೊಲೆ ಮಾಡುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಹೀಗಿದ್ದಾಗಲೇ ಪಾಕಿಸ್ತಾನ ಸರ್ಕಾರ ಮಹತ್ವದ ಘೋಷಣೆ ಹೊರಡಿಸಿದೆ. ಈ ಮೂಲಕ ಪಾಕಿಸ್ತಾನದ ಆರ್ಥಿಕತೆ ಸರಿ ಮಾಡುತ್ತೇವೆ ಅಂತಾ ಹೊಸ ನಾಟ ಶುರುಮಾಡಿದೆ.
ಅಂದಹಾಗೆ ಮೊದಲೇ ಹೇಳಿದಂತೆ ಪಾಕಿಸ್ತಾನ ಈಗ ಮೈತುಂಬಾ ಸಾಲ ಮಾಡಿಕೊಂಡಿದ್ದು ವಿಲವಿಲ ಒದ್ದಾಡುತ್ತಿದೆ. ಇದೇ ಕಾರಣಕ್ಕೆ ಈಗಾಗಲೇ ಪಾಕಿಸ್ತಾನದ ಪ್ರಧಾನಿ, ಸಚಿವರು & ಅಧ್ಯಕ್ಷರು ಸಂಬಳ ಬೇಡ ಅಂತಿದ್ದಾರೆ. ಈ ಮೂಲಕ ಪಾಕಿಸ್ತಾನ ಸರ್ಕಾರ ನಡೆಸಲು ಅಲ್ಲಿ ರಾಜಕಾರಣಿಗಳು ಒದ್ದಾಡುತ್ತಿದ್ದಾರೆ. ಈ ಸಮಯದಲ್ಲೇ ವಿದೇಶಿ ಪ್ರವಾಸಕ್ಕೂ ಬ್ರೇಕ್ ಹಾಕಿ ದುಡ್ಡು ಉಳಿಸುತ್ತಿದೆ ಅಲ್ಲಿನ ಸರ್ಕಾರ. ಪರಿಸ್ಥಿತಿ ಹೀಗಿದ್ದಾಗ ಮತ್ತೊಂದು ಕಠಿಣ ನಿರ್ಧಾರ ಕೈಗೊಂಡಿದೆ ಪಾಕಿಸ್ತಾನ ಸರ್ಕಾರ!

ಲಕ್ಷ ಲಕ್ಷ ಕೋಟಿ ಸಾಲ!
ಪಾಕಿಸ್ತಾನ ತಲೆ ಮೇಲೆ ಲಕ್ಷಾಂತರ ಕೋಟಿ ರೂಪಾಯಿ ಸಾಲ ಇದ್ದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಸಮೇತ ಕಂಡ ಕಂಡ ಕಡೆ ಸಾಲ ಮಾಡಿದೆ ಪಾಕಿಸ್ತಾನ. ಅದರಲ್ಲೂ ಈ ಪೈಕಿ ಚೀನಾ ಬಳಿಯೂ ಸಾವಿರಾರು ಕೋಟಿ ಸಾಲ ಮಾಡಿಕೊಂಡು ಪಾಕಿಸ್ತಾನ ಒದ್ದಾಡಿದೆ.
ಹೀಗಿದ್ದಾಗ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು, ಅಧಿಕೃತ ಸರ್ಕಾರಿ ಕಾರ್ಯಕ್ರಮದಲ್ಲಿ ಕೆಂಪು ರತ್ನಗಂಬಳಿ ಬಳಸುವ ಪರಂಪರೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇದೀಗ ನಿಷೇಧ ಹೇರಿದ್ದಾರೆ. ಕೆಂಪು ರತ್ನಗಂಬಳಿಯನ್ನು, ಇನ್ನು ರಾಜತಾಂತ್ರಿಕ ಸ್ವಾಗತ ಕಾರ್ಯಕ್ರಮದ ವೇಳೆ ಮಾತ್ರ ಬಳಸಬೇಕಾಗಿದೆ. ಆದರೆ ಸಚಿವರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಸ್ವಾಗತ ಕೋರಲು, ರತ್ನಗಂಬಳಿ ಬಳಸುವಂತೆ ಇಲ್ಲವೆಂದು ಈಗ ಸೂಚನೆ ನೀಡಲಾಗಿದೆ.

ತುತ್ತು ಅನ್ನಕ್ಕೂ ತೀವ್ರ ಪರದಾಟ
ಪಾಕಿಸ್ತಾನ ಪರಿಸ್ಥಿತಿ ಕೈಮೀರಿ ಹೋಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನರಿಗೆ ಸೂಕ್ತ ಆಹಾರ ಕೂಡ ಸಿಗುತ್ತಿಲ್ಲ. ಹೀಗಾಗಿ ಅಲ್ಲಿನ ಜನರು ತುತ್ತು ಅನ್ನಕ್ಕೂ ಪ್ರತಿನಿತ್ಯ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನ ಸರ್ಕಾರ ಆರ್ಥಿಕ ಪರಿಸ್ಥಿತಿ ಸರಿ ಮಾಡಲು ಪರದಾಡುತ್ತಿದೆ. ಇದೇ ಕಾರಣಕ್ಕೆ ಹಲವು ಕ್ರಮಗಳನ್ನ ಕೈಗೊಂಡು, ಹಣ ವ್ಯರ್ಥವಾಗದ ರೀತಿ ಕಾನೂನನ್ನ ರೂಪಿಸುತ್ತಿದೆ. ಆದರೂ ಪಾಕಿಸ್ತಾನದ ಭ್ರಷ್ಟ ವ್ಯವಸ್ಥೆ ಹಣ ನುಂಗುತ್ತಲೇ ಇದೆ. ಸಾಮಾನ್ಯ ಜನರು ಪರದಾಡುತ್ತಿದ್ದು, ಪಾಕಿಸ್ತಾನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಒಟ್ನಲ್ಲಿ ಊರು ಕೊಳ್ಳೆ ಹೊಡೆದ ಮೇಲೆ, ಬೀಗ ಹಾಕಿದಂತೆ ಆಗಿದೆ ಪಾಕಿಸ್ತಾನದ ಪರಿಸ್ಥಿತಿ. ಯಾಕಂದ್ರೆ ಇಷ್ಟುದಿನ ಅಲ್ಲಿನ ರಾಜಕಾರಣಿಗಳೇ ವ್ಯವಸ್ಥಿತಿವಾಗಿ ಪಾಕಿಸ್ತಾನದ ಆರ್ಥಿಕತೆಯ ಬೀದಿಗೆ ತಂದಿದ್ದು, ಈಗ ಅದನ್ನ ರಕ್ಷಣೆ ಮಾಡುವ ನಾಟಕ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ತನ್ನದೇ ದಾರಿಯಲ್ಲಿ ಮುನ್ನುಗ್ಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಪಾಕಿಸ್ಥಾನ, ತೀವ್ರ ಆರ್ಥಿಕ ಸಂಕಷ್ಟದಲ್ಲಿ ಒದ್ದಾಡಲಿದೆ ಎಂಬ ಮಾತುಗಳನ್ನ ಆರ್ಥಿಕ ತಜ್ಞರು ಹೇಳ್ತಿದ್ದಾರೆ.












Click it and Unblock the Notifications