Daily Horoscope: ಈ ರಾಶಿಯವರಿಗೆ ವಿಶೇಷವಾಗಿರುವುದು ಇಂದಿನ ದಿನ, ಜೊತೆಗಿರುವುದು ಅದೃಷ್ಟ, ಆಗುವುದು ಧನಲಾಭ

ಮೇಷ ರಾಶಿ (Aries): ಇಂದು ಸಕಾರಾತ್ಮಕತೆ ಮತ್ತು ಹೊಸ ಉತ್ಸಾಹದಿಂದ ತುಂಬಿರುವ ದಿನವಾಗಿರುತ್ತದೆ. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಇರಿ. ಕುಟುಂಬ ಸದಸ್ಯರೊಂದಿಗೆ ಸಂತೋಷಕರ ಸಮಯವನ್ನು ಕಳೆಯುವಿರಿ. ಮಕ್ಕಳ ಭಾವನೆಯನ್ನು ಅರ್ಥ ಮಾಡಿಕೊಳ್ಳಿ.

ವೃಷಭ ರಾಶಿ (taurus) : ವ್ಯವಹಾರ ಮತ್ತು ಕೆಲಸದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಪ್ರೇಮ ಸಂಬಂಧಗಳಲ್ಲಿ ಮನಸ್ತಾಪ ಉಂಟಾಗಬಹುದು. ಪ್ರತಿ ಹಂತದಲ್ಲೂ ಮೇಲಧಿಕಾರಿಗಳು ಮತ್ತು ಸ್ನೇಹಿತರಿಂದ ಬೆಂಬಲ ಸಿಗುವುದು. ಸ್ನೇಹಿತರು ಸಹಾಯ ಕೇಳಿಕೊಂಡು ನಿಮ್ಮ ಬಳಿ ಬರುವರು.

Rashi Bhavishya

ಮಿಥುನ ರಾಶಿ (Gemini): ಇಂದು ಅದೃಷ್ಟ ನಿಮ್ಮ ಪರವಾಗಿ ಇರುವುದು. ಆಧ್ಯಾತ್ಮಿಕತೆಯತ್ತ ವಾಲುವಿರಿ. ಮನಸ್ಸಿನ ಶಾಂತಿ ಹೆಚ್ಚಾಗುವುದು. ಹೊಸ ಕೆಲಸವನ್ನು ಪ್ರಾರಂಭಿಸಲು ಮತ್ತು ಹೂಡಿಕೆ ಮಾಡಲು ಇಂದು ದಿನ ಅನುಕೂಲಕರವಾಗಿದೆ . ಹಣಕಾಸಿನ ಸ್ಥಿತಿ ಸುಸ್ಥಿರವಾಗಿರುವುದು.

ಕರ್ಕಾಟಕ ರಾಶಿ (Cancer):ಇಂದು ಅನಗತ್ಯ ವಾದಗಳಿಂದ ದೂರವಿರುವುದೇ ಒಳ್ಳೆಯದು. ನಿಮಗೆ ನೀಡಲಾದ ಎಲ್ಲಾ ಜವಾಬ್ದಾರಿಯನ್ನು ಸಂಪೂರ್ಣ ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ನಿರ್ವಹಿಸಿ. ಸ್ವಲ್ಪ ಸಮಯದಿಂದ ಕಾಡುತ್ತಿರುವ ಮಾನಸಿಕ ಒತ್ತಡ ಕ್ರಮೇಣ ಕಡಿಮೆಯಾಗುತ್ತದೆ. ಕಾನೂನು ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.

ಸಿಂಹ ರಾಶಿ (Leo): ಹೊಸ ಮನೆ, ಭೂಮಿ ಅಥವಾ ಆಸ್ತಿಯನ್ನು ಖರೀದಿಸುವ ಯೋಜನೆಗಳು ಇಂದು ಮುಂದುವರಿಯಬಹುದು. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಎದುರಾಗುವುದು. ಕುಟುಂಬ ಸದಸ್ಯರ ನಡುವೆ ಉಂಟಾಗುವ ಸಮಸ್ಯೆಯನ್ನು ಮಾತುಕತೆ ಮೂಲಕವೇ ಪರಿಹರಿಸಲು ಪ್ರಯತ್ನಿಸಿ.

ಕನ್ಯಾರಾಶಿ (Virgo): ಹೂಡಿಕೆ ಮಾಡಲು ಉತ್ತಮ ಅವಕಾಶಗಳು ಸಿಗಬಹುದು. ಕಠಿಣ ಪರಿಶ್ರಮದ ಫಲ ಸಿಗುವುದು. ಕೆಲಸದ ಬಗ್ಗೆ ಕುಟುಂಬದ ಸದಸ್ಯರೊಂದಿಗೆ ವಾದ ಏರ್ಪಡುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಕ್ಕಳ ಯಶಸ್ಸು ಮತ್ತು ಪ್ರಗತಿ ಸಂತೋಷ ತರುವುದು.

ತುಲಾ ರಾಶಿ (Libra): ಆತ್ಮವಿಶ್ವಾಸದಿಂದ ಕೂಡಿರುವ ದಿನವಾಗಿರುತ್ತದೆ. ಹಠಾತ್ ಖರ್ಚು ಎದುರಾಗುವುದು. ಇದರಿಂದ ಹಣದ ಲೆಕ್ಕಾಚಾರದಲ್ಲಿ ಸ್ವಲ್ಪ ಏರುಪೇರಾಗುವುದು. ಆದ್ದರಿಂದ ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಮಾತನಾಡುವಾಗ ಪದ ಬಳಕೆ ಬಗ್ಗೆ ಎಚ್ಚರದಿಂದ ಇರಿ.

ವೃಶ್ಚಿಕ ರಾಶಿ (Scorpio): ಭಾವನೆಗೆ ಕಟ್ಟು ಬಿದ್ದು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ಅಹಂಕಾರ ಮತ್ತು ಹಠವನ್ನು ಕಡಿಮೆ ಮಾಡಿ. ಸಾಲ ನೀಡಿದ ಹಣ, ವ್ಯವಹಾರದಲ್ಲಿ ಸಿಲುಕಿಕೊಂಡಿರುವ ಹಣ ಮತ್ತೆ ಕೈ ಸೇರುವುದು. ಇದರಿಂದ ಹಣಕಾಸಿನ ಸ್ಥಿತಿ ಸುಧಾರಿಸುವುದು.

ಧನು ರಾಶಿ (Sagitarius): ಹೊಸ ಜನರ ಪರಿಚಯವಾಗುವುದು. ಈ ಪರಿಚಯ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗುವುದು. ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡುವ ಆಲೋಚನೆ ಪ್ರಯೋಜನಕಾರಿಯಾಗಿರಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಪಡಬೇಡಿ. ಕೆಲಸಗಳನ್ನು ಸರಿಯಾದ ಸಮಯಕ್ಕೆ ಪೂರೈಸಿ.

ಮಕರ ರಾಶಿ (Capricorn): ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ತಾಳ್ಮೆಯಿಂದ ಇರುವುದು ಮುಖ್ಯ. ಬೇಡದ ವಿಚಾರಗಳಲ್ಲಿ ಯಾರಿಗೂ ಸಲಹೆ ನೀಡಬೇಡಿ. ಸಾಲ ನೀಡಿರುವ ಹಣವನ್ನು ವಾಪಸ್‌ ಪಡೆಯುವ ಬಗ್ಗೆ ಚರ್ಚೆ ನಡೆಯಬಹುದು. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಮನದ ಆಸೆ ಈಡೇರಬಹುದು.

ಕುಂಭ ರಾಶಿ (Aquarius): ಆತ್ಮವಿಶ್ವಾಸದೊಂದಿಗೆ ದಿನ ಆರಂಭವಾಗುವುದು. ಜನರು ನಿಮ್ಮ ಮಾತುಗಳಿಂದ ಆಕರ್ಷಿತರಾಗುತ್ತಾರೆ. ಮಾನಸಿಕ ಒತ್ತಡ ಕಡಿಮೆಯಾಗುವುದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಬಹುದಿನಗಳ ಆಸೆಯೂ ಇಂದು ಈಡೇರುವ ಲಕ್ಷಣಗಳಿವೆ.

ಮೀನ ರಾಶಿ (Pisces): ಉದ್ಯೋಗ ಹುಡುಕುತ್ತಿರುವವರಿಗೆ ಹೊಸ ಭರವಸೆ ತರುತ್ತದೆ. ಮಾತಿನ ಮೇಲೆ ನಿಯಂತ್ರಣವಿರಲಿ. ವೆಚ್ಚಗಳನ್ನು ನಿಯಂತ್ರಿಸಲು ಬಜೆಟ್ ಅನ್ನು ನಿರ್ವಹಿಸುವುದು ಅತ್ಯಗತ್ಯ. ವಿದೇಶಗಳಿಗೆ ಸಂಬಂಧಿಸಿದ ವ್ಯವಹಾರ ಅಥವಾ ಕೆಲಸದಲ್ಲಿ ಲಾಭವಾಗುವ ಸಾಧ್ಯತೆಯಿದೆ.ಹೊಸ ಜವಾಬ್ದಾರಿ ಹೆಗಲೇರುವುದು.

(ಬರಹ: ರಂಜಿತಾ ಆರ್.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+