Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜುಲೈ 20 ಸೋಮವಾರ ಸಂಜೆವರೆಗೂ ವಿದ್ಯುತ್ ವ್ಯತ್ಯಯ
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಜುಲೈ 20 ಸೋಮವಾರ ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕಡಿತ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11 ಕೆ.ವಿ ವೆಲ್ಕಾಸ್ಟ್ ಉಪ-ಕೇಂದ್ರ ವ್ಯಾಪ್ತಿಯ ಹಲವೆಡೆ ಸೋಮವಾರ (ಜುಲೈ 20) ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಎಲ್ಲೆಲ್ಲಿ ಕರೆಂಟ್ ಕಟ್?
ರವೀಂದ್ರ ನಗರ, ಪ್ರಸನ್ನಾಥ ನಗರ, ಸಂತೋಷ್ ನಗರ, ಏರ್‌ಫೋರ್ಸ್ ಜಾಲಹಳ್ಳಿ ವೆಸ್ಟ್, ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ತ್ರಿವೇಣಿ, ಎಚ್ಎಚ್‌ವಿ, ಡಿಎಂಜಿ, ಕೃಷ್ಣ ಫ್ಯಾಬ್ರಿಕೇಷನ್ಸ್, ಜೆಮಿನಿ ಇಂಡಸ್ಟ್ರೀಸ್, ರವಿ-ಕರ್ಲೋಸ್ಕರ್ ಆಸ್ಪತ್ರೆ, ಜಾನ್ ಕ್ರೇನ್, ಎಂಎಸ್ಐಎಲ್ ಪ್ರಿಂಟಿಂಗ್ ಪ್ರೆಸ್, ಎಸ್.ರಮೇಶ್ ರಸ್ತೆ, ವಿಪ್ರೋ ವೆಲ್ಕಾಸ್ಟ್ ಫ್ಯಾಕ್ಟರಿ, ಐಟಿಸಿ, ವೋಲ್ವೋ, ಏವರಿ ಡೆನ್ನಿಸನ್, ಹಿಟಾಚಿ ಇಂಡಸ್ಟ್ರೀಸ್, ಗೀತಾ ಟಿಂಬರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯ
ಅಲ್ಲದೆ, 66/11 ಕೆ.ವಿ ಬ್ಯಾಟರಾಯನಪುರ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜುಲೈ 20ರ ಸೋಮವಾರ ಬೆಳಗ್ಗೆ 11ಗಂಟೆಯಿಂದ ಸಂಜೆ 4ರ ವರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಎಲ್ ಅಂಡ್ ಟಿ ಅಪಾರ್ಟ್‌ಮೆಂಟ್, ಯಶೋಧನಗರ, ಜಕ್ಕೂರು ಪ್ಲಾಂಟೇಶನ್, ಸೆಂಚುರಿ ಅಪಾರ್ಟ್‌ಮೆಂಟ್ ಬ್ಯಾಟರಾಯನಪುರ, ಸ್ಪಾರ್ಕಲ್ ಒನ್ ಮಾಲ್, ಅಮೃತಹಳ್ಳಿ, ಸಹಕಾರ ನಗರ ಜಿ ಬ್ಲಾಕ್, ಶಬರಿನಗರ, ಕೆನರಾ ಬ್ಯಾಂಕ್ ಲೇಔಟ್, ಧನಲಕ್ಷ್ಮಿ ಲೇಔಟ್, ತಿಂಡ್ಲು ಮುಖ್ಯರಸ್ತೆ, ಸರ್ ಎಂವಿ ಲೇಔಟ್, ತಿ೦ಡ್ಲು ವಿಲೇಜ್, ಸಪ್ತಗಿರಿ ಲೇಔಟ್, ಜ್ಞಾನೇಶ್ವರಿ ಲೇಔಟ್, ಗುರುದರ್ಶನ ಲೇಔಟ್, ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ವೃತ್ತ, ಎಲ್ & ಜಿ ಎನ್‌ಕ್ಲೇವ್, ಬಸವ ಸಮಿತಿ ಮತ್ತು ಸುತ್ತಮುತ್ತಲಿನ ಪ್ರದೇಶ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಮಾಹಿತಿ ನೀಡಿದೆ.
ಭಾನುವಾರ ಎಲ್ಲೆಲ್ಲಿ ಕರೆಂಟ್ ಕಟ್?
ಇನ್ನೂ ಇಂದು (ಭಾನುವಾರ, ಜುಲೈ 19) ಲೀಲಾ ವೆಂಚ್ಯೂರ್ ಸ್ಟೇಷನ್, ಪೀಣ್ಯ ಸಬ್‌ಸ್ಟೇಷನ್, ಬಾಗಮನೆ ಟೆಕ್‌ಪಾರ್ಕ್ ಸ್ಟೇಷನ್‌ನಲ್ಲಿ ತುರ್ತು ಕಾಮಗಾರಿ ನಡೆಯಲಿದೆ. ಆದ್ದರಿಂದ ಈ ಭಾಗಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4:30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಸ್ಕಾಂನಿಂದ ಮಹತ್ವದ ಸಲಹೆ
ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆಯೋ ಅಂತಹ ಪ್ರದೇಶಗಳ ನಿವಾಸಿಗಳು ಮುಂಚಿತವಾಗಿ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಬ್ಯಾಟರಿ ಸೇರಿದಂತೆ ಇನ್ನಿರತೆ ಚಾರ್ಜಿಂಗ್ ಸಾಧನಗಳನ್ನು ಜಾರ್ಜ್ ಮಾಡಿಟ್ಟುಕೊಳ್ಳುವುದು ಉತ್ತಮ ಎಂದು ಮಹತ್ವದ ಸಲಹೆ ನೀಡಿದೆ. ಒಟ್ಟಿನಲ್ಲಿ ಹೇಳುವುದಾದರೆ ಬೆಸ್ಕಾಂ ಹೀಗೆ ವಿದ್ಯುತ್ ಪೂರೈಕೆ ವ್ಯತ್ಯಯ ಆಗುವ ಸ್ಥಳಗಳಲ್ಲಿ ಒಂದು ದಿನದ ಮುಂಚಿತವಾಗಿ ಈ ಸಲಹೆಯನ್ನು ನೀಡುತ್ತಲೇ ಬಂದಿದೆ. ಅಲ್ಲದೆ, ಸಾರ್ವಜನಿಕರು ಹೆಚ್ಚಿನ ಮಾಹಿತಿಹಾಗಿ ಸಹಾಯವಾಣಿಗೆ ಕರೆ ಮಾಡಬಹುದು ಅಂತಲೂ ತಿಳಿಸುತ್ತಲಿರುತ್ತದೆ.












Click it and Unblock the Notifications