ಮಗಳು ಆರತಿ ಎತ್ತಿದ್ದಕ್ಕೆ ಟಿವಿ ಒಡೆದು ಹಾಕಿದ ಪಾಕ್ ಕ್ರಿಕೆಟಿಗ

ಇಸ್ಲಾಮಾಬಾದ್, ಡಿಸೆಂಬರ್ 31: ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತದ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಸೋತಾಗ ಅಲ್ಲಿಯ ಕ್ರೀಡಾ ಪ್ರೇಮಿಗಳು ಟಿವಿ ಒಡೆದು ಹಾಕುವುದು ಸಾಮಾನ್ಯ.

ಈಗ ಅಲ್ಲಿಯ ಕೋಮುವಾದಿ ಕ್ರಿಕೆಟಿಗರು ಮಗಳು ಆರತಿ ಎತ್ತಿದಳೆಂದು ಟಿವಿ ಒಡೆದು ಹಾಕಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅದರಲ್ಲೂ ವಿಷಯ ಸಿಕ್ಕಾಗಲೆಲ್ಲಾ ಭಾರತದ ವಿರುದ್ಧ ಕಿಡಿ ಕಾರುವ ಹಾಗೂ ಬೋಧನೆ ಮಾಡುವ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಸುದ್ದಿಯಲ್ಲಿದ್ದಾರೆ.

afridi

ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಾಹಿದ್ ಅಫ್ರಿದಿ ಈ ಹೇಳಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಹಿರಿಯ ಲೇಖಕ ಫತಾಹ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

'ಸ್ಟಾರ್‌ಪ್ಲಸ್‌ನಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ದಾರಾವಾಹಿಯನ್ನು ಪತ್ನಿ ನೋಡುತ್ತಿದ್ದಳು,ಯಾವುದೇ ಕಾರಣಕ್ಕೂ ಮಕ್ಕಳೊಂದಿಗೆ ದಾರಾವಾಹಿ ವೀಕ್ಷಿಸದಂತೆ ನಾನು ಎಚ್ಚರಿಸಿದ್ದೆ.

ಆದಾಗ್ಯೂ ನನ್ನ ಮಗಳು ದಾರವಾಹಿ ನೋಡಿದ್ದಳು ಎನಿಸುತ್ತದೆ.ಇದ್ದಕ್ಕಿದ್ದಂತೆ ಒಂದು ದಿನ ನನ್ನ ಮಗಳು ಹಿಂದೂ ಸಂಪ್ರದಾಯದಂತೆ ಆರತಿ ಎತ್ತುತ್ತಿದ್ದಳು. ಇದರಿಂದ ಕೋಪಗೊಂಡ ನಾನು ಟಿವಿಯನ್ನು ಗೋಡೆಗೆ ಕುಟ್ಟಿ ಒಡೆದು ಹಾಕಿದೆ'' ಎಂದು ಹೇಳಿದ್ದಾರೆ.

ಈಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿ ಹಿಂದೂ ಕ್ರಿಕೆಟಿಗ ಧ್ಯಾನಿಶ್ ಕನೇರಿಯಾಗೆ ಕಿರುಕುಳ ನೀಡಲಾಗಿತ್ತು ಎನ್ನುವ ಆರೋಪವನ್ನು ಶೋಯೆಬ್ ಅಕ್ತರ್ ಮಾಡಿರುವ ಬೆನ್ನಲ್ಲೇ ಈಗ ಹೊಸ ವಿವಾದ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+