ಸೋನು ಶ್ರೀನಿವಾಸ್ ಗೌಡ ಪ್ರಕಾರ ಎಲ್ಲರೂ ಒಮ್ಮೆ ಜೈಲಿಗೆ ಹೋಗಿ ಬರಬೇಕಂತೆ
ಸೋನು ಶ್ರೀನಿವಾಸ್ ಗೌಡ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದು, ಕೆಲವು ದಿನಗಳ ಹಿಂದೆ ಮಗು ದತ್ತು ಪಡೆದ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದರು. ಇದೀಗ ಜೈಲಿನಿಂದಲು ಹೊರಗೆ ಬಂದಿರುವ ಸೋನು ಶ್ರೀನಿವಾಸ್ ಗೌಡ, ತಮ್ಮ ಜೈಲಿನ ಅನುಭವ ಹಂಚಿಕೊಂಡು ಒಂದು ಸಲಹೆ ನೀಡಿದ್ದಾರೆ. ಅದು ಏನೆಂದರೆ ಸೋನು ಶ್ರೀನಿವಾಸ್ ಗೌಡ ಪ್ರಕಾರ ಎಲ್ಲರೂ ಒಮ್ಮೆ ಜೈಲಿಗೆ ಹೋಗಿ ಬರಬೇಕಂತೆ! ಹಾಗಾದ್ರೆ ಸೋನು ಶ್ರೀನಿವಾಸ್ ಗೌಡ, ಹಿಂಗೆ ಹೇಳಿದ್ದು ಯಾಕೆ?
ಹೌದು, ಸೋನು ಶ್ರೀನಿವಾಸ್ ಗೌಡ ಜೈಲಿನಿಂದ ಹೊರ ಬಂದ ತಕ್ಷಣ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿದೆ. ಸೋನು ಶ್ರೀನಿವಾಸ್ ಗೌಡ ಮಗು ದತ್ತು ಪ್ರಕರಣದಲ್ಲಿ ಜೈಲಿಗೆ ಹೋದಾಗ, ಇದೇ ರೀತಿಯಲ್ಲಿ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿದ್ದವು. ಇದೀಗ ಸೋನು ಗೌಡ ಜೈಲಿನಿಂದ ಹೊರ ಬಂದ ನಂತರ ಕೂಡ, ಸೋನು ಶ್ರೀನಿವಾಸ್ ಗೌಡ ವಿಚಾರ ಸುದ್ದಿಯಲ್ಲಿ ಇದೆ. ಅದರಲ್ಲೂ ಜೈಲಿನಲ್ಲಿ ಸೋನು ಶ್ರೀನಿವಾಸ್ ಗೌಡ ಅನುಭವಿಸಿದ ಕಷ್ಟಗಳ ಬಗ್ಗೆ ಆಕೆ ಖುದ್ದಾಗಿ ಮಾತನಾಡಿದ್ದಾರೆ. ಇದರ ಜೊತೆಗೆ ಎಲ್ಲರೂ ಜೈಲಿಗೆ ಹೋಗಿ, ಒಮ್ಮೆ ಅನುಭವ ಪಡೆಯಬೇಕು ಎಂದಿರುವ ಡೈಲಾಗ್ ಕೂಡ ಇದೀಗ ವೈರಲ್ ಆಗುತ್ತಿದೆ.

ಜೈಲಿನಲ್ಲಿ ಸೋನುಗೆ ಏನು ಊಟ?
ಸೋನು ಶ್ರೀನಿವಾಸ್ ಗೌಡ ಜೈಲಿನಿಂದ ಹೊರಗೆ ಬಂದ ನಂತರ ಖಾಸಗಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ತಮಗೆ ಜೈಲಿನಲ್ಲಿ ವಿಚಿತ್ರ ಅನುಭವ ಆಗಿತ್ತು, ಅಲ್ಲದೆ ಜೈಲಿನಲ್ಲಿ ಊಟಕ್ಕೆ ತುಂಬಾ ದೊಡ್ಡ ಸಮಸ್ಯೆ ಇದೆ. ಅಲ್ಲಿ ಡಿಪೋ ಅಕ್ಕಿ ಅಂದರೆ ನ್ಯಾಯಬೆಲೆ ಅಕ್ಕಿ ಊಟಕ್ಕೆ ನೀಡುತ್ತಾರೆ. ಹೀಗಾಗಿ ಅಲ್ಲಿನ ಊಟ ಮಾಡುವುದಕ್ಕೆ ಕಷ್ಟ ಆಗುತ್ತೆ. ನನಗೆ ಅಲ್ಲಿ ಚಪಾತಿ ಮಾತ್ರ ತಿನ್ನಲು ಆಗುತ್ತಿತ್ತು, ನನ್ನ ಜೊತೆಗೆ ಇದ್ದವರು ಕೂಡ ನನಗೆ ಸಹಾಯವನ್ನ ಮಾಡಿದ್ದರು ಎಂದು ಜೈಲಿನ ಬಗ್ಗೆ ತಿಳಿಸಿದ್ದಾರೆ ಸೋನು ಶ್ರೀನಿವಾಸ್ ಗೌಡ.
ಜೈಲಿಗೆ ಯಾಕೆ ಹೋಗಬೇಕು?
ಹಾಗೇ ಇದೇ ಸಮಯದಲ್ಲಿ, ಜೈಲಿನ ಅನುಭವವನ್ನ ಎಲ್ಲರೂ ಜೀವನದಲ್ಲಿ ಒಮ್ಮೆಯಾದ್ರು ಪಡೆಯಬೇಕು ಎಂಬ ಸಲಹೆ ನೀಡಿದ್ದಾರೆ. ಈ ಬಗ್ಗೆ ಚರ್ಚೆ ಶುರುವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನೆಟ್ಟಿಗರು ವಿಚಿತ್ರ ವಿಚಿತ್ರ ಕಮೆಂಟ್ ಹಾಕುತ್ತಿದ್ದಾರೆ. ಕೆಲವರು, ಈ ವಿಚಾರದಲ್ಲಿ ಸೋನು ಪರ ನಿಂತಿದ್ದಾರೆ. ಮತ್ತೆ ಕೆಲವರು ಸೋನು ಹೇಳಿದ ಮಾತನ್ನೇ ಟ್ರೋಲ್ ಮಾಡುತ್ತಿದ್ದಾರೆ.
ಪ್ರಕರಣ ಶುರುವಾಗಿದ್ದು ಹೇಗೆ?
ಸೋನು ಶ್ರೀನಿವಾಸ್ ಗೌಡ ಬರೀ ರೀಲ್ಸ್ ಮಾಡ್ಕೊಂಡು ಇದ್ದಿದ್ದರೆ ಏನೂ ಆಗುತ್ತಿರಲಿಲ್ಲ ಏನೊ. ಆದ್ರೆ ಈ ನಡುವೆ ತನ್ನದೆ ಒಂದು ಯುಟ್ಯೂಬ್ ಚಾನೆಲ್ ತೆರೆದು, ಅದರಲ್ಲಿ ಪ್ರತಿನಿತ್ಯವು ವ್ಲಾಗ್ಸ್ ಹಾಕುತ್ತಿದ್ದ ಸೋನು ಶ್ರೀನಿವಾಸ್ ಗೌಡಗೆ ಒಂದು ಐಡಿಯಾ ಹೊಳೆದಿತ್ತು. ಹೀಗಾಗಿ ಹೆಣ್ಣು ಮಗು ಒಂದನ್ನ ದತ್ತು ಪಡೆದಿದ್ದೇನೆ ಅಂತಾ, ಊರು ತುಂಬಾ ಹೇಳಿಕೊಂಡು ಬಂದು ಅದನ್ನೂ ವ್ಲಾಗ್ ಮಾಡಿ ಸೋನು ತಾನೇ ಹಳ್ಳಕ್ಕೆ ಬಿದ್ದಂತೆ ಆಗಿತ್ತು. ಇದೇ ಕಾರಣಕ್ಕೆ, ಅರೆಸ್ಟ್ ಆಗಿ ಜೈಲಿಗೆ ಕೂಡ ಸೇರಿದ್ದರು ಸೋನು ಶ್ರೀನಿವಾಸ್ ಗೌಡ. ಇದೀಗ ರಿಲೀಸ್ ಆದ ನಂತರ ಸೋನು ಮಾತನಾಡಿದ ವಿಡಿಯೋಗಳು ವೈರಲ್ ಆಗುತ್ತಿದ್ದು, ಸೋನು ಶ್ರೀನಿವಾಸ್ ಗೌಡ ನೀಡಿರುವ ಹೇಳಿಕೆ ಕುರಿತು ಭರ್ಜರಿ ಚರ್ಚೆ ಆರಂಭವಾಗಿದೆ.
ಅಂತೂ.. ಇಂತೂ.. ಸೋನು ರಿಲೀಸ್!
ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆಗಿದ್ದ ಸುದ್ದಿ ದೇಶಾದ್ಯಂತ ಸದ್ದು ಮಾಡಿತ್ತು ಬಾಲಕಿಯನ್ನ ರಾಯಚೂರಿನ ಮಸ್ಕಿ ತಾಲೂಕು ಕಾಚಾಪುರ ಗ್ರಾಮದಿಂದ, ಸೋನು ಕರೆದುಕೊಂಡು ಬಂದಿದ್ರು ಎನ್ನಲಾಗಿತ್ತು. ಬಾಲಕಿ ದತ್ತು ಪಡೆಯುವಲ್ಲಿ, ಯಾವುದೇ ರೀತಿ ಕಾನೂನು ಪಾಲನೆ ಮಾಡಿರದ ಸೋನು ಗೌಡ ಪೊಲೀಸರ ಅತಿಥಿಯಾದರು. ಸ್ಥಳ ಮಹಜರ್ ಮಾಡಲು ಬಾಲಕಿ ಹುಟ್ಟೂರಿಗೂ ಸೋನು ಅವರನ್ನು ಕರೆದುಕೊಂಡು ಹೋಗಿ ಬಂದಿದ್ದರು ಪೊಲೀಸರು. ಆ ನಂತರ, ಸೋನುಗೆ ಪರಪ್ಪನ ಅಗ್ರಹಾರ ದರ್ಶನ ಆಗಿತ್ತು. ಈಗ ರಿಲೀಸ್ ಆಗಿ ಮನೆ ಸೇರಿದ್ದು, ತಾವು ಜೈಲು ಸೇರಿ ಅನುಭವಿಸಿದ ಕಷ್ಟಗಳನ್ನ ಬಿಡಿಸಿಟ್ಟಿದ್ದಾರೆ.












Click it and Unblock the Notifications