ಹನೂರು: ಮತದಾರರ ಪಟ್ಟಿಯಲ್ಲಿ ಹೆಸರಿಲ್ಲವೆಂದು ಬೀದಿಗಿಳಿದ ವ್ಯಕ್ತಿ
ಚಾಮರಾಜನಗರ, ಏಪ್ರಿಲ್, 24: ಮತದಾರರ ಪಟ್ಟಿಯಿಂದ ತನ್ನ ಹೆಸರು ಕೈ ಬಿಟ್ಟಿರುವುದಕ್ಕೆ ಆಕ್ರೋಶಗೊಂಡು ಗ್ರಾಮ ಪಂಚಾಯತಿ ಮುಂದೆ ಇಡೀ ಕುಟುಂಬ ಪ್ರತಿಭಟನೆ ನಡೆಸುತ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಳಿಮೇಡು ಗ್ರಾಮದ ಮರುದ ಎಂಬವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಮತದಾನ ಮಾಡಲು ಊರಿಗೆ ಬಂದ ವೇಳೆ ಈ ವಿಚಾರ ಗಮನಕ್ಕೆ ಬಂದಿದೆ. ಏಕಾಏಕಿ ಹೆಸರನ್ನು ಕೈ ಬಿಟ್ಟಿರುವುದರಿಂದ ಕುಪಿತಗೊಂಡ ಮರುದ ಪತ್ನಿ, ಮಗು ಹಾಗೂ ತಾಯಿ ಜೊತೆ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯ ಕಣ್ತಪ್ಪಿನಿಂದ ಹೆಸರು ಅಳಿಸಲಾಗಿದೆ ಎಂದು ಸಬೂಬು ಕೊಡುತ್ತಿದ್ದಾರೆ. ಆದರೆ, ನನ್ನ ಮತ-ನನ್ನ ಹಕ್ಕು, ಮತದಾನ ಮಾಡಲೆಂದೇ ಸಾವಿರಾರು ರೂಪಾಯಿ ವ್ಯಯಿಸಿ ಊರಿಗೆ ಬಂದಿದ್ದೇನೆ. ಮತದಾನ ನನ್ನ ಹಕ್ಕಾಗಿದ್ದು, ನನಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಮರುದ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications