ಭಾರತದ ಶತ್ರು ದೇಶಕ್ಕೆ 14ನೇ ಅಧ್ಯಕ್ಷರ ಆಯ್ಕೆ!

ಭಾರತ ಈಗ ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಜಗತ್ತಿನ ಟಾಪ್ 5 ಆರ್ಥಿಕ ರಾಷ್ಟ್ರಗಳ ಸಾಲಿನಲ್ಲಿ ಇದೀಗ ಭಾರತ ಕೂಡ ಒಂದಾಗಿದೆ. ಅದರಲ್ಲೂ ಇನ್ನೇನು ಕೆಲವೇ ವರ್ಷದಲ್ಲಿ, ಟಾಪ್ 3 ಸ್ಥಾನಕ್ಕೂ ಭಾರತ ಎಂಟ್ರಿ ಕೊಡಲಿದೆ ಎನ್ನಲಾಗುತ್ತಿದೆ. ಈ ಖುಷಿಯ ನಡುವೆ, ಭಾರತದಲ್ಲಿ ಚುನಾವಣೆ ಕೂಡ ಎದುರಾಗಿದೆ. ಅದೇ ರೀತಿ ಭಾರತದ ಶತ್ರು ದೇಶದಲ್ಲಿ ಕೂಡ ಚುನಾವಣೆ ನಡೆದಿದ್ದು, 14ನೇ ಅಧ್ಯಕ್ಷರ ಆಯ್ಕೆ ಕೂಡ ನಡೆದಿದೆ!

ಹೌದು, ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಹೊಸ ಪ್ರಧಾನಿ ಆಯ್ಕೆ ಮಾಡಲಾಗಿತ್ತು. ಪಾಕಿಸ್ತಾನದ ಚುನಾವಣೆಯೇ ದೊಡ್ಡ ಜೋಕ್ ಆಗಿತ್ತು. ಹೀಗೆ ಎದ್ದೂ ಬಿದ್ದು ಚುನಾವಣೆ ಮುಗಿಸಿರುವ ಪಾಕಿಸ್ತಾನ ಹೊಸ ಪ್ರಧಾನಿ ಆಯ್ಕೆ ಮಾಡಿ, ಸಮ್ಮಿಶ್ರ ಸರ್ಕಾರ ಕೂಡ ರಚನೆ ಮಾಡಿತ್ತು. ಈ ಬೆನ್ನಲ್ಲೇ ಇದೀಗ ಹೊಸ ಅಧ್ಯಕ್ಷರ ಆಯ್ಕೆಯನ್ನೂ ಮಾಡಿದೆ. ಹಾಗಾದರೆ ಈಗ ಪಾಕ್‌ನ ಹೊಸ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು ಯಾರು? ಹೊಸ ಅಧ್ಯಕ್ಷರ ಆಯ್ಕೆಗೆ ಬಿದ್ದ ಮತಗಳು ಎಷ್ಟು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

Asif Ali Zardari Has Been Elected As Pakistan s New President For 2nd Time

ಸಮ್ಮಿಶ್ರ ಸರ್ಕಾರಕ್ಕೆ ಬಂಪರ್?

ಅಷ್ಟಕ್ಕೂ ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಈಗ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಆಯ್ಕೆ ಆಗಿದ್ದಾರೆ. ಜರ್ದಾರಿ 2ನೇ ಬಾರಿ ಈ ಸ್ಥಾನಕ್ಕೆ ಆಯ್ಕೆಯಾಗಿದ್ದು ವಿಶೇಷ. ಇದೀಗ 68 ವರ್ಷ ವಯಸ್ಸಿನವರಾದ ಜರ್ದಾರಿ ಅವರು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಹಾಗೂ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್‌ (ಪಿಎಂಎಲ್‌-ಎನ್‌) ಪಕ್ಷದ ಜಂಟಿ ಅಭ್ಯರ್ಥಿ ಆಗಿ ಪಾಕಿಸ್ತಾನದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಈಗ ಎರಡೂ ಪಕ್ಷಗಳು ಜಂಟಿಯಾಗಿ ಸರ್ಕಾರ ರಚಿಸಿದ್ದು, ಇದೀಗ ಪಾಕ್ ರಾಷ್ಟ್ರಪತಿ ಆಯ್ಕೆಯಲ್ಲಿ ಕೂಡ ಕೈಜೋಡಿಸಿವೆ.

2008 ರಿಂದ 2013 ರವರೆಗೂ...

ಒಂದು ಕಡೆ ಜರ್ದಾರಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದಂತೆ, ಇನ್ನೊಂದು ಕಡೆಗೆ ಸುನ್ನಿ ಇತ್ತೇಹಾದ್‌ ಕೌನ್ಸಿಲ್‌ ಅಭ್ಯರ್ಥಿಯಾಗಿ 75 ವರ್ಷದ ಮಹಮ್ಮದ್‌ ಖಾನ್‌ ಅಚಕ್‌ಜಾಯ್‌ ಅವರೂ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ಇದ್ದರು. ಇಂದು ನಡೆದ ಈ ಚುನಾವಣೆಯಲ್ಲಿ ಜರ್ದಾರಿ ಅವರು 255 ಮತವನ್ನು ಪಡೆದರೆ, ಪ್ರತಿಸ್ಪರ್ಧಿ ಅಚಕ್‌ಜಾಯ್‌ 119 ಮತ ಪಡೆದರು ಅಂತಾ ಪಾಕಿಸ್ತಾನದ ಮಾಧ್ಯಮಗಳು ಮಾಹಿತಿ ನೀಡಿವೆ. ಜರ್ದಾರಿ ಅವರು ಮಾಜಿ ಪ್ರಧಾನಿ & ದಿವಂಗತ ಬೆನಜೀರ್ ಭುಟ್ಟೋ ಅವರ ಗಂಡ. ಈ ಹಿಂದೆಯೂ ಜರ್ದಾರಿ ಅವರು ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. 2008 ರಿಂದ 2013 ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಜರ್ದಾರಿ.

Asif Ali Zardari Has Been Elected As Pakistan s New President For 2nd Time

ಮತ್ತೊಂದು ಕಡೆ ಇದೀಗ ಪಾಕಿಸ್ತಾನದಲ್ಲಿ ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದ ಅರಿಫ್‌ ಅಲ್ವಿ ಅವರ ಅವಧಿಯು ಮುಕ್ತಾಯವಾಗಿತ್ತು. ಪಾಕಿಸ್ತಾನದಲ್ಲಿ ಅಧ್ಯಕ್ಷ ಅಂದ್ರೆ ಅಲ್ಲಿನ ರಾಷ್ಟ್ರಪತಿ ಅಧಿಕಾರ ಅವಧಿ 5 ವರ್ಷ. ಹೀಗೆ ಹಾಲಿ ಅಧ್ಯಕ್ಷ ಅರಿಫ್‌ ಅಲ್ವಿ ಅವರ ಅಧಿಕಾರ ಅವಧಿಯು ಕಳೆದ ವರ್ಷವೇ ಮುಗಿದಿತ್ತು. ಆದ್ರೆ ನೂತನ ಶಾಸನ ಸಭೆ ರಚನೆಯಾಗದ ಕಾರಣ ಅಧಿಕಾರದಲ್ಲಿ ಮುಂದುವರಿಕೆ ಮಾಡಲಾಗಿತ್ತು. ಇತ್ತೀಚೆಗೆ ಪಾಕಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯಾಗಿದೆ, ಹೀಗಾಗಿ ಈಗ ಹೊಸ ಅಧ್ಯಕ್ಷರನ್ನೂ ಆಯ್ಕೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+