• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕ್‌ ಕ್ರಿಕೆಟ್ ತಂಡದ ಹಿಂದು ಆಟಗಾರನಿಗೆ ಕಿರುಕುಳ: ಶೋಯೆಬ್ ಅಖ್ತರ್

|
   Danish Kaneria on ill-treatment in Pakistan for being hindu Says Shoaib Akhtar | SHOAIB | DANESH

   ಇಸ್ಲಾಮಾಬಾದ್, ಡಿಸೆಂಬರ್ 27: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿದ್ದ ಹಿಂದು ಆಟಗಾರ ದಾನಿಶ್ ಕನೆರಿಯಾ ಗೆ ಸಹ ಆಟಗಾರರು ಕಿರುಕುಳ ನೀಡಿದ್ದರು ಎಂದು ಮಾಜಿ ಪಾಕ್ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದಾರೆ.

   ಇಸ್ಲಾಂ ಬಹುಸಂಖ್ಯಕ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತ ಧರ್ಮದ ಜನರ, ವಿಶೇಷವಾಗಿ ಹಿಂದುಗಳ ಮೇಲೆ ದೌರ್ಜನ್ಯಗಳಾಗುತ್ತಿದೆ ಎಂದು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯ ಪರವಾಗಿ ವಾದ ಮಂಡಿಸುತ್ತಿರುವಾಗಲೇ ಶೋಯೆಬ್ ಅವರ ಈ ಹೇಳಿಕೆ ಬಂದಿದ್ದು, ಶೋಯೆಬ್ ಹೇಳಿಕೆ ಭಾರಿ ವೈರಲ್ ಆಗಿದೆ.

   'ಪಾಕ್ ತಂಡದಲ್ಲಿ ಹಿಂದು ಆಟಗಾರ ದಾನಿಶ್ ಕನೆರಿಯಾ ಅವರನ್ನು ಇತರ ಆಟಗಾರರು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ, ಆತ ಹಿಂದು ಎಂಬ ಕಾರಣಕ್ಕೆ ಆತನೊಂದಿಗೆ ಸರಿಯಾಗಿ ವ್ಯವಹರಿಸುತ್ತಿರಲಿಲ್ಲ' ಎಂದು ಶೊಯೆಬ್ ಅಖ್ತರ್ ಇತ್ತೀಚೆಗೆ ಪಾಕ್‌ನ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.

   ಇದಕ್ಕೆ ಪ್ರತಿಕ್ರಿಯಿಸಿರುವ ದಾನಿಶ್ ಕನೆರಿಯಾ ಶೋಯೆಬ್ ಅಖ್ತರ್ ಹೇಳಿದ್ದು ನಿಜ, ಆದರೆ ನನಗೆ ಬೆಂಬಲ ನೀಡಿದ ಪಾಕಿಸ್ತಾನದ ಎಲ್ಲ ಹಿರಿಯ ಆಟಗಾರರಿಗೆ ಧನ್ಯವಾದಗಳು ಎಂದಿದ್ದಾರೆ.

   ತಂಡದೊಂದಿಗೆ ಊಟ ಮಾಡಿದರೆ ಕಣ್ಣು ಕೆಂಪಗೆ ಮಾಡುತ್ತಿದ್ದರು

   ತಂಡದೊಂದಿಗೆ ಊಟ ಮಾಡಿದರೆ ಕಣ್ಣು ಕೆಂಪಗೆ ಮಾಡುತ್ತಿದ್ದರು

   ಟಿವಿ ಸಂದರ್ಶನದಲ್ಲಿ ಮಾತನಾಡಿರುವ ಶೋಯೆಬ್ 'ಇತರ ಆಟಗಾರರೊಂದಿಗೆ ದಾನಿಶ್ ಕನೆರಿಯಾ ಊಟ ಮಾಡಿದಲ್ಲಿ, ನಮ್ಮ ಟೇಬಲ್‌ ನಲ್ಲಿ ಊಟ ತೆಗೆದುಕೊಂಡಲ್ಲಿ, ಆಗಿನ ತಂಡದ ನಾಯಕನೇ ದಾನಿಶ್ ವಿರುದ್ಧ ಕಣ್ಣು ಕೆಂಪಗೆ ಮಾಡುತ್ತಿದ್ದ' ಎಂದು ಪಾಕ್ ತಂಡದಲ್ಲಿ ಹಿಂದು ಆಟಗಾರನನ್ನು ನಡೆಸಿಕೊಳ್ಳುತ್ತಿದ್ದ ರೀತಿಯ ಬಗ್ಗೆ ಹೇಳಿದ್ದಾರೆ.

   ಪಾಕ್‌ ಕ್ರಿಕೆಟ್‌ ಗೆ ದಾನಿಶ್ ನೀಡಿದ್ದ ಕೊಡುಗೆ ಗುರುತಿಸಲಿಲ್ಲ: ಅಖ್ತರ್

   ಪಾಕ್‌ ಕ್ರಿಕೆಟ್‌ ಗೆ ದಾನಿಶ್ ನೀಡಿದ್ದ ಕೊಡುಗೆ ಗುರುತಿಸಲಿಲ್ಲ: ಅಖ್ತರ್

   'ದಾನಿಶ್ ಕನೆರಿಯಾ ಪಾಕಿಸ್ತಾನಕ್ಕಾಗಿ ಹಲವಾರು ಮ್ಯಾಚ್‌ಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 2005 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆಲ್ಲಲು ಆತನೇ ಕಾರಣ, ಪಾಕ್‌ ಕ್ರಿಕೆಟ್‌ಗೆ ಆತ ನೀಡಿದ ಕೊಡುಗೆಯನ್ನು ಯಾರೂ ಗುರುತಿಸಲಿಲ್ಲ' ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

   ತಾರತಮ್ಯ ಖಂಡಿಸಿದ್ದೆ ಎಂದ ಅಖ್ತರ್

   ತಾರತಮ್ಯ ಖಂಡಿಸಿದ್ದೆ ಎಂದ ಅಖ್ತರ್

   'ಧರ್ಮ, ಪ್ರದೇಶ ಆಧಾರಿತವಾಗಿ ತಾರತಮ್ಯ ಮಾಡಿದರೆ ನನಗೆ ಬಹಳ ಸಿಟ್ಟು ಬರುತ್ತಿತ್ತು, ದಾನಿಶ್ ವಿರುದ್ಧ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಿದಾಗ ನಾನು ಖಂಡಿಸಿದ್ದೆ' ಎಂದು ಅಖ್ತರ್ ಹೇಳಿದ್ದಾರೆ.

   ಪಾಕ್ ಪರ ಹೆಚ್ಚು ವಿಕೆಟ್ ತೆಗೆದ ನಾಲ್ಕನೇ ಆಟಗಾರ ದಾನಿಶ್

   ಪಾಕ್ ಪರ ಹೆಚ್ಚು ವಿಕೆಟ್ ತೆಗೆದ ನಾಲ್ಕನೇ ಆಟಗಾರ ದಾನಿಶ್

   ಪಾಕ್ ತಂಡದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಆಟಗಾರ ದಾನಿಶ್ ಕನೆರಿಯಾ, ಪಾಕಿಸ್ತಾನದ ಪರವಾಗಿ ಆಡಿದ ಎರಡನೇಯ ಹಿಂದು ಆಟಗಾರ ಎಂಬ ಖ್ಯಾತಿ ಸಹ ದಾನಿಶ್ ಕನೆರಿಯಾ ಅವರಿಗಿದೆ. ನಂತರ ಅವರು ಸ್ಪಾಟ್‌ ಫಿಕ್ಸಿಂಗ್‌ ನಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೆ ಒಳಗಾದರು.

   English summary
   Pakistan former cricketer Shoaib Akhtar said, Hindu player Danish Kaneriya not treated well in Pakistan cricket team for his religion.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X