Lok Sabha Election: ಮತದಾನದ ದಿನ ಬಸ್‌ಗಳ ಟಿಕೆಟ್ ದರ ಹೆಚ್ಚಳ ಮಾಡದಂತೆ ಸೂಚನೆ

ಉಡುಪಿ, ಏಪ್ರಿಲ್‌ 24: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಂಟು ವಿಧಾನ ಕ್ಷೇತ್ರಗಳಲ್ಲಿರುವ ಒಟ್ಟು 1842 ಮತಗಟ್ಟೆಗಳ ಪೈಕಿ 1270 ಮತಗಟ್ಟೆಗಳಲ್ಲಿ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. ಹೀಗೆ ಕ್ಷೇತ್ರದ ಶೇ.90ರಷ್ಟು ಮತಗಟ್ಟೆಗಳ ಚಲನವಲನಗಳನ್ನು ರಾಷ್ಟ್ರೀಯ ಹಾಗೂ ರಾಜ್ಯ ಚುನಾವಣಾ ಆಯೋಗ ಕೂಡ ದೆಹಲಿ, ಬೆಂಗಳೂರಿ ನಲ್ಲಿಯೇ ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ 203 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 202 ಕ್ರಿಟಿಕಲ್ ಮತಗಟ್ಟೆಗಳಿವೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಟ್ಟು 52 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿಗೆ ಸೆಂಟರ್ ಆರ್ಮ್ಡ್ ಪೊಲೀಸ್ ಪೋರ್ಸ್‌ಗಳನ್ನು ನಿಯೋಜಿಸಲಾಗುತ್ತದೆ. 459 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸಾರ್ವರ್‌ಗಳನ್ನು ಮತ್ತು ಸಿಗ್ನಲ್ ಸಿಗದ 18 ಮತಗಟ್ಟೆಗಳಲ್ಲಿ ಚಿತ್ರೀಕರಣ ಮಾಡಲು ವಿಡಿಯೋಗ್ರಾಫರ್ ನಿಯೋಜಿಸಲಾಗುತ್ತದೆ ಎಂದರು.

Udupi District Administration Instructs Not To Increase Bus Ticket On Polling Day

ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿ ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗಳಿಗೆ ವಿವಿಎಂ ನೊಂದಿಗೆ ತೆರಳಲು ಬಸ್ ಸೇರಿದಂತೆ ಒಟ್ಟು 260 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅದರ ಜೊತೆ ರಿಸರ್ವ್ ಇವಿಎಂಗಳನ್ನು ಕೊಂಡೊಯ್ಯುವ 162 ಸೆಕ್ಟರ್ ಆಫೀಸರ್‌ಗಳ 162 ವಾಹನ ಗಳಿಗೂ ಜಿಪಿಎಸ್ ಅಳವಡಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 4120 ಮಂದಿ ಅಧಿಕಾರಿ ಹಾಗೂ ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಅಂತಿಮ ಮತದಾರರ ಪಟ್ಟಿಯಲ್ಲಿ 768215 ಪುರುಷ, 816910 ಮಹಿಳೆ ಮತ್ತು 37 ತೃತೀಯ ಲಿಂಗಿ ಸೇರಿದಂತೆ ಒಟ್ಟು 1585162 ಮತದಾರರಿದ್ದಾರೆ. ಗೃಹ ಮತದಾನದಲ್ಲಿ 4517(ಶೇ.96.85) ಹಿರಿಯ ನಾಗರಿಕರು, 1408 (ಶೇ.98.05) ವಿಕಲಚೇತನ ಸೇರಿದಂತೆ ಒಟ್ಟು 5995 ಮತದಾನ ಮಾಡಿ ದ್ದಾರೆ. ಅರ್ಜಿ ಸಲ್ಲಿಸಿದ 395ರ ಪೈಕಿ 159 ಮಂದಿ ಅಂಚೆ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದ್ದಾರೆ. ಈ ಮತ ಪತ್ರಗಳನ್ನು ಸ್ಟ್ರಾಂಗ್ ರೂಮ್ ನಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದರು.

ಎ.26ರ ಮತದಾನ ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದ್ದು, ರಜೆ ನೀಡದೆ ಮತದಾನ ಹಕ್ಕು ನಿರಾಕರಿಸುವ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಚುನಾವಣೆಗೆ ಸಂಬಂಧಿಸಿ ಈವರೆಗೆ ಒಟ್ಟು 94.67ಲಕ್ಷ ರೂ. ಮೌಲ್ಯದ 15380.125 ಲೀಟರ್ ಮದ್ಯ, 11ಲಕ್ಷ ರೂ. ಮೌಲ್ಯದ 3449 ಕೆಜಿ ಡ್ರಗ್ಸ್ ವಶಪಡಿಸಿ ಕೊಳ್ಳಲಾಗಿದೆ. 14.92ಲಕ್ಷ ರೂ. ದಾಖಲೆ ಇಲ್ಲದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಈವರೆಗೆ ಸಿ ವಿಜಲ್‌ಗೆ 761 ಸೇರಿದಂತೆ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 1199 ದೂರುಗಳು ಬಂದಿದ್ದು, ಅದರಲ್ಲಿ ಮೂರು ಹೊರತು ಪಡಿಸಿ ಉಳಿದ ಎಲ್ಲ ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ. ಒಟ್ಟು ದೂರಿನ ಶೇ.10ರಷ್ಟು ಮಾತ್ರ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಶೇ.98.44 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.95.98 ಮತದಾರರ ಸ್ಲೀಪ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮತದಾನ ದಿನ ಬೆಂಗಳೂರು ಮತ್ತು ಮುಂಬೈಯಿಂದ ಊರಿಗೆ ಬರುವ ಜನರಿಗೆ ಬಸ್‌ಗಳ ಟಿಕೆಟ್ ದರ ಹೆಚ್ಚಳದಿಂದ ಸಮಸ್ಯೆ ಆಗಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಬಸ್ ಮಾಲಕರ ಸಂಘಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ. ಅದೇ ರೀತಿ ಸಾರಿಗೆ ಇಲಾಖೆಯಿಂದಲ್ಲೂ ಅವರಿಗೆ ಕೂಡ ನಿರ್ದೇಶನ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಟೆಕೆಟ್ ದರ ಹೆಚ್ಚಳ ಮಾಡದಂತೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದರು.

ಸ್ಟ್ರಾಂಗ್ ರೂಂಗೆ 3 ಹಂತದಲ್ಲಿ ಭದ್ರತೆ

ಉಡುಪಿಯ ಸೈಂಟ್ ಸಿಸಿಲೀಸ್‌ನಲ್ಲಿರುವ ಸ್ಟ್ರಾಂಗ್ ರೂಮ್‌ಗೆ ಮೂರು ಹಂತದಲ್ಲಿ ಭದ್ರತೆ ಒದಗಿಸಲಾಗುತ್ತದೆ. ಮೊದಲ ಹಂತದಲ್ಲಿ ಸೆಂಟರ್ ಆರ್ಮ್ಡ್ ಪೊಲೀಸ್ ಪೋರ್ಸ್, ಎರಡನೇ ಹಂತದಲ್ಲಿ ಕೆಎಸ್‌ಆರ್‌ಪಿ, ಮೂರನೇ ಹಂತದಲ್ಲಿ ಜಿಲ್ಲೆಯ ಪೊಲೀಸರು ಭದ್ರತೆ ನೀಡಲಿದ್ದಾರೆ. ಇವರು ದಿನಕ್ಕೆ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ತಿಳಿಸಿದರು

ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ತಾತ್ಕಾಲಿಕ ಸ್ಟ್ರಾಂಗ್ ರೂಮ್‌ಗಳಿವೆ. ಮತದಾನ ಮುಗಿದ ಕೂಡಲೇ ಆಯಾ ಕ್ಷೇತ್ರದ ಸ್ಟ್ರಾಂಗ್ ರೂಮ್‌ಗೆ ಬಂದು ಇವಿಎಂ ಸಹಿತ ದಾಖಲೆಯನ್ನು ಪರಿಶೀಲಿಸಲಾಗುತ್ತದೆ. ಅಲ್ಲಿಂದ ಉಡುಪಿ ಜಿಲ್ಲೆಯ ಎಲ್ಲ ಮತಗಟ್ಟೆಗಳ ಇವಿಎಂಗಳು ಸಂಜೆ 7ಗಂಟೆಯೊಳಗೆ ಸ್ಟ್ರಾಂಗ್ ರೂಂ ತಲುಪಲಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ರಾತ್ರಿ ಪ್ರಯಾಣ ಮಾಡು ವುದು ಕಷ್ಟ ಎಂಬ ಕಾರಣಕ್ಕೆ ಬೆಳಗಿನ ಜಾವ 5ಗಂಟೆಗೆ ಹೊರಟು ಬೆಳಗ್ಗೆ 10ಗಂಟೆಯೊಳಗೆ ಎಲ್ಲ ಮತಯಂತ್ರಗಳು ಸ್ಟ್ರಾಂಗ್ ರೂಮ್‌ನಲ್ಲಿ ತಲುಪಲಿದೆ ಎಂದು ಅವರು ಹೇಳಿದರು.

ಕೊನೆಯ 78ಗಂಟೆಗಳಲ್ಲಿ ಹೆಚ್ಚಿನ ತಪಾಸಣೆ ನಡೆಸಲು ಜಿಲ್ಲೆಯಲ್ಲಿ ಮೂರು ಚೆಕ್‌ಪೋಸ್ಟ್‌ಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ. ಹೊಸದಾಗಿ ಕುಂದಾಪುರ ಕ್ಷೇತ್ರದ ಕಂಡ್ಲೂರು, ಹಾಲಾಡಿ ಹಾಗೂ ಉಡುಪಿ ಕ್ಷೇತ್ರದ ನೇಜಾರಿನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಹೀಗೆ ಜಿಲ್ಲೆಯಲ್ಲಿ ಒಟ್ಟು 18 ಮತ್ತು ಇಡೀ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 31 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+