ವಂದೇ ಭಾರತ್ ರೈಲಿನಲ್ಲಿ ಬೆಂಗಳೂರಿನಿಂದ ವೀಕೆಂಡ್ಸ ಬೇಟಿ ನೀಡಬಹುದಾದ 7 ಪ್ರವಾಸಿ ತಾಣ
ಬೆಂಗಳೂರು: ವಾರಾಂತ್ಯದ ರಜೆ ಎಂದರೆ ಗಂಟೆಗಳಲ್ಲಿ ಟ್ರಾಫಿಕ್್ನಲ್ಲಿ ಸಿಲುಕಿ ಪ್ರಯಾಣಿಸುವ ದಿನಗಳು ನಿಧಾನವಾಗಿ ಬದಲಾಗುತ್ತಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳ ವಿಸ್ತರಣೆಯಿಂದ ಬೆಂಗಳೂರಿನಿಂದ ಐದು ಗಂಟೆಯೊಳಗೆ ತಲುಪಬಹುದಾದ ಹಲವು ಪ್ರವಾಸಿ ತಾಣಗಳಿಗೆ ಈಗ ಸುಲಭವಾಗಿ ಭೇಟಿ ನೀಡಬಹುದು. ಬೆಳಿಗ್ಗೆ ರೈಲು ಹತ್ತಿ ಮಧ್ಯಾಹ್ನದೊಳಗೆ ನಾವು ಗಮ್ಯಸಳ ತಲುಪಿ ವಾರಂತ್ಯವನ್ನು ಆರಾಮವಾಗಿ ಕಳೆಯುವ ಅವಕಾಶ ಪ್ರಯಾಣಿಕರಿಗೆ ಸಿಗುತ್ತದೆ.
ಇಲ್ಲಿ ಬೆಂಗಳೂರಿನಿಂದ ವಂದೇ ಭಾರತ್ ರೈಲಿನಲ್ಲಿ ಕೇವಲ ಐದು ಗಂಟೆಯೊಳಗೆ ತಲುಪಬಹುದಾದ ಏಳು ಜನಪ್ರಿಯ ವೀಕೆಂಡ್ ಪ್ರವಾಸಿ ತಾಣಗಳು

ದಾವಣಗೆರೆ 3.5 ಗಂಟೆ ಪ್ರಯಾಣ
ದಾವಣಗೆರೆ ಎಂದರೆ ಮೊದಲಿಗೆ ನೆನಪಾಗುವುದೆ ಇಲ್ಲಿನ ಪ್ರಸಿದ್ಢ ಬೆಣ್ಣೆ ದೋಸೆ. ಆಹಾರಪ್ರಿಯರ ಮೆಚ್ಚಿನ ತಾಣವಾಗಿರುವ ಈ ನಗರದಲ್ಲಿ ದೇವಸ್ಥಾನಗಳು, ಕೆರೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಮೈಸೂರು 2 ಗಂಟೆ ಪ್ರಯಾಣ
ಬೆಂಗಳೂರಿನಿಂದ ಅತ್ಯಂತ ಸಮೀಪದ ಜನಪ್ರಿಯ ವೀಕೆಂಡ್ ತಾಣಗಳಲ್ಲಿ ಮೈಸೂರು ಪ್ರಮುಖವಾದದ್ದು. ಮೈಸೂರಿನ ಅತ್ಯಂತ ಪ್ರಸಿದ್ದವಾದ ಅರಮನೆ, ಬೃಂದಾವನ ಗಾರ್ಡನ್, ಶ್ರೀ ಚಾಮುಂಡೇಶ್ವರಿ ಬೆಟ್ಟ, ಮೈಸೂರು ಮೃಗಾಲಯ ಹಾಗೂ ಪ್ರಸಿದ್ಢ ಸಿಹಿ ತಿಂಡಿಯಾದ ಮೈಸೂರು ಪಾಕ್ ಸವಿಯಬಹುದು.
ಚೆನ್ನೈ 4.5 ಗಂಟೆ ಪ್ರಯಾಣ
ಸುಮಾರು ನಾಲ್ಕು ಗಂಟೆಗಳಲ್ಲಿ ಚೆನ್ನೈ ತಲುಪಬಹುದು. ಕಪಾಲೀಶ್ವರ ದೇವಸ್ಥಾನ, ಮರೀನಾ ಬಿಚ್, ಟಿ.ನಗರ ಶಾಪಿಂಗ್ ಹಾಗೂ ಮಹಾಬಲಿಪುರಂ ಪ್ರವಾಸ ಈ ನಗರದ ಪ್ರಮುಖ ಆಕರ್ಷಣೆಗಳಾಗಿವೆ. ಸಮುದ್ರದ ತೀರ, ರುಚಿಕರವಾದ ಆಹಾರ ಈ ಪ್ರವಾಸದಲ್ಲಿ ಅನುಭವಿಸಬಹುದು.
ಕೊಯಮತ್ತೂರು 5 ಗಂಟೆ ಪ್ರಯಾಣ
ಕೊಯಮತ್ತೂರು ಆಧುನಿಕ ನಗರ ಜೀವನದ ಜೊತೆಗೆ ಆಧ್ಯಾತ್ಮಿಕ ಪ್ರದೇಶಗಳನ್ನು ನಾವು ನೋಡಬಹುದು. ಆದಿಯೋಗಿ ಶಿವನ ಪ್ರತಿಮೆ, ಮರುದಮಲೈ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಇಲ್ಲಿಂದ ನೀಲಗಿರಿ ಬೆಟ್ಟಗಳಿಗೂ ಸುಲಭವಾಗಿ ಹೊಗಬಹುದು.
ಸೇಲಂ- ಯುರ್ಕಾಡ್ ಪ್ರವಾಸ
ಸೇಲಂ ತಲುಪಿದ ಬಳಿಕ ಅಲ್ಪ ದೂರ ಪ್ರಯಾಣಿಸಿದರೆ ತಮಿಳುನಾಡಿನ ಅತ್ಯಂತ ಸುಂದರ ಗಿರಿಧಾಮ ಯುರ್ಕಾಡ್ ಹೋಗಬಹುದು. ಮಂಜಿನಿಂದ ಆವೃತ ಬೆಟ್ಟಗಳು, ಕಾಫಿ ತೋಟಗಳು, ಬೋಟ್ ಸವಾರಿ ಹಾಗೂ ಇಲ್ಲಿನ ತಂಪಾದ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತವೆ.
ಕಾಟ್ಪಾಡಿ ಸುಮಾರು 3 ಗಂಟೆ ಪ್ರಯಾಣ
ಕಾಟ್ಪಾಡಿ ಇದು ಉತ್ತರ ತಮಿಳುನಾಡಿನ ಅನೇಕ ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳಿಗೆ ಮುಖ್ಯ ಪ್ರವೇಶ ದ್ವಾರ ಆಗಿದೆ. ಇಲ್ಲಿನ ಪ್ರಶಾಂತವಾದ ವಾತಾವರಣ, ದೇವಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿ ಪ್ರಸಿದ್ದಿಯನ್ನು ಪಡೆದಿವೆ.
ಕರುನೂಲು ಸುಮಾರು 4.5 ಗಂಟೆ ಪ್ರಯಾಣ
ಆಂಧ್ರಪ್ರದೇಶದ ಕರುನೂಲು ಇದು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಹೊಂದಿದ ಪ್ರದೇಶ ಆಗಿದೆ. ಆಲಂಪುರದ ಪ್ರಾಚೀನ ಕಾಲದ ದೇವಾಲಯಗಳು ಹಾಗೂ ಜೋಗುಲಾಂಬಾ ದೇವಿ ದೇವಾಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ ಸ್ಥಳಗಳಾಗಿವೆ. ವಿಭಿನ್ನ ಅನುಭವ ಬಯಸುವ ಪ್ರವಾಸಿಗರಿಗೆ ಇದು ಒಂದು ಉತ್ತಮ ಸ್ಥಳ ಎಂದೆ ಹೇಳಬಹುದು.
ವಾರಂತ್ಯದ ಪ್ರವಾಸಕ್ಕೆ ಉತ್ತಮವಾದ ಆಯ್ಕೆ
ವಂದೇ ಭಾರತ್ ರೈಲುಗಳು ವೇಗದ ಸೇವೆಯಿಂದ ಕಡಿಮೆ ಸಮಯದಲ್ಲಿ ವಿವಿಧ ರೀತಿಯ ಪ್ರಕೃತಿಯ ಸೌಂದರ್ಯ ಮತ್ತು ಐತಿಹಾಸಿಕ ತಾಣಗಳಿಗೆ ಹೋಗಲು ಅನೂಕೂಲಕರ ಆಗಿದೆ. ಸುದೀರ್ಘವಾದ ರಜೆ ಅಥವಾ ವಿಮಾನ ಪ್ರಯಾಣದ ಅಗತ್ಯವಿಲ್ಲದೆ ಪ್ರಕೃತಿ, ಇತಿಹಾಸ, ಧಾರ್ಮಿಕ ಕ್ಷೇತ್ರಗಳು ಮತ್ತು ಅಲ್ಲಿನ ಆಹಾರವನ್ನು ಆಸ್ವಾದಿಸಲು ಈ ತಾಣಗಳು ಉತ್ತಮವಾದ ಆಯ್ಕೆಯಾಗಿವೆ.














Click it and Unblock the Notifications