Aase Serial: ವೀಕ್ಷಕರಲ್ಲಿ ಹೊಸ "ಆಸೆ" ಮೂಡಿಸಿದ ತಿರುವು: ಸೂರ್ಯನಿಗೆ ಕವಿದಿರುವ ಕತ್ತಲೆ ಕಳೆಯಲು ಬಂದ ತಾರಾ!
Aase Serial: ಆಸೆ ಸೀರಿಯಲ್‌ನಲ್ಲಿ ಅನಿರೀಕ್ಷಿತ ತಿರುವು ಎದುರಾಗಿದ್ದು, ಬಹು ದಿನಗಳಿಂದ ವೀಕ್ಷಕರು ಎದುರು ನೋಡುತ್ತಿದ್ದ ಸೀನ್ ಮೂಡಿ ಬಂದಿದೆ. ಆಸೆ ಧಾರಾವಾಹಿಯಲ್ಲಿ ಹೊಸ ಪಾತ್ರವನ್ನು ಪರಿಚಯಿಸಲಾಗಿದ್ದು, ವೀಕ್ಷಕರ ಬಹುದಿನಗಳ ಕನಸು ಈಡೇರಿದಂತೆ ಆಗಿದೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಆಸೆ ಧಾರಾವಾಹಿಯಲ್ಲಿ ರೋಹಿಣಿ ಇನ್ನೇನು ಮನೋಜ್‌ಗೆ ಡಿವೋರ್ಸ್ ಕೊಡುತ್ತಾಳೆ ಎನ್ನುವಾಗಲೇ ರೋಹಿಣಿ ಮನೋಜ್‌ಗೆ ಬ್ಲ್ಯಾಕ್ ಮೇಲೆ ಮಾಡುವುದಕ್ಕೆ ಮುಂದಾಗಿದ್ದಾಳೆ. ಈ ರೀತಿ ಇರುವಾಗಲೇ ಮೀನಾ - ಸೂರ್ಯ ಹೋಟೆಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ರೋಹಿಣಿ ಮಗನನ್ನೂ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ. ಮನೋಜ್‌ಗೆ ನಾನು ಈ ಪತ್ರಕ್ಕೆ ಸಹಿ ಹಾಕುವುದಿಲ್ಲ ಎಂದು ರೋಹಿಣಿ ಹೇಳಿದ್ದಾಳೆ.
ಮನೋಜ್ ಮತ್ತು ರೋಹಿಣಿಯ ನಡುವಿನ ಬಾಂಧವ್ಯ ಇನ್ನೇನು ಮುಗಿದೇ ಹೋಯಿತು ಎನ್ನುವ ಹಂತಕ್ಕೆ ಬಂದಿದೆ. ಆಲ್ ದಿ ಬೆಸ್ಟ್ ಈ ಪತ್ರಕ್ಕೆ ಸಹಿ ಹಾಕು ಅಂತ ಡಿವೋರ್ಸ್ ಪತ್ರವನ್ನು ಮನೋಜ್ ಕೊಟ್ಟಿದ್ದಾನೆ. ಆದರೆ, ನಾನು ಈ ಪತ್ರಕ್ಕೆ ಸಹಿ ಹಾಕಿದರೆ ನನ್ನ ನಿನ್ನ ನಡುವಿನ ಸಂಬಂಧನೇ ಇಲ್ಲದೆ ಹೋಗುತ್ತೆ. ನಾನೊಂದು ತೀರ್ಮಾನ ಮಾಡಿದ್ದೀನಿ, ನಾನು ಸಹಿ ಮಾಡಿದ ಮುಂದಿನ ಕ್ಷಣವೇ ಸತ್ತಾಗೆ ಎಂದು ನೇಣಿಗೆ ಶರಣಾಗುವುದಾಗಿ ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಮುಂದಾಗಿದ್ದಾಳೆ. ಆದರೆ ಆಗ ಏಕಾಏಕಿ ಮಮ್ಮಿ ಎಂದು ರೋಹಿಣಿ ಅವರ ಮಗ ಓಡಿ ಬಂದಿದ್ದಾನೆ. ಯಾರು ಕರೆದುಕೊಂಡು ಬಂದ್ರು ನಿನ್ನ ಅಂತ ರೋಹಿಣಿ ಮಗ ಬಳಿ ಕೇಳಿದ್ದಾಳೆ. ಇದೇ ಸಮಯಕ್ಕೆ ಮೀನಾ - ಸೂರ್ಯ ಎಂಟ್ರಿ ಕೊಟ್ಟಿದ್ದಾರೆ. ಈ ಸೀನ್ ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ದಯವಿಟ್ಟು ಅವಾಗ ಅವಾಗ ಈ ತರ ಟ್ವಿಸ್ಟ್ ಕೊಡಿ ಅಂತ ವೀಕ್ಷಕರು ಹೇಳುತ್ತಿದ್ದಾರೆ.

Aase Serial: ತನ್ನದೇ ಮನೆಗೆ ಬಂದ ತಾರಾ
ಆಸೆ ಸೀರಿಯಲ್‌ನಲ್ಲಿ ಹೊಸ ಪಾತ್ರವನ್ನು ಪರಿಚಯಿಸಲಾಗಿದೆ. ಹೊಸ ಎಪಿಸೋಡ್‌ನಲ್ಲಿ ಹೊಸ ಪಾತ್ರಧಾರಿ ಪರಿಚಯಿಸಲಾಗಿದ್ದು, ಆಸೆ ಧಾರಾವಾಹಿಯಲ್ಲಿ ಯಾರೂ ನಿರೀಕ್ಷೆ ಮಾಡದ ತಿರುವು ಇದಾಗಿದೆ. "ತನಗರಿವಿಲ್ಲದೇ ಮನೆಗೆ ಮರಳಿ ಬಂದ ತಾರಾ, ಸೂರ್ಯನಿಗೆ ಕವಿದಿರುವ ಕತ್ತಲೆಯನ್ನ ಕಳೆಯುತ್ತಾಳಾ?" ಎನ್ನುವ ಸಾಲುಗಳೊಂದಿಗೆ ಸ್ಟಾರ್ ಸುವರ್ಣದಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ.
ದೊಡ್ಡ ಸಂಕಷ್ಟದಿಂದ ರಂಗನಾಥ್ ಬಚಾವ್ ಆಗಿದ್ದು, ಮನೆಗೆ ಹಿಂದಿರುಗಿದ್ದಾರೆ. ಆರತಿ ಬೆಳಗುವಂತೆ ಮೀನಾಗೆ ಹೇಳಲಾಗಿದೆ. ಆಗ ಇರು ಇರು... ಅಮ್ಮ ತಾರಾ ಅಂತ ರಂಗನಾಥ್ ಅವರು ಕರೆದಿದ್ದಾರೆ. ಆಗ ತಾರಾ ಎನ್ನುವ ಹೊಸ ಪಾತ್ರಧಾರಿಯ ಎಂಟ್ರಿಯನ್ನು ತೋರಿಸಲಾಗಿದೆ. ಸೂರ್ಯ ಮತ್ತು ಮನೋಜ್ ತಂಗಿಯೇ ತಾರಾ ಎನ್ನುವಂತೆ ತೋರಿಸಲಾಗಿದೆ. ಮನೋಜ್ - ಸೂರ್ಯ ಹಾಗೂ ತಾರಾ ಬಾಲ್ಯದಲ್ಲಿ ಕಳೆದ ಕ್ಷಣಗಳನ್ನು ತೋರಿಸಲಾಗಿದೆ. ಇಷ್ಟು ದಿನಗಳ ಕಾಲ ಸೂರ್ಯನ ಮೇಲಿದ್ದ ಅಪವಾದವೊಂದು ಕಳಚಿ ಬೀಳಿದೆ ಎನ್ನುವಂತೆ ಈ ಎಪಿಸೋಡ್ ತೋರಿಸಲಾಗಿದೆ. ಮನೆಗೆ ಮರಳಿ ಬಂದ ಮಗಳು ಎಂದು ತೋರಿಸಲಾಗಿದೆ. ತಾರಾ ಮನೆಗೆ ಹಿಂದಿರುಗಿರುವುದನ್ನು ನೋಡಿ ಮನೋಜ್ ಆತಂಕಕ್ಕೆ ಒಳಗಾಗಿದ್ದಾನೆ. ಆಸೆ ಸೀರಿಯಲ್ ಹೊಸ ತಿರುವು ಪಡೆದುಕೊಂಡಿದ್ದು ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.













Click it and Unblock the Notifications