‘ಕದ್ದು ಮುಚ್ಚಿ ಹೋಗಿ ತಿನ್ನುವಷ್ಟು ಪಾಕಿಸ್ತಾನದ ಬಿರಿಯಾನಿ ರುಚಿಯಾಗಿದೆಯಾ’ ಅಂತಾ ಬಿಜೆಪಿಗೆ ಪ್ರಶ್ನೆ ಕೇಳಿದ ಕಾಂಗ್ರೆಸ್!
ಕರ್ನಾಟಕದಲ್ಲಿ ಭಾರಿ ತಿಕ್ಕಾಟಕ್ಕೆ ಕಾರಣವಾಗಿರುವ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಆರೋಪ ಇದೀಗ ಪ್ರಧಾನಿ ಮೋದಿ ಅವರನ್ನೂ ತಲುಪಿದೆ. ಕರ್ನಾಟಕದಲ್ಲಿ ಈ ವಿಚಾರಕ್ಕೆ ಬಿಜೆಪಿ & ಕಾಂಗ್ರೆಸ್ ನಡುವೆ ಭರ್ಜರಿ ಫೈಟಿಂಗ್ ನಡೆಯುತ್ತಿದ್ದು, ಒಬ್ಬರ ಮೇಲೆ ಮತ್ತೊಬ್ಬರು ಆರೋಪ & ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಸಮಯದಲ್ಲೇ ಕಾಂಗ್ರೆಸ್ ಈಗ ಬಿಜೆಪಿಯ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿದ್ದು, ಪ್ರಧಾನಿ ಮೋದಿ ಅವರ ಹೆಸರನ್ನೂ ಇದೀಗ ಎಳೆದು ತಂದಿದೆ!
ಹೌದು, 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಯನ್ನ ವಿಧಾನಸೌಧ ಪಡಸಾಲೆ ಮೇಲೆ ನಿಂತು ಕೆಲವರು ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ರಾಜ್ಯಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರು ಗೆದ್ದ ನಂತರ ಸಂಭ್ರಮಾಚರಣೆ ವೇಳೆ ಹೀಗೆಲ್ಲಾ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ್ರು ಅಂತಾ ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಚಾರವನ್ನು ಹಿಡಿದು ಬಿಜೆಪಿ ನಾಯಕರು ಪ್ರತಿಭಟನೆ ಕೂಡ ಶುರು ಮಾಡಿದ್ದಾರೆ. ಈ ಸಮಯದಲ್ಲೇ ಕರ್ನಾಟಕ ಕಾಂಗ್ರೆಸ್, ಮೋದಿ ಅವರ ಹಳೆಯ ಫೋಟೋ ಟ್ವೀಟ್ ಮಾಡಿ ಹೊಸ ಸವಾಲು ಎಸೆದಿದೆ.

ಪಾಕಿಸ್ತಾನದ ಪ್ರಧಾನಿ ಜೊತೆ ಪಿಎಂ ಮೋದಿ?
ಅಂದಹಾಗೆ ಇದೀಗ ಕರ್ನಾಟಕ ಕಾಂಗ್ರೆಸ್ ಒಂದಷ್ಟು ಫೋಟೋಗಳನ್ನ ಟ್ವೀಟ್ ಮಾಡಿದ್ದು, ಈ ಫೋಟೋಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ & ಇಮ್ರಾನ್ ಖಾನ್ ಜೊತೆ ಓಡಾಡಿದ್ದಾರೆ.
ಹಾಗೇ ಶೇಕ್ ಹ್ಯಾಂಡ್ ಕೂಡ ಕೊಟ್ಟಿದ್ದಾರೆ. ಇದೀಗ ಇದೇ ಫೋಟೋ ಟ್ವೀಟ್ ಮಾಡಿರುವ ಕಾಂಗ್ರೆಸ್. 'ಕದ್ದು ಮುಚ್ಚಿ ಹೋಗಿ ತಿನ್ನುವಷ್ಟು ಪಾಕಿಸ್ತಾನದ ಬಿರಿಯಾನಿ ರುಚಿಯಾಗಿದೆಯಾ @BJP4Karnataka?' ಅಂತ ಕರ್ನಾಟಕ ಬಿಜೆಪಿಗೆ ಪ್ರಶ್ನೆ ಮಾಡಿದೆ.
ಕದ್ದು ಮುಚ್ಚಿ ಹೋಗಿ ತಿನ್ನುವಷ್ಟು ಪಾಕಿಸ್ತಾನದ ಬಿರಿಯಾನಿ ರುಚಿಯಾಗಿದೆಯಾ @BJP4Karnataka ? pic.twitter.com/m4Bh8OQ5vB
— Karnataka Congress (@INCKarnataka) February 28, 2024
'ದುಬಾರಿ ಪಕೀರನಿಗೆ ಬಿರಿಯಾನಿ...'
ಇದಕ್ಕೂ ಮೊದಲು ಒಂದು ಟ್ವೀಟ್ ಮಾಡಿದ್ದ ಕರ್ನಾಟಕ ಕಾಂಗ್ರೆಸ್, ನಿಮ್ಮ 'ದುಬಾರಿ ಪಕೀರ'ನಿಗೆ ಬಿರಿಯಾನಿ ತಿನ್ನುವುದಕ್ಕೆ ಪಾಕಿಸ್ತಾನ ಪ್ರಿಯವಾದ ಸ್ಥಳ, ನಿಮ್ಮ ಅಡ್ವಾಣಿಯವರ ಜನ್ಮಭೂಮಿ ಪಾಕಿಸ್ತಾನ, ಜಿನ್ನಾ ಸ್ಮಾರಕಕ್ಕೆ ಭೇಟಿ ನೀಡಿ ಜಿನ್ನಾರ ಹೊಗಳಿದ ಸ್ಥಳ ಪಾಕಿಸ್ತಾನ. ನಿಮ್ಮ ಬಾಯಲ್ಲಿ, ಮನದಲ್ಲಿ ಸದಾ ನಲಿದಾಡುವುದು - ಪಾಕಿಸ್ತಾನ!'
'ನಾವು ದೂರು ದಾಖಲಿಸುವುದು
ನಾವೇ ಹೋರಾಡಿ ದಕ್ಕಿಸಿಕೊಂಡ ಭಾರತದಲ್ಲಿ,
ನಾವೇ ಜಾರಿಗೊಳಿಸಿದ ಸಂವಿಧಾನವಿರುವ ಭಾರತದಲ್ಲಿ,
ನಾವೇ ಒಗ್ಗೂಡಿಸಿದ ಭಾರತದಲ್ಲಿ...'

'ದೂರು ದಾಖಲಾದ ನಂತರ ನೀವು ಯಾವ ದೇಶಕ್ಕೆ ವೀಸಾ ಪಡೆಯುತ್ತೀರಿ? ನಿಮ್ಮ ಪ್ರೀತಿಯ ಪಾಕಿಸ್ತಾನಕ್ಕೋ? ನಿತ್ಯಾನಂದನ ಕೈಲಾಸಕ್ಕೋ?' ಅಂತಾ ಪ್ರಶ್ನೆ ಮಾಡಿತ್ತು. ಇದೀಗ ಮತ್ತೆ ಒಂದು ಟ್ವೀಟ್ ಮಾಡಿ ಕರ್ನಾಟಕ ಬಿಜೆಪಿ ನಾಯಕರನ್ನು ಕೆಣಕಿದೆ. ಹೀಗಾಗಿ ಕರ್ನಾಟಕ ರಾಜಕೀಯದಲ್ಲಿ ಇದೀಗ ಹೊಸ ತಿಕ್ಕಾಟ ಶುರುವಾಗಿದೆ. ಹಾಗೇ ಪಾಕಿಸ್ತಾನದ ಮ್ಯಾಟರ್‌ನ ಹಿಡಿದು ಬಿಜೆಪಿ & ಕಾಂಗ್ರೆಸ್ ನಾಯಕರು ಫೈಟ್ ಮಾಡುತ್ತಿದ್ದಾರೆ.
ಒಟ್ನಲ್ಲಿ ಲೋಕಸಭೆ ಚುನಾವಣೆ ಸಮಯದಲ್ಲೇ ಕಾಂಗ್ರೆಸ್ & ಬಿಜೆಪಿ ನಡುವೆ ಫೈಟಿಂಗ್‌ಗೂ ಜೋರಾಗಿದೆ. ಒಂದು ಕಡೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿದ್ರೆ, ಇನ್ನೊಂದು ಕಡೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತ್ಯಸ್ತ್ರ ಹೂಡುತ್ತಿದೆ. ಈ ಮೂಲಕ ಇದೀಗ ಲೋಕಸಭೆ ಚುನಾವಣೆಗೆ ಮೊದಲು ಅಖಾಡ ಬಲು ರಂಗೇರುತ್ತಿದೆ.
Dear @BJP4Karnataka,
— Karnataka Congress (@INCKarnataka) February 28, 2024
ನಿಮ್ಮ ‘ದುಬಾರಿ ಪಕೀರ‘ನಿಗೆ ಬಿರಿಯಾನಿ ತಿನ್ನುವುದಕ್ಕೆ ಪಾಕಿಸ್ತಾನ ಪ್ರಿಯವಾದ ಸ್ಥಳ,
ನಿಮ್ಮ ಅಡ್ವಾಣಿಯವರ ಜನ್ಮಭೂಮಿ ಪಾಕಿಸ್ತಾನ, ಜಿನ್ನಾ ಸ್ಮಾರಕಕ್ಕೆ ಭೇಟಿ ನೀಡಿ ಜಿನ್ನಾರನ್ನು ಹೊಗಳಿದ ಸ್ಥಳ ಪಾಕಿಸ್ತಾನ.
ನಿಮ್ಮ ಬಾಯಲ್ಲಿ, ಮನದಲ್ಲಿ ಸದಾ ನಲಿದಾಡುವುದು - ಪಾಕಿಸ್ತಾನ!
ನಾವು ದೂರು ದಾಖಲಿಸುವುದು
ನಾವೇ… https://t.co/bYRPBQB2MO












Click it and Unblock the Notifications