Lucky Zodiac: ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ: ಧನಲಾಭ, ಯಶಸ್ಸು, ಸಮಸ್ಯೆಗಳಿಂದ ಮುಕ್ತಿ!

Lucky Zodiac: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನನ್ನು ಪ್ರೀತಿ, ಸೌಂದರ್ಯ, ಐಶ್ವರ್ಯ, ಕಲೆ ಮತ್ತು ಭೌತಿಕ ಸುಖಗಳಿಗೆ ಕಾರಣವಾಗುವ ಗ್ರಹವಾಗಿದೆ. ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಜಾತಕದಲ್ಲಿ ಶುಕ್ರನ ಸ್ಥಾನ ಬಲವಾಗಿರಬೇಕು ಎಂದೇ ಹೇಳಲಾಗುತ್ತದೆ. ಶುಕ್ರನ ಸಂಚಾರವು ವ್ಯಕ್ತಿಯ ಜಾತಕದ ಮೇಲೆ ದೊಡ್ಡಮಟ್ಟದಲ್ಲಿ ಪ್ರಭಾವ ಬೀರುವುದು. ಶುಕ್ರನ ರಾಶಿ, ನಕ್ಷತ್ರ ಬದಲಾವಣೆ ಅಥವಾ ಚಲನೆಯಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಶುಕ್ರನ ಪಥದಲ್ಲಿನ ಬದಲಾವಣೆ ಕೂಡಾ ಕೆಲವು ರಾಶಿಯವರ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಬಹುದು. ಆರ್ಥಿಕ ಲಾಭ, ವೃತ್ತಿಜೀವನದಲ್ಲಿ ಪ್ರಗತಿ, ಪ್ರೇಮ ಜೀವನದಲ್ಲಿ ಯಶಸ್ಸು ಮತ್ತು ವೈವಾಹಿಕ ಜೀವನದಲ್ಲಿ ಸಂತೋಷವನ್ನು ತರಬಲ್ಲದು.

ಇದೀಗ ಶುಕ್ರನು ತನ್ನ ದಿಕ್ಕನ್ನು ಬದಲಾಯಿಸಲಿದ್ದಾನೆ. ಆಗಸ್ಟ್ 1, 2026 ರ ಶನಿವಾರ ಮಧ್ಯರಾತ್ರಿ 12:15 ಕ್ಕೆ ಶುಕ್ರನ ಸಂಚಾರದ ದಿಕ್ಕು ಬದಲಾಗಲಿದೆ. ಈ ಸಮಯದಲ್ಲಿ, ಶುಕ್ರನು ದಕ್ಷಿಣ ದಿಕ್ಕಿಗೆ ಸಂಚಾರ ಆರಂಭಿಸುತ್ತಾನೆ. ಶುಕ್ರನ ಚಲನೆಯಲ್ಲಿನ ಬದಲಾವಣೆಯಿಂದಾಗಿ, 4 ರಾಶಿಯವರ ಜೀವನದಲ್ಲಿ ಬಹಳ ಶುಭ ಬದಲಾವಣೆಗಳಿಗೆ ಕಾರಣವಾಗುತ್ತದೆ. ಶುಕ್ರನ ನಡೆಯಲ್ಲಿನ ಬದಲಾವಣೆಯೊಂದಿಗೆ ಅವರ ಪ್ರೇಮ ಜೀವನ ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ.ಶುಕ್ರನ ಕಾರಣದಿಂದ ನೆಮ್ಮದಿಯ ಜೀವನ ಇವರದ್ದಾಗುವುದು. ಪ್ರಗತಿಯ ಹಾದಿಗಳು ತೆರೆದುಕೊಳ್ಳುವುದು.

Lucky Zodiac

ವೃಷಭ ರಾಶಿ (Taurus)

ವೃಷಭ ರಾಶಿಯವರಿಗೆ ಈ ಶುಕ್ರ ಕ್ರಾಂತಿ ಅನುಕೂಲಕರವಾಗಿರಬಹುದು. ಪಾಲುದಾರಿಕೆಯಲ್ಲಿ ಮಾಡುವ ವ್ಯಾಪಾರ ವ್ಯವಹಾರ ಲಾಭವನ್ನು ತರಬಹುದು. ಉದ್ಯೋಗದಲ್ಲಿರುವವರಿಗೆ ಹೊಸ ಜವಾಬ್ದಾರಿಗಳು ಸಿಗಬಹುದು. ಬಡ್ತಿಯೊಂದಿಗೆ ಆದಾಯದಲ್ಲಿಯೂ ಹೆಚ್ಚಳವಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಬೆಂಬಲ ನಿಮಗಿರುವುದು. ಮಾನಸಿಕ ಒತ್ತಡ ಕಡಿಮೆಯಾಗುವುದು. ಮನಸ್ಸು ಶಾಂತವಾಗಿರುತ್ತದೆ. ಪ್ರೀತಿಯಲ್ಲಿಯೂ ಯಶಸ್ಸು ಸಿಗುವುದು. ನೀವಂದುಕೊಂಡಂತೆ ನಿಮಗಿಷ್ಟವಾದ ಸಂಗಾತಿ ಸಿಗುವರು. ಮದುವೆ ಮಾತುಕತೆ ನಡೆಯುವುದು.ಮನೆಯಲ್ಲಿ ಸಂತೋಷದ ವಾತಾವರಣ ನೆಲೆಯಾಗುವುದು.

ಸಿಂಹ ರಾಶಿ (Leo)

ಶುಕ್ರನ ಚಲನೆಯಲ್ಲಿನ ಬದಲಾವಣೆಯು ಸಿಂಹ ರಾಶಿಯವರಿಗೂ ಶುಭವೆಂದು ಸಾಬೀತಾಗಬಹುದು. ಪ್ರೀತಿ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಬಾಗಿಲು ತೆರೆಯುತ್ತದೆ. ಮಾಡುವ ಕೆಲಸಗಳಲ್ಲಿ ಯಶಸ್ಸು ಕೈ ಹಿಡಿಯುತ್ತದೆ. ಹೊಸ ವ್ಯವಹಾರಕ್ಕೆ ಇಳಿಯಲು ಇದು ಸೂಕ್ತವಾದ ಸಮಯ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು. ಇದು ಹೊಸ ಸಂಬಂಧವನ್ನು ಪ್ರಾರಂಭಿಸುವ ಸಮಯ. ಸಂಬಂಧಗಳು ಬಲಗೊಳ್ಳುತ್ತವೆ. ವೃತ್ತಿಯಲ್ಲಿ ಪ್ರಗತಿಯಾಗುವುದು. ಸಂಪತ್ತು ಹೆಚ್ಚಾಗುವುದು. ಉದ್ಯೋಗದಲ್ಲಿ ಪದೋನ್ನತಿಗೆ ಅವಕಾಶವಿದೆ.

ತುಲಾ ರಾಶಿ (Libra)

ಕುಂಭರಾಶಿಯಲ್ಲಿ ಶುಕ್ರನ ಸಂಚಾರವು ತುಲಾ ರಾಶಿಯವರಿಗೆ ಅತ್ಯಂತ ಶುಭವಾಗಿರಲಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ. ವೇತನ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಪ್ರೇಮ ಸಂಬಂಧಗಳು ಸುಧಾರಿಸುತ್ತವೆ. ಅವಿವಾಹಿತರಿಗೆ ಮದುವೆ ಮಾತುಕತೆ ನಡೆಯುವುದು. ಜೀವನದಲ್ಲಿ ಇಲ್ಲಿಯವರೆಗೆ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗುವುದು. ಮಕ್ಕಳ ಸಾಧನೆಯಿಂದ ಗೌರವ ಹೆಚ್ಚಾಗುವುದು.

ಮಕರ ರಾಶಿ (Capricorn)

ಕುಂಭ ರಾಶಿಯ ಮೂಲಕ ಶುಕ್ರನ ಸಂಚಾರವು ಮಕರ ರಾಶಿಯವರಿಗೆ ಆರ್ಥಿಕವಾಗಿ ಪ್ರಯೋಜನಕಾರಿರಲಿದೆ. ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುವುದು. ವೃತ್ತಿಯಲ್ಲಿ ಪ್ರಗತಿಗೆ ಅವಕಾಶಗಳು ಸಿಗಬಹುದು. ಮಾಡುವ ಕೆಲಸ ಕಾರ್ಯಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಬಹುದು. ಕೈ ಹಾಕಿದ ಎಲ್ಲಾ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗುವುದು. ಪೂರ್ವಜರ ಆಸ್ತಿಯಲ್ಲಿ ಪಾಲು ಸಿಗಬಹುದು. ಪ್ರೇಮ ಜೀವನದಲ್ಲಿ ಸಂತೋಷ ಹೆಚ್ಚುವುದು. ಸಂಪತ್ತು ಸಮೃದ್ಧಿ ಹೆಚ್ಚಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+