NEET ಪರೀಕ್ಷೆಯಲ್ಲಿ 694ನೇ ರ‍್ಯಾಂಕ್ ಪಡೆದ ಕುರಿ ಕಾಯುವ ಹುಡುಗ: ಇದು ಕೊಪ್ಪಳದ ಪುಟ್ಟರಾಜು ಯಶೋಗಾಥೆ

ಬಡತನ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಇವು ಎಂದಿಗೂ ಸಾಧನೆಗೆ ಅಡ್ಡಿಯಾಗುವುದಿಲ್ಲ. ಸಾಧಿಸಲು ಮನಸ್ಸೊಂದಿದ್ದರೆ ಸಾಕು ಎಂತಹ ಗುರಿಯನ್ನಾದರೂ ತಲುಪಬಹುದು. ಹೌದು ಕೊಪ್ಪಳದ ಪುಟ್ಟರಾಜುವೇ ಇದಕ್ಕೆ ಒಳ್ಳೆಯ ಉದಾಹರಣೆ.

ಇತ್ತೀಚೆಗಷ್ಟೇ ನೀಟ್ ಮರುಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರತಿಭೆ ಪುಟ್ಟರಾಜು ಅವರು ಅದ್ಭುತ ಸಾಧನೆ ಮಾಡಿದ್ದಾರೆ. ಪರಿಶಿಷ್ಟ ಪಂಗಡ ವಿಭಾಗದಲ್ಲಿ ಬರೋಬ್ಬರಿ 694ನೇ ರ‍್ಯಾಂಕ್ ಪಡೆಯುವ ಮೂಲಕ ಇಡೀ ರಾಜ್ಯವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಂತಹ ಕಠಿಣ ಪರೀಕ್ಷೆಯಲ್ಲಿ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಯೊಬ್ಬ ಈ ಮಟ್ಟದ ಸಾಧನೆ ಮಾಡಿರುವುದು ನಿಜಕ್ಕೂ ಸಂತಸದ ವಿಚಾರ.

Koppal

ಕಷ್ಟಗಳನ್ನು ಮೆಟ್ಟಿ ನಿಂತ ನೀಟ್ ಸಾಧಕ ಪುಟ್ಟರಾಜು

ಪುಟ್ಟರಾಜು ಅವರು ತುಂಬ ಬಡತನ ಮತ್ತು ಸಾಮಾನ್ಯ ಕುಟುಂಬದಿಂದ ಬಂದವರು. ಬಿಡುವಿನ ವೇಳೆಯಲ್ಲಿ ಕುಟುಂಬಕ್ಕೆ ಆಸರೆಯಾಗಲು ಕುರಿ ಕಾಯುವ ಕೆಲಸ ಮಾಡುತ್ತಿದ್ದ ಪುಟ್ಟರಾಜು, ಆ ಸಂದರ್ಭದಲ್ಲಿ ತಮ್ಮ ಜೀವನದಲ್ಲಿ ಒಂದು ದೊಡ್ಡ ಕನಸೊಂದನ್ನ ಕಂಡಿದ್ದಾರೆ. ಡಾಕ್ಟರ್‌ ಆಗಬೇಕು ಎಂಬ ಆಸೆಯನ್ನ ಕಂಡಿದ್ದ ಅವರು, ಈ ಕಷ್ಟದ ದಿನಗಳಲ್ಲೂ ಅವರು ತಮ್ಮ ಓದಿನ ಕಡೆಗೆ ಗಮನ ಹರಿಸಿದ್ದರು. ಹಗಲಿನಲ್ಲಿ ಕುರಿಗಳನ್ನ ಕಾಯುತ್ತಿದ್ದರೇ, ಸಮಯ ಸಿಕ್ಕಾಗೆಲ್ಲಾ ಪುಸ್ತಕ ಹಿಡಿದು ಓದುತ್ತಿದ್ದರು. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ಛಲ ಬಿಡದೆ ನಿರಂತರ ಓದಿದ ಕಾರಣ ಇಂದು ಅವರನ್ನ ನೀಟ್ ಸಾಧಕ ಪುಟ್ಟರಾಜು ಎಂದು ಹೆಮ್ಮೆಯಿಂದ ಗುರುತಿಸುವಂತೆ ಮಾಡಿದೆ.

ಗಂಗಾವತಿಯ ವಿದ್ಯಾನಿಕೇತನ ಕಾಲೇಜಿನಲ್ಲಿ ತಮ್ಮ ಪಿಯುಸಿ ಶಿಕ್ಷಣವನ್ನ ಮುಗಿಸಿ ಪುಟ್ಟರಾಜು, ಅಲ್ಲಿಂದಲೇ ನೀಟ್ ಪರೀಕ್ಷೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿದ್ದರು. ಆರ್ಥಿಕ ಅಡಚಣೆಗಳು, ಸೌಲಭ್ಯಗಳ ಕೊರತೆ ಹಾಗೂ ವೈಯಕ್ತಿಕ ಸವಾಲುಗಳು ಎದುರಾದರೂ ಅವರು ತಮ್ಮ ಕನಸಿನಿಂದ ಹಿಂದೆ ಸರಿಯಲಿಲ್ಲ. ಕಾಲೇಜು ಶಿಕ್ಷಕರ ಮಾರ್ಗದರ್ಶನ ಮತ್ತು ತನ್ನ ಸ್ವಂತ ಪರಿಶ್ರಮದಿಂದ ನಿರಂತರ ಅಭ್ಯಾಸ ನಡೆಸಿದರು. ದುಬಾರಿ ಕೋಚಿಂಗ್ ಪಡೆಯಲು ಸಾಧ್ಯವಾಗದಿದ್ದರೂ, ಅವರೇ ಸ್ವತಃ ಏಕಾಗ್ರತೆಯಿಂದ ಓದಿ ಇಂದು ಎಸ್.ಟಿ ವಿಭಾಗದಲ್ಲಿ 694ನೇ ರ‍್ಯಾಂಕ್ ಗಳಿಸಿ ಎಲ್ಲರ ಖುಷಿ ಪಡುವಂತೆ ಮಾಡಿದ್ದಾರೆ.

ಮಗನ ಯಶಸ್ಸಿಗೆ ಸಂತಸ ವ್ಯಕ್ತ ಪಡಿಸಿದ ತಂದೆ

ಮಗನ ಈ ಸಾಧನೆಗೆ ಪುಟ್ಟರಾಜು ಅವರ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಮಗನ ಕಷ್ಟ ಪಡುತ್ತಿದ್ದದ್ದನ್ನಾ ಹತ್ತಿರದಿಂದ ನೋಡಿದ್ದ ಅವರ ತಂದೆ, ಈ ಯಶಸ್ಸಿನಿಂದ ಭಾವುಕರಾಗಿದ್ದಾರೆ. ತಮ್ಮ ಸಂತಸವನ್ನು ಹಂಚಿಕೊಂಡ ಅವರು, ನಮ್ಮದು ಅತ್ಯಂತ ಬಡ ಕುಟುಂಬ. ಹಾಗಾಗಿ ಬಿಡುವಿದ್ದಾಗಲೆಲ್ಲಾ ತಮಗೆ ಸಹಾಯ ಮಾಡಬೇಕೆಮದು ಮಗ ನಮ್ಮ ಜೊತೆ ಕುರಿ ಕಾಯಲು ಬರುತ್ತಿದ್ದನೆಂದು ನೆನಪಿಸಿಕೊಂಡರು. ಹಾಗಿದ್ದರೂ ಆತನಿಗೆ ಓದಿನ ಕಡೆಗಿನ ಆಸಕ್ತಿ ಒಂದು ಚೂರು ಕಮ್ಮಿ ಆಗಿರಲ್ಲಿಲ್ಲ. ಆತನ ಪರಿಶ್ರಮಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ. ಆತ ಮಾಡಿರುವ ಈ ಸಾಧನೆ ತಮಗೆಲ್ಲಾ ಅತೀವ ಹೆಮ್ಮೆ ತಂದಿದೆ ಎಂದರು.

ಇಂದಿನ ದಿನಗಳಲ್ಲಿ ಡಾಕ್ಟರ್‌ ಓದಬೇಕೆಂದರೆ ಲಕ್ಷ ಲಕ್ಷ ರೂಪಾಯಿಗಳನ್ನಾ ಸುರಿಬೇಕು ಎನ್ನುವುದು ಎಲ್ಲರಿಗೂ ತಿಳಿದ ಮತ್ತು ಇದು ಸಾಮಾನ್ಯ ವಿಚಾರ ಎನ್ನುವಂತಾಗಿದೆ. ಅದರಲ್ಲೂ ಈ ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಕೊಟ್ಟು ಖಾಸಗಿ ತರಬೇತಿ ಕೇಂದ್ರಗಳ ಸೇರಿಕೊಳ್ಳುತ್ತಾರೆ. ಆದರೆ, ಹಳ್ಳಿಯೊಂದರಲ್ಲಿ ಕುರಿ ಕಾಯುತ್ತಾ, ಸಿಕ್ಕ ಸಮಯದಲ್ಲಿ ಪುಸ್ತಕ ಹಿಡಿದು ಓದಿದ ಪುಟ್ಟರಾಜು ಅಂತಹ ಯಾವ ದುಬಾರಿ ತರಬೇತಿಯನ್ನಾ ಪಡೆಯದೇ ಈ ಸಾಧನೆ ಮಾಡಿದ್ದಾರೆ. ಇದೂ ನಿಜಕ್ಕೂ ನಿಜವಾದ ಸಾಧನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+