ಪರ್ಸ್ ಅನ್ನು ಆಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿಟ್ಟರೆ ಕಳ್ಳತನ ತಡೆಯಬಹುದು: ಹೇಗೆ ಎನ್ನುವ ರಹಸ್ಯ ಇಲ್ಲಿದೆ
ಒಂದು ವೇಳೆ ನೀವು ಕೂಡಾ ರೀಲ್‌ಗಳನ್ನು ಹೆಚ್ಚಾಗಿ ನೋಡುವವರಾಗಿದ್ದರೆ ಈ ಒಂದು ರೀಲ್ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ತಮ್ಮ ಪರ್ಸ್ ಅನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಚಪಾತಿ ಸುತ್ತುಕೊಳ್ಳುವಂತೆ ಸುತ್ತಿಕೊಳ್ಳುವ ಟ್ರೆಂಡ್ ಅನ್ನು ನೀವು ಕೂಡಾ ಗಮನಿಸಿರಬಹುದು. ಇದು ನೋಡುವುದಕ್ಕೆ ತಮಾಷೆಯಂತೆ ಕಾಣಬಹುದು. ಆದರೆ ಇದು ಅತ್ಯಂತ ಗಂಭೀರ ವಿಚಾರ. ಸೇಫ್ಟಿ ಉದ್ದೇಶಕ್ಕಾಗಿ ಜನರು ಈ ತಂತ್ರವನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಆಲ್ಯೂಮಿನಿಯಂ ಫಾಯಿಲ್ ಹೇಗ ಉಪಯುಕ್ತ
ಪರ್ಸ್ ಅನ್ನು ಆಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿಕೊಂಡು ಇಡುವ ಹಿಂದೆ ಒಂದು ಮುಖ್ಯ ಸುರಕ್ಷತಾ ಉದ್ದೇಶವಿದೆ. ಈ ಪರ್ಸ್‌ಗಳಲ್ಲಿರುವ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಸೇಫ್ಟಿ ಮಾತ್ರ ಇದರ ಉದ್ದೇಶವಲ್ಲ, ಬದಲಿಗೆ ವಾಷಿಂಗ್ಟನ್‌ನ ACLU ಪ್ರಕಾರ, ಎನ್‌ಹ್ಯಾನ್ಸಡ್ ಡ್ರೈವಿಂಗ್ ಲೈಸನ್ಸ್‌ನಲ್ಲಿರುವ ವಿಶಿಷ್ಟ ID ಸಂಖ್ಯೆಯನ್ನು ಮಾರುಕಟ್ಟೆಗಳಲ್ಲಿ ಸಿಗುವ ವಾಣಿಜ್ಯ RFID ರೀಡರ್‌ಗಳ ಸಹಾಯದಿಂದ 162 ಅಡಿ ದೂರದವರೆಗೆ ರೀಡ್ ಮಾಡಬಹುದು. ಆದ್ದರಿಂದ ಈ ಆಲ್ಯೂಮಿನಿಯಂ ಫಾಯಿಲ್ ಸೇಫ್ಟಿ ಹ್ಯಾಕ್ ಅನ್ನು ಹುಚ್ಚುತನ ಎಂದು ತಳ್ಳಿ ಹಾಕುವಂತಿಲ್ಲ.

ಅನುಕೂಲದ ಜೊತೆಗಿದೆ ಅನಾನುಕೂಲ
ಇತ್ತೀಚಿನ ದಿನಗಳಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಲು ಸಹಾಯವಾಗುವ ಉದ್ದೇಶದಿಂದ ಸಾರಿಗೆ ಪಾಸ್‌ಗಳು ಮತ್ತು ಆಫೀಸ್ ಬ್ಯಾಡ್ಜ್‌ಗಳು, ಚೆಕ್‌ಪಾಯಿಂಟ್‌ಗಳು, ಟರ್ನ್‌ಸ್ಟೈಲ್‌ಗಳು ಮತ್ತು ಬಾಗಿಲುಗಳಲ್ಲಿ ಕೆಲವು ರೀತಿಯ RFID ಅಥವ NFC ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಇದರಿಂದ ಕೆಲಸ ಬೇಗನೆ ಆಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಇದರಿಂದ ಉಂಟಾಗುವ ಅನಾನುಕೂಲತೆ ಕೂಡಾ ಸಾಕಷ್ಟಿದೆ. ಇದೇ ಕಾರಣದಿಂದ ಆಧುನಿಕ ಚಾಲಕ ಪರವಾನಗಿಗಳ ಮೇಲಿನ RFID ಟ್ಯಾಗ್‌ಗಳನ್ನು ಅಸುರಕ್ಷಿತ ಎಂದು ACLU ವರದಿ ಮಾಡಿದೆ. DHS ಸ್ವತಃ ಚಿಪ್‌ಗಳನ್ನು 30 ಅಡಿ ದೂರದಿಂದಲೂ ರೀಡ್ ಮಾಡಬಹುದು ಎಂದು ಒಪ್ಪಿಕೊಂಡಿದೆ.
ಟ್ರಾಕ್ ಮಾಡಲು ಸಹಾಯ ಮಾಡುವ ನಂಬರ್
ಸುಮಾರು 250 ಡಾಲರ್ ವೆಚ್ಚದ ಬಿಡಿಭಾಗಗಳನ್ನು ಬಳಸಿ ಅದಕ್ಕೆ ರೀಡರ್ ಅನ್ನು ಜೋಡಿಸಿ ಸ್ಯಾನ್ ಫ್ರಾನ್ಸಿಸ್ಕೋ ನಗರದಾದ್ಯಂತ ಓಡಾಡಿ ಮಾಲೀಕರ ಗಮನಕ್ಕೆ ಬಾರದಂತೆ ಕಾರ್ಡ್‌ಗಳ ಡೇಟಾವನ್ನು ತೆಗೆದು ಅದನ್ನು ನಕಲು ಮಾಡಬಹುದು ಎಂದು ಭದ್ರತಾ ಸಂಶೋಧಕರೊಬ್ಬರು ಸಾಬೀತು ಮಾಡಿ ತೋರಿಸಿದ್ದಾರೆ.ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಕಾರ್ಡ್ ಡೇಟಾವನ್ನು ನಕಲು ಮಾಡಬಹುದು ಎಂದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ದೋಚಿ ಬಿಡಬಹುದು ಎಂದಲ್ಲ. ಬದಲಿಗೆ ನೀವು ಎಲ್ಲೇ ಹೋದರೂ ಆ ಒಂದು ನಂಬರ್ ಮೂಲಕ ನಿಮ್ಮನ್ನು ಟ್ರಾಕ್ ಮಾಡುತ್ತಲೇ ಇರಬಹುದು.
ಫಾಯಿಲ್ ನಿಜವಾಗಿಯೂ ಕೆಲಸ ಮಾಡುತ್ತದೆಯೇ?
ಮೂಲ ಭೌತಶಾಸ್ತ್ರ ಇರುವುದು ಇಲ್ಲಿಯೇ. ಅಲ್ಯೂಮಿನಿಯಂ ಒಂದು ಉತ್ತಮ ವಾಹಕ. ಇದು ರೇಡಿಯೋ ತರಂಗಗಳನ್ನು ನಿರ್ಬಂಧಿಸುವ ಅಥವಾ ಚದುರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಫ್ಯಾರಡೆ ಕೇಜ್ ತತ್ವದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಸಿಗ್ನಲ್‌ಗಳು ಪ್ರವೇಶಿಸುವುದನ್ನು ಅಥವಾ ಹೊರಹೋಗುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ನಾರ್ಟನ್ ಪ್ರಕಾರ ತಾಮ್ರ ಅಥವಾ ಅಲ್ಯೂಮಿನಿಯಂನಂತಹ ವ್ಯಾಲೆಟ್‌ಗಳಲ್ಲಿ ಬಳಸುವ ಲೋಹಗಳು, ಕಾರ್ಡ್ ಅಥವಾ ಡಾಕ್ಯುಮೆಂಟ್‌ಗೆ ಹಾನಿಯಾಗದಂತೆ ಹೊರಸೂಸುವ RFID ರೇಡಿಯೋ ಸಿಗ್ನಲ್‌ಗಳನ್ನು ನಿರ್ಬಂಧಿಸುತ್ತವೆ.
ಸಾಕಾಗುವುದಿಲ್ಲ ಸಿಂಗಲ್ ಲೇಯರ್
ಆದರೆ ಇದು ಅದರದ್ದೇ ಆದ ನ್ಯೂನತೆಗಳನ್ನು ಕೂಡಾ ಹೊಂದಿದೆ. ಅಲ್ಯೂಮಿನಿಯಂ ಫಾಯಿಲ್ RFID ಟ್ಯಾಗ್‌ಗಳನ್ನು ನಿರ್ಬಂಧಿಸುವಲ್ಲಿ ಪರಿಣಾಮಕಾರಿಯಾಗಬಹುದು. ಆದರೆ ಇದು ಸುಲಭವಾಗಿ ಹರಿದುಹೋಗುತ್ತದೆ. ಈ ಮೂಲಕ ಕೆಲವು ಸಿಗ್ನಲ್‌ಗಳು ಒಳ ಬರುವ ಅಥವಾ ಹೊರ ಹೋಗುವ ಅಪಾಯವಿರುತ್ತದೆ. ಆದ್ದರಿಂದ ಸಿಂಗಲ್ ಲೇಯರ್‌ನಲ್ಲಿ ಪರ್ಸ್ ಅನ್ನು ಸುತ್ತುವ ಬದಲು ಮೂರು ನಾಲ್ಕು ಪದರಗಳಲ್ಲಿ ಇದನ್ನು ಸುತ್ತಿಟ್ಟರೆ ಒಳ್ಳೆಯದು. ಹಲವು ಪದರಗಳಲ್ಲಿ ಇದು ಇಡೀ ವ್ಯಾಲೆಟ್ ಅನ್ನು ಆವರಿಸಿದಾಗ ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ವ್ಯಾಲೆಟ್‌ಗಳಲ್ಲಿ ಸಾಮಾನ್ಯವಾಗಿ ಒಂದು ಕಾರ್ಡ್ ಮಾತ್ರವಲ್ಲ, ಬದಲಾಗಿ ವೈರ್‌ಲೆಸ್ ಆಗಿ ರೀಡ್ ಮಾಡಬಹುದಾದ ಹಲವಾರು ವಸ್ತುಗಳು ಕೂಡಾ ಇರುತ್ತವೆ.
ಸೈಬರ್‌ಸೆಕ್ಯುರಿಟಿ ತಜ್ಞರು ಹೇಳುವುದೇನು ?
ಆದರೆ ಇದು ಸಂಪೂರ್ಣ ಸುರಕ್ಷಿತ ಪರಿಹಾರವಲ್ಲ ಎಂದು ತಜ್ಞರು ಒತ್ತಿ ಹೇಳುತ್ತಾರೆ. ಯಾಕೆಂದರೆ ಇದನ್ನು ಪರ್ಸ್‌ಗೆ ಸುತ್ತಿ ಇಟ್ಟುಕೊಂಡಾಗ , ಅಂತರ ಅಥವಾ ಸಂಪೂರ್ಣ ಕವರೇಜ್ ಇದ್ದರೆ, ಯಾವುದೇ ಸಿಗ್ನಲ್ ಹಾದುಹೋಗುವುದಿಲ್ಲ. ಅಲ್ಲದೆ, ಈ ವಿಧಾನದ ಪರಿಣಾಮಕಾರಿತ್ವವು ಆವರ್ತನ ಮತ್ತು ಬಳಸಿದ ಚಿಪ್ ಪ್ರಕಾರವನ್ನು ಅವಲಂಬಿಸಿರುತ್ತದೆ. ಹೀಗಾಗಿ, ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತುವುದನ್ನು ಸುಲಭ ಮತ್ತು ಕಡಿಮೆ-ವೆಚ್ಚದ ನಿರ್ಬಂಧಕವೆಂದು ಹೇಳಲಾಗುತ್ತದೆ. ಆದರೆ ಇದನ್ನು ಫೂಲ್‌ಪ್ರೂಫ್ ಭದ್ರತಾ ಕ್ರಮ ಎಂದು ಪರಿಗಣಿಸಲಾಗುವುದಿಲ್ಲ. ಇದರ ಬದಲು ಸೈಬರ್‌ಸೆಕ್ಯುರಿಟಿ ತಜ್ಞರು ವಿಶೇಷವಾಗಿ ವಿನ್ಯಾಸಗೊಳಿಸಲಾದ RFID-ಬ್ಲಾಕಿಂಗ್ ಸ್ಲೀವ್ ಅಥವಾ ವ್ಯಾಲೆಟ್‌ಗಳನ್ನು ಬಳಸಲು ಶಿಫಾರಸು ಮಾಡುತ್ತಾರೆ. ಈ ಉತ್ಪನ್ನಗಳು ಅವುಗಳ ತಯಾರಿಕೆಯಲ್ಲಿ ಬಳಸುವ ವಾಹಕ ವಸ್ತುವಿನಿಂದಾಗಿ ಹೆಚ್ಚು ಪರಿಣಾಮಕಾರಿಯಾಗಿದೆ.


Click it and Unblock the Notifications
