ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಮುಖಂಡನ ಬಾಯಲ್ಲಿ 'ಸಾರೇ ಜಹಾಂ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ'

|
Google Oneindia Kannada News

ಲಂಡನ್, ಸೆಪ್ಟೆಂಬರ್ 1: ಪಾಕಿಸ್ತಾನ ರಾಜಕೀಯ ಮುಖಂಡರೊಬ್ಬರು' ಸಾರೆ ಜಹಾಂ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ' ಎಂದು ಹಾಡುವ ಮೂಲಕ ಭಾರತೀಯರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಗೂ ಭಾರತದ ನಡುವೆ ಸಂಬಂಧ ಅಷ್ಟು ಸರಿಯಾಗಿಲ್ಲ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಏನೇ ವಿಷಯ ದೊರೆತರೂ ಸಾಕು ಭಾರತದ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಇದೀಗ ಪಾಕ್ ಮುಖಂಡನೊಬ್ಬ ಸಾರೆ ಜಹಾಂ ಸೆ ಅಚ್ಛಾ ಎಂದು ಹಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.ಪಾಕಿಸ್ತಾನದ ಮುತ್ತಾಹಿದಾ ಕೌಮಿ ಚಳವಳಿಯ (ಎಂಕ್ಯೂಎಂ) ಸ್ಥಾಪಕ ಅಲ್ತಫ್ ಹುಸೆನ್ ಅವರು 'ಸಾರೆ ಜಹಾಂ ಸೆ ಅಚ್ಛಾ ಹಿಂದೂಸ್ತಾನ್ ಹಮಾರ' ಹಾಡನ್ನು ಹೆಮ್ಮೆಯಿಂದ ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Pakistan Leader Altaf Hussain Sings Saare Jahan Se Acha Hindustan Hamara

ಉರ್ದುವಿನ ಪ್ರಖ್ಯಾತ ಕವಿ, ದಾರ್ಶನಿಕ ಮಹ್ಮದ್ ಇಕ್ಬಾಲ್ ಅವರು 'ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರ' ಎಂಬ ಹಾಡನ್ನು ರಚಿಸಿದ್ದರು. ಎಲ್ಲಾ ನಾಡಿಗಿಂತ ಹಿಂದೂಸ್ತಾನ ಶ್ರೇಷ್ಠ ಎಂಬ ಸಂದೇಶ ಸಾರುವ ಈ ಹಾಡು ಸ್ವಾತಂತ್ರ್ಯ ಪೂರ್ವ ಹೋರಾಟದಲ್ಲಿ ದೇಶಭಕ್ತಿಯ ಕಿಚ್ಚು ಹಬ್ಬಿಸಿತ್ತು.

ಪಾಕಿಸ್ತಾನದ ಕರಾಚಿ ಮೂಲದ ಅಲ್ತಫ್ ಹುಸೇನ್ ಈಗ ಇದೇ ಹಾಡನ್ನು ಹಾಡಿದ್ದಾರೆ. ಮೇಜು ಕುಟ್ಟುತ್ತಾ ಎರಡು ಕೈಗಳನ್ನು ಬೀಸುತ್ತ ಹೆಮ್ಮೆಯಿಂದ 'ಸಾರೆ ಜಹಾಂ ಸೆ ಅಚ್ಛಾ' ಎಂದು ಹಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಲಂಡನ್ನಿನಲ್ಲಿ ವಾಸಿಸುತ್ತಿರುವ ಹುಸೇನ್ ಅವರು ಕೆಲವು ದಿನಗಳ ಹಿಂದೆಯಷ್ಟೇ, ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ಸರ್ಕಾರದ ಮೇಲೆ ಕಾಶ್ಮೀರದ ಜನರು ನಂಬಿಕೆ ಇಡಬಾರದು.

ಹಾವು, ಮೊಸಳೆ ಜತೆಗೆ ಪೋಸ್ ಕೊಟ್ಟಿದ್ದ ಪಾಕ್ ಗಾಯಕಿಗೆ ಜೈಲು ಭೀತಿಹಾವು, ಮೊಸಳೆ ಜತೆಗೆ ಪೋಸ್ ಕೊಟ್ಟಿದ್ದ ಪಾಕ್ ಗಾಯಕಿಗೆ ಜೈಲು ಭೀತಿ

ಪಾಕಿಸ್ತಾನ ಸರ್ಕಾರ ಹಾಗೂ ಸೇನೆ 72 ವರ್ಷಗಳಿಂದ ಕಾಶ್ಮೀರದ ಜನರಿಗೆ ಮೋಸ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ 2016ರಲ್ಲಿ ಹುಸೇನ್ ಅವರು, ಪಾಕಿಸ್ತಾನವನ್ನು ವಿಶ್ವದ ಕ್ಯಾನ್ಸರ್ ಎಂದು ಸಂದರ್ಶನವೊಂದರಲ್ಲಿ ವ್ಯಂಗ್ಯವಾಡಿದ್ದರು.

ಅಲ್ತಾಫ್ ಹುಸೇನ್ ಅವರು ಭಾರತ-ಪಾಕ್ ನಡುವೆ ಎದುರಾಗುವ ಸಮಸ್ಯೆಯನ್ನು ಬಗೆಹರಿಸಲು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಭಾರತ ಸಹಾಯ, ಹಣ ನೀಡುತ್ತಿದೆ ಎಂದು ಪಾಕಿಸ್ತಾನ ಅನೇಕ ಬಾರಿ ಆರೋಪಿಸಿದೆ. ಆದರೆ ಎಂಕ್ಯೂಎಂ ಮತ್ತು ಭಾರತ ಎರಡೂ ಇದನ್ನು ತಿರಸ್ಕರಿಸಿವೆ.

English summary
Founder of Pakistan’s Muttahida Qaumi Movement (MQM) party, Altaf Hussain sings 'Saare jahan se acha Hindustan hamara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X