ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
ಧಾರವಾಡ, ಏಪ್ರಿಲ್ 25: ಕರ್ನಾಟಕಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಭೇಟಿ ನೀಡಿದ್ದರು. ಅವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಧಾರವಾಡದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ವಸೂಲಿ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಕರ್ನಾಟಕಕ್ಕೆ ರಣದೀಪ್ ಸುರ್ಜೆವಾಲಾ ಅವರು ಬಂದು ಹೋಗಿದ್ದರು. ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಹಿರೇಮಠ ಅವರ ನಿವಾಸಕ್ಕೆ ಭೇಟಿಯಾಗಿ ಬಿಜೆಪಿ ವಿರುದ್ಧ ಗುಡುಗಿದ್ದರು. ಮಗಳ ಕಳೆದುಕೊಂಡ ನಿರಂಜನ್ ಹಿರೇಮಠ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.

ಇದೀಗ ಸುರ್ಜೆವಾಲ ರಾಜ್ಯ ಭೇಟಿ ಬಗ್ಗೆ ಮಾತನಾಡಿರುವ ಪ್ರಹ್ಲಾದ್ ಜೋಶಿಯವರು, ಅವರು ರಾಜ್ಯಕ್ಕೆ ಕಾಂಗ್ರೆಸ್‌ನ ವಸೂಲಿಗಾಗಿ ಬಂದಿದ್ದರು. ಕರ್ನಾಟಕದಿಂದ ತೆಗೆದುಕೊಂಡು ಹೋಗಿ ಬೇರೆ ಕಡೆ ಕೊಡುತ್ತಾರೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್‌ನವರಿಗೆ ಕರ್ನಾಟಕವೇ ಎಟಿಎಂ
ಕಾಂಗ್ರೆಸ್‌ನವರಿಗೆ ಇರೋದೆ ಕರ್ನಾಟಕವೊಂದೆ. ಅವರಿಗೆ ಕರ್ನಾಟಕವೇ ಎಟಿಎಂ. ಅವರು ನಮ್ಮ ಡಿಎನ್ಎ ಬಗ್ಗೆ ಪ್ರಶ್ನೆ ಮಾತನಾಡುತ್ತಾರೆ. ಕಾಂಗ್ರೆಸ್‌ನವರ ತುಷ್ಠೀಕರಣ ಪರಿಣಾಮವಾಗಿಯೇ ಹುಬ್ಬಳ್ಳಿಯಲ್ಲಿ ನೇಹಾಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ನೇಹಾ ಕೊಲೆ ಬಳಿಕ ಸರ್ಕಾರದ ವಿರುದ್ಧ ಜನರೇ ನಿಂತು ಹೋರಾಟ ಮಾಡಿದ್ದಾರೆ. ಪ್ರತಿಭಟನೆ, ಆಕ್ರೋಶ ಹೆಚ್ಚಾಗುತ್ತಿದ್ದಂತೆ ನೇಹಾ ಹಿರೇಮಠ ಪರ ಕಾಂಗ್ರೆಸ್‌ನವರು ಒಬ್ಬೊಬ್ಬರಾಗೇ ಹೊರ ಬಂದರು. ಕೊಲೆ ಜೊತೆಗೆ ದಲಿತ ವ್ಯಕ್ತಿ ಮೇಲೆಯೂ ಹಲ್ಲೆ ಆಗಿದೆ. ಅಲ್ಲಿ ಕಾಂಗ್ರೆಸ್‌ನವರು ಸಿಂಪಥಿ ತೋರುತ್ತಿಲ್ಲ. ಏಕೆಂದರೆ ಅಲ್ಲಿ ಹೋರಾಟ ಆಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರ ನಡೆ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.
ದಲಿತನ ಮೇಲೆ ಹಲ್ಲೆಯಾದರೂ ಸ್ಪಂದಿಸದ ಕಾಂಗ್ರೆಸ್
ದಲಿತನ ಮೇಲೆ ಹಲ್ಲೆ ನಡೆದರೂ ಅಲ್ಲಿ ಪ್ರತಿಭಟನೆ ಆಗಿಲ್ಲ. ಅಂದರೆ ಅಲ್ಲಿ ಏನು ಆಗಿಲ್ಲ ಎಂದುಕೊಂಡಿದ್ದಾರೆ. ನೇಹಾ ಕೊಲೆ ವಿಚಾರದಲ್ಲಿ ವಿವಿಧ ಸಂಘಟನೆಯವರು, ಬಿಜೆಪಿ ಕಾರ್ಯಕರ್ತರು ಹೋರಾಟ ಮಾಡಿಕ್ಕೆ ಇಲ್ಲಿ ಸ್ಪಂದಿಸಿದ್ದಾರೆ. ಇದು ಕಾಂಗ್ರೆಸ್‌ನ ದ್ವಿಮುಖ ನೀತಿ ಎಂದು ಹೇಳಿದರು.
ಚೊಂಬು ಟೀಕೆಗೆ ಜೋಶಿ ತಿರುಗೇಟು
ಇಡೀ ದೇಶದಲ್ಲಿ ಸರ್ಕಾರ ರಚನೆ ಮಾಡಬೇಕಾದರೆ ಒಟ್ಟು 272 ಸ್ಥಾನಗಳು ಬೇಕು. ಇವರು ಸ್ಪರ್ಧಿಸಿರುವುದೇ 230 ಸ್ಥಾನಗಳಲ್ಲಿ. ಇಂತವರು ಇದೀಗ ಚೊಂಬು ಹಿಡಿದು ನಿಂತಿದ್ದಾರೆ. ಪ್ರಧಾನಿ ಮೋದಿಯವರು ಬರುವ ಮೊದಲು ಕಾಂಗ್ರೆಸ್ ನವರು ಚೊಂಬು ಹಿಡಿದು ಹೋಗುತ್ತಿದ್ದರು. ಪ್ರಧಾನಿ ಮೋದಿ ಬಂದ ಬಳಿಕ ಅದನ್ನು ನಿಲ್ಲಿಸಿದ್ದಾರೆ ಎಂದು ವ್ಯಂಗ್ಯವಾಡಿದರು.'
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 12 ಕೋಟಿಗಿಂತ ಹೆಚ್ಚು ಶೌಚಾಲಯ ಕಟ್ಟಿಸಿ ಕೊಟ್ಟಿದ್ದೇವೆ. ಹೀಗಿದ್ದರೂ ಕಾಂಗ್ರೆಸ್‌ನವರು ಚೊಂಬು ಹಿಡಿದು ಹೊರಟಿದ್ದಾರೆ ಎಂದು ಅವರು ಕಾಂಗ್ರೆಸ್‌ನ ಚೊಂಬು ಟೀಕೆಗೆ ತಿರುಗೇಟು ಕೊಟ್ಟರು.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications