ಗಂಡಂಗಾದ್ರೆ ಡಿವೋರ್ಸ್ ಕೊಡಬಹುದು, ಮಕ್ಕಳನ್ನ ಬಿಡಕ್ಕಾಗಲ್ವಲ್ಲ, 60 ವರ್ಷದವರೆಗೂ ಮದುವೆ ಆಗಿಲ್ಲ ಎಂದ ಸುಹಾಸಿನಿ ಮುಲಾಯ್

ಸುಹಾಸಿನಿ ಮುಲಾಯ್ ಎಂಬ ಬಾಲಿವುಡ್ನ ಹಿರಿಯ ನಟಿಗೆ ಈಗ ವಯಸ್ಸು 75 ವರ್ಷ. ಆದರೆ ಇವರಿಗೆ ಮದುವೆ ಆದಾಗ 60 ವರ್ಷ, ಗಂಡನ ಜೊತೆ ಅಡ್ಜೆಸ್ಟ್ ಆಗದಿದ್ದರೆ ಡಿವೋರ್ಸ್ ಕೊಡಬಹುದು, ಆದ್ರೆ ಮಕ್ಕಳನ್ನ ಬಿಡಕ್ಕಾಗಲ್ವಲ್ಲ, ಅದಕ್ಕೆ ಮದುವೆ ಆಗಿಲ್ಲ ಅನ್ನೋ ಈ ನಟಿಯ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

'ನಾನು ಮದುವೆ ಆದಾಗ ವಯಸ್ಸು 60 ವರ್ಷ, ಅಲ್ಲಿಯತನಕ ಯಾಕೆ ಮದುವೆ ಆಗಲಿಲ್ಲ ಅಂದರೆ ನನಗೆ ಸರಿಹೊಂದುವ ಹುಡುಗ ಸಿಗಲಿಲ್ಲ' ಎಂದು ತನ್ನ ಎಪ್ಪತ್ತೈದರ ಹರೆಯದಲ್ಲೂ ಲವಲವಿಕೆಯಿಂದ ಮಾತನಾಡುವ ನಟಿ ಸುಹಾಸಿನಿ ಮುಲಾಯ್ ಲೈಫೇ ಒಂದು ಸಿನಿಮಾದ ಹಾಗಿದೆ. ಲಗಾನ್ ಮತ್ತು ಜೋಧಾ ಅಕ್ಬರ್ ನಂತಹ ದೊಡ್ಡ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಸುಹಾಸಿನಿ ಮುಲಾಲ್ ಲವ್ವಲ್ಲಿ ಬಿದ್ದದ್ದು ಅರವತ್ತನೇ ವಯಸ್ಸಿಗೆ. ಫೇಸ್ಬುಕ್ ಮೂಲಕ ವಿಜ್ಞಾನಿ ಅತುಲ್ ಗುರ್ತು ಅವರ ಪರಿಚಯ. ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಸುಹಾಸಿನಿ, ತನಗೆ ಸಮಾನತೆಯನ್ನು ಗೌರವಿಸುವ ಮತ್ತು ಬೇರೆಯವರ ಜೀವನಶೈಲಿಯನ್ನು ನೋಡಿ ತಪ್ಪು ತಿಳಿಯದ ಹಾಗೂ ಅತಿಯಾದ ಧಾರ್ಮಿಕ ಮನೋಭಾವ ಇಲ್ಲದ ಸಂಗಾತಿ ಬೇಕಿತ್ತು. ಅಂತಹ ವ್ಯಕ್ತಿ ಸಿಗದ ಕಾರಣ ತಾನು ಅಲ್ಲಿಯವರೆಗೆ ಮದುವೆಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Veteran Actress Suhasini Mulay

ಸುಹಾನಾ ಸಫರ್ ಕಾರ್ಯಕ್ರಮದಲ್ಲಿ ಮಾತನಾಡಿದ ಸುಹಾಸಿನಿ, 'ನನ್ನ ಪತಿ ಪ್ರಸಿದ್ಧ ವಿಜ್ಞಾನಿ. ಅವರು ವಿಜ್ಞಾನದ ಬಗ್ಗೆ ಮಾತನಾಡುವಾಗ ನನಗೆ ಏನೂ ಅರ್ಥವಾಗುವುದಿಲ್ಲ, ಆದರೆ ಅವರು ಅದ್ಭುತವಾದ ಒಳ್ಳೆಯ ಮನುಷ್ಯ' ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸುಹಾಸಿನಿ ಮತ್ತು ಅತುಲ್ ಮದುವೆಯಾಗಿ ಈಗ 15 ವರ್ಷಗಳಾಗಿವೆ.

ಗಮನ ಸೆಳೆದ ಫೇಸ್ಬುಕ್ ಪ್ರೊಫೈಲ್

ಸಹನಟರೊಬ್ಬರ ಒತ್ತಾಯದ ಮೇರೆಗೆ ಸುಹಾಸಿನಿ ಫೇಸ್ಬುಕ್ ಖಾತೆ ತೆರೆದಿದ್ದರು. ತನ್ನ ಕೆಲಸದ ಅವಶ್ಯಕತೆಗಾಗಿ ಸರ್ಚ್ ಮಾಡುತ್ತಿದ್ದಾಗ ಅವರಿಗೆ ಅತುಲ್ ಅವರ ಪ್ರೊಫೈಲ್ ಕಾಣಿಸಿತು. ಸೈಂಟಿಸ್ಟ್ಸ್ ಕೂಡ ಫೇಸ್ಬುಕ್ನಲ್ಲಿ ಇರುತ್ತಾರಾ ಎಂದು ಆಶ್ಚರ್ಯಪಟ್ಟ ಸುಹಾಸಿನಿ ಅವರ ಪ್ರೊಫೈಲ್ ಅನ್ನು ಕುತೂಹಲದಿಂದ ನೋಡುತ್ತಾರೆ. ಅವರು ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಿ, ಅದರ ಬಗ್ಗೆ ತಿಳಿಯಲು ಒಂದು ಮೆಸೇಜ್ ಕಳಿಸ್ತಾರೆ. ಅಲ್ಲಿಂದ ಇಬ್ಬರ ನಡುವೆ ಇಮೇಲ್ ಸಂಭಾಷಣೆ ಶುರುವಾಗುತ್ತೆ.

ಹಸೆಮಣೆ ಏರಲು ಸಜ್ಜಾದ ನವಗ್ರಹ ಬೆಡಗಿ ಶರ್ಮಿಳಾ ಮಾಂಡ್ರೆ: ನಿಶ್ಚಿತಾರ್ಥದ ಡೇಟ್‌ ಫಿಕ್ಸ್‌, ಹುಡುಗ ಯಾರು?
ಹಸೆಮಣೆ ಏರಲು ಸಜ್ಜಾದ ನವಗ್ರಹ ಬೆಡಗಿ ಶರ್ಮಿಳಾ ಮಾಂಡ್ರೆ: ನಿಶ್ಚಿತಾರ್ಥದ ಡೇಟ್‌ ಫಿಕ್ಸ್‌, ಹುಡುಗ ಯಾರು?

ಒಂದು ಹಂತದಲ್ಲಿ ಅತುಲ್ ತನಗೊಬ್ಬ ಜೀವನ ಸಂಗಾತಿ ಬೇಕು ಎಂದು ಸೂಕ್ಷ್ಮವಾಗಿ ಹೇಳಿದ್ರಂತೆ. ಇದನ್ನು ಕೇಳಿದ ಸುಹಾಸಿನಿಗೆ ನಗು ಬಂದಿತ್ತಂತೆ. 60 ವರ್ಷಗಳ ಕಾಲ ಸಿಗದ ಸಂಗಾತಿ ಈಗ ಹಠಾತ್ತನೆ ಹೇಗೆ ಸಿಗಲು ಸಾಧ್ಯ ಎಂದು ಅವರು ಆ ಹೊತ್ತಿಗೆ ಯೋಚಿಸಿದ್ದರು.

ಎಚ್ಚರದ ಹೆಜ್ಜೆ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರೊಫೈಲ್ಗಳು ಹೆಚ್ಚಾಗಿರುವುದರಿಂದ ಸುಹಾಸಿನಿ ಆರಂಭದಲ್ಲಿ ಹೆದರಿದ್ದರು. ಅತುಲ್ ಒಮ್ಮೆ ಸುಹಾಸಿನಿ ಅವರ ಫೋನ್ ನಂಬರ್ ಕೇಳಿದಾಗ ಸುಹಾಸಿನಿ ಆತಂಕದಲ್ಲಿ ತನ್ನ ಸ್ನೇಹಿತೆಯೊಬ್ಬರ ಸಲಹೆ ಪಡೆದರಂತೆ. ಸ್ನೇಹಿತೆ ಧೈರ್ಯ ತುಂಬಿದ ಅತುಲ್ ಕೆಲಸ ಮಾಡುವ ಸಂಸ್ಥೆಯ ವೆಬ್ಸೈಟ್ ನೋಡಿ ಅವರ ವಿವರಗಳು ನಿಜ ಎಂದು ಖಚಿತಪಡಿಸಿಕೊಂಡು ನಂತರ ನಂಬರ್ ಕೊಟ್ಟರಂತೆ.
ದೀಪಾವಳಿಯ ಸಮಯದಲ್ಲಿ ಇಬ್ಬರೂ ಭೇಟಿಯಾಗಲು ನಿರ್ಧರಿಸಿದರು. ಮೊದಲ ಭೇಟಿಯಲ್ಲಿ ಫೋಟೋದಲ್ಲಿದ್ದ ವ್ಯಕ್ತಿ ಇವರೇನಾ ಎಂದು ಖಚಿತಪಡಿಸಿಕೊಳ್ಳಲು ಸುಹಾಸಿನಿ ತಡವಾಗಿ ಹೋಗಿದ್ದರಂತೆ. ನವೆಂಬರ್ ಕೊನೆಯಲ್ಲಿ ಭೇಟಿಯಾದ ಇಬ್ಬರು, ಜನವರಿ 16 ರಂದೇ ಮದುವೆಯಾಗಲು ನಿರ್ಧರಿಸುತ್ತಾರೆ.

ಅಮ್ಮನಿಗೆ ಶಾಕ್

60ನೇ ವಯಸ್ಸಿನಲ್ಲಿ ಮದುವೆಯಾಗುವ ವಿಷಯ ಕೇಳಿ ಸುಹಾಸಿನಿ ಅವರ ತಾಯಿಗೆ ನಂಬಲು ಸಾಧ್ಯವಾಗಲಿಲ್ಲ. ಆದರೆ ಅತುಲ್ ಬುದ್ಧಿವಂತಿಕೆಯನ್ನು ನೋಡಿ ಅಮ್ಮ ಒಪ್ಪಿಕೊಂಡರಂತೆ. 60ನೇ ವಯಸ್ಸಿನಲ್ಲಿ ಯಾಕೆ ಮದುವೆಯಾಗುತ್ತಿದ್ದೀರಿ ಎಂದು ಕೇಳಿದಾಗ ಅತುಲ್ ನೀಡಿದ ಉತ್ತರ ತಾಯಿಗೆ ತುಂಬಾ ಇಷ್ಟವಾಯಿತು. ನಾವು ಇಬ್ಬರೂ ಒಬ್ಬಂಟಿಯಾಗಿ ಬದುಕಬಲ್ಲೆವು, ಆದರೆ ನಮ್ಮ ಜೀವನದಲ್ಲಿ ಸಂತೋಷಕ್ಕೆ ಒಂದು ಅವಕಾಶ ನೀಡಲು ಬಯಸುತ್ತೇವೆ, ಇದು ಸರಿಬರದಿದ್ದರೆ ತಪ್ಪು ಒಪ್ಪಿಕೊಂಡು ದೂರಾಗುತ್ತೇವೆ ಎಂದು ಅತುಲ್ ಹೇಳಿದ್ದರಂತೆ.

ಸ್ಟಾರ್‌ಡಂ ನನ್ನ ತಲೆಗೇರಿತ್ತು, ಕಾಯಿಲೆ ದೊಡ್ಡ ಪಾಠ ಕಲಿಸಿತು ಎಂದ ಸಮಂತಾ! ವಿಜಯ್ ಸಿಎಂ ಆಗೋದು ಇವ್ರಿಗೆ ಮೊದಲೇ ಗೊತ್ತಿತ್ತಂತೆ!
ಸ್ಟಾರ್‌ಡಂ ನನ್ನ ತಲೆಗೇರಿತ್ತು, ಕಾಯಿಲೆ ದೊಡ್ಡ ಪಾಠ ಕಲಿಸಿತು ಎಂದ ಸಮಂತಾ! ವಿಜಯ್ ಸಿಎಂ ಆಗೋದು ಇವ್ರಿಗೆ ಮೊದಲೇ ಗೊತ್ತಿತ್ತಂತೆ!

ಆಫೀಸ್ನಲ್ಲಿ ಲೇವಡಿ, ಸಮಾಜದ ವಿರೋಧ

ಮದುವೆ ನೋಂದಣಿ ಕಚೇರಿಗೆ ಹೋದಾಗ ಅಲ್ಲಿದ್ದ ಅಧಿಕಾರಿ, ಸುಹಾಸಿನಿ ಹಳೆಯ ಮದುವೆ ಪ್ರಮಾಣಪತ್ರ ಪಡೆಯಲು ಬಂದಿದ್ದಾರೆ ಎಂದು ಕೊಂಡಿದ್ದರು. ನೀವು ಮತ್ತು ಈ ಅಂಕಲ್ ಮದುವೆಯಾಗುತ್ತಿದ್ದೀರಾ ಎಂದು ಕೇಳಿದಾಗ ದಂಪತಿಗಳಿಗೆ ನಗು ಬಂತಂತೆ.

ಚಿಕ್ಕ ವಯಸ್ಸಿನಲ್ಲಿ ಮದುವೆಯಾಗದಿದ್ದಾಗ ಜನರು ಹೇಗೆ ಮಾತನಾಡುತ್ತಿದ್ದರೋ, 60ನೇ ವಯಸ್ಸಿನಲ್ಲಿ ಮದುವೆಯಾದಾಗಲೂ ಹಾಗೆಯೇ ಮಾತನಾಡುತ್ತಾರೆ ಎಂದು ಸುಹಾಸಿನಿ ಹೇಳುತ್ತಾರೆ. ಸೆಲೆಬ್ರಿಟಿಗಳ ಜೀವನವನ್ನು ಸಮಾಜ ಸದಾ ಜಡ್ಜ್ ಮಾಡುತ್ತದೆ. ತನಗೆ 26 ವರ್ಷ ಇದ್ದಾಗ ಮದುವೆ ಬೇಡ ಎಂದಿದ್ದ ನಿರ್ಧಾರವನ್ನು ಅವರ ತಾಯಿ ಗೌರವಿಸಿದ್ದರು, ಆದರೆ ಇದು ಕಷ್ಟದ ಹಾದಿ ಎಂದು ಎಚ್ಚರಿಸಿದ್ದರು ಎಂಬುದನ್ನು ಸುಹಾಸಿನಿ ನೆನಪಿಸಿಕೊಂಡಿದ್ದಾರೆ.

5 ಬಾರಿ ರಾಷ್ಟ್ರ ಪ್ರಶಸ್ತಿ

ಸುಹಾಸಿನಿ ಮುಲಾಯ್ ಅವರು 5 ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದಿರುವ ಪ್ರತಿಭಾವಂತ ನಟಿ. 1969 ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಭುವನ್ ಶೋಮ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಅವರು, ಸತ್ಯಜಿತ್ ರೇ ಅವರಂತಹ ದಿಗ್ಗಜರ ಜೊತೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. 60 ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿರುವ ಅವರಿಗೆ ಹು ತು ತು ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+