SWR: ಬೆಂಗಳೂರಿನಿಂದ ಹೊರಡುವ ವಾರಾಂತ್ಯದ ವಿಶೇಷ ರೈಲುಗಳ ಹೊಸ ಅವಧಿವರೆಗೆ ವಿಸ್ತರಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದ ಮೂಲೆಗಳಿಗೆ, ಬೇರೆ ರಾಜ್ಯಗಳಿಗೆ ಸಂಚಾರ ಮಾಡುವ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಭುವನೇಶ್ವರ-ಯಶವಂತಪುರ ನಿಲ್ದಾಣಗಳ ನಡುವೆ ಸಂಚರಿಸುವ ಸಾಪ್ತಾಹಿಕ ರೈಲು (02811/02812) ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದ್ದೇವೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಮಾರ್ಗದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಣೆಗೆ ಕ್ರಮ ಜರುಗಿಸಲಾಗಿದ್ದು, ವಾರಕ್ಕೆ ಒಮ್ಮೆ ಸಂಚರಿಸುವ ಭುವನೇಶ್ವರ-ಯಶವಂತಪುರ ವಿಶೇಷ ರೈಲು ನಿಲ್ದಾಣಗಳ ಮಧ್ಯೆ ಸಂಚರಿಸುತ್ತದೆ. ಪ್ರತಿ ಶನಿವಾರ ಭುವನೇಶ್ವರ ನಿಲ್ದಾಣದಿಂದ ಹೊರಡುವ ವಿಶೇಷ ರೈಲು (02811) ಭುವನೇಶ್ವರ-ಯಶವಂತಪುರ ವಿಶೇಷ ರೈಲಿನ ಸೇವೆ ಈ ಮೊದಲು ಜೂನ್ 27ರವರೆಗೆ ನಿಗದಿಪಡಿಸಲಾಗಿತ್ತು. ಇದೀಗ ಜುಲೈ 4 ರಿಂದ ಆಗಸ್ಟ್ 29ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದರು.

Bhubaneswar Yeshwantpur Special Train

ಕರ್ನಾಟಕದಿಂದ ಪ್ರತಿ ಸೋಮವಾರ ಯಶವಂತಪುರ ನಿಲ್ದಾಣದಿಂದ ಹೊರಡುವ ಯಶವಂತಪುರ-ಭುವನೇಶ್ವರ ವಿಶೇಷ ರೈಲು (02812) ಈ ಮೊದಲು ಜೂನ್ 29 ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು. ಇದನ್ನು ಈಗ ಜುಲೈ 6 ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. ರೈಲುಗಳ ಸೇವಾ ಅವಧಿಯಲ್ಲಿ ಮಾತ್ರವೇ ವಿಸ್ತರಣೆ ಆಗಿದ್ದು, ವೇಳಾಪಟ್ಟಿ, ಸಮಯದಲ್ಲಿ, ಮಾರ್ಗ, ನಿಲ್ದಾಣಗಳಲ್ಲಿ ಬದಲಾವಣೆ ಆಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ಎರಡು ದಿಕ್ಕಿನಲ್ಲಿ ಯಲಹಂಕ ಜಂಕ್ಷನ್ , ಹಿಂದೂಪುರ, ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮಾವರಂ ಜಂಕ್ಷನ್, , ರಾಜಮುಂಡ್ರಿ, ವಿಜಯವಾಡ , ಗುಂಟೂರು, ನರಸರಾವ್ ಪೇಟ್ , ಗಿದ್ದಲೂರು , ನಂದ್ಯಾಲ್, ಧೋಣೆ ಸೇರಿದಂತೆ ವಿವಿಧ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ.

ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಸಿಹಿ ಸುದ್ದಿ: ವಿಜಯಪುರ ರೈಲು ಮುಂದಿನ 2 ತಿಂಗಳು ವಿಸ್ತರಣೆ
ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಸಿಹಿ ಸುದ್ದಿ: ವಿಜಯಪುರ ರೈಲು ಮುಂದಿನ 2 ತಿಂಗಳು ವಿಸ್ತರಣೆ

ಕೆಎಸ್‌ ಆರ್ ನಿಲ್ದಾಣದಲ್ಲಿ ಭಾಗಶಃ ರದ್ದು

ಗಮನಿಸಬೇಕಾದ ಅಂಶವೆಂದರೆ ಕೆಎಸ್ಆರ್ ಬೆಂಗಳೂರು ನಿಲ್ದಾಣದ ಯಾರ್ಡ್‌ನಲ್ಲಿ ಕಾಮಗಾರಿ (ನಾನ್-ಇಂಟರ್ಲಾಕಿಂಗ್) ನಡೆಯುತ್ತಿರುವುದರಿಂದ ಈ ರೈಲುಗಳ ಸಂಚಾರದಲ್ಲಿ ಭಾಗಶಃ ಬದಲಾವಣೆ ಮಾಡಲಾಗಿದೆ. ಆಗಸ್ಟ್ 29ರಂದು ಭುವನೇಶ್ವರದಿಂದ ಹೊರಡುವ ರೈಲು (02811) ಯಶವಂತಪುರ ಬದಲಿಗೆ ಯಲಹಂಕ ನಿಲ್ದಾಣದಲ್ಲೇ ಪ್ರಯಾಣ ಅಂತ್ಯಗೊಳಿಸುತ್ತದೆ.

ಆಗಸ್ಟ್ 31ರಂದು ಹೊರಡಬೇಕಿರುವ ರೈಲು (02812) ಯಶವಂತಪುರ ಬದಲಿಗೆ ಯಲಹಂಕದಿಂದಲೇ ಪ್ರಯಾಣ ಆರಂಭಿಸುತ್ತದೆ. ಈ ಎರಡು ದಿನಗಳಂದು ಯಶವಂತಪುರ ಮತ್ತು ಯಲಹಂಕ ಮಧ್ಯೆ ಸದರಿ ರೈಲು ಸಂಚಾರ ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ಮೈಸೂರು-ಮದಾರ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರಿನ ಯಶವಂತಪುರದಿಂದ ವಿಜಯಪುರ ನಿಲ್ದಾಣವರೆಗೆ ರೈಲುಗಳ ಸೇವೆ ಎರಡು ತಿಂಗಳ ಅವಧಿಯವರೆಗೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಆಯಾ ಮಾರ್ಗಗಳ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+