SWR ಗುಡ್‌ನ್ಯೂಸ್: ಬೆಂಗಳೂರು, ಹುಬ್ಬಳ್ಳಿ ಸೇರಿ 8 ವಿಶೇಷ ರೈಲುಗಳ ಸಂಚಾರ ಸೇವೆ ವಿಸ್ತರಣೆ, ವೇಳಾಪಟ್ಟಿ ಇಲ್ಲಿದೆ

ಬೆಂಗಳೂರು: ನೈಋತ್ಯ ರೈಲ್ವೆ ವಲಯ (South Western Railway) ವತಿಯಿಂದ ಒಟ್ಟು ಎಂಟು ವಿಶೇಷ ರೈಲು ಸೇವೆಗಳ ವಿಸ್ತರಣೆ ಮಾಡಿದೆ. ಈ ರೈಲುಗಳು ಸದ್ಯ ನಿಗದಿತ ಮಾರ್ಗಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಚಾಲ್ತಿಯಲ್ಲಿರುವ ಸಮಯ, ನಿಲುಗಡೆಗಳು ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ವಿಶೇಷ ರೈಲುಗಳ ಸಂಚಾರ ಸೇವೆಯ ಅವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಂಗಳೂರು, ಕೇರಳದ ತಿರುವನಂತಪುರಂ, ಕೊಲ್ಲಂ ಮಾರ್ಗದ ರೈಲುಗಳ ಸಂಚಾರ ಅವಧಿ ವಿಸ್ತರಣೆ ಆಗಿದೆ. ಈ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ಎಲ್ಲ ರೈಲುಗಳು ಆಗಸ್ಟ್ 2026ರ ಅಂತ್ಯದವರೆಗೆ ವಿಸ್ತರಣೆ ಆಗಿವೆ.

8 Special Trains

ವಿಸ್ತರಣೆಗೊಂಡ ವಿಶೇಷ ರೈಲುಗಳ ಪಟ್ಟಿ ಇಲ್ಲಿದೆ

* ಹುಬ್ಬಳ್ಳಿ - ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್‌ ರೈಲು (07313) ಆಗಸ್ಟ್ 2 ರಿಂದ ಆಗಸ್ಟ್ 30 ರವರೆಗೆ ಪ್ರತಿ ಭಾನುವಾರ ಸಂಚಾರ ಮಾಡಲಿದೆ.

* ಕೊಲ್ಲಂ - ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್‌ ರೈಲು (07314) ಆಗಸ್ಟ್ 3 ರಿಂದ ಆಗಸ್ಟ್ 31 ರವರೆಗೆ ಪ್ರತಿ ಸೋಮವಾರ ತಲಾ 5 ಟ್ರಿಪ್‌ಗಳ ಸಂಚಾರ ನಡೆಸಲಿವೆ.

* ಎಸ್‌ಎಮ್‌ವಿಟಿ ಬೆಂಗಳೂರು- ತಿರುವನಂತಪುರಂ ನಾರ್ತ್ ವಿಶೇಷ ಎಕ್ಸ್‌ಪ್ರೆಸ್‌ ರೈಲು (06523) ಸಹಿತ ಆಗಸ್ಟ್ 3 ರಿಂದ ಆಗಸ್ಟ್ 31 ರವರೆಗೆ ಪ್ರತಿ ಸೋಮವಾರ 5 ಟ್ರಿಪ್ ಸೇವೆ ನೀಡಲಿದೆ.

Bengaluru Suburban Rail: 'ಕನಕ' ಕಾರಿಡಾರ್ ಶೇ.10ರಷ್ಟು ಪೂರ್ಣ: ಹೊಸ ನಿಲ್ದಾಣಗಳ ನಿರ್ಮಾಣಕ್ಕೆ K-RIDE ಸಿದ್ಧತೆ
Bengaluru Suburban Rail: 'ಕನಕ' ಕಾರಿಡಾರ್ ಶೇ.10ರಷ್ಟು ಪೂರ್ಣ: ಹೊಸ ನಿಲ್ದಾಣಗಳ ನಿರ್ಮಾಣಕ್ಕೆ K-RIDE ಸಿದ್ಧತೆ

* ತಿರುವನಂತಪುರಂ ನಾರ್ತ್ - ಎಸ್‌ಎಮ್‌ವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು (06524) ಆಗಸ್ಟ್ 4 ರಿಂದ ಸೆಪ್ಟೆಂಬರ್ 1 ರವರೆಗೆ ಪ್ರತಿ ಮಂಗಳವಾರ 5 ಟ್ರಿಪ್‌ಗಳ ಸೇವೆ ಮುಂದುವರಿಯಲಿದೆ.

* ಇದೇ ಮಾರ್ಗದ ಮತ್ತೊಂದು ಎಸ್‌ಎಮ್‌ವಿಟಿ ಬೆಂಗಳೂರು - ತಿರುವನಂತಪುರಂ ನಾರ್ತ್ ವಿಶೇಷ ರೈಲು (06547) ಆಗಸ್ಟ್ 5 ರಿಂದ ಆಗಸ್ಟ್ 26 ರವರೆಗೆ ಪ್ರತಿ ಬುಧವಾರ 4 ಟ್ರಿಪ್‌ಗಳು ಸೇವೆ ನೀಡಲಿದೆ.

* ತಿರುವನಂತಪುರಂ ನಾರ್ತ್ - ಎಸ್‌ಎಮ್‌ವಿಟಿ ಬೆಂಗಳೂರು ವಿಶೇಷ ರೈಲು (06548) ಆಗಸ್ಟ್ 6 ರಿಂದ ಆಗಸ್ಟ್ 27 ರವರೆಗೆ ಪ್ರತಿ ಗುರುವಾರ 4 ಟ್ರಿಪ್‌ಗಳ ಸೇವೆ ಒದಗಿಸಲಿದೆ

* ಎಸ್‌ಎಮ್‌ವಿಟಿ ಬೆಂಗಳೂರು - ತಿರುವನಂತಪುರಂ ನಾರ್ತ್ ಸ್ಪೆಷಲ್ (06555) ರೈಲು ಜುಲೈ 31 ರಿಂದ ಆಗಸ್ಟ್ 28 ರವರೆಗೆ ಪ್ರತಿ ಶುಕ್ರವಾರ ಸಂಚರಿಸಲಿದೆ.

* ತಿರುವನಂತಪುರಂ ನಾರ್ತ್ - ಎಸ್‌ಎಮ್‌ವಿಟಿ ಬೆಂಗಳೂರು ವಿಶೇಷ ರೈಲು (06556) ಆಗಸ್ಟ್ 2 ರಿಂದ ಆಗಸ್ಟ್ 30 ರವರೆಗೆ ಪ್ರತಿ ಭಾನುವಾರ ತಲಾ 5 ಟ್ರಿಪ್‌ಗಳ ಸಂಚಾರ ನೀಡಲಿದೆ.

ಶೀಘ್ರವೇ ಟಿಕೆಟ್ ಬುಕಿಂಗ್ ಓಪನ್

ಮುಂದಿನ ಒಂದು ತಿಂಗಳ ಅವಧಿಗೆ ವಿಸ್ತರಣೆಯಾದ ಈ ಎಲ್ಲ ವಿಶೇಷ ರೈಲುಗಳ ಟಿಕೆಟ್ ಗಳನ್ನು ನೀವು ಮುಂಗಡ ಕಾಯ್ದಿರಿಸಬಹುದು. ಶೀಘ್ರವೇ ಟಿಕೆಟ್ ಬುಕಿಂಗ್ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿಗೆ ಅಥವಾ https://indianrail.gov.in/ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+