ಹಾವು, ಮೊಸಳೆ ಜತೆಗೆ ಪೋಸ್ ಕೊಟ್ಟಿದ್ದ ಪಾಕ್ ಗಾಯಕಿಗೆ ಜೈಲು ಭೀತಿ

ಇಸ್ಲಾಮಾಬಾದ್, ಸೆಪ್ಟೆಂಬರ್ 15: ಕಾಶ್ಮೀರದ ವಿಚಾರವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆದರಿಸುವ ವಿಡಿಯೋ ಮಾಡಿದ್ದ, ಹಾವು ಹಾಗೂ ಮೊಸಳೆ ಜತೆಗೆ ಕಾಣಿಸಿಕೊಂಡಿದ್ದ ಪಾಕಿಸ್ತಾನಿ ಗಾಯಕಿ ರಬಿ ಪೀರ್ ಜಾದಾಗೆ ಈಗ ಸಂಕಷ್ಟ ಎದುರಾಗಿದೆ. ಸರೀಸೃಪಗಳ ಜತೆ ಪೋಸ್ ನೀಡಿದ್ದ ಆಕೆಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಅನಧಿಕೃತವಾಗಿ ಸರೀಸೃಪಗಳನ್ನು ಕೂಡಿ ಹಾಕಿಕೊಂಡ ಆರೋಪದಲ್ಲಿ ಪಾಕಿಸ್ತಾನದ ವನ್ಯಜೀವಿ ಇಲಾಖೆಯು ಆಕೆಗೆ ದಂಡ ಕಟ್ಟುವಂತೆ ಸೂಚಿಸಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಪೀರ್ ಜಾದಾ, "ಇವೆಲ್ಲವೂ ಪ್ರಧಾನಿ ಮೋದಿ ಅವರಿಗೆ ಉಡುಗೊರೆ. ನನ್ನ ಸ್ನೇಹಿತರು ನಿಮ್ಮ ಮೇಲೆ ಹಬ್ಬ ಮಾಡುತ್ತಾರೆ" ಎಂದಿದ್ದಳು. ಕಾಶ್ಮೀರಿ ಮಹಿಳೆಯರು ಹಾಗೂ ಆಕೆ ಸಾಕಿರುವ ಹಾವುಗಳು ಭಾರತದ ವಿರುದ್ಧ ಸನ್ನದ್ಧ ಸ್ಥಿತಿಯಲ್ಲಿ ಇರುವುದಾಗಿ ವಿಡಿಯೋದ ಆರಂಭದಲ್ಲಿ ಆಕೆ ಹೇಳಿದ್ದಳು.

Rabi Pirzada

ಪೀರ್ ಜಾದಾಗೆ ಶಿಕ್ಷೆಯಾದರೆ ಐದು ವರ್ಷದ ಜೈಲು ಶಿಕ್ಷೆ ಮತ್ತು ದಂಡ ಎರಡೂ ಆಗಬಹುದು. ಈ ಸರೀಸೃಪಗಳನ್ನು ವಿಡಿಯೋ ಮಾಡುವ ಸಲುವಾಗಿ ಬಾಡಿಗೆಗೆ ಪಡೆದಿದ್ದೆ ಎಂದು ಆಕೆ ತಿಳಿಸಿದ್ದಾಳೆ. ಕಳೆದ ಐದು ವರ್ಷಗಳಿಂದ ಹಲವು ಸುದ್ದಿ ವಾಹಿನಿಗಳಲ್ಲಿ ಹಾವಿನ ಜತೆಗೆ ಕಾಣಿಸಿಕೊಂಡಿದ್ದೇನೆ. ಆದರೆ ಈ ತನಕ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ ಎಂದಿದ್ದಾಳೆ.

ಮುಂದುವರಿದು, ದುರದೃಷ್ಟ ಏನೆಂದರೆ ಮೋದಿಗೆ ನಾನು ಎಚ್ಚರಿಕೆ ನೀಡುತ್ತಿದ್ದಂತೆ ಕ್ರಮವನ್ನು ಎದುರಿಸುತ್ತಿದ್ದೇನೆ ಎಂದಿದ್ದಾಳೆ. ಯಾರನ್ನು ಹೆಸರಿಸದೆ ಆಕ್ರೋಶ ವ್ಯಕ್ತಪಡಿಸಿರುವ ಆಕೆ, ವಿಶ್ವಾಸದ್ರೋಹಿ ಪಾಕಿಸ್ತಾನಿಗಳಿಗಿಂತ ಭಾರತೀಯರು ಎಷ್ಟೋ ಪಾಲು ಉತ್ತಮ ಎಂದಿದ್ದಾಳೆ. ಅಂಥ ವಿಶ್ವಾಸದ್ರೋಹಿಗಳಲ್ಲಿ ವನ್ಯ ಜೀವಿ ಇಲಾಖೆಯೂ ಒಂದು ಎಂದಿದ್ದಾಳೆ ಪೀರ್ ಜಾದಾ.

ನಾನು ಭಾರತೀಯರನ್ನು ಎಂದೂ ಟೀಕಿಸಿಲ್ಲ. ಮೋದಿಯನ್ನು ಮಾತ್ರ ಗುರಿ ಮಾಡಿಕೊಂಡೆ. ನಿಮಗೆ ಪಾಕಿಸ್ತಾನವನ್ನು ಪ್ರೀತಿಸಲು ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ, ದೇಶಕ್ಕೆ ದ್ರೋಹ ಮಾಡಬೇಡಿ ಎಂದು ಹೇಳಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+