• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀದಿ ನಾಯಿಯನ್ನು ಶ್ವಾನದಳಕ್ಕೆ ಸೇರಿಸಿಕೊಂಡ ಉತ್ತರಾಖಂಡ್ ಪೊಲೀಸರು

By Coovercolly Indresh
|

ಇದೇ ಮೊತ್ತ ಮೊದಲ ಬಾರಿಗೆ ಬೀದಿ ನಾಯಿಯೊಂದನ್ನು ತಮ್ಮ ಶ್ವಾನದಳಕ್ಕೆ ಸೇರಿಸಿಕೊಂಡಿರುವ ಉತ್ತರಾಖಂಡ್ ಪೊಲೀಸರು ಹೊಸ ಇತಿಹಾಸವನ್ನೇ ಬರೆದಿದ್ದಾರೆ.

ಸಾಮಾನ್ಯವಾಗಿ ದೇಶದ ಎಲ್ಲ ಭದ್ರತಾ ಪಡೆಗಳು ತಮ್ಮ ಸಹಾಯಕ್ಕಾಗಿ ಉತ್ತಮ ತಳಿಯ ಲಾಬ್ರಡಾರ್, ಆಲ್ಸೇಷನ್, ಜರ್ಮನ್‌ ಶೆಫರ್ಡ್, ಟಿಬೇಟನ್ ಮಾಸ್ಟಿಫ್ ತಳಿಯ ನಾಯಿಗಳನ್ನು ತರಬೇತುಗೊಳಿಸಿ ಸೇರಿಸಿಕೊಳ್ಳುವುದು ವಾಡಿಕೆ. ಆದರೆ ಉತ್ತರಾಖಂಡ್ ನ ಶ್ವಾನದಳಕ್ಕೆ ಬೀದಿ ನಾಯಿಯನ್ನು ಸೇರ್ಪಡೆ ಮಾಡಿಕೊಂಡು, ಅದಕ್ಕೆ ತೆಂಗಾ ಎಂದು ಹೆಸರಿಟ್ಟಿದ್ದಾರೆ.

ನಿವೃತ್ತಿಯಂಚಿನಲ್ಲಿ ಚಾಣಕ್ಷ್ಯ"ರಾಣ"; ಇವನ ಬುದ್ಧಿಮತ್ತೆಗೆ ಸಾಟಿ ಏನು?

ರಾಜ್ಯದ ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನ ದಳದ ಮುಖ್ಯಸ್ಥರಾದ ಕಮಲೇಶ್ ಪಂತ್‌ ಅವರ ಮಗಳಿಗೆ ಬೀದಿಯಲ್ಲಿ ಸಿಕ್ಕ ಈ ನಾಯಿಗೆ ತರಬೇತಿ ನೀಡಿದಾಗ ವಿದೇಶಿ ತಳಿಗಿಂತಲೂ ಉತ್ತಮ ಕ್ಷಮತೆ ತೋರಿಸಿದೆ. ನಂತರವೇ ಇದನ್ನು ದಳಕ್ಕೆ ಸೇರಿಸಿಕೊಳ್ಳಲಾಗಿದ್ದು, ಇತರ ನಾಯಿಗಳು 4 ಅಡಿ ಎತ್ತರವನ್ನು ಹಾರಿದರೆ ಇದು ಸಲೀಸಾಗಿ 5 ಅಡಿ ಎತ್ತರ ಹಾರುತ್ತದೆ ಎನ್ನುತ್ತಾರೆ ಪಂತ್‌.

ಪ್ರತಿ ನಾಯಿಗೆ ಇಬ್ಬರು ತರಬೇತುದಾರರಿರುತ್ತಾರೆ. ಪೊಲೀಸ್ ನಾಯಿಗಳಿಗೆ ಮೂರು ವಿಭಿನ್ನ ಉದ್ದೇಶಕ್ಕಾಗಿ ತರಬೇತಿ ನೀಡಲಾಗುತ್ತದೆ. ಕಾಣೆಯಾದವರನ್ನು ಪತ್ತೆ ಹಚ್ಚುವುದು, ಸ್ಫೋಟಕಗಳಿಗಾಗಿ ಸ್ನಿಫಿಂಗ್ ಮತ್ತು ಮಾದಕವಸ್ತುಗಳನ್ನು ಪತ್ತೆ ಮಾಡುವುದು. ಪ್ರತಿಯೊಂದಕ್ಕೂ ಮೂರು ತಿಂಗಳ ಮೂಲ ತರಬೇತಿ ಅಗತ್ಯವಿರುತ್ತದೆ. ಆದರೆ ಟ್ರ್ಯಾಕಿಂಗ್ ಅತ್ಯಂತ ಕಠಿಣವಾಗಿದ್ದು, ಹೆಚ್ಚುವರಿ ಆರು ತಿಂಗಳ ಕೋರ್ಸ್ ಅಗತ್ಯವಿರುತ್ತದೆ. ತೆಂಗಾವನ್ನು ಟ್ರ್ಯಾಕ್ ಮಾಡಲು ಆಯ್ಕೆಮಾಡಲಾಗಿದೆ, ಏಕೆಂದರೆ, ಇತರ ನಾಯಿಗಳು ಒಂದು ತಿಂಗಳಲ್ಲಿ ಕಲಿಯುವುದನ್ನು ತೆಂಗಾ ಕೇವಲ 20 ದಿನಗಳಲ್ಲಿ ಕಲಿತಿದೆ.

ಸಿಎಂಗೆ ಸಲ್ಯೂಟ್ ಮಾಡಿದ ಶ್ವಾನ; ನಕ್ಕು ನಮಸ್ಕರಿಸಿದ ಯಡಿಯೂರಪ್ಪ

ಲ್ಯಾಬ್ರಡಾರ್ ಮತ್ತು ಜರ್ಮನ್ ತಳಿಯ ಹೊರತಾಗಿ, ಸೈನ್ಯ ಮತ್ತು ಪೊಲೀಸರು ಬೆಲ್ಜಿಯಂ ಮಾಲಿನೋಯಿಸ್, ಕಾಕರ್ ಸ್ಪೈನಿಯೆಲ್ ಮತ್ತು ಡಾಬರ್ಮನ್ ಪಿನ್ಷರ್ ಶ್ವಾನವನ್ನು ಬಳಸಿಕೊಳ್ಳುತ್ತಾರೆ. ಇವೆಲ್ಲವೂ ದುಬಾರಿಯಾಗಿದ್ದು, ಪ್ರತಿ ನಾಯಿಗೆ 30,000 ರೂ.ಗಳಿಂದ 1 ಲಕ್ಷ ರೂ. ಬೆಲೆ ಇದೆ.

ಕೆನಲ್ ಕ್ಲಬ್ ಆಫ್ ಇಂಡಿಯಾ ಮತ್ತು ಅನಿಮಲ್ ವೆಲ್ಫೇರ್ ಬೋರ್ಡ್ ಅನುಮೋದಿಸಿದ ತಳಿಗಾರರನ್ನು ಮಾತ್ರ ಪಡೆಗಳು ನೇಮಕಾತಿಗೆ ಪರಿಗಣಿಸುತ್ತವೆ. ನಮ್ಮ ರಾಜ್ಯದ ಮುಧೋಳದಲ್ಲೂ ಉತ್ತಮ ತಳಿಯ ನಾಯಿಗಳಿದ್ದು, ಅದನ್ನೂ ಭದ್ರತಾ ಪಡೆಗಳು ತಮ್ಮ ದಳಕ್ಕೆ ಸೇರಿಸಿಕೊಳ್ಳಲು ಆಸಕ್ತಿ ವಹಿಸಬೇಕಿದೆ.

English summary
Uttarakhand police giving training to street dog for the first time in history
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X