ಸಿಎಂಗೆ ಸಲ್ಯೂಟ್ ಮಾಡಿದ ಶ್ವಾನ; ನಕ್ಕು ನಮಸ್ಕರಿಸಿದ ಯಡಿಯೂರಪ್ಪ
ಬೆಳಗಾವಿ, ಅಕ್ಟೋಬರ್ 16: ನಿನ್ನೆ ಬೆಳಗಾವಿಗೆ ಭೇಟಿ ನೀಡಿರುವ ಸಿಎಂ ಇಂದು ಬೆಳ್ಳಂಬೆಳಿಗ್ಗೆ ವಾಕಿಂಗ್ ಹೊರಟಿದ್ದರು. ಮಹಾರಾಷ್ಟ್ರಕ್ಕೆ ಚುನಾವಣಾ ಪ್ರಚಾರಕ್ಕೆ ಇಂದು ತೆರಳಬೇಕಿದ್ದರಿಂದ ಮುಂಜಾನೆಯೇ ತಮ್ಮ ಬೆಂಬಲಿಗರೊಂದಿಗೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಚರ್ಚೆ ನಡೆಸುತ್ತಾ ವಾಕಿಂಗ್ ಮಾಡುತ್ತಿದ್ದರು.
ಹಾಗೇ ಪ್ರವಾಸಿ ಮಂದಿರದ ಸರ್ಕಿಟ್ ಹೌಸ್ ಮುಂದೆ ತೆರಳುತ್ತಿದ್ದಂತೆ ಅಲ್ಲೇ ನಿಂತಿದ್ದ ಶ್ವಾನ ದಳದ ಸೋನಿ ಎಂಬ ನಾಯಿ ಸಿಎಂ ಬರುತ್ತಿದ್ದುದನ್ನು ನೋಡಿ ಸಲ್ಯೂಟ್ ಮಾಡಿದೆ. ಸಿಎಂ ನೋಡಿ ಎರಡು ಕಾಲುಗಳನ್ನು ನೆಲಕ್ಕೆ ಊರಿ, ಬಾಲ ಅಲ್ಲಾಡಿಸುತ್ತಾ ಗೌರವ ತೋರಿದೆ.

ಇದನ್ನು ನೋಡುತ್ತಿದ್ದಂತೆ ಅಲ್ಲೇ ಒಂದು ನಿಮಿಷ ನಿಂತು ಪ್ರೀತಿಯಿಂದ ನೋಡಿದ ಸಿಎಂ ಯಡಿಯೂರಪ್ಪ, ಇದಕ್ಕೆ ಪ್ರತಿಯಾಗಿ ನಕ್ಕು, ತಿರುಗಿ ನಾಯಿಗೆ ನಮಸ್ಕಾರ ಮಾಡಿ ಮುಂದೆ ಸಾಗಿದರು.












Click it and Unblock the Notifications