ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟ ಚಾರಣಿಗರು: ಎರಡು ದಿನ ಮೃತದೇಹದ ಕಾವಲಿಗೆ ನಿಂತಿತ್ತು ಸಾಕು ನಾಯಿ!
ಶಿಮ್ಲಾ, ಫೆಬ್ರವರಿ 09: ಮನುಷ್ಯನ ಜೊತೆಗೆ ತೀರಾ ಆಪ್ತರಾಗಿ ಇರುವ ಪ್ರಾಣಿಗಳಲ್ಲಿ ನಾಯಿಗೆ ಮೊದಲ ಸ್ಥಾನ. ಇಬ್ಬರ ನಡುವಿನ ಬಾಂಧವ್ಯ ಎಂಥವರನ್ನು ಬೆರಗು ಮೂಡಿಸುತ್ತದೆ. ಇಂತಹದ್ದೆ ಒಂದು ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಟ್ರಕ್ಕಿಂಗ್‌ಗೆ ತೆರಳಿದ್ದ ಇಬ್ಬರು ಚಾರಣಿಗರ ಮೃತದೇಹವನ್ನು ಎರಡು ದಿನಗಳು ಕಾವಲು ಕಾದಿದೆ ಸಾಕು ನಾಯಿ.
ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್‌ನಲ್ಲಿ ಒಬ್ಬ ಮಹಿಳೆ ಸೇರಿಸಂತೆ ಇಬ್ಬರು ಚಾರಣಿಗರು ಟ್ರಕ್ಕಿಂಗ್ ವೇಳೆ ಸಾವನ್ನಪ್ಪಿದ್ದಾರೆ. ಅವರ ಜೊತೆಗೆ ಹೋಗಿದ್ದ ಅವರ ಸಾಕು ನಾಯಿ ಎರಡು ದಿನಗಳ ಕಾಲ ಅವರ ಮೃತದೇಹದೊಂದಿಗೆ ಕಾವಲು ಕಾಯುತ್ತಾ ನಿಂತಿದೆ. ಇಬ್ಬರ ಜೊತೆಗೆ ಜರ್ಮನ್ ಶೆಫರ್ಡ್ ನಾಯಿ ಅವರು ಕಾಣೆಯಾದ ಸುಮಾರು 48 ಗಂಟೆಗಳವರೆಗೂ ಬೊಗಳುತ್ತಲೇ ಇತ್ತು.

ಸಾಕು ನಾಯಿಯ ನಿಯತ್ತು ನೋಡಿ ಜನ ಶಾಕ್
ಫೆಬ್ರವರಿ 6 ರಂದು ರಕ್ಷಣಾ ತಂಡಗಳು ಮೃತದೇಹಗಳನ್ನು ಪತ್ತೆ ಮಾಡುವವರೆಗೂ ಅವರ ಜೊತೆಗೆ ಹೋಗಿದ್ದ ಸಾಕು ನಾಯಿ ಜರ್ಮನ್ ಶೆಫರ್ಡ್ ಬೊಗಳುತ್ತಲೆ ಇತ್ತು. ಇಬ್ಬರ ಮೃತದೇಹ 48 ಗಂಟೆಗಳ ನಂತರ ಪತ್ತೆಯಾಗಿವೆ. ಯಾರಿಂದಲೂ ತೊಂದರೆಯಾಗದಂತೆ ಎರಡು ಮೃತದೇಹವನ್ನು ಅವರ ನಿಷ್ಠಾವಂತ ನಾಯಿ ಕಾಪಾಡಿದೆ.
ಮೃತ ಚಾರಣಿಗರನ್ನು ಪಠಾಣ್‌ಕೋಟ್‌ನ ಶಿವನಗರ ನಿವಾಸಿ ಅಭಿನಂದನ್ ಗುಪ್ತಾ (30) ಮತ್ತು ಮಹಾರಾಷ್ಟ್ರದ ಪ್ರಣಿತಾ ವಾಲಾ (26) ಎಂದು ಗುರುತಿಸಲಾಗಿದೆ. ಪ್ಯಾರಾಗ್ಲೈಡಿಂಗ್‌ಗೆ ಹೆಸರಾದ ಕಣಿವೆಯಲ್ಲಿ ಸೋಮವಾರದಿಂದ ಅವರು ನಾಪತ್ತೆಯಾಗಿದ್ದರು. ಅವರ ದೇಹಗಳು ಒಂದು ದಿನದ ನಂತರ ಟೇಕ್‌ಆಫ್ ಪಾಯಿಂಟ್‌ನಿಂದ ಸುಮಾರು ಮೂರು ಕಿಲೋಮೀಟರ್ ಕೆಳಗೆ ಪತ್ತೆಯಾಗಿವೆ.
ಹಿಮಾಚಲ ಪ್ರದೇಶದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅವರ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಯುವಕ ಮತ್ತು ಯುವತಿ ಹಿಮಪಾತದಲ್ಲಿ ಮಾರಣಾಂತಿಕವಾಗಿ ಬಿದ್ದ ನಂತರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಕಳೆದ ಭಾನುವಾರ ಮಧ್ಯಾಹ್ನ ಯುವಕ ಮತ್ತು ಯುವತಿ ಇಬ್ಬರೂ ತಮ್ಮ ಖಾಸಗಿ ಕಾರಿನಲ್ಲಿ ಬಿಲ್ಲಿಂಗ್‌ಗೆ ತೆರಳಿದ್ದರು. ಒಂದು ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ ನಂತರ ಅವರು ಟೇಕಾಫ್ ಪಾಯಿಂಟ್ ಕಡೆಗೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿದ್ದರು. ಇಬ್ಬರೂ ತಡರಾತ್ರಿ ಬಿರ್ ಕಡೆಗೆ ಕಾಲ್ನಡಿಗೆಯಲ್ಲಿ ಹಿಂತಿರುಗುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಸೋಮವಾರವೂ ಅವರು ಹಿಂತಿರುಗದಿದ್ದಾಗ, ಅವರಿಬ್ಬರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿದ್ದರಿಂದ ಮೃತ ಅಭಿನಂದನ್ ಗುಪ್ತಾ ಅವರ ಕುಟುಂಬ ಸದಸ್ಯ ಕರಣ್‌ವೀರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಂಗಳವಾರ ಬೆಳಗ್ಗೆ, ರಕ್ಷಣಾ ತಂಡವು ಪೊಲೀಸ್ ಅಧಿಕಾರಿಗಳೊಂದಿಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಜರ್ಮನ್ ಶೆಫರ್ಡ್ ನಿರಂತರವಾಗಿ ಬೊಗಳುವುದನ್ನು ಕೇಳಿದ ತಂಡವು ಸ್ಥಳಕ್ಕೆ ತೆರಳಿದಾಗ ಅವರ ದೇಹಗಳು ಪತ್ತೆಯಾಗಿವೆ. ಮೃತ ವ್ಯಕ್ತಿ ಅಭಿನಂದನ್ ಗುಪ್ತಾ ಕಳೆದ ಐದು ವರ್ಷಗಳಿಂದ ಬಿರ್‌ನ ಚೌಗನ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಯುವತಿ ಪ್ರಣಿತಾ ವಾಲಾ ಇತ್ತೀಚೆಗೆ ಹಿಮಾಚಲ ಪ್ರದೇಶ ಗ್ರಾಮಕ್ಕೆ ಬಂದಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications