ಸಾಕುಪ್ರಾಣಿಗಳೊಂದಿಗೆ ಮಾತುಕತೆ: ಪ್ರತಿ ಗಂಟೆಗೆ 30,000 ಗಳಿಸ್ತಾಳೆ ಈ ಯುವತಿ

ಪೆನ್ಸಿಲ್ವೇನಿಯಾದ ಮಹಿಳೆಯೊಬ್ಬರು ತಮ್ಮ ವಕೀಲ ವೃತ್ತಿಗೆ ರಾಜೀನಾಮೆ ನೀಡಿ ಹೊಸ ಉದ್ಯೋಗವನ್ನು ಆರಂಭಿಸಿದ್ದು, ಈ ಹೊಸ ಕೆಲಸದಿಂದ ಆಕೆ ಪ್ರತಿ ಗಂಟೆಗೆ 30,000 ರೂಪಾಯಿ ಗಳಿಸುತ್ತಿದ್ದಾಳೆ.

ಮನೆಯಲ್ಲಿರುವ ಸಾಕುಪ್ರಾಣಿಗಳ ಜೊತೆ ಹೇಗೆ ಭಾವನಾತ್ಮ ಸಂಬಂಧವನ್ನು ಬೆಳೆಸಿಕೊಳ್ಳಬೇಕು ಎನ್ನುವ ತರಬೇತಿ ಶಾಲೆಯನ್ನು ನಡೆಸುತ್ತಿರುವ ಆಕೆ ಟೆಲಿಪತಿಯ ಮೂಲಕ ಅವುಗಳ ಜೊತೆ ಹೇಗೆ ಸಂವಹನ ನಡೆಸಿ, ಅವುಗಳ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರ ನೀಡುತ್ತಾಳೆ. 7,600 ಕ್ಕೂ ಹೆಚ್ಚು ಜನರು ಆಕೆಯ ತರಗತಿ ಸೇರಲು ವೈಟಿಂಗ್‌ ಲಿಸ್ಟ್‌ನಲ್ಲಿ ಇದ್ದಾರೆ.

Woman Earns Rs 30,000 An Hour In Pet Psychic Job

34 ವರ್ಷದ ನಿಕ್ಕಿ ವಾಸ್ಕೋನೆಜ್ ಸಾಕುಪ್ರಾಣಿಗಳ ಮಾನಸಿಕ ಆರೋಗ್ಯ ತಜ್ಞೆಯಾಗಲು ವಕೀಲ ವೃತ್ತಿಯನ್ನು ತೊರೆದ ಮಹಿಳೆ. ಮೊದಲಿನಿಂದಲೂ ಪ್ರಾಣಿಗಳ ಪಾಲನೆ ಪೋಷಣೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ನಿಕ್ಕಿ ವಾಸ್ಕೋನೆಜ್, ಅವುಗಳ ಜೊತೆ ಸಂವಹನ ನಡೆಸುವ ಬಗ್ಗೆ ಕಲಿಯಲು ಕಾತುರರಾಗಿದ್ದರು. ಹೀಗಾಗಿ ಈ ಬಗ್ಗೆ ತಿಳಿದ ಸ್ನೇಹಿತರಿಂದ ಕೆಲವು ವಿಚಾರಗಳನ್ನು ತಿಳಿದುಕೊಂಡರು ಹಾಗೂ ಈ ವಿಷಯದ ಕುರಿತು ಕೆಲವು ಪುಸ್ತಕಗಳನ್ನು ಓದಿದರು. ಕೊನೆಯಲ್ಲಿ ತಮ್ಮ 28ನೇ ವಯಸ್ಸಿನಲ್ಲಿ ಟೆಲಿಪತಿ ಮೂಲಕ ಪ್ರಾಣಿಗಳೊಂದಿಗೆ ಮಾತನಾಡಲು ಸ್ವತಃ ಕಲಿಸಿದರು.

ತಮ್ಮ ಈಗಿನ ವೃತ್ತಿ ಹಾಗೂ ವಕೀಲ ವೃತ್ತಿ ತೊರೆದ ಬಗ್ಗೆ ಸ್ವತಃ ನಿಕ್ಕಿ ವಾಸ್ಕೋನೆಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ನಾಲ್ಕು ವರ್ಷಗಳ ಹಿಂದೆ ನಾನು ಪೂರ್ಣ ಸಮಯದ ವಕೀಲಳಾಗಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ನನಗೆ ಪ್ರಾಣಿ ಸಂವಹನದ ಈ ಮಾಂತ್ರಿಕ ಪ್ರಪಂಚವು ಅಸ್ತಿತ್ವದಲ್ಲಿದೆ ಎಂದು ತಿಳಿದಿರಲಿಲ್ಲ. ವಕೀಲ ವೃತ್ತಿಯಲ್ಲಿ ನನಗೆ ಸ್ವಲ್ಪವೂ ತೃಪ್ತಿ ಇರಲಿಲ್ಲ. ಆದರೆ ಎಜುಕೇಶನ್‌ ಲೋನ್‌ ಇದ್ದರಿಂದ ಬೇರೆ ಏನು ಮಾಡಬೇಕೆಂದು ನನಗೆ ತಿಳಿಯದೇ ವೃತ್ತಿ ಮುಂದುವರಿಸಿದ್ದೆ.

Woman Earns Rs 30,000 An Hour In Pet Psychic Job

ಪ್ರಾಣಿಗಳ ಜೊತೆ ಸಂವಹನ ಸಾಧ್ಯ ಹಾಗೂ ಅದನ್ನು ವೃತ್ತಿಯಾಗಿ ತೆಗೆದುಕೊಳ್ಳಬಹುದು ಎಂದು ನಾನು ತಿಳಿದಾಗ, ನನ್ನೊಳಗೆ ಹೊಸ ಉತ್ಸಾಹ ಆರಂಭವಾಯಿತು. ಈ ಭಾವನೆಯನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಈ ವಿಚಾರದ ಬಗ್ಗೆ ಪುಸ್ತಕಗಳನ್ನು ಓದಿ ತಿಳಿದುಕೊಂಡೆ ಮೊದಲು ಸ್ನೇಹಿತರೊಂದಿದೆ, ಕುಟುಂಬಸ್ಥರೊಂದಿಗೆ ಟೆಲಿಪತಿ ಸಂಹವನ ಮಾಡುತ್ತಿದೆ. ಅದು ಕಾರ್ಯ ರೂಪಕ್ಕೆ ಬರುತ್ತಿದೆ ಎಂದು ಅರಿವಾದಾಗ ನನ್ನ ಪ್ರಯತ್ನವನ್ನು ಮುಂದುವರಿಸಿದೆ. ಇದು ಸಾಧ್ಯ ಎಂದು ಎಲ್ಲರೂ ನಂಬುವುದಿಲ್ಲ, ಮತ್ತು ಅದು ಸರಿ. ಆದರೆ ಈ ಜ್ಞಾನವನ್ನು ಹರಡುವ ಕೆಲಸವನ್ನು ನಾನು ಮಾಡುತ್ತೇನೆ' ಎಂದಿದ್ದಾಳೆ.

ಸದ್ಯ ನಿಕ್ಕಿ ವಾಸ್ಕೋನೆಜ್ ಸಾಕುಪ್ರಾಣಿಗಳ ಮಾನಸಿಕ ಆರೋಗ್ಯದ ಬಗ್ಗೆ ತರಬೇತಿಯನ್ನು ನೀಡುತ್ತಾಳೆ. ಜೊತೆಗೆ ಸಾಕು ಪ್ರಾಣಿಗಳ ಜೊತೆ ಸಂವಹನ ನಡೆಸುತ್ತಾಲೆ. ಸಾಕು ಪ್ರಾಣಿಗಳ ಚಿತ್ರವನ್ನು ನೋಡಿ ಅವುಗಳ ಜೊತೆ ಆಕೆ ಮಾತನಾಡುತ್ತಾಳೆ. ತನ್ನ ಕಚೇರಿಯಲ್ಲಿ ಏಕಾಂಗಿಯಾಗಿ ಕುಳಿತು ಪ್ರಾಣಿಗಳ ಚಿತ್ರವನ್ನು ದಿಟ್ಟಿಸುತ್ತಾ ದೂರದಿಂದಲೇ ನಿಕ್ಕಿ ವಾಸ್ಕೋನೆಜ್ ಸೆಷನ್‌ಗಳನ್ನು ನಡೆಸುತ್ತಾಳೆ. ತನ್ನ ಮನಸ್ಸಿನ ಮೂಲಕ ಸಾಕುಪ್ರಾಣಿಗಳೊಂದಿಗೆ ಸಂವಹನ ನಡೆಸಿ. ಸಂಭಾಷಣೆಯ ರೆಕಾರ್ಡಿಂಗ್ ಅನ್ನು ಸಾಕುಪ್ರಾಣಿ ಮಾಲೀಕರಿಗೆ ಕಳುಹಿಸುತ್ತಾಳೆ. ಈ ಮೂಲಕ ಪ್ರಾಣಿಗಳ ಸಮಸ್ಯೆಗಳನ್ನು ಸಾಕುಪ್ರಾಣಿ ಮಾಲೀಕರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾಳೆ. ಈ ಕೆಲಸಕ್ಕೆ ಆಕೆ ಪ್ರತಿ ಗಂಟೆಗೆ 30,000 ಸಾವಿರ ರೂಪಾಯಿ ಗಳಿಸುತ್ತಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+