ರಾಜ್ಯದಲ್ಲಿ ರಾಮಾಯಣ ಅಬ್ಬರ: ₹150 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡೇತರ ಚಿತ್ರ, ಯಶ್ ನಟನೆಗೆ ಧುರಂಧರ್ 2 ದಾಖಲೆ ಉಡೀಸ್!

ಬೆಂಗಳೂರು: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಈ ಚಿತ್ರವು ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ರಾಮಾಯಣ ಬಾಕ್ಸ್ ಆಫೀಸ್ ಕಲೆಕ್ಷನ್ ಕರ್ನಾಟಕದಲ್ಲಿ ಈಗಾಗಲೇ ಸುಮಾರು ₹155 ಕೋಟಿ (ಗ್ರಾಸ್) ದಾಟಿದೆ. ಈ ಮೂಲಕ ರಾಜ್ಯದಲ್ಲಿ ₹150 ಕೋಟಿ ಗಡಿ ದಾಟಿದ ಮೊದಲ ಕನ್ನಡೇತರ ಸಿನಿಮಾ ಎಂಬ ಐತಿಹಾಸಿಕ ದಾಖಲೆಯನ್ನ ರಾಮಾಯಣ ತನ್ನದಾಗಿಸಿಕೊಂಡಿದೆ.

Ramayana Outruns Dhurandhar 2 Becomes First Non-Kannada Film To Cross Rs 150 Crore In Karnataka

ಧುರಂಧರ್ 2 ದಾಖಲೆ ಉಡೀಸ್: 9 ವರ್ಷಗಳ ತೆಲುಗು ಸಿನಿಮಾಗಳ ಪ್ರಾಬಲ್ಯ ಅಂತ್ಯ

ಕಳೆದ ಒಂಬತ್ತು ವರ್ಷಗಳಿಂದ ಕರ್ನಾಟಕದಲ್ಲಿ ಯಾವುದೇ ಕನ್ನಡೇತರ ಚಿತ್ರಕ್ಕೂ ಎಸ್.ಎಸ್. ರಾಜಮೌಳಿ ಅವರ ಬಾಹುಬಲಿ 2 (2017ರಲ್ಲಿ ₹129 ಕೋಟಿ) ದಾಖಲೆಯನ್ನ ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಒಂದೇ ವರ್ಷದಲ್ಲಿ ಎರಡು ಚಿತ್ರಗಳು ಆ ದಾಖಲೆಯನ್ನ ಪುಡಿಗಟ್ಟಿವೆ. ಮೊದಲಿಗೆ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಕರ್ನಾಟಕದಲ್ಲಿ ₹100 ಕೋಟಿ ದಾಟಿದ ಮೊದಲ ಹಿಂದಿ ಚಿತ್ರವಾಗಿ ಹೊರಹೊಮ್ಮಿ, ಒಟ್ಟು ₹141.50 ಕೋಟಿ ಗಳಿಸಿತ್ತು. ಇದೀಗ ರಾಮಾಯಣ ಚಿತ್ರವು ಧುರಂಧರ್ 2 ದಾಖಲೆಯನ್ನ ಸುಮಾರು ₹13.5 ಕೋಟಿಗಳ ಅಂತರದಿಂದ ಹಿಂದಿಕ್ಕಿ ಮುನ್ನುಗ್ಗುತ್ತಿದೆ.

ಇದಕ್ಕೂ ಮುನ್ನ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡಿದ್ದ ಟಾಪ್-3 ಕನ್ನಡೇತರ ಚಿತ್ರಗಳೆಲ್ಲವೂ ತೆಲುಗು ಸಿನಿಮಾಗಳೇ ಆಗಿದ್ದವು. 2017ರ 'ಬಾಹುಬಲಿ 2' (₹129 ಕೋಟಿ), 2024ರ 'ಪುಷ್ಪ 2' (₹98.41 ಕೋಟಿ) ಹಾಗೂ 2022ರ 'ಆರ್‌ಆರ್‌ಆರ್' (₹76.03 ಕೋಟಿ) ಚಿತ್ರಗಳು ಅಗ್ರಸ್ಥಾನದಲ್ಲಿದ್ದವು. ಇದೀಗ ಹಿಂದಿ ಚಿತ್ರಗಳ ಅಬ್ಬರದಿಂದಾಗಿ ಪುಷ್ಪ 2 ಮತ್ತು ಆರ್‌ಆರ್‌ಆರ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ಕುಸಿದಿವೆ.

Ramayan: 'ರಾಮಾಯಣ' ಸಿನಿಮಾ ಬಗ್ಗೆ ಬಿಗ್‌ ಅಪ್ಡೇಟ್‌, ಮಹಾಶಿವನ ದರ್ಶನ ಪಡೆದು ಯಶ್‌ ಹೇಳಿದ್ದೇನು?
Ramayan: 'ರಾಮಾಯಣ' ಸಿನಿಮಾ ಬಗ್ಗೆ ಬಿಗ್‌ ಅಪ್ಡೇಟ್‌, ಮಹಾಶಿವನ ದರ್ಶನ ಪಡೆದು ಯಶ್‌ ಹೇಳಿದ್ದೇನು?

ರಾಮಾಯಣ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಹಾಗೂ ಚಿತ್ರದ ಕನ್ನಡ ಡಬ್ಬಿಂಗ್ ಆವೃತ್ತಿಗೆ ಸಿಕ್ಕಿರುವ ಅದ್ಭುತ ಪ್ರತಿಕ್ರಿಯೆಯೇ ಕರ್ನಾಟಕದಲ್ಲಿ ಈ ದಾಖಲೆಯ ಗಳಿಕೆಗೆ ಪ್ರಮುಖ ಕಾರಣವಾಗಿದೆ.

ಕೆಜಿಎಫ್ 2 ಮತ್ತು ಕಾಂತಾರವೇ ಮುಂದಿನ ಟಾರ್ಗೆಟ್!

ಕರ್ನಾಟಕದಲ್ಲಿ ಎಲ್ಲಾ ಭಾಷೆಗಳನ್ನೂ ಸೇರಿಸಿ ಅತಿ ಹೆಚ್ಚು ಗಳಿಕೆ ಕಂಡ ಟಾಪ್-5 ಸಿನಿಮಾಗಳ ಪಟ್ಟಿಗೆ ಈಗಾಗಲೇ ರಾಮಾಯಣ ಸೇರ್ಪಡೆಯಾಗಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಮುಂದಿನ ಗುರಿ ಕನ್ನಡದ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳಾದ ಕೆಜಿಎಫ್ 2 ಮತ್ತು ಕಾಂತಾರ.

Yash: ರಾವಣನ ದುಷ್ಟತನ ಜಾಸ್ತಿಯಾದಾಗಲೇ ರಾಮನ ಒಳ್ಳೆತನ ಜಗತ್ತಿಗೆ ತಿಳಿಯೋದು: 7 ಸಿನಿಮಾ ಕೈತಪ್ಪಿದ ಬಗ್ಗೆ ರಾಕಿಭಾಯ್ ಮಾತು
Yash: ರಾವಣನ ದುಷ್ಟತನ ಜಾಸ್ತಿಯಾದಾಗಲೇ ರಾಮನ ಒಳ್ಳೆತನ ಜಗತ್ತಿಗೆ ತಿಳಿಯೋದು: 7 ಸಿನಿಮಾ ಕೈತಪ್ಪಿದ ಬಗ್ಗೆ ರಾಕಿಭಾಯ್ ಮಾತು

ಕೆಜಿಎಫ್ ಚಾಪ್ಟರ್ 2: ಯಶ್ ಅಭಿನಯದ ಈ ಚಿತ್ರವು ಕರ್ನಾಟಕದಲ್ಲಿ ₹182.96 ಕೋಟಿ ಗಳಿಸಿದ್ದು, ರಾಮಾಯಣಕ್ಕಿಂತ ಸುಮಾರು ₹28 ಕೋಟಿ ಮುಂದಿದೆ.

ಕಾಂತಾರ: ರಿಷಬ್ ಶೆಟ್ಟಿ ಅವರ 'ಕಾಂತಾರ' ₹183.60 ಕೋಟಿ ಗಳಿಸಿದ್ದು, ಕೆಜಿಎಫ್ 2 ಗಿಂತ ಕೇವಲ ₹64 ಲಕ್ಷ ಮುಂದಿದೆ.

ಒಂದು ವೇಳೆ ರಾಮಾಯಣ ಚಿತ್ರವು ₹184 ಕೋಟಿ ಗಡಿ ದಾಟಿದರೆ, ಈ ಎರಡೂ ದೈತ್ಯ ಸಿನಿಮಾಗಳ ದಾಖಲೆಯನ್ನು ಒಟ್ಟಿಗೆ ಮುರಿಯಲಿದೆ. ಆದರೆ, ಕರ್ನಾಟಕದ ಸಾರ್ವಕಾಲಿಕ ದಾಖಲೆ ಇನ್ನೂ ಬಹಳ ದೂರದಲ್ಲಿದೆ. ಕಾಂತಾರ ಚಾಪ್ಟರ್ 1 ಚಿತ್ರವು ರಾಜ್ಯದಲ್ಲಿ ಬರೋಬ್ಬರಿ ₹247.48 ಕೋಟಿ ಗಳಿಸಿ ಅಗ್ರಸ್ಥಾನದಲ್ಲಿದ್ದು, ಆ ದಾಖಲೆಯನ್ನು ತಲುಪಲು ರಾಮಾಯಣ ಇನ್ನೂ ₹92 ಕೋಟಿಗೂ ಹೆಚ್ಚು ಗಳಿಕೆ ಮಾಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+