ಭಾರತದಲ್ಲಿ ಈ 23 ತಳಿಗಳ ನಾಯಿ ಮಾರಾಟ, ಸಾಕಾಣಿಕೆ ಬ್ಯಾನ್; ಪಟ್ಟಿಯಲ್ಲಿ ಯಾವೆಲ್ಲಾ ಇವೆ ನೋಡಿ
ಪಿಟ್‌ಬುಲ್ ಟೆರಿಯರ್, ಅಮೆರಿಕನ್ ಬುಲ್‌ಡಾಗ್, ರೊಟ್‌ವೀಲರ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಯ ಉಗ್ರ ನಾಯಿಗಳ ಮಾರಾಟ ಮತ್ತು ಸಾಕಣೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿರುವ ನಿರ್ದೇಶನದ ಪ್ರಕಾರ ಜನರು 23 ತಳಿಗಳ ನಾಯಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದಕ್ಕೆ ನಿರ್ಬಂಧ ವಿಧಿಸುತ್ತದೆ. ಈಗಾಗಲೇ ಸಾಕುಪ್ರಾಣಿಗಳಾಗಿ ಸಾಕಿರುವ ಈ ತಳಿಯ ನಾಯಿಗಳ ಸಂತಾನಾಭಿವೃದ್ಧಿ ಆಗದಂತೆ ನೋಡಿಕೊಳ್ಳಬೇಕು ಎಂದೂ ಕೇಂದ್ರ ಹೇಳಿದೆ.

ಕೆಲವು ತಳಿಯ ನಾಯಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ಮತ್ತು ಇತರ ಉದ್ದೇಶಗಳಿಗಾಗಿ ನಿಷೇಧಿಸುವಂತೆ ನಾಗರಿಕರು, ನಾಗರಿಕ ವೇದಿಕೆಗಳು ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆಗಳಿಂದ ಪ್ರಾತಿನಿಧ್ಯವನ್ನು ಸ್ವೀಕರಿಸಲಾಗಿದೆ ಎಂದು ಪಶುಪಾಲನೆ ಮತ್ತು ಹೈನುಗಾರಿಕೆ ಇಲಾಖೆ ತಿಳಿಸಿದೆ.
ಸಮಿತಿಯು 23 ತಳಿಗಳ ನಾಯಿಗಳನ್ನು ಉಗ್ರ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ಎಂದು ಗುರುತಿಸಿದೆ.
ನಿಷೇಧಿಸಿದ ತಳಿಗಳು
ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್ ಕಂಗಲ್, ಸೆಂಟ್ರಲ್ ಏಷ್ಯನ್ ಶೆಫರ್ಡ್ ಡಾಗ್ ಮತ್ತು ಕಕೇಶಿಯನ್ ಶೆಫರ್ಡ್ ಡಾಗ್ ಇವುಗಳನ್ನು ನಿಷೇಧಿಸಲು ಸೂಚನೆ ನೀಡಾಲಗಿದೆ.
ಇತರ ತಳಿಗಳೆಂದರೆ ಸೌತ್ ರಷ್ಯನ್ ಶೆಫರ್ಡ್ ಡಾಗ್, ಟೋರ್ನ್‌ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ ಮತ್ತು ಅಕಿಟಾ, ಮ್ಯಾಸ್ಟಿಫ್ಸ್, ಟೆರಿಯರ್‌ಗಳು, ರೋಡೇಸಿಯನ್ ರಿಡ್ಜ್‌ಬ್ಯಾಕ್, ವುಲ್ಫ್ ಡಾಗ್ಸ್, ಕೆನಾರಿಯೊ, ಅಕ್ಬಾಶ್ ಡಾಗ್, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ ಮತ್ತು ಬ್ಯಾಂಡೋಗ್ ತಳಿನ ನಾಯಿಗಳ ಸಾಕಾಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
"ಮೇಲ್ಕಂಡ ಶ್ವಾನ ತಳಿಗಳು, ಮಿಶ್ರತಳಿಗಳು ಸೇರಿದಂತೆ, ಆಮದು, ತಳಿ, ಸಾಕು ನಾಯಿಗಳ ಮಾರಾಟ ಮತ್ತು ಇತರ ಉದ್ದೇಶಗಳಿಗಾಗಿ ನಿಷೇಧಿಸಲಾಗಿದೆ," ಎಂದು ಪತ್ರದಲ್ಲಿ ತಜ್ಞರ ಸಮಿತಿಯ ಶಿಫಾರಸುಗಳನ್ನು ಉಲ್ಲೇಖಿಸಿ ಹೇಳಿದೆ.












Click it and Unblock the Notifications