Gold Rate Today: ಚಿನ್ನ-ಬೆಳ್ಳಿ ಮತ್ತೆ ದುಬಾರಿ! ಒಂದೇ ದಿನದಲ್ಲಿ ದರ ಏರಿಕೆ, ಗ್ರಾಹಕರಿಗೆ ಆಘಾತ
Gold Rate Today: ಚಿನ್ನ-ಬೆಳ್ಳಿಗೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದ್ದು, ಒಂದೇ ದಿನದಲ್ಲಿ ಅವುಗಳ ಮೌಲ್ಯದಲ್ಲಿ ಚೇತರಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ದೇಶದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡು ಲೋಹಗಳ ದರ ಇಂದು ಶುಕ್ರವಾರ ಏರಿಕೆ ಆಗಿದೆ. ನಿರಂತರವಾಗಿ ಇಳಿಕೆಯಾಗುತ್ತಿದ್ದ ಇವುಗಳ ದರ ಮತ್ತೆ ಏರುಗತಿಯಲ್ಲಿ ಸಾಗುತ್ತಿದೆ. ಇಂದಿನ ಬೆಳ್ಳಿ ದರ ಮತ್ತು 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ನಗರವಾರು ಮಾಹಿತಿ ಮುಂದಿದೆ.
ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತೆ ಏರಿಳಿತ ಮುಂದುವರಿದಿದೆ. ಒಂದು ವಾರದಿಂದಲೂ ಬೆಳ್ಳಿ ದರ ಸ್ಥಿರವಾಗಿದ್ದರೆ, ಚಿನ್ನ ದರ ನೆನ್ನೆ ಗುರುವಾರವರೆಗೆ ಸತತವಾಗಿ ಕುಸಿದಿತ್ತು. ನೆನ್ನೆ 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 120 ರೂಪಾಯಿ ಇಂದು ಶುಕ್ರವಾರ (ಜುಲೈ 10) 35 ರೂಪಾಯಿ ಏರಿಕೆ ಕಂಡಿದೆ. ಅದೇ ರೀತಿ 24 ಕ್ಯಾರಟ್ 1 ಗ್ರಾಂ ಬಂಗಾರದ ಬೆಲೆ ನೆನ್ನೆ 131 ರೂಪಾಯಿ, ಇಂದು 38 ರೂಪಾಯಿ ಹೆಚ್ಚಾಗಿದೆ.

* 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 350 ರೂಪಾಯಿ ಏರಿಕೆ ಆಗುವ ಮೂಲಕ ಬೆಲೆಯು 1,32,750 ರೂಪಾಯಿ ಮುಟ್ಟಿದೆ.
* 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 380 ರೂಪಾಯಿ ಏರಿಕೆ ಆಗುವ ಮೂಲಕ ಬೆಲೆಯು 1,44,820 ರೂಪಾಯಿ ತಲುಪಿದೆ.
* ಅದೇ ರೀತಿ 18 ಕ್ಯಾರಟ್ 10 ಗ್ರಾಂ ಬಂಗಾರದ ದರವು 290ಕ್ಕೆ ರೂಪಾಯಿ ಏರಿಕೆ ಕಾಣುವ ಮೂಲಕ ಒಟ್ಟು ಬೆಲೆ 1,08,620 ರೂಪಾಯಿ ತಲುಪಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಜಾಗತಿಕ ಅನಿಶ್ಚಿತತೆ, ಹಣದುಬ್ಬರ, ಡಾಲರ್ ಮತ್ತು ರೂಪಾಯಿ ಮೌಲ್ಯದಲ್ಲಿನ ಬದಲಾವಣೆ, ಮುಂದುವರಿದ ಕೊಲ್ಲಿ ರಾಷ್ಟ್ರಗಳ ಯುದ್ಧ ಹಾಗೂ ಇನ್ನಿತರ ಕಾರಣಗಳಿಂದಾಗಿ ಚಿನ್ನ-ಬೆಳ್ಳಿ ದರದಲ್ಲಿ ತೀವ್ರ ಏರಿಳಿತ ಉಂಟಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಬೆಳ್ಳಿ ದರದಲ್ಲಿ ಭರ್ಜರಿ ಹೆಚ್ಚಳ
ಜುಲೈ 9ರವರೆಗೆ ಬೆಳ್ಳಿ ದರದಲ್ಲಿ ಅಷ್ಟಾಗಿ ಬದಲಾವಣೆ ಆಗಿರಲಿಲ್ಲ. ನೆನ್ನೆ ಗುರುವಾರ ಒಂದೇ ದಿನಕ್ಕೆ ಬರೋಬ್ಬರಿ 10,000 ರೂಪಾಯಿ ಕುಸಿದಿತ್ತು. ಇಂದು ಒಂದೇ ದಿನಕ್ಕೆ ಮತ್ತೆ 5000 ರೂಪಾಯಿ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಬೆಳ್ಳಿ ಖರೀದಿಸಬೇಕೋ ಬೇಡವೋ? ಎಂದು ಯೋಚನೆ ಮಾಡುವಂತಾಗಿದೆ. ಸದ್ಯ ಚಿನ್ನದ 1 ಕೆಜಿ ಬೆಲೆಯು 2,40,000 ರೂಪಾಯಿ ತಲುಪಿದಂತಾಗಿದೆ.
ನಗರವಾರು 22k ಚಿನ್ನದ ಬೆಲೆ ಹೀಗಿದೆ
ಬೆಂಗಳೂರು: 13, 275 ರೂಪಾಯಿ
ಹೈದರಾಬಾದ್:13, 275 ರೂಪಾಯಿ
ದೆಹಲಿ: 13, 290 ರೂಪಾಯಿ
ಕೊಲ್ಕತ್ತಾ: 13, 275 ರೂಪಾಯಿ
ಕೇರಳ:13, 275 ರೂಪಾಯಿ
ಪುಣೆ:13, 275 ರೂಪಾಯಿ
ಅಹಮದಾಬಾದ್:13, 280 ರೂಪಾಯಿ
ಚೆನ್ನೈ: 13,350 ರೂಪಾಯಿ
ಮುಂಬೈ: 13, 275 ರೂಪಾಯಿ













Click it and Unblock the Notifications