Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿಗಳ ಜೊತೆ ಮನುಷ್ಯ ಸಾಕಷ್ಟು ಬಾಂಧವ್ಯ ಬೆಳೆಸಿಕೊಳ್ಳುತ್ತಿದ್ದಾನೆ, ನಾಯಿ, ಬೆಕ್ಕುಗಳು ಬರೀ ಸಾಕು ಪ್ರಾಣಿಗಳಾಗಿರದೆ ಮನೆಯ ಸದಸ್ಯರೇ ಅನ್ನುವಂತಾಗಿವಿದೆ. ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವುದು, ಆಟವಾಡುವುದು, ಅವಕ್ಕೂ ಸ್ನಾನ, ಕೇರಿಂಗ್ ಎಲ್ಲಾ ನೋಡಬಹುದು.

ಆದರೆ ಇಲ್ಲೊಬ್ಬರು ತಮ್ಮ ಮುದ್ದಿನ ನಾಯಿಗೆ ಬೆಂಗಳೂರಿನ ಮೊದಲ ಮಳೆಯನ್ನು ತೋರಿಸಿ ಸಂಭ್ರಮಿಸಿದ್ದಾರೆ. ಸುದೀರ್ಘ ವಿರಾಮದ ಬಳಿಕ ಬೆಂಗಳೂರಿನ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿತ್ತು, ಮಕ್ಕಳು ಕೂಡ ಮಳೆಯಲ್ಲೇ ಕುಣಿದು ಸಂಭ್ರಮಿಸಿದ್ದ ವಿಡಿಯೋಗಳು ವೈರಲ್ ಆಗಿದ್ದವು.

Bengaluru Rain Man s Heartwarming Video of Pet s First Rain Captivates Internet

ಸಾಮಾಜಿಕ ಮಾಧ್ಯಮದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಮುದ್ದಿನ ನಾಯಿಗೆ ಮಳೆಯನ್ನು ತೋರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ಸಾಕುಪ್ರಾಣಿಗಳೊಂದಿಗೆ ಬಾಲ್ಕನಿಯಲ್ಲಿ ನಿಂತು ಮಳೆಯನ್ನು ತೋರಿಸುವುದನ್ನು ನೋಡಬಹುದು. ನಾಯಿಯನ್ನು ಎತ್ತಿಕೊಂಡು ಮಳೆಯನ್ನು ತೋರಿಸುತ್ತಿದ್ದು, ಮೊದಲ ಮಳೆಯ ಖುಷಿಯನ್ನು ಅನುಭವಿಸುತ್ತಿದ್ದಾರೆ.

ನಾಯಿಯು ಮಳೆಗೆ ಹೆದರಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ನಾಯಿ ಮಳೆಯನ್ನು ನೋಡುವುದನ್ನು ವಿಡಿಯೋದಲ್ಲಿ ಕಾಣಬಹುದು. ನಾಯಿಗೆ ಮಾಲೀಕರು ಟಿಂಗು ಎಂದು ಹೆಸರಿಟ್ಟಿದ್ದು, "ಟಿಂಗುವಿನ ಮೊದಲ ಮಳೆಯ ಅನುಭವ" ಎಂದು ವಿಡಿಯೋ ಮೇಲೆ ಶಿರ್ಷಿಕೆಯನ್ನು ನೋಡಬಹುದಹು.

ಇನ್‌ಸ್ಟಾಗ್ರಾಂ ಹ್ಯಾಂಡಲ್ @oscar_wonderpup ನಲ್ಲಿ ಈ ಸುಂದರ ವಿಡಿಯೋ ಹಂಚಿಕೊಳ್ಳಲಾಗಿದೆ. ಕೊನೆಗೂ ಬೆಂಗಳೂರಿನಲ್ಲಿ ಮಳೆ ಬಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಏಪ್ರಿಲ್ 20 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದುವರೆಗೂ ಪೋಸ್ಟ್‌ಗೆ 41,000 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಸಾಕಷ್ಟು ಮಂದಿ ಕಾಮೆಂಟ್ ಮಾಡುವ ಮೂಲಕ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಾಣಿ ಪ್ರಿಯರು ಹೃದಯ ಎಮೋಜಿಗಳೊಂದಿಗೆ ತುಂಬಿದ್ದಾರೆ ಮತ್ತು ಹಲವಾರು ಜನರು ಇಂತಹ ಹೃದಯಸ್ಪರ್ಶಿ ದೃಶ್ಯಗಳು ಬೆಂಗಳೂರಿನಲ್ಲಿ ಸಾಕಷ್ಟು ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.

"ಅಂತಿಮವಾಗಿ ಬೆಂಗಳೂರು ಬೆಂಗಳೂರಾಗಿದೆ ... ಓಸ್ಕು ಮತ್ತು ಟಿಂಗು ಅವರ ವೀಡಿಯೊ ಅದನ್ನು ಹೆಚ್ಚು ಸಂತೋಷಪಡಿಸಿದೆ" ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. "ಎರಡೂ ತುಂಬಾ ಮುದ್ದಾಗಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ.

ಎರಡು ದಿನ ಬೆಂಗಳೂರಿನ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾದ ಬಳಿಕ ಬಿಸಿಲು ಮತ್ತೆ ಹೆಚ್ಚಾಗಿದೆ. ಮೇ ಮೊದಲ ವಾರ ನಗರದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+