Tirupati Dog: ಓಯಿ...ನಾಯಿ ಒಂದು ಚಾಕಲೇಟ್ ಕೊಡು....: ತಿರುಪತಿಯಲ್ಲಿ ಶ್ವಾನದ ದಿನಸಿ ಅಂಗಡಿ

ಓಯಿ...ನಾಯಿ ಒಂದು ಚಾಕಲೇಟ್ ಕೊಡು... ಅಂತ ನೀವು ಕೇಳಲು ಸಾಧ್ಯನಾ? ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಜೋಕ್ ಮಾಡಿದರೂ ಕೂಡ ನಿಮ್ಮೊಂದಿಗೆ ಜಗಳ ಆಗಬಹುದು. ಆದರೆ ಈ ಅಂಗಡಿಯಲ್ಲಿ ನೀವು ಹಾಗೇ ಕೇಳಬೇಕು. ಯಾಕೆ ಗೊತ್ತಾ ಇಲ್ಲಿ ಶ್ವಾನವೇ ಅಂಗಡಿ ಮಲೀಕ.

ಶಾಕ್ ಆದ್ರಾ? ಶಾಕ್ ಆಗಲೇಬೇಕು ಬಿಡಿ. ಯಾಕೆಂದರೆ ತಿರುಪತಿಯಲ್ಲಿರುವ ಈ ಒಂದು ದಿನಸಿ ಅಂಗಡಿಗೆ ಶ್ವಾನವೇ ಮಾಲೀಕ. ತನ್ನ ಮಾಲೀಕನಿಲ್ಲದ ಸಮಯದಲ್ಲಿ ಈ ಶ್ವಾನವೇ ಅಂಗಡಿಯನ್ನು ನೋಡಿಕೊಳ್ಳುತ್ತದೆ. ಇದು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ.

Dog grocery store in Tirupati, smart dog photo goes viral

ನಿಜಕ್ಕೂ ಇದು ಕೊಂಚ ವಿಭಿನ್ನವಾದ ವಿಷಯವೇ. ನಾಯಿ ಹೇಗೆ ಅಂಗಡಿ ನೋಡಿಕೊಳ್ಳುತ್ತೆ ಅಂತ ನೀವು ಥಟ್ ಅಂತ ಪ್ರಶ್ನೆ ಮಾಡಬಹುದು. ಅದಕ್ಕೆ ಉತ್ತರ ಈ ವೈರಲ್ ಆಗಿರುವ ಫೋಟೋ. ಇತ್ತೀಚೆಗಷ್ಟೇ ತಿರುಪತಿಯಲ್ಲಿನ ಈ ಒಂದು ಫೋಟೋವನ್ನು ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ.

ಗೋವಿಂದ ರೆಡ್ಡಿ ಎಂಬ ನೆಟ್ಟಿಗ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ತಿರುಪತಿ ಗೋವಿಂದರಾಜ ಸ್ವಾಮಿ ದೇವಸ್ಥಾನದ ಹಿಂದೆ ಹಳೆಯ ಬಜಾರ್‌ಗಳಲ್ಲಿ ಅನೇಕ ಅಂಗಡಿಗಳಿವೆ. ಅಲ್ಲಿನ ಅಂಗಡಿಯೊಂದರ ಮಾಲೀಕ ನಾಯಿಯೊಂದನ್ನು ಸಾಕಿದ್ದಾನೆ. ಇದರ ಹೆಸರು ಜಗಿಲಾ. ಈ ಜಗಿಲಾ ಮಾಲೀಕನಿಲ್ಲದ ಸಮಯದಲ್ಲಿ ಅಂಗಡಿಯನ್ನು ಕಾಯುತ್ತದೆ.

ಮಾಲೀಕ ತಾನಿಲ್ಲದ ಸಮಯದಲ್ಲಿ ಅಂಗಡಿ ಜವಬ್ದಾರಿಯನ್ನು ನಾಯಿಯ ಮೇಲೆ ಬಿಟ್ಟು ಹೋಗುತ್ತಾನೆ. ವೈರಲ್ ಆಗಿರುವ ಫೋಟೋದಲ್ಲಿ ನಾಯಿ ಮಲಗಿರುವುದನ್ನು ಕಾಣಬಹುದು.

ನಾಯಿ ಅತ್ಯಂತ ನಿಷ್ಠಾವಂತ ಪ್ರಾಣಿ. ತನ್ನ ಸಾಕು ಮಾಲೀಕರಿಗೆ ತುಂಬಾ ಪ್ರೀತಿ ತೋರುತ್ತದೆ. ಒಂದು ತುತ್ತು ಅನ್ನ ಹಾಕಿದರೆ ಸಾಕು ಅದು ತನ್ನ ಮಾಲೀಕನಿಗೆ ಹೆಚ್ಚು ಪ್ರೀತಿ ತೋರುತ್ತದೆ. ತಿರುಪತಿಯ ಮಾರುಕಟ್ಟೆಯಲ್ಲಿನ ಈ ಶ್ವಾನ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಕೆಲವು ನೆಟ್ಟಿಗರು ಈ ಫೋಟೋಗೆ ವ್ಯಂಗ್ಯವಾಡುತ್ತಿದ್ದಾರೆ. ಅಂಗಡಿ ಕಾಯದೆ ಮಾಲೀಕರು ಮಲಗುತ್ತಿದ್ದಾನೆ ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ.

ತಿರುಪತಿ ಬಗ್ಗೆ:

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಭುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು. ತಿರುಪತಿ ಬಾಲಾಜಿ ದೇವಾಲಯವು ಇಂದು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ನೀವು ಈ ದೇವಾಲಯಕ್ಕೆ ಭೇಟಿ ನೀಡಿದರೂ ಲಕ್ಷಾಂತರ ಭಕ್ತರ ಸಮೂಹವನ್ನು ನೋಡಬಹುದು.

ಹಾಗೂ ಹೆಚ್ಚಿನ ಪ್ರಮಾಣದ ದಾನಗಳನ್ನು ಪಡೆದುಕೊಳ್ಳುವ ದೇವಾಲಯಗಳಲ್ಲಿ ಒಂದಾಗಿದೆ. ಭಕ್ತರು ತಮ್ಮೆಲ್ಲಾ ಇಚ್ಛೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಮತ್ತು ಇಚ್ಛೆ ಫಲಿಸಿದ ನಂತರ ದೇವಾಲಯದ ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆಯ ಅಭ್ಯಾಸವಾಗಿದೆ. ಈ ರೀತಿಯಾಗಿ ಲಕ್ಷಾಂತರ ಭಕ್ತರು ತಮ್ಮ ದಾನವನ್ನು ನೀಡಲು ಇಲ್ಲಿನ ದೇವಾಲಯಕ್ಕೆ ಆಗಮಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+