IND Vs ENG: ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್‌ಗೆ ಭಾರಿ ಮಖಭಂಗ
India Vs England T20 Series: ಸೌತಾಂಪ್ಟನ್‌ನಲ್ಲಿ ಶನಿವಾರ (ಜುಲೈ 11) ನಡೆದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ 56 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಹ್ಯಾರಿ ಬ್ರೂಕ್ ಪಡೆ 4-0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು. ಮತ್ತೊಂದೆಡೆ ಶ್ರೇಯಸ್ ಅಯ್ಯರ್‌ಗೆ ಭಾರಿ ಮುಖಭಂಗ ಅನುಭವಿಸಿದರು.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಇಂಗ್ಲೆಂಡ್ ತಂಡವು ನಾಯಕ ಜೋಸ್ ಬಟ್ಲರ್ ಹಾಗೂ ನಾಯಕ ಹ್ಯಾರಿ ಬ್ರೋಕ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿಂದ 20 ಓವರ್‌ಗಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 257 ರನ್‌ಗಳ ರನ್‌ಗಳ ಬೃಹತ್ ಮೊತ್ತ ಪೇರಿಸಿ 258 ರನ್‌ಗಳ ಬೆಟ್ಟದಂತಹ ಟಾರ್ಗೆಟ್ ನೀಡಿತು.

ಹ್ಯಾರಿ ಬ್ರೂಕ್, ಬಟ್ಲರ್ ಸ್ಫೋಟಕ ಬ್ಯಾಟಿಂಗ್
ಇಂಗ್ಲೆಂಡ್ ಪರ 204.69 ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಸಿದ ಜೋಸ್ ಬಟ್ಲರ್ ಕೇವಲ 64 ಎಸೆತಗಳಲ್ಲಿ 12 ಬೌಂಡರಿ, 8 ಸಿಕ್ಸರ್‌ಗಳ ಸಹಿತ 131 ರನ್‌ಗಳನ್ನು ಕಲೆಹಾಕಿದರು. ನಾಯಕ ಹ್ಯಾರಿ ಬ್ರೂಕ್ ಅವರು ಸಹ ಆಕ್ರಮಣಕಾರಿ ಆಟ ಆಡಿ 45 ಎಸೆತಗಳಲ್ಲಿ 4 ಬೌಂಡರಿ, 8 ಸಿಕ್ಸರ್‌ಗಳ ಸಹಿತ ಅಜೇಯ 95 ರನ್‌ಗಳ ಚಚ್ಚುವ ಮೂಲಕ ತಂಡ ಮೊತ್ತವನ್ನು 250ರ ಗಡಿ ದಾಟಿಸಿದರು.
ದುಬಾರಿಯಾದ ಟೀಮ್ ಇಂಡಿಯಾ ಬೌಲರ್ಸ್
ಇನ್ನೂ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭದಲ್ಲೇ ಪ್ರಸಿದ್ಧ್ ಕೃಷ್ಣ ಎರಡನೇ ಓವರ್‌ನಲ್ಲಿ ಫಿಲ್ ಸಾಲ್ಟ್ ಅವರನ್ನು ಔಟ್ ಮಾಡುವ ಮೂಲಕ ಯಶಸ್ಸು ತಂದುಕೊಟ್ಟರು. ಆದರೆ ಆ ಬಳಿಕ ಜೋಸ್ ಬಟ್ಲರ್ ಅಬ್ಬರದ 131 ರನ್ ಸಿಡಿಸಿದರೆ, ನಾಯಕ ಹ್ಯಾರಿ ಬ್ರೂಕ್ ಅಜೇಯ 95 ರನ್ ಗಳಿಸಿ ಇಂಗ್ಲೆಂಡ್ ತಂಡ 3 ವಿಕೆಟ್ ನಷ್ಟಕ್ಕೆ 257 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು. ಭಾರತದ ಪರ ಬೌಲಿಂಗ್ ಮಾಡಿದ ಪ್ರಿನ್ಸ್ ಯಾದವ್, ಅಕ್ಷರ್ ಪಟೇಲ್ ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು.
ಟೀಮ್ ಇಂಡಿಯಾ ಸೋಲಿಗೆ ಕಾರಣ ಏನು?
ಭಾರತ ಪರ ಬೌಲಿಂಗ್ ದಾಳಿ ನಡೆಸಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರು 38 ರನ್ ಬಿಟ್ಟುಕೊಟ್ಟು 1 ವಿಕೆಟ್ ಕಿತ್ತರು. ಅರ್ಷದೀಪ್ ಸಿಂಗ್ ಯಾವುದೇ ವಿಕೆಟ್ ಪಡೆಯದಿದ್ದರೂ ಕೇವಲ 33 ರನ್ ಬಿಟ್ಟುಕೊಟ್ಟು ಗಮನ ಸೆಳೆದರು. ಆದರೆ ಪ್ರಿನ್ಸ್ ಯಾದವ್ 60 ರನ್ ನೀಡಿದರೆ, ಅಕ್ಷರ್ ಪಟೇಲ್ 63 ರನ್ ನೀಡಿ ದುಬಾರಿ ಎನಿಸಿಕೊಂಡರು. ಈ ಮೂಲಕ ತಂಡದ ಸೋಲಿಗೆ ಪ್ರಮುಖ ಕಾರಣ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದು.
ಬಟ್ಲರ್ ಮತ್ತು ಬ್ರೂಕ್ ಜೋಡಿ ಕೇವಲ 102 ಎಸೆತಗಳಲ್ಲಿ ಎರಡನೇ ವಿಕೆಟ್‌ಗೆ 233 ರನ್‌ಗಳ ಸ್ಫೋಟಕ ಜೊತೆಯಾಟವಾಡಿದರು. ಇವರು ಮೈದಾನದ ಮೂಲೆ ಮೂಲೆಗೂ ಬಾಲ್‌ಗಳನ್ನು ಕಳಿಸುವ ಮೂಲಕ ಟೀಮ್ ಇಂಡಿಯಾ ಬೌಲರ್‌ಗಳ ಬೆವರಿಳಿಸಿದರು. ಇನ್ನೂ ಇಂಗ್ಲೆಂಡ್ ನೀಡಿದ 258 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಭಾರತ ತಂಡ ವಿಫಲವಾಯಿತು.
ಶ್ರೇಯಸ್ ಅಯ್ಯರ್‌ಗೆ ತೀವ್ರ ಮುಖಭಂಗ
ಇಶಾನ್ ಕಿಶನ್ (56) ಮತ್ತು ತಿಲಕ್ ವರ್ಮಾ (53) ಅವರ ಅರ್ಧಶತಕಗಳ ಹೊರತಾಗಿಯೂ 8 ವಿಕೆಟ್‌ಗೆ 201 ರನ್‌ಗಳಷ್ಟೇ ಗಳಿಸಿ ಸೋಲಿಗೆ ಶರಣಾಯಿತು. ಒಟ್ಟಿನಲ್ಲಿ ಹೇಳುವುದಾದರೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಮ್ ಇಂಡಿಯಾವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎಲ್ಲಾ ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿ ವೈಟ್‌ವಾಶ್ ಆಗಿ ತೀವ್ರ ಮುಖಭಂಗ ಅನುಭವಿಸಿತು.


Click it and Unblock the Notifications
