KSRTC: ಕರ್ನಾಟಕದ ‘ಮಗುವಿನಂತೆ ಮಲಗಿ’ ಜಾಹೀರಾತು ನಕಲು ಮಾಡಿದ ತಮಿಳುನಾಡು ಸಾರಿಗೆ ?, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ - KSRTC)ದ "ಮಗುವಿನಂತೆ ಮಲಗಿ' ಎನ್ನುವ ಐಡಿಯಾವನ್ನು ತಮಿಳುನಾಡು ಸಾರಿಗೆಯು ಸದ್ದಿಲ್ಲದೆ ಕಾಪಿ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಕನ್ನಡಿಗರು ಕೆಎಸ್‌ಆರ್‌ಟಿಸಿ ಸಾರಿಗೆಗೆ ಯಾರೂ ಸಹ ಪೈಪೋಟಿ ಕೊಡಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

"ಮಗುವಿನಂತೆ ಮಲಗಿ' ಎನ್ನುವ ಸಾಲುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜನಪ್ರಿಯ "ಐರಾವತ ಕ್ಲಬ್ ಕ್ಲಾಸ್' ಬಸ್ ಗಳ ಮೇಲಿರುವ ಐಕಾನಿಕ್ ಜಾಹೀರಾತಾಗಿ ಬಳಸಲಾಗುತ್ತಿದೆ. ಮಲ್ಟಿ-ಆಕ್ಸಲ್ ವೋಲ್ವೋ ಬಸ್‌ಗಳ ಆರಾಮದಾಯಕ ಮತ್ತು ಸುಖಕರ ಪ್ರಯಾಣವನ್ನು ಬಿಂಬಿಸಲು ಈ ಪರಿಕಲ್ಪನೆಯನ್ನು ಬಳಸಲಾಗಿದೆ. ಈ ಜಾಹೀರಾತಿನಲ್ಲಿ ಮುದ್ದಾದ ಮಗುವಿನ ಫೋಟೋವನ್ನು ಬಳಸಲಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಸಾರಿಗೆ ಬಸ್‌ಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

KSRTC Vs Setc Did Tamil Nadu Transport Copy Karnataka s Sleep Like a Baby Ad Social Media Debate Grows

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಎ.ಆರ್ ಜೋಶಿ (@BharataNadu) ಎನ್ನುವವರು ತಮಿಳುನಾಡಿನ ಸಾರಿಗೆ ಜಾಹೀರಾತು ಫೋಟೋವನ್ನು ಹಂಚಿಕೊಂಡಿದ್ದಾರೆ.

KSRTC: ಎಲ್ಲದರಲ್ಲೂ ಕರ್ನಾಟಕವೇ ಮೊದಲು!

"ಮನೆಯಲ್ಲಿರುವಂತೆ ಆರಾಮವಾಗಿ ನಿದ್ರಿಸಿ" ಎಂಬುದು ತಮಿಳುನಾಡಿನ ಬಸ್‌ನ ಘೋಷವಾಕ್ಯ. KSRTCಯ ಮಗುವಿನ ಚಿತ್ರ ಮತ್ತು ಜನಪ್ರಿಯ ಘೋಷವಾಕ್ಯವಾದ "ಮಗುವಿನಂತೆ ನಿದ್ರಿಸಿ" ಎಂಬುದನ್ನು ನಕಲು ಮಾಡಿ, ಅದನ್ನು ತೆಲುಗು ಭಾಷೆಯ ಪ್ರಭಾವವಿರುವ ತಮಿಳು ಭಾಷೆಯಲ್ಲಿ ಬರೆದು, ಬಳಿಕ ಮತ್ತೆ ಇಂಗ್ಲಿಷ್‌ಗೆ ಭಾಷಾಂತರಿಸಿದಂತಿದೆ. ಈ ಪ್ರಕ್ರಿಯೆಯಲ್ಲಿ 'ಮಗು' ಎಂಬ ಪದವನ್ನೇ ತೆಗೆದುಹಾಕಲಾಗಿದೆ!

West Bengal Name Change: ಪಶ್ಚಿಮ ಬಂಗಾಳದ ಹೆಸರು ಬದಲಾವಣೆ; ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗ!, ಹೊಸ ಹೆಸರೇನು ?
West Bengal Name Change: ಪಶ್ಚಿಮ ಬಂಗಾಳದ ಹೆಸರು ಬದಲಾವಣೆ; ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗ!, ಹೊಸ ಹೆಸರೇನು ?

ಇದಕ್ಕೂ ಮೊದಲು ನಮ್ಮ ಕನ್ನಡದ ಧ್ವಜವನ್ನೂ ನಕಲು ಮಾಡಿ, ಚಿತ್ರನಟರೊಬ್ಬರು ಸ್ಥಾಪಿಸಿದ ರಾಜಕೀಯ ಪಕ್ಷವೊಂದು ಅದಕ್ಕೆ ಮತ್ತೊಂದು ಬಣ್ಣದ ಪಟ್ಟಿಯನ್ನು ಸೇರಿಸಿತ್ತು. ಪರವಾಗಿಲ್ಲ, ಕೊನೆಗೂ ಹೊಸ ಮಾನದಂಡಗಳನ್ನು ರೂಪಿಸುವಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ.

ನಮ್ಮ KSRTC, ನಮ್ಮ ನಂದಿನಿ, ನಮ್ಮ ಸಿನಿಮಾಗಳು, ನಮ್ಮ ಪಾದಚಾರಿ ಮಾರ್ಗಗಳು, ನಮ್ಮ ಉದ್ಯಾನಗಳು, ನಮ್ಮ ಆಸ್ಪತ್ರೆಗಳು, ನಮ್ಮ ಮದ್ಯದಂಗಡಿಗಳು ಮತ್ತು ಪಬ್‌ಗಳು, ನಮ್ಮ ಶಾಲಾ-ಕಾಲೇಜುಗಳು, ನಮ್ಮ ತಂತ್ರಜ್ಞಾನ ಉದ್ಯಾನಗಳು, ನಮ್ಮ ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC), ನಮ್ಮ ಕೃತಕ ಬುದ್ಧಿಮತ್ತೆ, ನಮ್ಮ ವಿಮಾನ ನಿಲ್ದಾಣ, ನಮ್ಮ ಮೆಟ್ರೋ ಮತ್ತು ಕೊನೆಗೆ ನಮ್ಮ ಕನ್ನಡದ ಬಾವುಟ!

Mohanlal: RSS ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಮೋಹನ್‌ಲಾಲ್; ಸಂಘದ ಕಾರ್ಯಗಳ ಬಗ್ಗೆ ಹೇಳಿದ್ದೇನು?
Mohanlal: RSS ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಮೋಹನ್‌ಲಾಲ್; ಸಂಘದ ಕಾರ್ಯಗಳ ಬಗ್ಗೆ ಹೇಳಿದ್ದೇನು?

KSRTC: ನಕಲು ಮಾಡಲಿ, ಅದರಲ್ಲಿ ತಪ್ಪೇನಿಲ್ಲ

ಅವರು ನಕಲು ಮಾಡಲಿ, ಅದರಲ್ಲಿ ತಪ್ಪೇನಿಲ್ಲ. ಸುಮ್ಮನೆ ನಿರ್ಲಕ್ಷಿಸೋಣ. ಆದರೆ ನಮ್ಮ ಉದಾರತೆಯ ದುರುಪಯೋಗವಾಗಲು ಮಾತ್ರ ಬಿಡಬಾರದು. #ಅಷ್ಟೇ 💛❤️ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ಬೇರೆ ಯಾರಿಗೂ ಸರಿಸಾಟಿಯಾಗದ ಪ್ರಭಾವಲಯವಿದೆ. ಅವರು ಅದನ್ನು ಒಪ್ಪಿಕೊಂಡು ಮುಂದುವರಿಯಬೇಕು ಎಂದೂ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಕೆಎಸ್‌ಆರ್‌ಟಿಸಿ ಭಾರತದ ಅತ್ಯುತ್ತಮ ಸಾರಿಗೆ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಿದೆ. ಯಾರೂ ಅದಕ್ಕೆ ಸರಿಸಾಟಿಯಾಗಲು ಅಥವಾ ಹತ್ತಿರ ಬರಲು ಸಾಧ್ಯವಿಲ್ಲ. ಅದು ಮುಂದುವರಿಯಲಿ ಮತ್ತು ಅದೇ ವೇಗವನ್ನು ಕಾಯ್ದುಕೊಳ್ಳಲಿ ಎಂದು ನಾನು ಭಾವಿಸುತ್ತೇನೆ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+