ಸಂಗೀತ ಅಷ್ಟೇನೂ ಇಷ್ಟವಿಲ್ಲದಿದ್ದರೂ ರಶ್ಮಿಕಾ ಮಂದಣ್ಣ ಕರ್ನಾಟಿಕ್ ಮ್ಯೂಸಿಕ್ ಕಲೀತಾರಂತೆ!

Rashmika Mandanna:ಮೊನ್ನೆ ಮೊನ್ನೆ ತೆಲುಗು ಬಿಗ್ ಬಾಸ್ ನಲ್ಲಿ ಕನ್ನಡ ಮಾತಾಡಿ ಕಾಲೆಳೆಯುವವರಿಗೆ ವರ್ತನೆಯಿಂದಲೇ ಮಾರುತ್ತರ ಕೊಟ್ಟರು ರಶ್ಮಿಕಾ. ಇದೀಗ ಕರ್ನಾಟಿಕ್ ಸಂಗೀತ ಕಲೀತಿದ್ದೀನಿ ಅಂತ ಹೇಳಿ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದಾರೆ!

ಯಾಕೆ ಈ ಶಾಕ್!

kannada ಸಿನಿಮಾ ರಂಗದಿಂದ ದೂರವೇ ಉಳಿದಿರುವ ರಶ್ಮಿಕಾ ಕರ್ನಾಟಿಕ್ ಸಂಗೀತ ಕಲೀತಿದ್ದಾರೆ ಅನ್ನೋದು ಒಂದು ರೀಸನ್. ಹಾಗಂತ ಕರ್ನಾಟಿಕ್ ಸಂಗೀತದ ವ್ಯಾಪ್ತಿ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇದು ದಕ್ಷಿಣ ಭಾರತೀಯ ಸಂಗೀತವಾಗಿ ಗುರುತಿಸಿಕೊಂಡಿದೆ. ಆದರೆ ಕರ್ನಾಟಕ ಎಂಬ ಹೆಸರಿಂದ ಪರಿಗಣಿತವಾಗಿ ಇದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕನ್ನಡ ನಾಡಲ್ಲಿ ಹೆಚ್ಚು ಫೇಮಸ್ ಆಗಿತ್ತಂತೆ. ನಮ್ಮ ನೆಲದ ದಾಸಶ್ರೇಷ್ಠರಾದ ಪುರಂದರ ದಾಸರು ಇದನ್ನು ಸಾಮಾನ್ಯ ಜನರ‌ಮಟ್ಟಿನಲ್ಲೂ ಜನಪ್ರಿಯಗೊಳಿಸಿದ್ರು.

Rashmika Mandanna Learns Carnatic Music for MS Subbulakshmi Biopic Despite Not Being Fond of Singing

ಸುಬ್ಬುಲಕ್ಷ್ಮಿ ಪಾತ್ರಕ್ಕಾಗಿ ರಶ್ಮಿಕಾ ಸರ್ಕಸ್

ನಟಿ rashmika mandanna ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ನಟಿ, ಇದೀಗ ತಮ್ಮ ವೃತ್ತಿಜೀವನದ ಅತ್ಯಂತ ವಿಶೇಷ ಹಾಗೂ ಸವಾಲಿನ ಪಾತ್ರವೊಂದಕ್ಕೆ ಸಿದ್ಧರಾಗುತ್ತಿದ್ದಾರೆ. ಹೌದು, ಸಂಗೀತ ಲೋಕದ ದಂತಕಥೆ, ಗಾನಕೋಗಿಲೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಯೋಪಿಕ್‌ನಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು ಕರ್ನಾಟಿಕ್ ಸಂಗೀತ ಕಲೆಯನ್ನು ಕಲಿಯಲು ಮುಂದಾಗಿದ್ದಾರೆ.

Ranabaali ಚಿತ್ರದ ಜಯಮ್ಮ ಪಾತ್ರಕ್ಕೆ ಸಿಕ್ಕ ಪ್ರೀತಿಗೆ ಭಾವುಕರಾದ ರಶ್ಮಿಕಾ, ಪತಿ ವಿಜಯ್ ದೇವರಕೊಂಡ ಬಗ್ಗೆ ಹೇಳಿದ್ದೇನು?
Ranabaali ಚಿತ್ರದ ಜಯಮ್ಮ ಪಾತ್ರಕ್ಕೆ ಸಿಕ್ಕ ಪ್ರೀತಿಗೆ ಭಾವುಕರಾದ ರಶ್ಮಿಕಾ, ಪತಿ ವಿಜಯ್ ದೇವರಕೊಂಡ ಬಗ್ಗೆ ಹೇಳಿದ್ದೇನು?

ಚಾಲೆಂಜಿಂಗ್ ಪಾತ್ರ

ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನ ಮತ್ತು ಸಂಗೀತ ಸಾಧನೆಯನ್ನು ತೆರೆಮೇಲೆ ತರುವುದು ಸುಲಭದ ಮಾತಲ್ಲ. ಕೋಟ್ಯಂತರ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಈ ಮಹಾನ್ ಗಾಯಕಿಯ ಪಾತ್ರದಲ್ಲಿ ನಟಿಸುವುದೇ ದೊಡ್ಡ ಜವಾಬ್ದಾರಿ. ಹೀಗಾಗಿ ಕೇವಲ ಅವರಂತೆ ಕಾಣಿಸಿಕೊಳ್ಳುವುದಕ್ಕಿಂತ, ಅವರ ಸಂಗೀತದ ಜಗತ್ತನ್ನು ಅರ್ಥಮಾಡಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎನ್ನುವುದು ರಶ್ಮಿಕಾ ಅವರ ಆಸೆ. ಅದಕ್ಕಾಗಿ ಇದೀಗ ಅವರು ಕರ್ನಾಟಕ ಸಂಗೀತ ಕಲಿಯಲು ನಿರ್ಧರಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಶ್ಮಿಕಾ, ಹಾಡುವುದು ತನಗೆ ಅಷ್ಟಾಗಿ ಇಷ್ಟ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮನೆಯಲ್ಲಿ ಹಾಡು ಗುನುಗುವ ಅಭ್ಯಾಸ ಕೂಡ ತನಗಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

ಕಾಫಿ ವಿತ್ ಕರಣ್ ಶೋ ಮೂಲಕ ಮತ್ತೆ ಟ್ರೋಲರ್ಸ್‌ ಬಾಯಿಗೆ ಆಹಾರ ಆದ ರಶ್ಮಿಕಾ, ವಿಜಯ್‌: ಮೋಹನ್‌ಲಾಲ್ ಫ್ಯಾನ್ಸ್ ಫುಲ್‌ ಗರಂ!
ಕಾಫಿ ವಿತ್ ಕರಣ್ ಶೋ ಮೂಲಕ ಮತ್ತೆ ಟ್ರೋಲರ್ಸ್‌ ಬಾಯಿಗೆ ಆಹಾರ ಆದ ರಶ್ಮಿಕಾ, ವಿಜಯ್‌: ಮೋಹನ್‌ಲಾಲ್ ಫ್ಯಾನ್ಸ್ ಫುಲ್‌ ಗರಂ!

ಗೊಂದಲದಲ್ಲಿದ್ದ Rashmika Mandanna

ಈ ಪಾತ್ರದ ಬಗ್ಗೆ ಮೊದಲ ಬಾರಿಗೆ ಚಿತ್ರತಂಡ ಸಂಪರ್ಕಿಸಿದಾಗ ತನಗೆ ಸ್ವಲ್ಪ ಹಿಂಜರಿಕೆಯಾಗಿತ್ತು ಎಂಬುದನ್ನೂ ರಶ್ಮಿಕಾ ಬಹಿರಂಗಪಡಿಸಿದ್ದಾರೆ.'ಎಂ.ಎಸ್. ಸುಬ್ಬುಲಕ್ಷ್ಮಿ ಅವರಂತಹ ಶಕ್ತಿಶಾಲಿ ವ್ಯಕ್ತಿತ್ವವನ್ನು ಪ್ರತಿನಿಧಿಸುವುದು ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು. ಆದರೆ ಅವರ ಜೀವನ ತುಂಬಾ ಸುಂದರವಾದದ್ದು. ಮುಂದಿನ ಪೀಳಿಗೆಗೆ ಅವರ ಬದುಕು ಮತ್ತು ಸಾಧನೆಯ ಪರಿಚಯವಾಗಬೇಕು. ಈ ಅವಕಾಶವನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ನಿರ್ಧರಿಸಿದೆ' ಎಂಬರ್ಥದಲ್ಲಿ ಮನದ ಮಾತು ಹಂಚಿಕೊಂಡಿದ್ದಾರೆ.

ಎಚ್ಚರಿಕೆ ಹೆಜ್ಜೆ

ಇನ್ನು ಹಾಡುವುದರ ವಿಚಾರದಲ್ಲಿ ರಶ್ಮಿಕಾ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಈವರೆಗೆ ತಾನು ದೂರವಿಟ್ಟಿದ್ದ ಸಂಗೀತದ ಜಗತ್ತಿಗೆ ನಿಧಾನವಾಗಿ ಪ್ರವೇಶಿಸುತ್ತಿದ್ದು, ಒಂದೊಂದೇ ವಿಚಾರವನ್ನು ಕಲಿಯಲು ಉತ್ಸುಕರಾಗಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಹಾಡುವ ಶೈಲಿಯನ್ನು ಸುಮ್ಮನೆ ಅನುಕರಿಸುವ ಬದಲು, ಕರ್ನಾಟಕ ಸಂಗೀತವನ್ನು ಸರಿಯಾಗಿ ಕಲಿತು ಆ ಕಲೆಯ ಆಳವನ್ನು ಅರಿತುಕೊಳ್ಳಬೇಕು ಎಂಬುದು ಅವರ ಉದ್ದೇಶ.

ಪ್ರೀತಿ, ಮದುವೆ, ಡಿವೋರ್ಸ್ ಬಗ್ಗೆ ಟ್ರೋಲಿಗರಿಗೆ ರಶ್ಮಿಕಾ ತಿರುಗೇಟು; ಸಂಗಾತಿ ಆಯ್ಕೆ ಕುರಿತು ವಿಜಯ್ ಹೇಳಿದ್ದೇನು?
ಪ್ರೀತಿ, ಮದುವೆ, ಡಿವೋರ್ಸ್ ಬಗ್ಗೆ ಟ್ರೋಲಿಗರಿಗೆ ರಶ್ಮಿಕಾ ತಿರುಗೇಟು; ಸಂಗಾತಿ ಆಯ್ಕೆ ಕುರಿತು ವಿಜಯ್ ಹೇಳಿದ್ದೇನು?

ಹೆಚ್ಚು ಮಾಹಿತಿ ನೀಡದ ರಶ್ಮಿಕಾ

'ಎಂ.ಎಸ್. - ಎ ಲೆಗಸಿ ಆನ್ ಸ್ಕ್ರೀನ್' ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ರಶ್ಮಿಕಾ ಸದ್ಯಕ್ಕೆ ಸಿದ್ಧರಿಲ್ಲ. ಆದರೆ ಇಂತಹ ಮಹತ್ವದ ವ್ಯಕ್ತಿಯ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ರಶ್ಮಿಕಾ ಖುಷಿಯಾಗಿದ್ದಾರೆ.ಗೌತಮ್ ತಿನ್ನನೂರಿ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಒಟ್ಟಿನಲ್ಲಿ, ನಟನೆಯ ಜೊತೆಗೆ ಸಂಗೀತದ ಹೊಸ ಪಯಣವನ್ನೂ ಆರಂಭಿಸಲು ಹೊರಟಿರುವ ರಶ್ಮಿಕಾ, ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ಹೇಗೆ ತೆರೆಮೇಲೆ ಕಟ್ಟಿಕೊಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+