ಪ್ರೀತಿ, ಮದುವೆ, ಡಿವೋರ್ಸ್ ಬಗ್ಗೆ ಟ್ರೋಲಿಗರಿಗೆ ರಶ್ಮಿಕಾ ತಿರುಗೇಟು; ಸಂಗಾತಿ ಆಯ್ಕೆ ಕುರಿತು ವಿಜಯ್ ಹೇಳಿದ್ದೇನು?
Rashmika Mandanna: ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಶೋನಲ್ಲಿ ತಾರಾ ದಂಪತಿ ನಟಿ ರಶ್ಮಿಕಾ ಮಂದಣ್ಣ ಮತ್ತು ಪತಿ, ನಟ ವಿಜಯ್ ದೇವರಕೊಂಡ ಪಾಲ್ಗೊಂಡ ವೇಳೆ ಮಾತನಾಡಿದ ವಿಷಯಗಳು ಭಾರೀ ಚರ್ಚೆ ಆಗುತ್ತಿವೆ. ಪಾಸಿಟಿವ್‌ಗಿಂತ ನೆಗಟಿವ್ ಆಗಿ ಹೆಚ್ಚು ಟ್ರೋಲ್ ಮಾಡಲಾಗುತ್ತಿದೆ. ಇದೆಲ್ಲ ಬೆಳವಣಿಗೆಗಳನ್ನು ಕಂಡು ರಶ್ಮಿಕಾ ಖಡಕ್ ತಿರುಗೇಟು ನೀಡಿದರೆ, ವಿಜಯ್ ಅವರು 'ನನ್ನ ಆಯ್ಕೆ ಸರಿಯಾಗಿದೆ'. ಪತಿ ಕೂಸುಮರಿ ಮಾಡಿಕೊಂಡಿರುವ ವಿಡಿಯೋ ಹಂಚಿಕೊಂಡು ನಟಿ ರಶ್ಮಿಕಾ ಅವರು, 'ಇಂಟರ್ ನೆಟ್ ಜನರೇ, ಸದಾ ಕಹಿ ಭಾವನೆಯಿಂದ ಬದುಕುತ್ತಿರುವವರೇ' ಎಂದು ಸರಣಿ ಸಂದೇಶಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮತ್ತು ವಿಜಯ್ ಪ್ರೀತಿ, ಮದುವೆ ಬಗ್ಗೆ ಹಗುರವಾಗಿ ಮಾತನಾಡಿದವರ ವಿರುದ್ಧ ಕಿಡಿ ಕಾರಿದ್ದಾರೆ. ಮತ್ತೊಂದೆಡೆ ವಿಜಯ್ ದೇವರಕೊಂಡ ಅವರು ಸಹ ಮೌನ ಮುರಿದು ತಮ್ಮ ಸಂಗಾತಿ ಕುರಿತು ಪಾಸಿಟಿವ್ ಆಗಿಯೇ ಹೇಳಿದ್ದಾರೆ.
ಈ ಶೋನ್‌ನಲ್ಲಿ ವಿಜಯ್ ಮತ್ತು ರಶ್ಮಿಕಾ ಪ್ರೀತಿ, ಮದುವೆ, ಎಂಗೇಜ್‌ಮೆಂಟ್, ಮದುವೆ ಮೊದಲಿನ ಸಂಭಾಷಣೆ, ಮದುವೆ ಕುರಿತು 100 ಬಾರಿ ಪ್ರಪೋಷ್ ಮಾಡುವಂತಿ ಷರತ್ತು. ಪತಿ, ಪತ್ನಿ ಉತ್ತರಿಸುವಾಗ ಉಂಟಾದ ಕಣ್ಣೋಟಗಳ ಕುರಿತು ಸಾಮಾಜಿಕ ಜಾಲತಾಣಳಲ್ಲಿ ಸಖತ್ ಟ್ರೋಲ್ ಮಾಡಲಾಗಿತ್ತು. 'ಒಬ್ಬರ ಪ್ರೀತಿ ನಿರಾಕರಿಸಿದರೆ ಇನ್ನೊಬ್ಬರ ಬಳಿ ಪ್ರೀತಿಗಾಗಿ, ಮದುವೆಗಾಗಿ ಹೀಗೆ ಭಿಕ್ಷೆ ಬೇಡಬೇಕಾಗುತ್ತದೆ' ಅಂತೆಲ್ಲ ಕೆಲವರು ಟ್ರೋಲ್ ಮಾಡಿದ್ದಾರೆ. ರಶ್ಮಿಕಾ ಮೊದಲು ಪ್ರೀತಿಸಿದ್ದ ನಟ ರಕ್ಷಿತ್ ಶೆಟ್ಟಿ ಅವರ ಡಾನ್ಸ್ ವಿಡಿಯೋ ಮೂಲಕ ರಶ್ಮಿಕಾ, ವಿಜಯ್ ಸಂದರ್ಶನ ಹೇಳಿಕೆ ಎಡಿಟ್ ಮಾಡಿ ಕಾಲೆಳೆದಿದ್ದರು.

ಕೆಲವರು 'ಇನ್ನೊಂದು ದಂಪತಿಯ ವಿಚ್ಚೇದನಕ್ಕೆ ಸಜ್ಜಾಗಿ' ಎಂಬ ವಿಡಿಯೋ, ಮಿಮ್ಸ್‌ಗಳು ಓಡಾಡಿದ್ದವು. ಅತೀರೇಕದ ವರ್ತಗಳು ಕಂಡು ಬಂದ ಬೆನ್ನಲ್ಲೆ ನಟಿ ರಶ್ಮಿಕಾ ಅವರು ತಮ್ಮ ಹಾಗೂ ವಿಜಯ್ ಪ್ರೀತಿ, ನಂಬಿಕೆ, ಎಲ್ಲವು ಸರಿ ಇದೆ ಎಂದು ಹೇಳಿದ್ದಾರೆ.
ರಶ್ಮಿಕಾ ಸರಣಿ ಪೋಸ್ಟ್‌ಗಳಲ್ಲಿ ಏನಿದೆ?
ರಶ್ಮಿಕಾ ಅವರು, 'ಇಂಟರ್‌ನೆಟ್‌ನಲ್ಲಿರುವ ನನ್ನ ಪ್ರೀತಿಯ ಜನರೇ, ಪ್ರೀತಿಯನ್ನು ಆಳವಾಗಿ ನಂಬುವವರೇ ಮತ್ತು ಸದಾ ಕಹಿ ಭಾವನೆಯಲ್ಲಿಯೇ ಬದುಕುವವರೇ, ನನ್ನ ಮತ್ತು ವಿಜ್ಜು (Vijju) ಅವರ ವಿಷಯಕ್ಕೆ ಸಂಬಂಧಿಸಿದಂತೆ, ನನ್ನದೊಂದು ಸಣ್ಣ ಅಭಿಪ್ರಾಯ ಇಲ್ಲಿದೆ. ಇಂತಹ ವಿಷಯಗಳ ಸಾಮಾನ್ಯವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ಹೊಂದಿರುತ್ತಾರೆ. ಕೆಲವರ ಅಭಿಪ್ರಾಯಗಳು ತಿಳಿಯುವುದು, ಬೇರೆಯವರ ದೃಷ್ಟಿಕೋನವನ್ನು ಆಲಿಸುವುದು ನನಗೆ ಇಷ್ಟವಾಗುತ್ತದೆ'
'ಆದರೆ, ನಮ್ಮ ಸಂದರ್ಶನದ ಬಳಿಕ ಕೋಲಾಹಲದ ರೀತಿ ಎದ್ದಿರುವ ಅಭಿಪ್ರಾಯಗಳನ್ನು ನೋಡಿದರೆ, ಇದು ಕೇವಲ ಜನರ ಅಭಿಪ್ರಾಯಗಳಂತೆ ಕಾಣುತ್ತಿಲ್ಲ. ಬದಲಾಗಿ, ಉದ್ರಿಕ್ತ ಗುಂಪೊಂದು ತಮ್ಮ ಸಿಟ್ಟನ್ನು ಹೊರಹಾಕಲು ಯಾರನ್ನಾದರೂ ಹುಡುಕುತ್ತಿರುವಂತೆ ಕಾಣುತ್ತದೆ' ಎಂದು ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದಾರೆ.
'ಇವರ ಅಭಿಪ್ರಾಯಗಳಲ್ಲಿ ನಾವು ಮಾತನಾಡಿದ ವಿಷಯದ ಮೂಲ ಉದ್ದೇಶವೇ ಕಳೆದುಹೋಗಿದೆ. ಬಹುಶಃ ಅದು ನಿಮ್ಮ ದೃಷ್ಟಿಕೋನಕ್ಕೆ ಹೊಂದಿಕೆಯಾಗಿಲ್ಲದೇ ಇರಬಹುದು ಅಥವಾ ನಿಮ್ಮಲ್ಲಿ ಕೆಲವರು ಅದನ್ನು ಅರ್ಥಮಾಡಿಕೊಳ್ಳಲು ಬಯಸದೇಯು ಇರಬಹುದು. ಹೀಗಾಗಿಯೇ ಸಂದರ್ಶನದ ಮಾತುಗಳನ್ನು, ಪ್ರೀತಿಯನ್ನು ನಂಬುವ ಜನರಿಗಾಗಿ ನಾನು ಪ್ರತಿಕ್ರಿಯಿಸಲು ಬಯಸುತ್ತೇನೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ರೀತಿಯಲ್ಲಿ ಪ್ರೀತಿಯನ್ನು ಕಂಡುಕೊಳ್ಳುವ ಅವಕಾಶ ಸಿಗಲಿ ಎಂದು ನಾನು ಆಶಿಸುತ್ತೇನೆ' ಎಂದು ಹೇಟ್ ಮಾಡುವವರಿಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
'ನನ್ನ ಮತ್ತು ವಿಜ್ಜು ಅವರ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ, ಅನಗತ್ಯವಾದ ಅಭಿಪ್ರಾಯಗಳು, ಟೀಕೆಗಳು ಮತ್ತು ಕೇಳದಿದ್ದರೂ ನೀಡುವ ಸಲಹೆಗಳ ಸುರಿಮಳೆಯೇ ಆಗಿದೆ. ಜನರು ನಮ್ಮನ್ನು ಟೀಕಿಸಿದ ರೀತಿ ಅಥವಾ ಅವರು ವ್ಯಕ್ತಪಡಿಸಿದ ದೃಢವಾದ ನಿಲುವು ನನ್ನನ್ನು ನಿಜವಾಗಿಯೂ ಸ್ವಲ್ಪ ವಿಚಲಿತಗೊಳಿಸಿತು. ಅಸಲಿಗೆ ಇಲ್ಲಿ ನಡೆಯುತ್ತಿರುವುದಾದರೂ ಏನು? ಎಂದು ರಶ್ಮಿಕಾ ಪ್ರಶ್ನಿಸಿದ್ದಾರೆ.
ಈ ಉದ್ದೇಶದಿಂದಲೇ ಪ್ರಪೋಸಲ್ ಷರತ್ತಿನ ಮಾತುಕತೆ ಆಗಿತ್ತು!
ಈ ಬಗ್ಗೆ ಸ್ವಲ್ಪ ಹಿಂದೆ ಸರಿದು ಆಲೋಚಿಸಿದೆ. ನನ್ನ ಜೀವನದ ಕುರಿತು ನನ್ನದೇ ಆದ ಒಂದು ಸಣ್ಣ ದೃಷ್ಟಿಕೋನ ಇಲ್ಲಿದೆ. ಮೊದಲನೆಯದಾಗಿ, ಪ್ರೀತಿ ಮದುವೆ ಎಷ್ಟು ಬಾರಿ ಪ್ರಸ್ತಾಪವಾಯಿತು ಅಥವಾ ಎಷ್ಟು ವರ್ಷಗಳ ಕಾಲ ನಡೆಯಿತು ಎಂಬುದು ವಿಷಯವೇ ಅಲ್ಲ. ಅದನ್ನು ಕೇಳಿ ಕೆಲವರು ಗೊಂದಲಕ್ಕೀಡಾಗಿದ್ದೀರಿ. ಹೌದು ಷರತ್ತಿನಂತಹ ಮಾತುಕತೆ ನಡೆದಿತ್ತು. ಆದರೆ, ನಮ್ಮಿಬ್ಬರಲ್ಲಿ ಯಾರೂ ಅದ್ದೂರಿಯಾದ 'ಪ್ರಪೋಸಲ್' (ವಿವಾಹ ಪ್ರಸ್ತಾಪ) ನಿರೀಕ್ಷಿಸುತ್ತಿರಲಿಲ್ಲ. ಜೀವನದ ಏಳುಬೀಳುಗಳು, ಸಂತೋಷಗಳು ಮತ್ತು ಒತ್ತಡಗಳ ನಡುವೆಯೂ, ನಾವಿಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಸಮಯ ಮತ್ತು ಅವಕಾಶವನ್ನು ತೆಗೆದುಕೊಳ್ಳಬೇಕು. ನಮಗೆ ನಿಜವಾಗಿಯೂ ಬೇಕಿರುವುದು ಇದೇನಾ ಮತ್ತು ಇದು ಸರಿಯಾದ ಸಮಯವೇ ಎಂದು ಖಚಿತಪಡಿಸಿಕೊಳ್ಳಬೇಕು ಎಂಬುದು ಆ ಮಾತುಕತೆಯ ಉದ್ದೇಶವಾಗಿತ್ತು. ಅದರಂತೆ ನಾವು ನಡೆದಿಕೊಂಡೆವು' ಎಂದು ರಶ್ಮಿಕಾ ತಮ್ಮ ಒಂದು ವರ್ಷದ ನಿರಂತರ ಪ್ರಪೋಸಲ್ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ನಮ್ಮಿಬ್ಬರಿಗೂ ಸಮಯ ಬೇಕಾಗಿತ್ತು! ರಶ್ಮಿಕಾ
ಏನು ಬೇಕು ಎಂಬುದು ನನಗೆ ಸ್ಪಷ್ಟವಾಗಿತ್ತು. ಹಾಗೆಯೇ, ಜೀವನದ ಪ್ರಾಯೋಗಿಕ ವಿಷಯಗಳ ಬಗ್ಗೆ ಆಲೋಚಿಸಲು ಮತ್ತು ಖಚಿತಪಡಿಸಿಕೊಳ್ಳಲು ವಿಜಯ್‌ಗೂ ಸಮಯ ಬೇಕಾಗಿತ್ತು. ಇವೆರಡರಲ್ಲೂ ತಪ್ಪೇನಿಲ್ಲ. ಇದೆಲ್ಲವು ನಮ್ಮ ಪ್ರೀತಿಯನ್ನು ಯಾವುದೇ ರೀತಿಯಲ್ಲಿ ಬದಲಿಸಿಲ್ಲ. ನಾನು ಭಾವನಾತ್ಮಕವಾಗಿ ಯೋಚಿಸುವವಳು, ವಿಜಯ್ ಪ್ರಾಯೋಗಿಕವಾಗಿ ಆಲೋಚಿಸುವವರು ನಮ್ಮಿಬ್ಬರ ಜೀವನದಲ್ಲಿಯೂ ಇಂತಹ ವ್ಯಕ್ತಿತ್ವಗಳ ಅಗತ್ಯವಿದೆ.
ಈ ರೀತಿಯ ಮದುವೆ ಅಲಂಕಾರವಷ್ಟೇ!
ನಮ್ಮ ಪಾಲಿಗೆ, ಮದುವೆ ಎಂದರೆ ಕೇವಲ ಒಂದು 'ಪ್ರಪೋಸಲ್' ನೀಡುವುದು, ಮಂಡಿಯೂರಿ ಕುಳಿತು ಪ್ರಸ್ತಾಪಿಸುವುದು ಅಥವಾ ಬೆರಳಿಗೆ ಉಂಗುರ ತೊಡಿಸುವುದು ಎಂದರ್ಥವಲ್ಲ. ಅದೆಲ್ಲಾ ಕೇವಲ ಮೇಲ್ನೋಟದ ಅಲಂಕಾರವಷ್ಟೇ. ನಮ್ಮ ಪಾಲಿಗೆ, ಇದು ಒಟ್ಟಾಗಿ ಒಂದು ಬದುಕನ್ನು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವ ವಿಷಯವಾಗಿದೆ. ಹೀಗಾಗಿಯೇ ನಾವು ಅದೆಲ್ಲವನ್ನು ನಾವು ಅತ್ಯಂತ ಸುಂದರವಾಗಿ ನಡೆಸಿಕೊಂಡು ಬಂದಿದ್ದೇವೆ' ಎಂದು ತಮ್ಮ ಪ್ರೀತಿ, ಮದುವೆ ಹಾದಿಯನ್ನು ಸ್ಮರಿಸಿದ್ದಾರೆ.
ಮದುವೆಯಾಗೋಣ ಅಂತ 1000 ಬಾರಿ ಹೇಳಲು ಸಿದ್ಧ
ನಿಮಗಾಗಿ ಎಂತಹ ತ್ಯಾಗ ಮಾಡಲು ಸಿದ್ಧರಿರುವ ವ್ಯಕ್ತಿಯನ್ನು ಕಂಡುಕೊಳ್ಳಿ. ನಿಮಗಾಗಿ ಅಷ್ಟೇ ಪ್ರೀತಿ ಮತ್ತು ಬದ್ಧತೆ ತೋರುವ ವ್ಯಕ್ತಿ ಆರಿಸಿಕೊಳ್ಳಿ. ಸಂಗಾತಿಯ (ವಿಜಯ್) ಬಗ್ಗೆ ನನಗೆ ಅತೀವ ಪ್ರೀತಿ, ಒಲವಿದೆ, ಅದು ತಪ್ಪಲ್ಲ. ನಾನು ಮದುವೆಯಾಗುತ್ತಿರುವ ವ್ಯಕ್ತಿಯನ್ನು ಪ್ರೀತಿಸದಿದ್ದರೆ, ನಾನು ಆತನನ್ನು ಏಕೆ ಮದುವೆಯಾಗಲಿ? ಅವನು ನನ್ನ ಜೀವನಪೂರ್ತಿ ಜೊತೆಗಿರುವ ಸಂಗಾತಿ. ಸಾಮಾನ್ಯ ದಿನಗಳಲ್ಲಾಗಲಿ ಅಥವಾ ವಿಶೇಷ ದಿನಗಳಲ್ಲಾಗಲಿ, ನನ್ನೊಂದಿಗೆ ಇರುವ ಸ್ನೇಹಿತ. ನನ್ನ ಮಕ್ಕಳ ತಂದೆ. ನನ್ನೊಂದಿಗೆ ಮುದಿಪ್ರಾಯದವರೆಗೂ ಜೊತೆಗಿರುವ ವ್ಯಕ್ತಿ.
ನಿಮ್ಮನ್ನು ಎಷ್ಟು ಸುಂದರವಾಗಿ ಪ್ರೀತಿಸುವ ವ್ಯಕ್ತಿಯನ್ನು ಕಂಡುಕೊಳ್ಳಿ ಎಂದರೆ, ಮದುವೆಯಾದ ಮೇಲೂ ಕೂಡ, "ಬನ್ನಿ, ನಾವಿಬ್ಬರೂ ಮದುವೆಯಾಗೋಣ" ಸಾವಿರ ಬಾರಿ ಬೇಕಾದರೂ ಕೇಳುತ್ತೇನೆ. ಇನ್ನೂ 100 ಬಾರಿ ಎಂಬುದು ದೊಡ್ಡ ವಿಷಯವೇ ಅಲ್ಲ.
🫰🏻🫶🏻♥️ https://t.co/nQ3W0DYf0K
— Rashmika Mandanna (@iamRashmika) October 26, 2026
ಕಲ್ಪನೆಗಳಲ್ಲಿ ಮುಳುಗಿರುವವರೇ...
'ತಮ್ಮದೇ ಕಲ್ಪನೆಗಳಲ್ಲಿ ಸಂಪೂರ್ಣವಾಗಿ ಮುಳುಗಿದವರೇ....ಕೇಳಿ, ನಾವಿಬ್ಬರೂ ನಮ್ಮ ಬದುಕನ್ನು ನಮ್ಮದೇ ಆದ ಷರತ್ತುಗಳ ಮೇಲೆ, ನಮ್ಮ ಆಯ್ಕೆಗಳ ಮೂಲಕ, ನಮ್ಮ ಕಠಿಣ ಪರಿಶ್ರಮದಿಂದ ರೂಪಿಸಿಕೊಂಡಿದ್ದೇವೆ. ನಾವಿಬ್ಬರೂ ಬುದ್ಧಿವಂತರು, ಸಮರ್ಥರು. ನಮಗೆ ಹೇಗೆ ಬದುಕಬೇಕು ಮತ್ತು ಯಾರೊಂದಿಗೆ ಜೀವನ ಹಂಚಿಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ, ಅವಕಾಶವಿದೆ ಎಂದು ಖಡಕ್ ತಿರುಗೇಟು ಕೊಟ್ಟಿದ್ದಾರೆ.
ನಾವು 'ನಮ್ಮನ್ನು' (ಒಬ್ಬರನ್ನೊಬ್ಬರು) ಆಯ್ಕೆ ಮಾಡಿಕೊಂಡಿದ್ದೇವೆ. ನಾವು ಇಡೀ ಜೀವನದಲ್ಲಿ ಪದೇ ಪದೇ ಒಬ್ಬರನ್ನೊಬ್ಬರು ಆಯ್ಕೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ನಮ್ಮ ಪ್ರೀತಿಯು, 'ಪ್ರೀತಿ ಹೇಗಿರಬೇಕು' ಎಂದು ನೀವು ಕಲ್ಪಿಸಿಕೊಂಡಿರುವ ಚೌಕಟ್ಟಿಗೆ ಹೊಂದಿಕೆಯಾಗದಿದ್ದರೆ, ಅದರಲ್ಲಿ ತಪ್ಪೇನಿದೆ? ಆ ಸುಂದರ ಕಲ್ಪನೆಯನ್ನು ನಿಮ್ಮ ಸ್ವಂತ ಜೀವನದಲ್ಲಿ ನೀವು ಅನುಭವಿಸಿ. ಬದುಕಲ್ಲಿ ಸಂತೋಷವಾಗಿರುವ ಪ್ರತಿಯೊಬ್ಬರಿಗೂ ನನ್ನ ಬೆಂಬಲವಿದೆ ಎಂದು ರಶ್ಮಿಕಾ ತಿಳಿಸಿದ್ದಾರೆ.
ಋತಸ್ರಾವ, ಮೂಳೆ ಮೂರಿದಾಗ ಅವನಿದ್ದ!
ನನ್ನ ಮೂಳೆ ಮುರಿದಾಗ, ಪ್ರತಿ ತಿಂಗಳು ಹೊಟ್ಟೆ ನೋವು ಬಂದಾಗ, ನಾನು ಕುಗ್ಗಿದಾಗ, ಮಧ್ಯರಾತ್ರಿಯಲ್ಲಿ ಆತಂಕದಿಂದ ಎಚ್ಚರಗೊಂಡಾಗ, ನನಗೆ ಸಲಹೆ ಬೇಕಾದಾಗ, ರಕ್ಷಣೆ ಬೇಕಾದಾಗ, ಸಾಂತ್ವನ ಅಥವಾ ಬೆಂಬಲ ಬೇಕಾದಾಗ ಅಲ್ಲಿ ನೀವ್ಯಾರು ಇರುವುದಿಲ್ಲ. ಆಗ ನನ್ನ ಜೊತೆ ಅಲ್ಲಿ ಅವನು (ವಿಜಯ್) ಇರುತ್ತಾನೆ. ಯಾವಾಗಲೂ ಜೊತೆಯಾಗಿರುತ್ತಾನೆ. ನಿಮ್ಮನ್ನು ಬೆಂಬಲಿಸುವ, ನಿಮ್ಮ ಮೇಲೆ ಪ್ರೀತಿಯ ಮಳೆಗರೆಯುವ, ನಿಮ್ಮನ್ನು ರಕ್ಷಿಸುವ, ನಿಮ್ಮ ಯೋಗಕ್ಷೇಮ ನೋಡಿಕೊಳ್ಳುವ ಮತ್ತು ನಿಮ್ಮ ಪ್ರತಿಯೊಂದು ಗೆಲುವನ್ನೂ ಸಂಭ್ರಮಿಸುವ ವ್ಯಕ್ತಿಯೊಬ್ಬರು ನಿಮ್ಮೊಂದಿಗಿರುವುದು ಪ್ರೀತಿಯಾದರೆ, ಅದು ನನ್ನ ಬಳಿ ಇದೆ ಎಂದು ತಮ್ಮ ಸಂಗಾತಿ, ಪ್ರೀತಿ, ಮದುವೆ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ನಮ್ಮ ಬಗ್ಗೆ ಚಿಂತಿಸಬೇಡಿ
ನಮ್ಮ ಬಗ್ಗೆ ಚಿಂತಿಸಬೇಡಿ. ನಿಮಗೂ ಅಷ್ಟೇ ಆಳವಾಗಿ ಪ್ರೀತಿಸುವ ವ್ಯಕ್ತಿಯೊಬ್ಬರು ಸಿಗಲಿ ಎಂದು ಹಾರೈಸುತ್ತೇನೆ, ಪ್ರಾರ್ಥಿಸುತ್ತೇನೆ. ನಿಮಗೆ ಸಂತೋಷ ನೀಡುವಂತಹ ಜೀವನ ನಡೆಸಿ. ನನ್ನ ಬಗ್ಗೆ ಟೀಕಿಸಿದರೆ ಸಹಿಸಿಕೊಳ್ಳುವ ಶಕ್ತಿ ನನಗಿದೆ. ಆದರೆ ಕುಟುಂಬದವರ ಬಗ್ಗೆ ಟೀಕಿಸುವುದು ಸರಿಯಲ್ಲ. ಸ್ತ್ರೀವಾದದಂತೆ ಮುಖವಾಡ ಧರಿಸಿದಂತೆ ಮಾತನಾಡುವುದು ಕಿರುಕುಳವಿದ್ದಂತೆ. ಸ್ತ್ರೀವಾದವೆಂದರೆ ಇನ್ನೊಬ್ಬರನ್ನು ಕೀಳಾಗಿ ಕಾಣುವುದಲ್ಲ. ಪುರುಷ ಅಥವಾ ಮಹಿಳೆ ಯಾರೇ ಆದರೂ ಅವರಿಗಿದು ಅನ್ವಯಿಸುತ್ತದೆ. ನನ್ನ ಜವಾಬ್ದಾರಿ, ಆಯ್ಕೆಗೆ ತಕ್ಕಂತಹ ಪ್ರೀತಿ ನನಗೆ ಸಿಕ್ಕಿದೆ ಎಂದು ರಶ್ಮಿಕಾ ಹೇಳಿದ್ದಾರೆ.
ಸಂಗಾತಿ ಆಯ್ಕೆ ಬಗ್ಗೆ ವಿಜಯ್ ಹೇಳಿದ್ದೇನು?
ನಿರಂತರ ಟ್ರೋಲ್‌ಗಳ ಬಳಿಕ ನಟ ವಿಜಯ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ನನ್ನ ಆಪ್ತ ಸ್ನೇಹಿತೆ, ನನ್ನ ಹೆಂಡತಿ, ನನ್ನ ಸಂಗಾತಿ. ನನ್ನ ಜೀವನದ ಅತ್ಯಂತ ಸುಂದರವಾದ ಭಾಗಗಳಲ್ಲಿ ಒಂದು. ಇದನ್ನು ನಾನು ಸಂಪೂರ್ಣವಾಗಿ ಸರಿಯಾಗಿ ಆಯ್ಕೆ ಮಾಡಿಕೊಂಡಿದ್ದೇನೆ' ಎಂದು ರಶ್ಮಿಕಾ ಆಯ್ಕೆ ಸರಿಯಾಗಿದೆ ಎಂದು ತಿಳಿಸಿದ್ದಾರೆ.
'ನಮ್ಮ ಬಗ್ಗೆ ಚಿಂತಿಸುವ ಎಲ್ಲರಿಗೂ ಒಂದು ಮಾತು, ನಾವಿಬ್ಬರೂ ಅತ್ಯಂತ ಸಂತೋಷವಾಗಿದ್ದೇವೆ. ನಾನು ನಿಜಕ್ಕೂ ಅದೃಷ್ಟಶಾಲಿ. ಒಂದು ವೇಳೆ ಇಡೀ ಜಗತ್ತೇ ನಮ್ಮ ವಿರುದ್ಧ ನಿಂತರೂ ಸರಿ, ನಾವಿಬ್ಬರೂ ಒಟ್ಟಿಗೆ ಇರುತ್ತೇವೆ. ಪ್ರೀತಿಯನ್ನು ಸಂಭ್ರಮಿಸುವ ಮತ್ತು ಸರಳವಾಗಿ, ಸಂತೋಷದಿಂದ ಬದುಕುವುದನ್ನು ಇಷ್ಟಪಡುವ ಎಲ್ಲರಿಗೂ ನನ್ನ ಪ್ರೀತಿಪೂರ್ವಕ ಶುಭಾಶಯಗಳು' ಎಂದಿದ್ದಾರೆ.
ಇನ್ನೂ 'ಯಾವುದೇ ರೀತಿಯ ಸೌಜನ್ಯ ಅಥವಾ ಗೌರವವಿಲ್ಲದೆ ಹೇಳುವುದಾದರೆ,
ಉಳಿದವರೆಲ್ಲರೂ ನರಕಕ್ಕೆ ಹೋಗಲಿ (go fuck themselves)-ದೇವರಕೊಂಡ ವಿಜಯ್ ಸಾಯಿ' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಅಭಿಮಾನಿಗಳ ಬಗ್ಗೆ ರಶ್ಮಿಕಾ ಹೇಳಿದ್ದೇನು?
ನನ್ನ ಕೆಲವು ಕನ್ನಡಿಗ ಸ್ನೇಹಿತರಿಗೆ...ಅಬ್ಬಾ, 10 ವರ್ಷಗಳ ನಂತರವೂ ನಾನು ನಿಮ್ಮ ಹೃದಯದಲ್ಲಿ ಅಷ್ಟೇ ಆಳವಾಗಿ ಉಳಿದುಕೊಂಡಿದ್ದೇನೆಂದು ತಿಳಿದೇ ಸಂತೋಷವಾಯಿತು. ಇಷ್ಟು ದೀರ್ಘಕಾಲದ ನಂತರವೂ ನೀವು ನನ್ನನ್ನು ಸಂಭ್ರಮಿಸುತ್ತಿದ್ದೀರಿ ಎಂದರೆ ನಿಜವಾಗಿಯೂ, ನಾನು ತುಂಬಾ ಅದೃಷ್ಟಶಾಲಿ! ಪ್ರೀತಿ ಮತ್ತು ಸಂತೋಷ ಸಂಭ್ರಮಿಸುವ ಎಲ್ಲರಿಗೂ ಆಭಾರಿ. ಉಳಿದ ಎಲ್ಲರಿಗೂ... ದಯವಿಟ್ಟು ನಿಮಗೂ ಸಂತೋಷ ನೀಡುವಂತಹದ್ದನ್ನು ಕಂಡುಕೊಳ್ಳಿ' ಎಂದು ರಶ್ಮಿಕಾ ಸಲಹೆ ನೀಡಿದ್ದಾರೆ.


Click it and Unblock the Notifications
