ಕಾಫಿ ವಿತ್ ಕರಣ್ ಶೋ ಮೂಲಕ ಮತ್ತೆ ಟ್ರೋಲರ್ಸ್‌ ಬಾಯಿಗೆ ಆಹಾರ ಆದ ರಶ್ಮಿಕಾ, ವಿಜಯ್‌: ಮೋಹನ್‌ಲಾಲ್ ಫ್ಯಾನ್ಸ್ ಫುಲ್‌ ಗರಂ!

ಜನಪ್ರಿಯ ಟಾಕ್ ಶೋ ಆಗಿರುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಭಾಗವಹಿಸಿದ್ದ ಟಾಲಿವುಡ್‌ನ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಒಂದು ಪ್ರತಿಕ್ರಿಯೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ದಕ್ಷಿಣ ಭಾರತದ ಖ್ಯಾತ ನಟರ ಬಿರುದುಗಳ ಬಗ್ಗೆ ಪ್ರಶ್ನೆ ಕೇಳಿದಾಗ, ಮಲಯಾಳಂ ಚಿತ್ರರಂಗದ ನಟ ಮೋಹನ್‌ಲಾಲ್ ಅವರ ಬಗ್ಗೆ ಈ ಇಬ್ಬರೂ ನೀಡಿದ ಪ್ರತಿಕ್ರಿಯೆಯು ಸಾಮಾಜಿಕ ಜಾಲತಾಣಗಳಲ್ಲಿ ಮೋಹನ್‌ಲಾಲ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.

ಕಾಫಿ ವಿತ್ ಕರಣ್ ಶೋನಲ್ಲಿ ಕಂಪ್ಲೀಟ್ ಆಕ್ಟರ್ ಪ್ರಶ್ನೆ

ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಈ ಶೋನಲ್ಲಿ, ದಕ್ಷಿಣ ಭಾರತದ ಸ್ಟಾರ್ ನಟರು ಹಾಗೂ ಅವರ ಅಭಿಮಾನಿಗಳು ನೀಡಿದ ಬಿರುದುಗಳನ್ನು ಮ್ಯಾಚ್ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ವೇಳೆ ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಅವರನ್ನು 'ಐಕಾನ್ ಸ್ಟಾರ್' ಮತ್ತು ಯಶ್ ಅವರನ್ನು 'ರಾಕಿಂಗ್ ಸ್ಟಾರ್' ಎಂದು ಅತ್ಯಂತ ನಿಖರವಾಗಿ ಗುರುತಿಸಿದರು.

Koffee With Karan Vijay Deverakonda And Rashmika Face Mohanlal Fans Backlash Over Actor Remark

ಆದರೆ, ಕರಣ್ ಜೋಹರ್ ಅವರು ಪ್ರಖ್ಯಾತ 'ದಿ ಕಂಪ್ಲೀಟ್ ಆಕ್ಟರ್'ಬಿರುದು ಯಾರಿಗೆ ಸೇರಿದ್ದು ಎಂದು ಕೇಳಿದಾಗ ಪರಿಸ್ಥಿತಿ ಬದಲಾಯಿತು. ಪ್ರಶ್ನೆ ಕೇಳುತ್ತಿದ್ದಂತೆಯೇ ತಮಾಷೆಯಾಗಿ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ, "ನಾನು!" ಎಂದು ಉತ್ತರಿಸಿದರು.

ತಕ್ಷಣವೇ ಕರಣ್ ಅವರು ವಿಜಯ್ ಅವರನ್ನು ತಿದ್ದಿ, ಈ ಬಿರುದು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ ಸೇರಿದ್ದು ಎಂದು ತಿಳಿಸಿದರು. ಇದನ್ನು ಕೇಳಿ ಅಚ್ಚರಿಗೊಂಡ ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಒಟ್ಟಿಗೆ "ಮೋಹನ್‌ಲಾಲ್ ಸರ್?" ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ವಿರುದ್ಧ ಫ್ಯಾನ್ಸ್ ಗರಂ

ವಿಜಯ್ ಹಾಗೂ ರಶ್ಮಿಕಾ ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದ ಸೃಷ್ಟಿಸಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿಯೇ ಕೆಲಸ ಮಾಡುತ್ತಿದ್ದರೂ, ಮೋಹನ್‌ಲಾಲ್ ಅವರಂತಹ ದಿಗ್ಗಜ ನಟನ ಬಿರುದಿನ ಬಗ್ಗೆ ಅರಿವಿಲ್ಲದಿರುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮೋಹನ್‌ಲಾಲ್ ಫ್ಯಾನ್ಸ್ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚಿತ್ರರಂಗದ ಸಾಮಾನ್ಯ ಜ್ಞಾನವಿಲ್ಲದ ನಟರು ಎಂದು ಟೀಕಿಸುತ್ತಿದ್ದಾರೆ.

ಜೈಲರ್ 2 ಸಿನಿಮಾ ಹಾಗೂ ಪೇಟ್ರಿಯಾಟ್ ಬಗ್ಗೆಯೂ ಅಸಮಾಧಾನ

ಮೋಹನ್‌ಲಾಲ್ ಫ್ಯಾನ್ಸ್ ಕೇವಲ ವಿಜಯ್-ರಶ್ಮಿಕಾ ವಿರುದ್ಧ ಮಾತ್ರವಲ್ಲ, ಇತ್ತೀಚೆಗೆ 'ಜೈಲರ್ 2 ಸಿನಿಮಾ' ನಿರ್ಮಾಪಕರ ವಿರುದ್ಧವೂ ಆಕ್ರೋಶ ಹೊರಹಾಕಿದ್ದರು. ರಜನಿಕಾಂತ್ ಅಭಿನಯದ ಜೈಲರ್ 2 ಚಿತ್ರದಲ್ಲಿ ಮೋಹನ್‌ಲಾಲ್ ಅವರ ಅತಿಥಿ ಪಾತ್ರವನ್ನ ಕಡಿತಗೊಳಿಸಲಾಗಿತ್ತು ಮತ್ತು ಟ್ರೈಲರ್‌ನಲ್ಲಿದ್ದ ಅವರ ದೃಶ್ಯಗಳನ್ನ ಅಂತಿಮ ಚಿತ್ರದಿಂದ ಕೈಬಿಡಲಾಗಿತ್ತು.

ಇದಕ್ಕೆ ನಿರ್ದೇಶಕ ನೆಲ್ಸನ್ ಮತ್ತು ರಜನಿಕಾಂತ್ ಕಾರಣ ಎಂದು ಅಭಿಮಾನಿಗಳು ದೂರಿದ್ದರು. ಇದಕ್ಕೂ ಮುನ್ನ, ಮಹೇಶ್ ನಾರಾಯಣನ್ ನಿರ್ದೇಶನದ, ಮಮ್ಮುಟ್ಟಿ ಹಾಗೂ ಮೋಹನ್‌ಲಾಲ್ ಒಟ್ಟಿಗೆ ನಟಿಸುತ್ತಿರುವ 'ಪೇಟ್ರಿಯಾಟ್' ಚಿತ್ರದಲ್ಲಿಯೂ ಮೋಹನ್‌ಲಾಲ್ ಅವರ ಪಾತ್ರವನ್ನು ದಿಢೀರನೆ ಅಂತ್ಯಗೊಳಿಸಲಾಗಿದೆ ಎಂಬ ವಿಚಾರ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿತ್ತು.

ಅತಿಥಿ ಪಾತ್ರಗಳ ಬಗ್ಗೆ ಮೋಹನ್‌ಲಾಲ್ ಮೌನ

ತಮ್ಮ ಪಾತ್ರಗಳು ಮತ್ತು ಇತರರ ಟೀಕೆಗಳ ಬಗ್ಗೆ ಸದಾ ಮೌನವಾಗಿರುವ ಮೋಹನ್‌ಲಾಲ್, ಇತ್ತೀಚೆಗಷ್ಟೇ 'ಎಲ್2: ಎಂಪುರಾನ್' ಚಿತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. "ನಾನು ಅಂತಿಮವಾಗಿ ಓರ್ವ ನಟ. ಸಮಯ ಮತ್ತು ವೇಳಾಪಟ್ಟಿ ಅನುಕೂಲವಾದರೆ ದೊಡ್ಡ ಸ್ಟಾರ್‌ಗಳ ಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡಲು ನಾನು ಸದಾ ಸಿದ್ಧ" ಎಂದು ಹೇಳುವ ಮೂಲಕ ತಮ್ಮ ವೃತ್ತಿಪರತೆಯನ್ನ ಮೆರೆದಿದ್ದರು.

ಇನ್ನು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು 2019ರ 'ಡಿಯರ್ ಕಾಮ್ರೇಡ್' ಚಿತ್ರದ ನಂತರ, ಇತ್ತೀಚೆಗಷ್ಟೇ ಬಿಡುಗಡೆಯಾದ 'ರಣಬಾಲಿ' ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಒಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+