ತನ್ನ ಪ್ರಾಣ ಉಳಿಸಿ ಮೃತನಾದವನ ಮನೆಯವರನ್ನು ಸಂತೈಸಿದ ಮೂಖ ಪ್ರಾಣಿ ಶ್ವಾನ-ಎಲ್ಲಿ? ಈ ಮನಕಲಕುವ ಸ್ಟೋರಿ ಓದಿ

ದಾವಣಗೆರೆ, ನವೆಂಬರ್‌, 22: ನಾಯಿ ನಿಯತ್ತಿನ ಪ್ರಾಣಿ. ತನ್ನನ್ನು ಸಾಕಿ ಸಲಹುವವರಿಗೆ ಎಷ್ಟು ಪ್ರೀತಿ ಕೊಡುತ್ತದೆ ಎಂದು ಹೇಳಬೇಕೆಂದಿಲ್ಲ. ಮನುಷ್ಯರಿಗೆ ಇಲ್ಲದಷ್ಟು ಮಾನವೀಯತೆ ಅವುಗಳಲ್ಲಿದೆ. ಅಷ್ಟರ ಮಟ್ಟಿಗೆ ಶ್ವಾನ ಹೆಸರು ಪಡೆದಿದೆ. ಆದ್ರೆ, ಈ ಸ್ಟೋರಿ ಓದಿದರೆ ಕಣ್ಣಲ್ಲಿ ನೀರು ಜಿನುಗುವುದು ಖಚಿತ. ಅಯ್ಯೋ ದುರ್ವಿಧಿಯೇ ಎನ್ನುವ ಮಧ್ಯೆ, ಈ ಶ್ವಾನ ಬಂದು ಮನೆ ಮಂದಿಗೆಲ್ಲಾ ಸಂತೈಸಿರುವ ಪರಿ ಅಚ್ಚರಿ, ರಣರೋಚಕ.

ಇದೊಂದು ಕರುಣಾಜನಕ ಕಥೆ. ಬೈಕ್‌ನಲ್ಲಿ ಬರುತ್ತಿದ್ದ ಯುವಕ ಅಡ್ಡ ಬಂದ ನಾಯಿ ರಕ್ಷಿಸಲು ಹೋದ. ಈ ವೇಳೆ ಬೈಕ್ ಪಲ್ಟಿಯಾಗಿ ಇಹಲೋಕ ತ್ಯಜಿಸಿದ. ಆದರೆ ಪ್ರಾಣಾಪಾಯದಿಂದ ಪಾರಾದ ನಾಯಿಯು ಮೃತ ಯುವಕನ ಮನೆಗೆ ಬಂದು ಮನೆ ಮಂದಿ, ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರನ್ನು ಸಂತೈಸಿರುವ ಪರಿ ದೈವ ಲೀಲೆಯೋ, ಕಾಕತಾಳೀಯೋ ಎಂಬುದು ಗ್ರಾಮಸ್ಥರಿಗೆ ಅರ್ಥವಾಗುತ್ತಿಲ್ಲ.

ಗ್ರಾಮಸ್ಥರೆಲ್ಲರೂ ಸೇರಿ ಈ ಶ್ವಾನದ ಚಲನವಲನ ಗಮನಿಸಿದರೆ ಅಚ್ಚರಿಯಾಗುತ್ತಿದೆ. ಅಲ್ಲದೆ, ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಮನೆ ಮಗನ ಸಾವಿಗೆ ಕಾರಣನಾದಲ್ವಾ ಎಂಬ ಕೊರಗು ಆ ಶ್ವಾನದಲ್ಲಿದೆ. ಮಾತ್ರವಲ್ಲ, ಆ ನಾಯಿಯು ಥೇಟ್ ಮನೆ ಮಗ ಇದ್ದ ರೀತಿಯಲ್ಲಿ ವರ್ತಿಸುತ್ತಿದೆ. ಕಣ್ಣೀರು ಸುರಿಸುತ್ತಿದೆ. ಮನೆ ಮಂದಿಗೆಲ್ಲಾ ಧೈರ್ಯ ತುಂಬುವ, ಸಂತೈಸುವ ಪರಿ ಪ್ರತಿಯೊಬ್ಬರನ್ನೂ ಮೂಕವಿಸ್ಮಿತರನ್ನಾಗಿಸುತ್ತಿದೆ.

ಇದನ್ನು ದೈವ ಲೀಲೆ ಎನ್ನಬೇಕೋ, ಕಾಕತಾಳೀಯ ಎನ್ನಬೇಕೋ ಎಂಬುದೇ ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ತಿಪ್ಪೇಶ್ ಎನ್ನುವವರ ಸಾವಿನ ಬಳಿಕ ನಡೆದಿರುವ ಈ ಬೆಳವಣಿಗೆ ಪ್ರತಿಯೊಬ್ಬರ ಅಚ್ಚರಿಗೆ ಕಾರಣವಾಗಿದೆ.

ಘಟನೆ ಹಿನ್ನೆಲೆ ಏನು?

ಕಳೆದ ಕೆಲ ದಿನಗಳ ಹಿಂದೆ ಬೆಳಿಗಿನ ಜಾವ ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ತನ್ನ ಸಹೋದರಿ ಬಿಟ್ಟು ಬರಲು ಬೈಕ್‌ನಲ್ಲಿ ತಿಪ್ಪೇಶ್ ತೆರಳಿದ್ದ. ಕ್ಯಾಸಿನಕೆರೆ ಗ್ರಾಮಕ್ಕೆ 5 ಕಿಲೋ ಮೀಟರ್ ದೂರದಲ್ಲಿರುವ ವಿಠಲಾಪುರ ಗ್ರಾಮದಲ್ಲಿ ಬೈಕ್ ಪಲ್ಟಿಯಾದ ಪರಿಣಾಮ ತಿಪ್ಪೇಶ್ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸ್ನೇಹಿತರು ನೋಡಿದಾಗ ರಕ್ತಸಿಕ್ತವಾಗಿ ಬಿದ್ದಿದ್ದ ತಿಪ್ಪೇಶ್ ಸಾವನ್ನಪ್ಪಿದ್ದ. ಕಣ್ಣೀರಿನ ನಡುವೆ ಕ್ಯಾಸಿನಕೆರೆ ಗ್ರಾಮಕ್ಕೆ ಶವ ತಂದರು. ಆಗ ಇಡೀ ಗ್ರಾಮದಲ್ಲಿ ಮೌನ, ಶೋಕ ಆವರಿಸಿತ್ತು.

ಅಪಘಾತಕ್ಕೆ ಕಾರಣ ಏನು?

ವಿಠಲಾಪುರ ಗ್ರಾಮದಲ್ಲಿ ತಿಪ್ಪೇಶ್ ಬೈಕ್‌ನಲ್ಲಿ ಬರುತ್ತಿದ್ದಾಗ ಶ್ವಾನ ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋಗಿ ಬೈಕ್ ಪಲ್ಟಿಯಾಗಿದೆ. ಶ್ವಾನ ಸೇಫ್ ಆದರೆ, ತಿಪ್ಪೇಶ್ ಇಹಲೋಕ ತ್ಯಜಿಸಿಬಿಟ್ಟಿದ್ದರು.

Honnali: This is an exciting story of a dog

ಬಳಿಕ ವಿಠಲಾಪುರದಿಂದ ಕ್ಯಾಸಿನಕೆರೆಗೆ ಮೃತದೇಹ ತೆಗೆದುಕೊಂಡು ಬರಲಾಗಿತ್ತು. ಈ ವೇಳೆ ಇಡೀ ಊರಿನ ಜನರೇ ಬಂದಿದ್ದರು. ಮನೆ ಮುಂದೆ ಜನವೋ ಜನ. ಎಲ್ಲರಲ್ಲಿಯೂ ನೋವು. ದುಃಖದ ಕಟ್ಟೆ ಒಡೆದಿತ್ತು. ಆದ್ರೆ, ಅಂದೇ ಬಂದಿದ್ದ ಶ್ವಾನ ಮನೆಯತ್ತ ಬಂದಿದ್ದರೂ ಯಾರೂ ಗಮನಿಸಿರಲಿಲ್ಲ. ಅದು ದೂರದಲ್ಲಿ ನಿಂತು ನೋಡುತಿತ್ತು. ಅಂದೇ ಬಂದಿದ್ದನ್ನು ಗ್ರಾಮದ ಕೆಲವರು ನೋಡಿದ್ದಾರೆ.

ಸಾಕಿ ಸಲಹಿದವರು ಬಂದರೂ ಹೋಗಲಿಲ್ಲ

ಇನ್ನು ಈ ನಾಯಿ ಎಲ್ಲಿಂದ ಬಂತು? ಯಾಕೆ ಬಂತು ಎಂಬುದು ಎಲ್ಲರಿಗೂ ಪ್ರಶ್ನೆ ಕಾಡಲಾರಂಭಿಸಿತು. ತಿಪ್ಪೇಶ್ ನಾಯಿ ಅಡ್ಡ ಬಂದು ಸಾವು ಕಂಡ ವಿಚಾರ ಗೊತ್ತಾಗುತ್ತಿದ್ದಂತೆ ಅದೇ ನಾಯಿ ಎಂದು ಎಲ್ಲರೂ ಹೇಳಿದರು. ಇದು ವಿಠಲಾಪುರ ಗ್ರಾಮದ ಶ್ವಾನ ಎಂದು ಹೇಳಿದರು. ಆಗ ಆ ಗ್ರಾಮದಲ್ಲಿ ನಾಯಿ ಸಾಕಿ ಸಲಹಿದ್ದವರು ಬಂದು ಕರೆದರೂ ಹೋಗಲಿಲ್ಲ. ಅದು ಮತ್ತಷ್ಟು ಅಚ್ಚರಿಗೂ ಕಾರಣವಾಗಿತ್ತು.

ಅಲ್ಲದೆ ಮನೆ ಮುಂದೆ ನಿಲ್ಲೋದು, ಅಡಿಕೆ ಮನೆಗೆ ಹೋಗುವುದು, ಸ್ನೇಹಿತರು, ಸಂಬಂಧಿಕರು, ಮನೆ ಮಂದಿಯನ್ನೇ ನೋಡುತ್ತಾ ನಿಂತಿತ್ತು. ಓಡಿಸಲು ಹೋದರೂ ಹೋಗಲಿಲ್ಲ. ಸೀದಾ ಮನೆಯೊಳಗೆ ಹೋಯಿತು. ಮನೆಯಲ್ಲಿದ್ದವರನ್ನೆಲ್ಲಾ ಸಂತೈಸಿತು.

ಮನೆ ಮಗನಂತೆ ವರ್ತಿಸಿದ ಶ್ವಾನ

ಇನ್ನು ತಿಪ್ಪೇಶ್ ತಾಯಿ ಹಾಗೂ ಸಹೋದರಿ ಜೊತೆ ಥೇಟ್ ಮನೆ ಮಗನ ರೀತಿ ವರ್ತಿಸಿತು. ಸಂಬಂಧಿಕರು ಮತ್ತು ಸ್ನೇಹಿತರ ಬಳಿ ಆತ್ಮೀಯವಾಗಿ ವರ್ತಿಸಿತು. ಯಾರಿಗೂ ತೊಂದರೆ ಮಾಡಲಿಲ್ಲ. ಕಣ್ಣೀರು ಹಾಕಿತು. ತಾಯಿ ಕಣ್ಣೀರು ಹಾಕುವಾಗಲಂತೂ ಈ ಶ್ವಾನವೂ ಕಣ್ಣೀರು ಸುರಿಸಿತು. ಮಮ್ಮಲ ಮರಗಿತು. ಮನೆ ಮಂದಿಗೆಲ್ಲಾ ತಾನಿದ್ದೇನೆ ಎಂಬ ಧೈರ್ಯ ತುಂಬುವ ರೀತಿಯಲ್ಲಿ ವರ್ತನೆ ತೋರಿದ ಹಿನ್ನೆಲೆ ಗ್ರಾಮಸ್ಥರು ಇದು ದೈವ ಲೀಲೆ. ತಿಪ್ಪೇಶ್ ಆತ್ಮವು ನಾಯಿಯೊಳಗೆ ಸೇರಿದೆ. ಇದೊಂದು ಪವಾಡ ಎಂಬುದಾಗಿ ಭಾವಿಸಿದರು.

ಈ ಶ್ವಾನ ಆರಂಭದಲ್ಲಿ ಎಲ್ಲಿಂದ ಬಂತು ಎಂಬುದು ಗೊತ್ತಾಗಲಿಲ್ಲ. ಆ ನಂತರ ವಿಠಲಾಪುರ ಗ್ರಾಮದ ಶ್ವಾನ ಎಂಬುದು ಗೊತ್ತಾಗಿದೆ. ಮೃತನ ತಾಯಿ ಮತ್ತು ತಂಗಿ, ಸಂಬಂಧಿಕರನ್ನು ಅಪ್ಪಿಕೊಂಡು ಹಳೆತನ ತೋರಿಸುತಿತ್ತು. ಸ್ನೇಹಿತರ ಮನೆಗೆ ಹೋಗುವುದು ಬರುವುದು, ಇವತ್ತಿನ ದಿನದ ತನಕ ಮಾಡುತ್ತಿದೆ. ಶ್ವಾನ ಅವರ ಮನೆಯಲ್ಲಿಯೇ ಇದೆ. ಇದು ವಿಸ್ಮಯ, ಕಾಕತಾಳೀಯ ಎಂಬುದೇ ಗೊತ್ತಾಗುತ್ತಿಲ್ಲ.

ಜನಸ್ತೋಮದ ಮಧ್ಯೆ ಮನೆಯಲ್ಲಿಯೇ ಈ ಶ್ವಾನ ಇದೆ. ಬೆಳಿಗ್ಗಿನ ಉಪಾಹಾರ ಸೇವಿಸುತ್ತದೆ. ಅದೂ ತಿಪ್ಪೇಶ್ ಇಷ್ಟಪಡುತ್ತಿದ್ದ ತಿಂಡಿ. ದೈವದಲ್ಲಿ, ಪುರಾಣ, ಇತಿಹಾಸದಲ್ಲಿ ಮನುಷ್ಯರ ಆತ್ಮ ಪ್ರಾಣಿಗಳಲ್ಲಿ ಸೇರುತ್ತದೆ ಎಂಬುದು ಕೇಳಿದ್ದೆವು. ಆದ್ರೆ, ಈಗ ನಮ್ಮೂರಿನಲ್ಲಿಯೇ ಆಗಿದೆ ಎಂತಾರೆ ಸಂಬಂಧಿಕರು.

ತಿಪ್ಪೇಶನ ಆತ್ಮ ಶ್ವಾನದ ಮೂಲಕ ಬಂದು ಸಂತೈಸುತ್ತಿದೆ. ಕಣ್ಣಲ್ಲಿ ನೀರು ಸುರಿಸುತ್ತಿದೆ. ಪ್ರತ್ಯಕ್ಷದರ್ಶಿಗಳು ಬರುತ್ತಿದ್ದಾರೆ, ನೋಡುತ್ತಿದ್ದಾರೆ. ಹುಡುಗ ತುಂಬಾ ಒಳ್ಳೆಯ ಸ್ವಭಾವದವನು. ಮುಂದಿನ ದಿನಗಳಲ್ಲಿ ಎಷ್ಟು ದಿನ ಇರುತ್ತದೆ ಎಂಬುದು ಗೊತ್ತಿಲ್ಲ. ಈಗ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಮನೆ ಮಗ ಮತ್ತೆ ಬಂದಿದ್ದಾನೆ ಎಂಬುದು ಸಂಬಂಧಿಕರು, ಕುಟುಂಬದವರು, ಸ್ನೇಹಿತರಿಗೆ ಅನಿಸುವಂತೆ ವರ್ತಿಸುತ್ತಿದೆ. ತಿಪ್ಪೇಶ ಹೋದ ದಿನವಂತೂ ಇಡೀ ಗ್ರಾಮವೇ ದುಃಖದ ಮಹೋತ್ಸವ ಮಾಡಿತು ಎಂಬಂತಾಯ್ತು ಅಂತಾರೆ ಮೃತನ ಸಂಬಂಧಿಕ ಹೆಚ್.ಎಸ್.ಸಂದೀಪ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+