Mysore Pak Recipe: ಮನೆಯಲ್ಲೇ ತಯಾರಿಸಿ ರುಚಿಯಾದ ಮೈಸೂರು ಪಾಕ್, ಇಲ್ಲಿದೆ ಸರಳ ವಿಧಾನ
ಮೈಸೂರು ಪಾಕ್ ಯಾರಿಗೆ ಇಷ್ಟ ಇಲ್ಲ ಹೇಳಿ. ಒಮ್ಮೆ ತಿಂದರೆ ಮತ್ತೆ ಮತ್ತೆ ಸವಿಯಬೇಕು ಬೇಕೆನಿಸುವ ಸಿಹಿ ಅದು. ನಮ್ಮ ಮೈಸೂರಿನಲ್ಲೇ ಹುಟ್ಟಿಕೊಂಡ ಪಾಕ ವಿಧಾನವಿದು. ಕರ್ನಾಟಕ ರಾಜ್ಯದಲ್ಲಿ ಜನ್ಮ ತಾಳಿದ ಈ ಮೈಸೂರು ಪಾಕ್ ಈಗ ದೇಶ ಮಾತ್ರವಲ್ಲದೇ ವಿದೇಶಿಗರಿಗೂ ಮೆಚ್ಚಿನ ಸಿಹಿ ತಿಂಡಿ. ಎಳೆಯರಿಂದ ಹಿರಿಯವರೆಗೂವರೆಗೂ ಮೈಸೂರು ಪಾಕ್ ಅನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ.
ಈಗೀಗ ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ವಸ್ತುಗಳು ಕಲಬೆರೆಕೆಯಾದ ಕಾರಣ ಅನೇಕರು ಹೊರಗಿನ ಸಿಹಿ ತಿನಿಸುಗಳನ್ನು ತಿನ್ನುವುದಿಲ್ಲ. ಇದರಲ್ಲಿ ಮೈಸೂರು ಪಾಕ್ ಕೂಡ ಒಂದು. ಆದರೆ ತಿನ್ನುವ ಆಸೆ ಇರುತ್ತದೆ. ಅಂತವರಿಗಾಗಿ ಮನೆಯಲ್ಲೇ ಸುಲಭವಾಗಿ ಮೈಸೂರು ಪಾಕ್ ತಯಾರಿಸುವುದು ಹೇಗೆ ಎನ್ನುವುದರ ಬಗ್ಗೆ ವಿವರಣೆ ಇಲ್ಲಿದೆ.

ಮೈಸೂರು ಪಾಕ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಬೇಳೆ ಹಿಟ್ಟು ಅಥವಾ ಕಡ್ಲೆಹಿಟ್ಟು ಅಥವಾ ಬೇಸನ್- 1 ಕಪ್
ಸಕ್ಕರೆ- 2 ಕಪ್
ತುಪ್ಪ- 1 ಕಪ್
ಎಣ್ಣೆ-1.5 ಕಪ್
ನೀರು- 1 ಕಪ್
ಅರಿಶಿನ- ಒಂದು ಚಿಟಿಕೆ
ಮೈಸೂರು ಪಾಕ್ ತಯಾರಿಸುವ ಕ್ರಮವೇನು?
ಮೊದಲು ಮೈಸೂರು ಪಾಕ್ ತಯಾರಿಸಲು ಬೇಕಾದ ಎಲ್ಲಾ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳಿ. ಬಳಿಕ ಒಂದು ಅಗಲವಾದ ಪಾತ್ರೆಗೆ ತುಪ್ಪ ಸವರಿ ಒಂದು ಲೋಟ ನೀರು ಎತ್ತಿಟ್ಟುಕೊಳ್ಳಿ. ಒಂದು ಬಟ್ಟಲಿಗೆ ಬೇಳೆ ಹಿಟ್ಟು, ಅರ್ಧ ಕಪ್ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟಿನಲ್ಲಿ ಒಂದೂ ಗಂಟು ಇರದಂತೆ ನೋಡಿಕೊಳ್ಳಿ, ಬಳಿಕ ಮೈಸೂರು ಪಾಕ್‌ಗೆ ಚೆನ್ನಾಗಿ ಬಣ್ಣ ಬರಲು ಒಂದು ಚಿಟಿಕೆ ಅರಿಶಿನ ಸೇರಿಸಿ. ಚೆನ್ನಾಗಿ ಕಲಿಸಿ.
ನಂತರ ಒಂದು ಪಾತ್ರೆಗೆ 1 ಕಪ್ ಎಣ್ಣೆ ಮತ್ತು 1 ಕಪ್ ತುಪ್ಪವನ್ನು ಹಾಕಿ ಒಟ್ಟಿಗೆ ಬಿಸಿ ಮಾಡಿ. ಚೆನ್ನಾಗಿ ಬಿಸಿಯಾದ ನಂತರ ಪಕ್ಕಕ್ಕೆ ತೆಗೆದಿಡಿ. ಇನ್ನೊಂದು ಬಾಣಲೆಯಲ್ಲಿ, 2 ಕಪ್ ಸಕ್ಕರೆ ಮತ್ತು 1 ಕಪ್ ಎಣ್ಣೆಯನ್ನು ತೆಗೆದುಕೊಳ್ಳಿ. ಅದನ್ನು ಕುದಿಯಲು ಇರಿಸಿ. ಸಕ್ಕರೆ ಎಣ್ಣೆ ಚೆನ್ನಾಗಿ ಕುದ್ದ ಮೇಲೆ ಮೊದಲೇ ಮಾಡಿ ಇಟ್ಟುಕೊಂಡ ಬೇಳೆ ಹಿಟ್ಟು ಮತ್ತು ಎಣ್ಣೆ ಮಿಶ್ರಣವನ್ನು ಸೇರಿಸಿ. ಅದು ಚೆನ್ನಾಗಿ ಮಿಶ್ರಣವಾಗುವವರೆಗೆ ಕಾಯಿರಿ. ನಿರಂತರವಾಗಿ ಬೆರೆಸಿ ಬಿಸಿ ಎಣ್ಣೆ ಮತ್ತು ತುಪ್ಪದ ಮಿಶ್ರಣವನ್ನು ಸೇರಿಸಿ.

ಈ ಮಿಶ್ರಣವನ್ನು ಚೆನ್ನಾಗಿ ಕಲಿಸಿ, ಕೊನೆಯಲ್ಲಿ ಈ ಮಿಶ್ರಣ ಬೆಂದು ಅಂಟಿಕೊಳ್ಳುವ ಹಂತಕ್ಕೆ ಬರುತ್ತದೆ. ಮಧ್ಯಮ ಬಿಸಿಯಲ್ಲಿ ಮತ್ತಷ್ಟು ಕಾಯಿಸಿ. ಅಂತಿಮವಾಗಿ ಒಂದು ಹಂತದಲ್ಲಿ ಮಿಶ್ರಣವು ಅಂಚುಗಳನ್ನು ಬಿಡಲು ಪ್ರಾರಂಭಿಸುತ್ತದೆ. ಈ ವೇಳೆ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ. ಅದು ತಟ್ಟೆಯಲ್ಲಿ ಸರಿಯಾಗಿ ಸೇರಲು ಹಾಗೂ ಸ್ವಲ್ಪ ಗಾಳಿಗೆ ಗಟ್ಟಿಯಾಗಲು ಬಿಡಿ. ಗಟ್ಟಿಯಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಬಳಿಕ ತಣ್ಣಗಾಗುವವರೆಗೂ ಕಾಯಿರಿ. ಕೊನೆಯಲ್ಲಿ ತುಂಡರಿಸಿ ಸ್ವೀಟ್‌ಗಳನ್ನು ಮತ್ತೊಂದು ತಟ್ಟೆಗೆ ಬಡಿಸಿಕೊಂಡು ಸವಿಯಿರಿ.












Click it and Unblock the Notifications